Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Warning: Cannot modify header information - headers already sent by (output started at /home3/buntss5v/iambjp.in/wp-includes/functions.php:6121) in /home3/buntss5v/iambjp.in/wp-includes/feed-rss2.php on line 8
Leader – I am BJP https://iambjp.in Making Bharat Vishwa Guru Fri, 27 Aug 2021 10:18:51 +0000 en-US hourly 1 https://wordpress.org/?v=6.8.1 https://iambjp.in/wp-content/uploads/2021/08/cropped-Smal-Logo-32x32.png Leader – I am BJP https://iambjp.in 32 32 ಸಮರ್ಥ ಸಂಘಟಕ ನಳಿನ್‌ ಕುಮಾರ್‌ ಕಟೀಲ್ https://iambjp.in/archives/444 https://iambjp.in/archives/444#respond Fri, 27 Aug 2021 10:16:23 +0000 https://iambjp.in/?p=444

ಬಿಜೆಪಿ ರಾಜ್ಯಧ್ಯಕ್ಷರಾಗಿ ಶ್ರೀ ನಳಿನ್ ಕುಮಾರ್ ಕಟೀಲ್ ಅವರು 2019 ರ ಆಗಸ್ಟ್‌ನಲ್ಲಿ ಅಧಿಕಾರ ಸ್ವೀಕರಿಸಿ 22 ತಿಂಗಳುಗಳಾಗಿದ್ದು, ಈ ಕ್ಷಿಪ್ರ ಸಮಯದಲ್ಲಿ ಬಹುಪಾಲು ಅಂದರೆ ಸುಮಾರು 16 ತಿಂಗಳುಗಳು ಕೋವಿಡ್‌ನ ಕರಿನೆರಳಿನ ಕಠಿಣ ಸಮಯವಾಗಿತ್ತು. ಕೋವಿಡ್‌ನ ಕಾರಣ ಈ ಹಿಂದೆ ಇತ್ತೀಚೆಗೆ ಎಂದೂ ಕಾಣದ ಪರಿಸ್ಥಿತಿ ಉಂಟಾಗಿದ್ದು, ಪಕ್ಷ ಸಂಘಟನೆ, ಕಾರ್ಯ ಚಟುವಟಿಕೆಗಳು, ಚುನಾವಣೆ ಮತ್ತು ಕೋವಿಡ್‌ನ ಸೇವಾ ಕಾರ್ಯಗಳು ಅತ್ಯಂತ ಸವಾಲನ್ನು ಒಡ್ಡಿದ್ದವು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ನೊಗ ಹೊತ್ತಿದ್ದ ಶ್ರೀ ನಳಿನ್ ಕುಮಾರ್ ಕಟೀಲ್‌ರವರು ಮಿಂಚಿನಂತೆ ರಾಜ್ಯಾದ್ಯಂತ ಸುಮಾರು 18 ಬಾರಿ ರಾಜ್ಯ ಪ್ರವಾಸವನ್ನು (11 ಬಾರಿ ರಾಜ್ಯ ಸಂಘಟನಾತ್ಮಕ ಪ್ರವಾಸ, 3 ಬಾರಿ ಚುನಾವಣಾ ಸಂಬಂಧ ರಾಜ್ಯ ಪ್ರವಾಸ, 3 ಬಾರಿ ಕೋವಿಡ್- 19 ಸೇವಾ ಕಾರ್ಯ ಪ್ರವಾಸ ಮತ್ತು ಜಿಲ್ಲಾ ಕಾರ್ಯಾಲಯ ಕಟ್ಟಡಗಳ ನಿರ್ಮಾಣ ಪರೀಶೀಲನಾ ರಾಜ್ಯ ಪ್ರವಾಸ) ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಈ ಪ್ರವಾಸ ಸಂದರ್ಭದಲ್ಲಿ ರಾಜ್ಯದ 311 ಮಂಡಲಗಳ ಪೈಕಿ ಸುಮಾರು 300 ರಷ್ಟು ಮಂಡಲಗಳನ್ನು ಈಗಾಗಲೇ ತಲುಪಿ ಸುಮಾರು 270 ದಿನಗಳ ನಿವಾಸಿ ಪ್ರವಾಸ ನಡೆದಿದೆ. ಪ್ರತಿ ತಿಂಗಳು ಸರಾಸರಿ 15 ದಿನಗಳ ರಾಜ್ಯ ಪ್ರವಾಸ ನಡೆಸಲಾಗಿದ್ದು, ದಿನಂಪ್ರತಿ ಸರಾಸರಿ 350 ಕಿ.ಮೀ ಅಂದಾಜಿನಂತೆ 1,40,000 ಕಿ.ಮೀ ಗಳಷ್ಟು ರಸ್ತೆ ಪ್ರಯಾಣ ನಡೆಸಲಾಗಿದೆ.

ಪರಿಚಯ ಪ್ರವಾಸ – ರಾಜ್ಯಧ್ಯಕ್ಷರಾಗಿ ನಿಯುಕ್ತಿಗೊಂಡು ಅಧಿಕಾರ ಸ್ವೀಕರಿಸಿದ ತಕ್ಷಣ ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದು ಮೈಸೂರು ಜಿಲ್ಲೆಯಿಂದ ಆರಂಭಿಸಿ ರಾಜ್ಯದ ಎಲ್ಲ ಸಂಘಟನಾತ್ಮಕ ಜಿಲ್ಲೆಗಳಿಗೆ ರಾಜ್ಯ ಅಧ್ಯಕ್ಷರ ಪರಿಚಯ ಪ್ರವಾಸ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಲಯ ಕಟ್ಟಡಗಳ ನಿವೇಶನ ಪರಿಶೀಲನೆ, ನಿರ್ಮಾಣ ಕುರಿತಾದ ಸಭೆಗಳನ್ನೂ ನಡೆಸಲಾಯಿತು.ಈ ಪ್ರವಾಸವು ನೂತನ ರಾಜ್ಯಧ್ಯಕ್ಷರು ರಾಜ್ಯದ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಶಾಸಕರು, ಪ್ರಮುಖರು ಮತ್ತು ಜಿಲ್ಲೆಯ ತಳಮಟ್ಟದ ಕಾರ್ಯಕರ್ತರ ಸಂಪರ್ಕ ಸಾಧಿಸುವ ಬಲಿಷ್ಟ ಕೊಂಡಿಯಾಯಿತು. ಇದೇ ಪ್ರವಾಸದಲ್ಲಿ ಪರಿವಾರ ಪ್ರಮುಖರ ಬೇಟಿ ಮತ್ತು ಸಭೆಗಳನ್ನೂ ನಡೆಸಲಾಗಿದೆ.ರಾಜ್ಯದ ಪ್ರಮುಖ ಮಠ ಮಾನ್ಯಗಳಿಗೆ ಭೇಟಿ ನೀಡಿ ಎಲ್ಲ ಸ್ವಾಮೀಜಿಗಳು ಮತ್ತು ಸಾದು-ಸಂತರ ಆಶೀರ್ವಾದ ಪಡೆಯಲಾಯಿತು.

