og
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121wp-post-author
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಇಂದು ನಡೆದ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಲಿಂಗಾಯತರ ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಬಿಡುವುದಿಲ್ಲ ಎಂದು ತಿಳಿಸಿದರು.
ಧರ್ಮ ಆಧಾರಿತವಾಗಿ ಮೀಸಲಾತಿ ಏಕೆ ಎಂದು ನಗರ ಶಾಸಕ ಯತ್ನಾಳ ಪದೇ ಪದೇ ಕೇಳುತ್ತಲೇ ಇದ್ದರು, ವೋಟ್ ಬ್ಯಾಂಕ್ ಆಧರಿಸಿ ಕಾಂಗ್ರೆಸ್ ಮುಸ್ಲಿಂ ಮೀಸಲಾತಿ ಕೊಟ್ಟಿತ್ತು, ಭಾರತೀಯ ಜನತಾ ಪಕ್ಷ ಮುಸ್ಲಿಂ ಮೀಸಲಾತಿ ರದ್ದುಗೊಳಿಸಿ ಲಿಂಗಾಯತ, ಒಕ್ಕಲಿಗ, ತಳವಾರ-ಪರಿವಾರ, ದಲಿತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದೆ; ಇದು ಮಾಡಿದ್ದು ಒಳ್ಳೆಯದೇ? ಕೆಟ್ಟದ್ದೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧ್ಯಕ್ಷರು ಒಳಮೀಸಲಾತಿ ರದ್ದುಗೊಳಿಸಿ ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ರದ್ದುಗೊಳಿಸಿ ಮುಸ್ಲಿಂರಿಗೆ ಮಿಸಲಾತಿ, ಸರ್ಕಾರ ಬರುವುದೇ ಇಲ್ಲ, ಮೀಸಲಾತಿ ರದ್ದಾಗುವುದೇ ಇಲ್ಲ; ಚಿಂತೆ ಮಾಡಬೇಡಿ ಎಂದು ನುಡಿದರು.
ಮೀಸಲಾತಿಯ ಮೇಲೆ ದಲಿತರ, ಆದಿವಾಸಿಗಳ, ಲಿಂಗಾಯತರಿಗೆ ನೀಡುವ ಮೀಸಲಾತಿ ಅಭಯ ಎಂದೂ ಕೊನೆಗೊಳಿಸುವುದಿಲ್ಲ, ಪಿಎಫ್‍ಐ ಹಿಂಸೆಯ ತಾಂಡವವಾಡುತ್ತಿದ್ದ ಪಿಎಫ್‍ಐ ಸಂಘಟನೆಯನ್ನು ನಮ್ಮ ಸರ್ಕಾರ ಬ್ಯಾನ್ ಮಾಡಿದೆ, ಇದು ಒಳ್ಳೆಯದಲ್ಲವೇ? ಎಂದು ಪ್ರಶ್ನಿಸಿದರು.
ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಪಿಎಫ್‍ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು, ಆದರೆ ಬಿಜೆಪಿ ಅವರನ್ನು ಹುಡುಕಿ ಹುಡುಕಿ ಜೈಲಿಗಟ್ಟುತ್ತಿದೆ, ಆದರೆ ರಿವರ್ಸ್ ಗೇರ್ ಕಾಂಗ್ರೆಸ್ ಪಿಎಫ್‍ಐ ನಿಷೇಧವನ್ನು ಹಿಂದಕ್ಕೆ ಪಡೆಯುವ ಮಾತು ಹೇಳಲಿದೆ, ದೇಶಕ್ಕೆ ದೊಡ್ಡಮಟ್ಟದ ಅಪಾಯದ ಎಚ್ಚರಿಕೆ ಗಂಟೆಯಾಗಿರುವ ಪಿಎಫ್‍ಐನ್ನು ವೋಟ್ ಬ್ಯಾಂಕ್‍ಗಾಗಿ ಪೆÇ್ರೀತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವ ಕರ್ನಾಟಕದ ಕನಸು ನನಸಾಗುವುದು ಮೋದಿ ಅವರಿಂದ ಮಾತ್ರ ಸಾಧ್ಯ, ವಿಕಾಸದ ಮಂತ್ರ ಜಪಿಸುವ ಪಕ್ಷ ಬಿಜೆಪಿ ಮಾತ್ರ ಎಂದರು. ಬಿಜೆಪಿ ಅಧಿಕಾರದಲ್ಲಿ ಇರುವ ಕಾರಣ ಅಭಿವೃದ್ಧಿಯ ಪರ್ವ ಮುಂದುವರೆಯುತ್ತಲೇ ಇದೆ ಎಂದರು.