ಜಿಲ್ಲಾ ಪ್ರಮುಖರ ಸಭೆ –  ರಾಜ್ಯದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾ ಪ್ರಮುಖರ ಸಭೆ ಪ್ರವಾಸ ನಡೆಸಲಾಯಿತು. ಈ ಪ್ರವಾಸದಲ್ಲಿ ಪಕ್ಷದ ಅತ್ಯಂತ ತಳಮಟ್ಟದ ಸ್ತರವಾದ ಬೂತ್ ಅಧ್ಯಕ್ಷರುಗಳು ಮತ್ತು ಶಕ್ತಿಕೇಂದ್ರ ರಚನೆಯ ಬಗ್ಗೆ ತೀವ್ರ ಗಮನ ಹರಿಸಲಾಯಿತು.ರಾಜ್ಯದಲ್ಲೇ ಪ್ರಥಮ ಬಾರಿಗೆ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಧ್ಯಕ್ಷರು ತಮ್ಮ ಪಕ್ಷದ ಬೂತ್ ಅಧ್ಯಕ್ಷರ ಮನೆಯಲ್ಲಿ ಪಕ್ಷದ ಧ್ವಜ ಅನಾವರಣಗೊಳಿಸಿ, ಬೂತ್ ಅಧ್ಯಕ್ಷರ ನಾಮಫಲಕವನ್ನು ಅಧೀಕೃತವಾಗಿ ಮನೆಗೆ ಆಳವಡಿಸಿ ಬೂತ್ ಮಟ್ಟದ ಕಾರ್ಯಕರ್ತರ ಮನೋಬಲ ಮುಮ್ಮಡಿಗೊಳಿಸುವಂತಹ ನಭೂತೋ ಎನ್ನುವಂತಹ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

3 ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಪ್ರಚಾರದಲ್ಲಿ ಎಲ್ಲ ಕ್ಷೇತ್ರಗಳ ಚುನಾವಣಾ ಪ್ರಚಾರ ಪ್ರವಾಸ ನಡೆಸಿ 12 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ. ಮಂಗಳೂರು ಮಹಾನಗರ ಪಾಲಿಕೆ ಚುನಾವಣಾ ಪ್ರಚಾರ ಯಶಸ್ವಿಗೊಳಿಸಿ ಪಾಲಿಕೆಯಲ್ಲಿ ಬಿಜೆಪಿಯ ದಿಗ್ವಿಜಯ.

ಜಿಲ್ಲಾ ವಿಶೇಷ ಸಭೆ ಪ್ರವಾಸ – ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಜಿಲ್ಲಾ ವಿಶೇಷ ಸಭೆ ಪ್ರವಾಸ ನಡೆಸಿ ಸಂಘಟನಾತ್ಮಕ ರಚನೆಯ ಅಧ್ಯಯನ ಪ್ರವಾಸ ನಡೆಸಲಾಗಿದೆ. ಸದಸ್ಯತಾ ಆಬಿಯಾನದ ಬಗ್ಗೆ ವಿಶೇಷ ಗಮನ ಹರಿಸಲಾಯಿತು.

ನೂತನ ಜಿಲ್ಲಾಧ್ಯಕ್ಷರುಗಳ ಪದಗ್ರಹಣ ಸಭೆ ಪ್ರವಾಸ – ಜನವರಿ 16, 2020 ರಂದು ರಾಜ್ಯಧ್ಯಕ್ಷರ ಅಧೀಕೃತ ಆಯ್ಕೆಯಾದ ತಕ್ಷಣ ರಾಜ್ಯ ಪ್ರವಾಸ ಆರಂಭಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ದಾಖಲೆಯೆಂಬಂತೆ ಎಲ್ಲಾ 37 ಸಂಘಟನಾತ್ಮಕ ಜಿಲ್ಲೆಗಳಿಗೆ ರಾಜ್ಯಧ್ಯಕ್ಷರು ತಮ್ಮ ಪ್ರವಾಸದಲ್ಲಿ ನೂತನ ಜಿಲ್ಲಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಬೃಹತ್ ಸಾರ್ವಜನಿಕ ಸಭೆಗಳ ಮೂಲಕ ನಡೆಸಿದರು. ಸಹಸ್ರಾರು ಜನರ ಸಮ್ಮುಖದಲ್ಲಿ ನಿಕಟಪೂರ್ವ ಜಿಲಾಧ್ಯಕ್ಷರು ನೂತನ ಜಿಲ್ಲಾಧ್ಯಕ್ಷರಿಗೆ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಪಕ್ಷದ ಧ್ವಜ ಹಸ್ತಾಂತರಿಸಿ ಅಧಿಕಾರ ಗ್ರಹಣ ನಡೆಸಿದಂತಹ ಕಾರ್ಯಕ್ರಮವು ಯಾವುದೇ ರಾಜ್ಯಾಧ್ಯಕ್ಷರ ಕಾರ್ಯಕಾಲದಲ್ಲಿ ಅವೀಸ್ಮರಣೀಯ ಮತ್ತು ಅದ್ವೀತಿಯ. ರಾಜ್ಯಾಧ್ಯಕ್ಷರ ಸೂಚನೆಯಂತೆ ಈ ಕಾರ್ಯಕ್ರಮವನ್ನು ಮುಂದುವರಸಿ ನೂತನ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ರಾಜ್ಯದ 311 ಮಂಡಲಗಳ ನೂತನ ಅಧ್ಯಕ್ಷರ ಪದಗ್ರಹಣ, ನೂತನ ಮಂಡಲ ಅಧ್ಯಕ್ಷರ ಸಮ್ಮುಖದಲ್ಲಿ ವಾರ್ಡ್ ಮತ್ತು ಬೂತ್ ಅಧ್ಯಕ್ಷರುಗಳ ಪದಗ್ರಹಣದಂತಹ ಅದ್ಬುತ ಸಂಘಟನಾತ್ಮಕ ಪರಿಯೋಜನೆ.

ದೇಶದಲ್ಲಿ ಬಂದೊದಗಿದ ಕೋವಿಡ್ 19 ರ ಸಂಕಷ್ಟ ಕಾಲದಲ್ಲಿ ರಾಜ್ಯಾದ್ಯಂತ ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರ ಸಶಕ್ತ ಪಡೆಯು ರಾಷ್ಟ್ರೀಯ ಬಿಜೆಪಿಯ ಆಶಯದಂತೆ ರಾಜ್ಯಧ್ಯಕ್ಷರ ಸಮರ್ಥ ನೇತೃತ್ವದಲ್ಲಿ ಇಡಿ ರಾಜ್ಯದಲ್ಲಿ ಅದ್ಬುತ ಕೋವಿಡ್ 19 ಸಂಕಷ್ಟ ಸೇವಾ ಕಾರ್ಯ ನಡೆಸಲಾಯಿತು.ರಾಜ್ಯದಲ್ಲಿ ಅನ್‌ಲಾಕ್ ಘೊಷಣೆಯದ ತಕ್ಷಣದಲ್ಲಿ ರಾಜ್ಯಧ್ಯಕ್ಷರು ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ನಡೆಸಿದರು. ಈ ಪ್ರವಾಸದಲ್ಲಿ ಅಭೂತಪೂರ್ವವೆಂಬಂತೆ ರಾಜ್ಯದ ಎಲ್ಲ ೩೧೧ ಮಂಡಲಗಳ ಕೋವಿಡ್ 19 ಸಂಕಷ್ಟ ಸೇವಾ ಕಾರ್ಯದ ಮಂಡಲವಾರು ವರದಿಯನ್ನು ಖುದ್ದು ರಾಜ್ಯಾಧ್ಯಕ್ಷರೇ ಪ್ರತಿ ಮಂಡಲದ ಅಧ್ಯಕ್ಷರಿಂದ ಕೇಳಿಕೊಂಡರು. ಈ ಪ್ರವಾಸ ಕೋವಿಡ್‌ನ ಸೇವಾ ಕಾರ್ಯದಲ್ಲಿ ಭಾಗಿಯಾದ ಎಲ್ಲ ಕಾರ್ಯಕರ್ತರಿಗೆ ಹುರುಪು ಮತ್ತು ಹುಮ್ಮಸ್ಸು ತಂದಿತು.

ನೂತನ ಜಿಲ್ಲಾ ಪಧಾದಿಕಾರಿಗಳು ಮತ್ತು ನೂತನ ಜಿಲ್ಲಾ ಕೋರ್ ಸಮಿತಿಗಳನ್ನು ಯಶಸ್ವಿಯಾಗಿ ರಚಿಸಿದ ನಂತರದಲ್ಲಿ ರಾಜ್ಯಧ್ಯಕ್ಷರು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ನಡೆಸಿ ನೂತನ ಜಿಲ್ಲಾ ಪಧಾದಿಕಾರಿಗಳು ಮತ್ತು ನೂತನ ಜಿಲ್ಲಾ ಕೋರ್ ಸಮಿತಿಗಳ ಸಭೆಯನ್ನು ನಡೆಸಿ, ಮುಂದಿನ ದಿನಗಳ ಕಾರ್ಯಸೂಚಿ, ಕೋವಿಡ್ ಸೇವಾ ಕಾರ್ಯದ ಯೋಜನೆಗಳ ಬಗ್ಗೆ ನಿರ್ದೇಶನ ನೀಡಲಾಯಿತು.

ರಾಜ್ಯದ 4 ವಿಧಾನ ಪರಿಷತ್ ಮತ್ತು 2 ವಿಧಾನ ಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ರಾಜ್ಯಧ್ಯಕ್ಷರು ಭರ್ಜರಿ ಚುನಾವಣಾ ಪ್ರಚಾರ ನಡೆಸಿ ಎಲ್ಲ 6 ಕ್ಷೇತ್ರಗಳಲ್ಲಿ ಬಿಜೆಪಿಯ ಜಯಭೇರಿ. ಇದೇ ಪ್ರವಾಸದಲ್ಲಿ ಮುಂಬರಲಿರುವ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಮತ್ತು ಬೆಳಗಾವಿ ಲೋಕಸಭಾ ಉಪಚುನವಣಾ ಕುರಿತ ಪೂರ್ವಭಾವಿ ಸಭೆಗಳನ್ನು ನಡೆಸಿ ಚುನಾವಣೆಗೆ ಪಕ್ಷವನ್ನು ಸರ್ವ ಸನ್ನದ್ಧಗೊಳಿಸಲಾಗಿದೆ.

ರಾಜ್ಯದ ವಿಭಾಗ ಮಟ್ಟದಲ್ಲಿ ಜಿಲ್ಲಾ ವಿಷಯ ಪ್ರಮುಖರ ಸಭೆ ಈಗಾಗಲೇ ನಡೆಸಿದ್ದು, ಹಲವು ಜಿಲ್ಲೆಗಳ ಜಿಲ್ಲಾ ಪ್ರಶಿಕ್ಷಣ ವರ್ಗಗಳಿಗೆ ಪ್ರವಾಸ ಈಗಾಗಲೇ ನಡೆಯುತ್ತಿದೆ. ಈ ಕಳೆದ ಒಂದು ವರ್ಷದಲ್ಲಿ ರಾಜ್ಯ ಕಾರ್ಯಕಾರಿಣಿ. ರಾಜ್ಯ ಪಧಾಧಿಕಾರಿಗಳ ಸಭೆ, ರಾಜ್ಯ ಮೋರ್ಚಗಳ ಸಭೆ, ಪ್ರಕೋಷ್ಟ ಪ್ರಮುಖರ ಸಭೆಗಳನ್ನು ಸಹಾ ನಡೆಸಲಾಗಿದೆ.

ಜಿಲ್ಲಾ ಕೋರ್ ಸಮಿತಿ ಸಭೆ ಪ್ರವಾಸ (2ನೇ ಸುತ್ತು) – ರಾಜ್ಯದ 37 ಬಿಜೆಪಿ ಜಿಲ್ಲೆಗಳ ಕೋರ್ ಸಮಿತಿ ಸಭೆಗಳನ್ನು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ನಡೆಸಲಾಗಿದೆ.

ವಿವಿಧ ಮೋರ್ಚಾಗಳ ರಾಜ್ಯ ಕಾರ್ಯಕಾರಿಣಿ ಸಭೆಗಳ ಪ್ರವಾಸ – ರಾಜ್ಯದ ಮೋರ್ಚಾಗಳ ಕಾರ್ಯಕಾರಿಣಿ ಸಭೆಗಳನ್ನು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಏರ್ಪಡಿಸಿದ್ದು, ಈ ಸಭೆಗಳನ್ನು ಅತ್ಯಂತ ಯಶಸ್ವಿಯಾಗಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಸಲಾಯಿತು.

ಗ್ರಾಮ ಸೇವಕ್ ಸಮಾವೇಶ ಪ್ರವಾಸ – ರಾಜ್ಯದ ಅನೇಕ ಸ್ಥಳಗಳಲ್ಲಿ ಗ್ರಾಮ ಜನಪ್ರತಿನಿಧಿಗಳಿಗೆ ಗೌರವ ಸಲ್ಲಿಸುವ ಬಿಜೆಪಿಯ ರಾಷ್ಟ್ರಮಟ್ಟದ ಕಾರ್ಯಕ್ರಮವಾದ ಗ್ರಾಮ ಸೇವಕ್ ಸಮಾವೇಶಗಳನ್ನು ರಾಜ್ಯಾಧ್ಯಕ್ಷರ ರಾಜ್ಯ ಪ್ರವಾಸದಲ್ಲಿ ನಡೆಸಲಾಯಿತು. ಬೆಳಗಾವಿಯಲ್ಲಿ ಕೇಂದ್ರದ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಷಾರವರ ನೇತೃತ್ವದಲ್ಲಿ ಗ್ರಾಮ ಸೇವಕ್ ಸಮಾವೇಶದ ಸಮಾರೋಪ ಸಭೆಯನ್ನು ಅಭೂತಪೂರ್ವವಾಗಿ ನಡೆಸಲಾಯಿತು.

ವಿಭಾಗ ಮಟ್ಟದ ವಿಶೇಷ ಸಭೆಗಳ ಪ್ರವಾಸ – ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿಯ ಎಲ್ಲಾ ಹತ್ತೂ ವಿಭಾಗಗಳ ವಿಶೇಷ ಸಭೆಗಳನ್ನು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಸಿ ಪ್ರವಾಸ ಮಾಡಲಾಗಿದೆ.

ಪ್ರಕೋಷ್ಠಗಳ ರಾಜ್ಯ/ಜಿಲ್ಲಾ ಸಂಚಾಲಕರು, ಸಹ ಸಂಚಾಲಕರ ಸಭೆ ಪ್ರವಾಸ – ರಾಜ್ಯ ಮತ್ತು ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ, ಸಹ ಸಂಚಾಲಕರ ಸಭೆಗಳನ್ನು ನಿರಂತರವಾಗಿ ರಾಜ್ಯಾದಂತ ರಾಜ್ಯಾಧ್ಯಕ್ಷರ ಪ್ರವಾಸದಲ್ಲಿ ವಿವಿಧ ಕೇಂದ್ರಗಳಲ್ಲಿ ನಡೆಸಲಾಯಿತು.