ಪಾಕ್ ಕಿರುಕುಳವನ್ನು ದಮನ ಮಾಡಲು ಡಾ.ಮನಮೋಹನ್ ಸಿಂಗ್ ಧೈರ್ಯ ತೋರಲಿಲ್ಲ, ಆದರೆ ನರೇಂದ್ರ ಮೋದಿ ಅವರು ದಿಟ್ಟತನದಿಂದ ಉಗ್ರವಾದಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಕಾಶ್ಮೀರದಲ್ಲಿ ದಾಳಿ ನಡೆದ 10 ದಿನಗಳಲ್ಲಿಯೇ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ನಡೆಸಿ ಪಾಕ್ ಮನೆಗೆ ನುಗ್ಗಿ ಉಗ್ರವಾದಿಗಳಿಗೆ ದಿಟ್ಟ ಉತ್ತರ ಕೊಟ್ಟಿದ್ದೋ ಸರಿಯೋ ಇಲ್ಲವೋ? ಆದರೆ ಇದಕ್ಕೆ ದಾಖಲೆ ಇದೆಯೇ ಎಂದು ರಾಹುಲ್ ಬಾಬಾ ಕೇಳುತ್ತಾರೆ, ಪಾಕ್ ಎದೆ ಬಡಿದುಕೊಂಡು ಅಳುತ್ತಿದೆ, ಇದು ಒಂದು ದಾಖಲೆ ಅಲ್ಲವೇ ರಾಹುಲ್ ಬಾಬಾ ಎಂದು ಲೇವಡಿ ಮಾಡಿದರು.
ರಾಮಮಂದಿರ ದರ್ಶನಕ್ಕೆ ಸಿದ್ಧರಾಗಿರಿ
ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಅದನ್ನು ಭಾರತದ ಅವಿಭಾಜ್ಯ ಅಂಗವಾಗಿಸಿದ್ದು ತಪ್ಪೇ? ಎಂದು ಪ್ರಶ್ನಿಸಿದರು. ಈಗಾಗಲೇ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ, ಕಾಂಗ್ರೆಸ್ ಪಕ್ಷ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿ ಪಡಿಸಿತ್ತು, ಈ ವಿಷಯವಾಗಿ ದಿಕ್ಕು ತಪ್ಪಿಸುತ್ತಲೇ ಇತ್ತು, ಪ್ರಧಾನಿ ಮೋದಿ ಅವರ ಸರ್ಕಾರ ಈಗಾಗಲೇ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಸಹ ನೆರವೇರಿಸಿದೆ, ವಿಜಯಪುರ ನಿವಾಸಿಗಳು ಅಯೋಧ್ಯೆಗೆ ಬರಲು ಟಿಕೇಟ್ ಕಾಯ್ದಿರಿಸಿಕೊಳ್ಳಿ, ಅಯೋಧ್ಯೆಗೆ ಬಂದು ಭವ್ಯ ರಾಮಮಂದಿರ ಕಣ್ತುಂಬಿಕೊಳ್ಳಲು ಸಿದ್ಧರಾಗಿ ಎಂದು ವಿಜಯಪುರ ಜನತೆಗೆ ಆಹ್ವಾನ ನೀಡಿದರು.
ಲಿಂಗಾಯತರನ್ನು ಕಾಂಗ್ರೆಸ್ ಅವಮಾನ ಮಾಡಿರುವ ವಿಷಯವನ್ನು ಪ್ರಸ್ತಾಪಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಲಿಂಗಾಯತರಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿರುವುದು ಹೊಸತಲ್ಲ, ವೀರೇಂದ್ರ ಪಾಟೀಲ, ನಿಜಲಿಂಗಪ್ಪ ಅವರನ್ನು ಕಾಂಗ್ರೆಸ್ ಅವಮಾನ ಮಾಡಿದೆ, ಲಿಂಗಾಯತರನ್ನು ಅವಮಾನ ಕಾಂಗ್ರೆಸ್ ಮಾಡುತ್ತಲೇ ಇದೆ. ನಮ್ಮ ನಾಯಕ ಅಲ್ಲಿ ಹೋಗಿದ್ದಾರೆ, ಆದರೆ ಹುಬ್ಬಳ್ಳಿಯಲ್ಲಿ 25 ಸಾವಿರ ಅಂತರದಿಂದ ಸೋಲು ಕಾಣುವುದಂತೂ ಸತ್ಯ ಎಂದು ಪರೋಕ್ಷವಾಗಿ ಜಗದೀಶ ಶೆಟ್ಟರ್ ಸೋಲು ಖಚಿತ ಎಂದು ಭವಿಷ್ಯ ನುಡಿದರು. ಜೆಡಿಎಸ್‍ಗೆ ಮತ ನೀಡಿದರೆ ಕಾಂಗ್ರೆಸ್‍ಗೆ ಮತ, ಕಾಂಗ್ರೆಸ್‍ಗೆ ಮತ ನೀಡುವುದು ಪಿಎಫ್‍ಐಗೆ ಪರೋಕ್ಷ ಬೆಂಬಲ ನೀಡಿದಂತೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಚುನಾವಣೆಯಲ್ಲಿ ಎಲ್ಲ ಸಮುದಾಯಗಳ ಮತಗಳು ಅತ್ಯಂತ ಅವಶ್ಯ, ಸರಳ ಸ್ವಭಾವದ ಸೋಮನಗೌಡರು ಈ ಭಾಗಕ್ಕೆ ನೀರಾವರಿ ಮಾಡಿದ್ದಾರೆ, ಎರಡು ಲಕ್ಷ ಎಕರೆ ಜಮೀನುಗಳಿಗೆ ನೀರು ಹರಿಸುವ ದೊಡ್ಡ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.
ಶಾಸಕ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮೊದಲಾದವರು ಉಪಸ್ಥಿತರಿದ್ದರು.
]]>ಈ ಸಂದರ್ಭದಲ್ಲಿ ದಿನಾಂಕ 10.01.2022 ರಂದು ಮಂಗಳೂರಿಗೆ ಆಗಮಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ರೂ. 2555.88 ಕೋಟಿ ವೆಚ್ಚದ ವಿವಿಧ ಹೆದ್ದಾರಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಕಾಮಗಾರಿಗಳ ಪುನರ್ ಚಾಲನೆ ನೀಡಲಿರುವ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.
ಇದೇ ವೇಳೆ ಮಂಗಳೂರು ಬೆಂಗಳೂರು ನಡುವಿನ ಶಿರಾಡಿ ಘಾಟ್ ಸುರಂಗ ಮಾರ್ಗದ ಯೋಜನೆಯನ್ನು ಆದಷ್ಟು ಶೀಘ್ರದಲ್ಲಿ ಕೈಗೆತ್ತಿಕೊಳ್ಳುವಂತೆ ವಿನಂತಿಸಲಾಯಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ಜಿಲ್ಲೆಗೆ ಅನುಕೂಲವಾಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸುವುದಾಗಿ ತಿಳಿಸಿದ್ದಾರೆ ಎಂದು ದಕ್ಷಿಣ ಕನ್ನಡ ಲೋಕಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ತಿಳಿಸಿದರು.
]]>ಬೆಂಗಳೂರು: ಕಾಫಿ ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾಡಿರುವ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸೂಚಿಸಬೇಕು ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಚಿಕ್ಕಮಗಳೂರಿನ ಶಾಸಕರೂ ಆದ ಶ್ರೀ ಸಿ.ಟಿ.ರವಿ ಅವರು ತಿಳಿಸಿದ್ದಾರೆ.