ರಾಜ್ಯ ಪದಾಧಿಕಾರಿಗಳ ಸಭೆ – ರಾಜ್ಯ ಪದಾಧಿಕಾರಿಗಳ ಸಭೆಯನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

ಲೋಕಸಭಾ/ವಿಧಾನಸಭಾ ಉಪಚುನಾವಣೆ ತಯಾರಿ ಮತ್ತು ಪ್ರಚಾರ ಪ್ರವಾಸ – ಬೆಳಗಾವಿ ಲೋಕಸಭಾ, ಬಸವ ಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಘೋಷಣೆಗೂ ಮುನ್ನ ಎಲ್ಲ ಮೂರು ಕ್ಷೇತ್ರಗಳಲ್ಲಿ ವ್ಯಾಪಕ ಪ್ರವಾಸ ನಡೆಸಿ ಸಕಲ ಸಿದ್ಧತೆಯನ್ನು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು. ಉಪಚುನಾವಣೆಗಳಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಲಾಯಿತು. ಈ ಪರಿಣಾಮ ಬೆಳಗಾವಿ ಲೋಕಸಭೆ ಮತ್ತು ಬಸವ ಕಲ್ಯಾಣದಲ್ಲಿ ಅಭೂತಪೂರ್ವ ಜಯಗಳಿಸಲಾಯಿತು.

ಕೋವಿಡ್ ಎರಡನ ಅಲೆ ಕಾರ್ಯ ಚಟುವಟಿಕೆ ಮತ್ತು ಪರಿಹಾರ ಕಾರ್ಯ ಪ್ರವಾಸ – ಹೆಮ್ಮಾರಿ ಕೋವಿಡ್‌ನ ವಿರುದ್ಧ ಹೋರಾಟದ ಸಂದರ್ಭದಲ್ಲಿ ರಾಜ್ಯಾದ್ಯಂತ ಜನತೆಯ ನೋವಿಗೆ ಸ್ಪಂದಿಸುತ್ತಿರುವ ಏಕಮಾತ್ರ ಪಕ್ಷವಾದ ಬಿಜೆಪಿಯು ಮುಂಚೂಣಿಯಲ್ಲಿದೆ. ಪಕ್ಷದ ಎಲ್ಲ ಪ್ರಮುಖರು ಮತ್ತು ಕಾರ್ಯಕರ್ತರು ಅತ್ಯಂತ ಸಹೃದಯತೆಯಿಂದ ಸಕ್ರಿಯವಾಗಿ ಕೋವಿಡ್ ಬಾದಿತರಿಗೆ ಬೆಡ್, ಆಕ್ಸಿಜನ್, ಚುಚ್ಚುಮದ್ದು, ಐಸಿಯು ಮತ್ತು ವೆಂಟಿಲೇಟರ್‌ಗಳ ಸೌಕರ್ಯ ಕಲ್ಪಿಸುವುದು. ಬಡ ಮತ್ತು ದುರ್ಬಲ ವರ್ಗದವರಿಗೆ ಆಹಾರ ಕಿಟ್‌ಗಳ ವಿತರಣೆ, ಅನಾಥ ಶವಗಳ ಅತ್ಯಂತ ಗೌರವ ಪೂರ್ವಕ ಸಂಸ್ಕಾರ ಇತರೆ ಹತ್ತು ಹಲವು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ರಾಜ್ಯಾದ್ಯಂತ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪ್ರವಾಸ ನಡೆಸಿ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಹತ್ತು ಹಲವು ಕೋವಿಡ್ ಕೇರ್ ಸೆಂಟರ್‌ಗಳು, ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಯಂತ ಮಹತ್ವದ ಕಾರ್ಯಗಳನ್ನು ಮಾಡಲಾಯಿತು.

ಜಿಲ್ಲಾ ಕಾರ್ಯಾಲಯ ಕಟ್ಟಡ ನಿರ್ಮಾಣ ಪರಿಶೀಲನೆ ಪ್ರವಾಸ – ಯಾವುದೇ ರಾಜಕೀಯ ಪಕ್ಷದ ಆಧಾರವಾದ ಸ್ವಂತ ಕಾರ್ಯಾಲಯಗಳ ಕಟ್ಟಡ ನಿರ್ಮಾಣಕ್ಕೆ ಅತ್ಯಂತ ಹೆಚ್ಚಿನ ಮಹತ್ವ ನೀಡಲಾಗಿದ್ದು, ಈ ವರೆಗೆ ಹತ್ತು ಹಲವು ಜಿಲ್ಲೆಗಳ ಕಾರ್ಯಾಲಯ ಕಟ್ಟಡ ನಿರ್ಮಾಣದ ಪರಿಶೀಲನೆ ಮತ್ತು ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಈಗಾಗಲೇ ಎರಡು ಸುತ್ತುಗಳ ಜಿಲ್ಲಾ ಪ್ರವಾಸ ಮಾಡಲಾಗಿದೆ.

]]>
https://iambjp.in/archives/444/feed 0
ತನಗೆ ಮರುಜನ್ಮ ನೀಡಿದ ಬಂಟ್ವಾಳದ ಮಾಣಿಕ್ಯನೊಂದಿಗೆ ಪ್ರತಿವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಾಲಕ ನಿಶಾನ್ ಪೂಜಾರಿ https://iambjp.in/archives/369 https://iambjp.in/archives/369#respond Wed, 18 Aug 2021 10:56:46 +0000 https://iambjp.in/?p=369 2014ರ ಫೆಬ್ರವರಿಯಲ್ಲಿ ಪಾಣೆಮಂಗಳೂರು ಸೇತುವೆಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬರಿಮಾರು ಗ್ರಾಮದ 4 ಜನ ಮೃತಪಟ್ಟು ತನ್ನ ಪೋಷಕರನ್ನು ಕಳೆದುಕೊಂಡು ಗಂಭೀರ ಗಾಯಗೊಂಡಿದ್ದ ಬಾಲಕ ನಿಶಾನ್ ಪೂಜಾರಿ ಬದುಕುಳಿದ ನತದೃಷ್ಟನಾಗಿದ್ದ. ಈ ದುರ್ಘಟನೆಯ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು (ಆ ಸಮಯದಲ್ಲಿ ಶಾಸಕರಾಗಿರಲಿಲ್ಲ) ಪುಟ್ಟ ಪೋರನನ್ನು ವಿದ್ಯಾಭ್ಯಾಸಕ್ಕಾಗಿ ದತ್ತು ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೆ ಈ ಘಟನೆಯಲ್ಲಿ ಪೋಷಕರನ್ನು ಕಳೆದುಕೊಂಡ ಉಳಿದ ಮಕ್ಕಳ ಪಾಲನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಅಪಘಾತದಲ್ಲಿ ಕಾಲನ್ನು ಕಳೆದುಕೊಂಡಿದ್ದ ನಿಶಾನ್ ಪೂಜಾರಿಯವರಿಗೆ ಸಂಸದ ನಳಿನ್ ಕುಮಾರ್ ಕಟೀಲು ಇವರ ಸಂಸದರ ನಿಧಿಯಿಂದ ಮತ್ತು ತನ್ನ ವೈಯುಕ್ತಿಕ ಸಹಾಯ ಸೇರಿ ಸುಮಾರು 5 ಲಕ್ಷ ವೆಚ್ಚದಲ್ಲಿ ಕೃತಕ ಕಾಲು ಅಳವಡಿಸಲಾಗಿತ್ತು. ನಂತರ ಬಂಟ್ವಾಳ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿಶಾನ್‌ಗೆ ವಿದ್ಯಾಭ್ಯಾಸದ ವ್ಯವಸ್ಥೆ ಕಲ್ಪಿಸಿದ ರಾಜೇಶ್‌ ನಾಯ್ಕ್‌ ಅವರು ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದ್ದಾರೆ.

ತನಗಾದ ಕಹಿ ಘಟನೆ ಮರೆತು ನಿಶಾನ್ ಪೂಜಾರಿ ತನಗೆ ಮರುಜನ್ಮ ನೀಡಿದ ಬಂಟ್ವಾಳದ ಮಾಣಿಕ್ಯ ರಾಜೇಶಣ್ಣನೊಂದಿಗೆ ಪ್ರತಿವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಬಾಲಕ ನಿಶಾನ್‌ ಅವರ ಜನ್ಮದಿನದಂದು ಶುಭಾಶಯ ತಿಳಿಸಿ ಮನತುಂಬಿ ಹರಸಿದ್ದಾರೆ. ಶಾಸಕ ರಾಜೇಶ್‌ ನಾಯ್ಕ್‌ ಅವರು ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ನಿಶಾನ್‌ ಜೊತೆಗಿನ ಫೋಟೋ ಹಾಕಿ ಪೊಳಲಿ ಶ್ರೀ ರಾಜರಾಜೇಶ್ವರಿ ತಾಯಿ ಹರಸಲಿ ಎಂದು ಪ್ರಾರ್ಥಿಸಿಕೊಂಡಿದ್ಧಾರೆ.

]]>
https://iambjp.in/archives/369/feed 0
ನನ್ನ ಕಟೌಟ್‌ ಹಾಕಬೇಡಿ ಎಂದ ಸಿಎಂ : ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ https://iambjp.in/archives/253 https://iambjp.in/archives/253#respond Fri, 13 Aug 2021 05:45:20 +0000 https://iambjp.in/?p=253 ನಾನು ಹೋದಲ್ಲಿ, ಬಂದಲ್ಲಿ ಕಟೌಟ್ ಹಾಕಬೇಡಿ, ಶುಭಕೋರುವ ಹೋರ್ಡಿಂಗ್ ಯಾರೂ ಹಾಕಬೇಡಿ ಎಂದು ಪಕ್ಷದವರಿಗೆ ಮತ್ತು ಅಭಿಮಾನಿಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಗೌರವ ವಂದನೆಯಿಂದ ಜನರಿಗೆ ಉಂಟಾಗುವ ತೊಂದರೆ ಗಮನಿಸಿ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು ಗೌರವ ವಂದನೆ ಸಲ್ಲಿಸುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡುವುದಾಗಿ ತಿಳಿಸಿದ್ದ ಸಿಎಂ ಬೊಮ್ಮಾಯಿ, ಈಗ ಉಡುಪಿ ಪ್ರವಾಸದ ಸಂದರ್ಭದಲ್ಲಿ ಶುಭಕೊರುವ ಕಟೌಟ್‌ ಯಾರೂ ಹಾಕಬೇಡಿ ಎಂದು ಪಕ್ಷದವರಿಗೆ ಮತ್ತು ಅಭಿಮಾನಿಗಳಿಗೆ ಮನವಿ ಮಾಡಿ ಮತ್ತೊಮ್ಮೆ ಸರಳತೆಯಿಂದ ಮಾದರಿಯಾಗಿದ್ದಾರೆ.

ಅಧಿಕಾರ ವಹಿಸುತ್ತಲೇ ಅನೇಕ ಕ್ರಾಂತಿಕಾರಕ ಬದಲಾವಣೆಗಳನ್ನು ಬಿಜೆಪಿ ಮುಖ್ಯಮಂತ್ರಿಯೋರ್ವರು ಜಾರಿಗೆ ತರುತ್ತಿರುವುದು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ಹೂಗುಚ್ಛಗಳನ್ನು ನಿಷೇಧಿಸಿ ಸರಳವಾಗಿ ಕಾರ್ಯಕ್ರಮ ನಡೆಸಿಕೊಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದರು.

]]>
https://iambjp.in/archives/253/feed 0
ಕೆ. ಆರ್. ಕ್ಷೇತ್ರದ ಬೂತ್ ಅಧ್ಯಕ್ಷರ ಮನೆಯ ಮೇಲೆ ಬಿಜೆಪಿ ಧ್ವಜ ಕಟ್ಟುವ ವಿಶೇಷ ಕಾರ್ಯಕ್ಕೆ ಶಾಸಕ ಎಸ್. ಎ. ರಾಮದಾಸ್ ಚಾಲನೆ https://iambjp.in/archives/189 https://iambjp.in/archives/189#respond Wed, 11 Aug 2021 06:24:48 +0000 https://iambjp.in/?p=189 ಮೈಸೂರಿನ ಕೆ. ಆರ್. ಕ್ಷೇತ್ರದ ಎಲ್ಲಾ 270 ಬೂತ್ ಅಧ್ಯಕ್ಷರ ಮನೆಯ ಮೇಲೆ ಬಿಜೆಪಿ ಧ್ವಜ ಕಟ್ಟುವ ಹಾಗೂ ನಾಮಫಲಕ ಅಳವಡಿಸುವ ವಿಶೇಷ ಕಾರ್ಯಕ್ಕೆ ಶಾಸಕ ಎಸ್.ಎ.ರಾಮದಾಸ್ ಪ್ರಾರಂಭಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪ್ರಧಾನಿ ನರೇಂದ್ರ ಮೋದಿಜಿ ಸರ್ಕಾರದ ಯೋಜನೆಗಳನ್ನು ಹಾಗೂ ರಾಜ್ಯ ಸರ್ಕಾರದ ಯೋಜನಲೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಹಾಗೂ ಜವಾಬ್ದಾರಿ ಬೂತ್ ಅಧ್ಯಕ್ಷ ಹಾಗೂ ಪೇಜ್ ಪ್ರಮುಖರದ್ದು. ಬರೀ ಚುನಾವಣಾ ದೃಷ್ಠಿಯಿಂದ ಮಾತ್ರ ಬಿಜೆಪಿ ಕಾರ್ಯಕರ್ತರಾದ ನಾವು ಕೆಲಸ ಮಾಡಬಾರದು, ನಮ್ಮ ಕೆಲಸ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವಂತಿರಬೇಕು.

ಬಿಜೆಪಿಯಲ್ಲಿ ಬೂತ್ ಅಧ್ಯಕ್ಷರ ಜವಾಬ್ದಾರಿ ಅತೀ ಮುಖ್ಯವಾದದ್ದು. ಮನೆಯ ಜವಾಬ್ದಾರಿ ಇದ್ದರೂ ಸಹ ಸಮಾಜದ ಕೆಲಸ ಮಾಡಬೇಕು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಬೂತ್ ಅಧ್ಯಕ್ಷರು ಭಾಗಿಯಾಗುತ್ತಾರೆ ಇದು ಭಾಜಪಾದ ವಿಶೇಷತೆ. ಜನರ ಕಣ್ಣೀರನ್ನು ಒರೆಸುವ ಕಾರ್ಯ ಬೂತ್ ಅಧ್ಯಕ್ಷರದ್ದು. ಇವತ್ತು ದೇಶದಲ್ಲಿ ಮೋದಿಜಿ ಒಂದು ವಿಷಯವನ್ನು ಕೊಟ್ಟಿದ್ದಾರೆ, ಭ್ರಷ್ಟಾಚಾರ ಮುಕ್ತವಾಗಬೇಕು ಎಲ್ಲೆಡೆಯಲ್ಲಿ ಪಾರದರ್ಶಕ ಆಡಳಿತ ತರಬೇಕು ಎಂದು, ಅದೇ ನಿಟ್ಟಿನಲ್ಲಿ ಕೆ.ಆರ್ ಕ್ಷೇತ್ರವನ್ನೂ ಸಹ ಭ್ರಷ್ಟಾಚಾರ ಮುಕ್ತವಾಗಿಸಬೇಕು. ನೂರೊಂದು ಗಣಪತಿ ದೇವಸ್ಥಾನದಿಂದ ನಂಜುಮಳಿಗೆ ವರೆಗೆ ರಸ್ತೆ ಅಭಿವೃದ್ಧಿ ಗೆ 10 ಕೋಟಿ ರೂ ಗಳನ್ನು ಬಿಡುಗಡೆ ಮಾಡಿದ್ದೇವೆ.

ಕೃಷ್ಣರಾಜ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಸಂಕಲ್ಪಿಸೋಣ, ಬ್ರಷ್ಟಾಚಾರ ರಹಿತ ಕ್ಷೇತ್ರವನ್ನಾಗಿಸೋಣ. ನಮ್ಮ ಮನೆಯಲ್ಲಿರುವ ಮಕ್ಕಳಲ್ಲಿ ಸಮಾಜ ಸೇವೆಗೆ ಜೋಡಿಸುವ ಜವಬ್ದಾರಿ ನಮ್ಮೆಲರ ಮೇಲೆ ಇದೆ ಎಂದು ತಿಳಿಸಿದರು. ಬರುವ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಕ್ಷೇತ್ರ ರಾಜ್ಯ ಮತ್ತು ಕೇಂದ್ರ ಯೋಜನೆಗಳ ಅನುಷ್ಠಾನ ಮಾಡಿಸುವಲ್ಲಿ ಮತ್ತು ಪಕ್ಷದ ಸಂಘಟನಾತ್ಮಕವಾಗಿ ಪ್ರಥಮವಾಗಿಸಲು ಶ್ರಮಿಸೋಣ ಎಂದರು.

]]>
https://iambjp.in/archives/189/feed 0
ವಿನೂತನ ರೀತಿಯಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸುನಿಲ್ ಕುಮಾರ್ https://iambjp.in/archives/180 https://iambjp.in/archives/180#respond Wed, 11 Aug 2021 06:15:26 +0000 https://iambjp.in/?p=180 ದಿನಕ್ಕೊಂದು ಕನ್ನಡ ಪತ್ರಿಕೆ, ತಿಂಗಳಿಗೊಂದು ಕನ್ನಡ ಪುಸ್ತಕ ಓದುವ ಪರಿಪಾಠ ರೂಢಿಸಿಕೊಳ್ಳಿ- ಸುನಿಲ್ ಕುಮಾರ್ ಮನವಿ

ಬೆಂಗಳೂರು :  ಪ್ರತಿದಿನ ಕನ್ನಡ ಪತ್ರಿಕೆಯೊಂದನ್ನು ಓದುವ ಹಾಗೂ ತಿಂಗಳಿಗೊಂದು ಕನ್ನಡ ಪುಸ್ತಕ ಕೊಂಡು ಓದುವ, ಹಾಗೆಯೇ ಎರಡು ತಿಂಗಳಿಗೊಂದು ಕನ್ನಡ ಚಲನಚಿತ್ರ ನೋಡುವ ಅಭ್ಯಾಸ ಮಾಡಿಕೊಂಡರೆ ಆ ಮೂಲಕವೇ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳೆಸುವಲ್ಲಿ ಜನರೂ ಸಹ ಪಾಲುಗೊಳ್ಳಲು ಸಾಧ್ಯವಾಗುತ್ತದೆ ಎಂದು ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಭಾರತಾಂಬೆ ಹಾಗೂ ಕನ್ನಡಾಂಬೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಇಲಾಖೆ ಸಚಿವರಾಗಿ ಕಾರ್ಯಾರಂಭ ಮಾಡಿದರು.

ಪವರ್ ಇಲಾಖೆಯಲ್ಲಿ ಸಂಸ್ಕೃತಿ ತರುವ, ಸಂಸ್ಕೃತಿ ಇಲಾಖೆಗೆ ಪವರ್ ತುಂಬುವ ಕೆಲಸ ಮಾಡಬೇಕಿದೆ, ಅದನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಅವರು ಹೇಳಿದರು.

ಎರಡು ಇಲಾಖೆಗಳ ಆಡಳಿತ ಸುಧಾರಣೆಗೆ ಮತ್ತು ಕಾರ್ಯಕ್ರಮಗಳ ಸಮರ್ಥ ಅನುಷ್ಠಾನಕ್ಕೆ ಬೇಕಾಗುವ ಎಲ್ಲಾ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳುತ್ತೇನೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ 2019 ಮತ್ತು 20 ನೇ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾನಪದಶ್ರೀ ಪ್ರಶಸ್ತಿ ಗೆ ಆಯ್ಕೆ ಆದ ಶ್ರೀಮತಿ ಭೀಮವ್ವ ದೊಡ್ಡ ಬಾಳವ್ವ ಶಿಳ್ಳೆಕ್ಯಾತರ, ಹಾಗೂ ಬಿ ವಿ ಕಾರಂತ ಪ್ರಶಸ್ತಿಗೆ ಆಯ್ಕೆಆದ ಹೆಚ್.ವಿ.ವೆಂಕಟಸುಬ್ಬಯ್ಯ ಅವರಿಗೆ ಕಲಾಕ್ಷೇತ್ರದ ಮುಂಭಾಗದಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಿದರು.

ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಕುಳಿತು ಇಲಾಖೆಯ ಕಡತಗಳಿಗೆ ಸಹಿಮಾಡಿ ಅಧಿಕೃತ ಕಾರ್ಯಾರಂಭ ಮಾಡಿದರು.

ಆ ನಂತರ ಕಲಾಕ್ಷೇತ್ರದ ಆವರಣದಲ್ಲಿ ಇರುವ ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಮಾರಾಟ ಮಳಿಗೆಗೆ ಭೇಟಿ ಕೊಟ್ಟು ಕನಕಾವಲೋಕನ, ಪುಸ್ತಕ ಹಾಗೂ ಡಿ ವಿ ಜಿ ಅವರ ನೆನಪಿನ ಚಿತ್ರಗಳು ಮತ್ತು ಶಿವರಾಮ ಕಾರಂತರ ನಾಟಕಗಳು ಎಂಬ ಮೂರು ಪುಸ್ತಕಗಳನ್ನು ದುಡ್ಡುಕೊಟ್ಟು ಖರೀದಿ ಮಾಡಿದರು.

ಆನಂತರ ಅದರ ಮುಂಭಾಗದಲ್ಲಿಯೇ ಇದ್ದ ಕ್ಯಾಂಟೀನಲ್ಲಿ ಸಾಹಿತಿ ಮತ್ತು ಕಲಾವಿದರ ಜೊತೆ ಕಾಫಿ ಸೇವನೆ ಮಾಡಿದರು.

ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳಿಗೆ ನಮಸ್ಕರಿಸಿ ಅಡಿಯಿಟ್ಟ ಸಚಿವ ಸುನಿಲ್ ಕುಮಾರ್ ಇಡೀ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಸಾಂಸ್ಕೃತಿಕ ವಾತಾವರಣಕ್ಕೆ ಮೆರುಗು ಕೊಟ್ಟರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾಕ್ಟರ್ ಎಂ ಎನ್ ನಂದೀಶ್ ಹಂಚೆ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ವಸಂತಕುಮಾರ್ ಬಿವಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಆನೂರು ಅನಂತ ಕೃಷ್ಣಶರ್ಮ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಮಹಿಂದ್ರ, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ನಾಟಕಕಾರ ಬಿ ವಿ ರಾಜಾರಾಮ್ , ಕಲಾನಿರ್ದೇಶಕ ಶಶಿಧರ್ ಅಡಪ, ಕಲಾವಿದೆ ಮಾಳವಿಕಾ ಅವಿನಾಶ್, ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಕನಕ ಅಧ್ಯಯನ ಪೀಠದ ಸುಮ್ಮನೆ ಸಮನ್ವಯಾಧಿಕಾರಿ ಎಂ ಆರ್. ಸತ್ಯನಾರಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೇ. ರವಿಶಂಕರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್ ರಂಗಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

]]>
https://iambjp.in/archives/180/feed 0
ದಕ್ಷಿಣ ಪದವೀಧರ ಕ್ಷೇತ್ರ ನೋಂದಣಿ (Enrolment) https://iambjp.in/archives/176 https://iambjp.in/archives/176#respond Wed, 11 Aug 2021 04:32:28 +0000 https://iambjp.in/?p=176 ಆತ್ಮೀಯ ಬಂಧುಗಳೇ,

ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಿಂದ ಮುಂದಿನ ವರ್ಷ ಜೂನ್ -2022ಕ್ಕೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲೂ ಈಗಾಗಲೇ ನೋಂದಣಿಯನ್ನು (Enrolment) ಪ್ರಾರಂಭಿಸಿದ್ದೇನೆ.

ಈ ಚುನಾವಣೆ ಕುರಿತು ನಿಮ್ಮೆಲ್ಲರ ಅಭಿಪ್ರಾಯ ಅನಿಸಿಕೆ ಆಲಿಸಲು, ಮಾರ್ಗದರ್ಶನ ಪಡೆಯಲು ಉತ್ಸುಕನಾಗಿದ್ದೇನೆ.

ಈ ಹಿನ್ನೆಲೆಯಲ್ಲಿ ವಿಜಯನಗರ 3ನೇ ಹಂತದಲ್ಲಿರುವ ದಿ ಹೆರಿಟೆಜ್ ಕ್ಲಬ್ ನಲ್ಲಿ ಇದೇ ಆಗಸ್ಟ್ 10ರ ಮಂಗಳವಾರ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಬೆಳಗ್ಗೆ 11 ಘಂಟೆಯಿಂದ ಮಧ್ಯಾಹ್ನ ಊಟದವರೆಗೆ ಸಭೆ ನಡೆಯಲಿದೆ. ತಾವು ದಯವಿಟ್ಟು ಬಿಡುವು ಮಾಡಿಕೊಂಡು ಈ ಸಭೆಗೆ ಬರಬೇಕೆಂದು ಈ ಮೂಲಕ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ.

ಪ್ರೀತಿಯೊಂದಿಗೆ,
ಡಾ.ಈ.ಸಿ.ನಿಂಗರಾಜ್ ಗೌಡ,
ಸಿಂಡಿಕೇಟ್ ಸದಸ್ಯ, ಮೈಸೂರು ವಿಶ್ವವಿದ್ಯಾನಿಲಯ,
ಮೊಬೈಲ್ ನಂಬರ್ : 9980184789 / 9342184789

———————————

ಇನ್ನೊಂದು ಮನವಿ : ಸರಕಾರ ನಿಗದಿ ಪಡಿಸಿರುವ ಕೋವಿಡ್ ಮಾರ್ಗಸೂಚಿ ಅನುಸಾರವೇ ಸಭೆ ನಡೆಯಲಿದೆ. ನೀವು ದಯವಿಟ್ಟು ಮಾಸ್ಕ್ ಧರಿಸಿಕೊಂಡು ಸಭೆಗೆ ಬನ್ನಿ. ಸ್ಯಾನಿಟೈಝ್ ಹಾಗೂ ಸಾಮಾಜಿಕ ಅಂತರದ ವ್ಯವಸ್ಥೆ ನಾವು ಮಾಡುತ್ತೇವೆ. ಕೋವಿಡ್ ವಿರುದ್ಧ ಒಟ್ಟಾಗಿ ಹೋರಾಡೋಣ.

]]>
https://iambjp.in/archives/176/feed 0
ಮಂಗಳೂರು ರಥಬೀದಿಯಲ್ಲಿರುವ ಶ್ರೀ ಮಹಮ್ಮಾಯಿ ದೇವಸ್ಥಾನದ ಕೆರೆ ರೂ. 45.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ – ಶಾಸಕ ವೇದವ್ಯಾಸ್‌ ಕಾಮತ್ https://iambjp.in/archives/146 https://iambjp.in/archives/146#respond Tue, 10 Aug 2021 09:43:14 +0000 https://iambjp.in/?p=146 ಮಂಗಳೂರು :  ನಗರದ ರಥಬೀದಿಯಲ್ಲಿರುವ ಶ್ರೀ ಮಹಮ್ಮಾಯಿ ದೇವಸ್ಥಾನದ ಕೆರೆಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 45.50 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣದ ಶಾಸಕರಾದ ಡಿ ವೇದವ್ಯಾಸ್ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಇಂದು ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಶ್ರೀಮತಿ ಪೂರ್ಣಿಮಾ, ಶ್ರೀಮತಿ ಜಯಶ್ರೀ ಕುಡ್ವಾ, ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ದಕ್ಷಿಣ ಮಂಡಲದ ಉಪಾಧ್ಯಕ್ಷರಾದ ರಮೇಶ್ ಹೆಗ್ಡೆ, ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಭಾಸ್ಕರಚಂದ್ರ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ  ಪ್ರಾಧಿಕಾರದ ಅಧಿಕಾರಿಗಳು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

]]>
https://iambjp.in/archives/146/feed 0
625 ಅಂಕಗಳಿಸಿದ ವಿದ್ಯಾರ್ಥಿನಿಯ ಕಾಯಿಲೆಗೆ ಸ್ವಂದಿಸಿ ಮಾನವೀಯತೆ ಮೆರೆದ ಸಚಿವ ಗೋವಿಂದ ಕಾರಜೋಳ https://iambjp.in/archives/143 https://iambjp.in/archives/143#respond Tue, 10 Aug 2021 09:39:21 +0000 https://iambjp.in/?p=143 ಬಾಗಲಕೋಟೆ : 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ತಾಂಡಾದ ಶ್ರೀ ದುರ್ಗಾದೇವಿ ಹೈಸ್ಕೂಲಿನ ವಿದ್ಯಾರ್ಥಿನಿ ಗಂಗಮ್ಮ ಬಸಪ್ಪ ಹುಡೇದ 625ಕ್ಕೆ 625 ಅಂಕ ಪಡೆದುಕೊಂಡಿದ್ದಕ್ಕೆ ಸಂತಸಗೊಂಡ ಅಭಿನಂದಿಸಿದ ಜಲಸಂಪನ್ಮೂಲ ಸಚಿವರಾದ  ಗೋವಿಂದ ಎಂ ಕಾರಜೋಳ ಅವರು, ಆ ಬಾಲಕಿಗೆ ಹೃದಯ ಸಂಬಂಧಿ ರೋಗವಿರುವುದು ಮಾಧ್ಯಮ ಪ್ರತಿನಿಧಿಯವರ ಮೂಲಕ ತಿಳಿದು ದಿಗ್ಭ್ರಾಂತರಾಗಿ, ಕೂಡಲೇ ಬಾಲಕಿ ಹಾಗೂ ಅವರ ಪೋಷಕರೊಂದಿಗೆ ಮಾತನಾಡಿ, ಬಾಲಕಿಗೆ ಹೃದಯ ಸಂಬಂಧಿ ರೋಗ, ಉಸಿರಾಟದ ತೊಂದರೆ ಇರುವುದನ್ನು ದೃಢಪಡಿಸಿಕೊಂಡು, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕರೆ‌ಮಾಡಿ, ಬಾಲಕಿಗೆ ತಪಾಸಣೆಗೊಳಪಡಿಸಿ ಚಿಕಿತ್ಸೆ ನೀಡಿ, ಹೆಚ್ವಿನ ಚಿಕಿತ್ಸೆಯ ಅಗತ್ಯವಿದ್ದರೆ ಜಯದೇವ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಹೊಳ್ಳಬೇಕು ಹಾಗು ಜಯದೇವ ಆಸ್ಪತ್ರೆಯ ನಿರ್ದೇಶಕರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಕೋರುವುದಾಗಿ ತಿಳಿಸಿ, ಮಾನವೀಯತೆ ಮೆರೆದರು.

]]>
https://iambjp.in/archives/143/feed 0
ದ.ಕ. ಬಿಜೆಪಿ ಜಿಲ್ಲಾ ಕಛೇರಿಗೆ ಇಂಧನ ಸಚಿವರಾಗಿರುವ ವಿ. ಸುನಿಲ್ ಕುಮಾರ್ https://iambjp.in/archives/127 https://iambjp.in/archives/127#respond Tue, 10 Aug 2021 09:03:43 +0000 https://iambjp.in/?p=127 ಬಿಜೆಪಿ ಜಿಲ್ಲಾ ಕಛೇರಿಗೆ ಆಗಮಿಸಿದ ಕರ್ನಾಟಕ ಸರಕಾರದ ಇಂಧನ ಸಚಿವರಾಗಿರುವ ವಿ. ಸುನಿಲ್ ಕುಮಾರ್ ರವರನ್ನು ಜಿಲ್ಲಾಧ್ಯಕ್ಷರು ಸುದರ್ಶನ ಎಂ. ಸ್ವಾಗತಿಸಿ ಅಭಿನಂದಿಸಿದರು.

ಶಾಸಕರಾದ ಪ್ರತಾಪಸಿಂಹ ನಾಯಕ್, ವೇದವ್ಯಾಸ್ ಕಾಮತ್, ಪ್ರಮುಖರಾದ ಮೋನಪ್ಪ ಭಂಡಾರಿ, ಉದಯ ಕುಮಾರ್ ಶೆಟ್ಟಿ, ಸಂತೋಷ್ ಕುಮಾರ್ ರೈ, ಈಶ್ವರ್ ಕಟೀಲ್, ಪ್ರಭಾಮಾಲಿನಿ, ಕಸ್ತೂರಿ ಪಂಜ, ಸುಧೀರ್ ಶೆಟ್ಟಿ, ರಾಮದಾಸ್ ಬಂಟ್ವಾಳ, ರಾಜೇಶ್ ಕಾವೇರಿ, ರವಿಶಂಕರ ಮಿಜಾರ್, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಸುಮಂಗಲ ರಾವ್, ಜಗದೀಶ ಶೇಣವ, ವಿಜಯ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದರು.

]]>
https://iambjp.in/archives/127/feed 0
ಎಲ್ಲಾ ಸಮಯದಲ್ಲೂ ಝೀರೋ ಟ್ರಾಫಿಕ್ ಬೇಡ ಎಂದ ಅರಗ ಜ್ಞಾನೇಂದ್ರ..!! https://iambjp.in/archives/112 https://iambjp.in/archives/112#respond Tue, 10 Aug 2021 04:10:08 +0000 https://iambjp.in/?p=112

ಬೆಂಗಳೂರು : ನೂತನ ಗೃಹಮಂತ್ರಿಯಾಗಿರುವ ಆರಗ ಜ್ಞಾನೇಂದ್ರ ಎಲ್ಲಾ ಸಮಯದಲ್ಲಿ ಝೀರೋ ಟ್ರಾಫಿಕ್ ಬೇಡ ಎಂದು ಹೇಳಿ ಸರಳತೆ ಮೆರೆದಿದ್ದಾರೆ.

ಮಂತ್ರಿಗಳು ಯಾವ ಕಡೆಗಾದರು ತೆರಳುತ್ತಿದ್ದಾರೆ ಎಂದರೆ ಸಾಕು ಹಲವಾರು ನಿಮಿಷಗಳ ತನಕ ಝೀರೋ ಟ್ರಾಫಿಕ್ ಏರ್ಪಡಿಸುವ ಸಲುವಾಗಿ ಕಿಲೋ ಮೀಟರ್ ಗಳವರೆಗೆ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸುತ್ತಾರೆ. ಹಲವಾರು ಬಾರಿ ಅಂಬ್ಯುಲೆನ್ಸ್ ಗಳಿಗೂ ಸಹ ಪೋಲಿಸರು ಹೋಗಲು ಬಿಡದೆ, ಮಂತ್ರಿಗಳು ಬರುತ್ತಿದ್ದಾರೆ ಎಂದು ಹೇಳಿದ್ದುಂಟು. ಯಾವ ವೇಳೆಯಾದರು ಸರಿ, ಎಂಥಹ ಕೆಲಸವಿದ್ದರು ಸಹ ಮಂತ್ರಿಗಳಿಗೆ ಝೀರೋ ಟ್ರಾಫಿಕ್, ನಾಲ್ಕು ಭದ್ರತಾ ವಾಹನಗಳು, ಸೈರನ್​ ಇರುತ್ತದೆ.

ಇಂಥವರ ಮಧ್ಯ ಸರಳತೆ ಮೆರೆದಿರುವ ನೂತನ ಗೃಹ ಮಂತ್ರಿ ಅರಗ ಜ್ಞಾನೇಂದ್ರ ನನಗೆ ಎಲ್ಲಾ ಸಮಯದಲ್ಲೂ ಝೀರೋ ಟ್ರಾಫಿಕ್ ಬೇಡ. ನಾಲ್ಕು ಭದ್ರತಾ ವಾಹನಗಳೂ ಬೇಡ. ಅನಗತ್ಯವಾಗಿ ಸೈರನ್​ ಬಳಸೋದು ಬೇಡ. ಅಗತ್ಯವಿದ್ದಾಗ ಮಾತ್ರ ತಿಳಿಸುವೆ, ಆಗ ಕಾನ್ವೇ ಗಾಡಿ ಇರಲಿ ಎಂದು ಪೊಲೀಸ್​ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಗೃಹಸಚಿವರು ಸೂಚನೆ ನೀಡಿದ್ದಾರೆ.

]]>
https://iambjp.in/archives/112/feed 0