ಅಷ್ಟೇ ಅಲ್ಲ ಆರ್ಥಿಕ ಹೊಡೆತದಿಂದ ನಲುಗಿರುವ ಕಾಫಿ ಉದ್ಯಮ ಮತ್ತು ಕಾಫಿ ಬೆಳೆಗಾರರ ಪುನಶ್ಚೇತನಕ್ಕೆ ಕಡಿಮೆ ಬಡ್ಡಿ ದರದಲ್ಲಿ ಮರುಸಾಲ ನೀಡುವಂತೆ ಹಾಲಿ ಇರುವ ಬಡ್ಡಿದರದಲ್ಲಿ ಕಾಫಿ ಬೆಳೆ ಹಾಗೂ ಇತರೆ ಕೃಷಿ ಕ್ಷೇತ್ರದ ಸಾಲಗಳನ್ನು ಬೆಳೆಗಾರರು ಮರುಪಾವತಿ ಮಾಡಲು ಸಾಧ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾಫಿ ಮತ್ತು ಇತರೆ ಕೃಷಿಯ ಸಮಗ್ರ ಸಾಲಗಳ ಮೇಲಿನ ಬಡ್ಡಿಯನ್ನು ಶೇ.3ರಷ್ಟು ನಿಗದಿಪಡಿಸಬೇಕು ಎಂದು ತಮ್ಮ ನೇತೃತ್ವದ ನಿಯೋಗವು ಒತ್ತಾಯಿಸಿದ್ದು, ಅದಕ್ಕೆ ಸಚಿವರು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ ಎಂದೂ ಶ್ರೀ ಸಿ.ಟಿ.ರವಿ ಅವರು ತಿಳಿಸಿದ್ದಾರೆ.
ಕಾಫಿ ಕೃಷಿಗೆ ಸಂಬಂಧಿಸಿದ ಸಾಲವನ್ನು ಸರ್ಫೇಸಿ ಕಾಯ್ದೆ (ಸೆಕ್ಯುರಿಟೈಸೇಷನ್ ಅಂಡ್ ರೀಕನ್ಟ್ರಕ್ಷನ್ ಆಫ್ ಫೈನಾನ್ಶಿಯಲ್ ಅಸೆಟ್ ಅಂಡ್ ಎನ್‍ಫೋರ್ಸ್‍ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್) ಯಿಂದ ಹೊರಗಿಡುವಂತೆ ಒತ್ತಾಯಿಸಿದ್ದಕ್ಕೆ ಸಕಾರಾತ್ಮಕವಾಗಿ ಒಪ್ಪಿದ್ದಾರೆ. ಇದೀಗ ಕಾಫಿ ಉದ್ಯಮಕ್ಕೇ ಕಂಟಕವಾಗಿರುವ ಸರ್ಫೇಸಿ ಕಾಯ್ದೆಯಿಂದ ಕಾಫಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಾಲವನ್ನು ಹೊರಗಿಡಬೇಕು ವಿತ್ತ ಸಚಿವರನ್ನು ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರು ಪ್ರಾಕೃತಿಕ ವಿಕೋಪಕ್ಕೆ ಒಳಗಾಗಿದ್ದಾರೆ. ಹೆಚ್ಚು, ಗುಡ್ಡ ಜರುಗುವಿಕೆ, ತೋಟಗಾರಿಕೆ ಸಲಕರಣೆಗಳು, ಗಿಡಗಳು ಹಾಳಾಗುತ್ತಿವೆ. ಜೊತೆಗೆ ಸಾಂಕ್ರಾಮಿಕ ರೋಗವಾದ ಕೋವಿಡ್‌ನಿಂದ ನಲುಗಿ ಹೋಗಿದ್ದಾರೆ. ಎಲ್ಲವನ್ನು ಪರಿಗಣಿಸಿ ಕಾಫಿ ಬೆಳೆಗಾರರ ನೆರವಿಗೆ ಬನ್ನಿ ಎಂದು ಕೋರಿಕೊಳ್ಳಲಾಗಿದೆ ಎಂದೂ ಅವರು ವಿವರಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಾಫಿ ಬೆಲೆ ಭಾರಿ ಕುಸಿತ ಕಂಡಿದೆ. ಹಾಗಾಗಿ ತಾವು ನಿಮ್ಮ ಸಮಯೋಚಿತ ಸಹಾಯವನ್ನು ಹಾಗೂ ಮಧ್ಯ ಪ್ರವೇಶಕ್ಕಾಗಿ ಕೇಂದ್ರದ ಸಹಾಯವನ್ನು ಕೋರಿದ್ದು, ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರದ ಆರ್ಥಿಕ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮುಕ್ತ ಮನಸ್ಸಿನಿಂದ ಒಪ್ಪಿ ಮನವಿ ಸ್ವೀಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ರಾಜ್ಯದ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಫಿ ಬೆಳೆಗಾರರು ಸಂಕಷ್ಠಕ್ಕೆ ಸಿಲುಕಿದ್ದಾರೆ. ಅದರಲ್ಲೂ ಕೋವಿಡ್-19 ಬಂದ ನಂತರ ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಸುಂದರ ಮಲೆನಾಡಾಗಿರುವ ಕಾಫಿ ಸೀಮೆಯಲ್ಲಿ ಅತಿಯಾದ ಮಳೆ, ಹವಾಮಾನ ವೈಪರೀತ್ಯದಿಂದ ದಿನದಿಂದ ದಿನಕ್ಕೆ ಕಾಫೀ ತೋಟಗಳು ಮಾಯವಾಗುತ್ತಿವೆ. ಇದಕ್ಕೆ ಕಾರಣ ಅನೇಕ ಎಂದು ವಿವರಿಸಿದ್ದಾಗಿ ಅವರು ತಿಳಿಸಿದ್ದಾರೆ.
ಮೊದಲಿಗೆ ಸಾಂಕ್ರಾಮಿಕ ರೋಗವಾದ ಕೊರೊನಾವನ್ನು ಹಿಮ್ಮೆಟ್ಟುವ ಸಂಕಲ್ಪದಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಲಾಯಿತು. ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ನಿರ್ವಹಣೆ ಮಾಡುವ ಮೂಲಕ ಭಾರತವನ್ನು ಆರ್ಥಿಕ ಸಂಷಕ್ಟದಿಂದ ಪಾರುಮಾಡಿದ್ದು ಧೀಃಶಕ್ತಿಯಂತೆ ಕಂಡಿದ್ದಾರೆ ಎಂದು ನಿಯೋಗವು ಮೆಚ್ಚುಗೆ ಸೂಚಿಸಿದ್ದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವ ಮತ್ತು ಭಾರತದಲ್ಲಿ ಕೊರೊನಾ ಸಂಕಷ್ಟಕ್ಕೆ ಪ್ರತಿ ವ್ಯಕ್ತಿಯೂ ನಲುಗಿ ಹೋಗಿದ್ದಾನೆ. ರಾಜ್ಯದಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಕಾಫಿ ಬೆಳೆಯುವ ರೈತರು ಮತ್ತು ಮತ್ತು ಕಾಫಿ ಉದ್ಯಮಿಗಳು ಸಾಂಕ್ರಾಮಿಕ ರೋಗದಿಂದ ಆರ್ಥಿಕ ಸಂಷಕ್ಟ ಎದುರಿಸುತ್ತಿದ್ದಾರೆ. ಕಾಫಿ ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲದ ಮೇಲೆ ವಿಧಿಸುತ್ತಿರುವ ಬಡ್ಡಿಯಿಂದ ಆರ್ಥಿಕ ಹೊರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕಾಫಿ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಕೇಂದ್ರದ ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿ ಬಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಹೊರಡಿಸಿರುವ, ಕೃಷಿ ಸಾಲದ ಮರು ಹೊಂದಾಣಿಕೆಗೆ ಸ್ಪಷ್ಟ ಸೂಚನೆಯಿದ್ದರೂ ಕೂಡ ಹಲವು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರೆ ವಾಣಿಜ್ಯ ಬ್ಯಾಂಕು ಶಾಖೆಗಳು ಬೆಳೆಗಾರರ ಸಾಲದ ಖಾತೆಗಳನ್ನು ನವೀಕರಿಸಲು ಮಾಡಲು ಹಿಂಜರಿಯುತ್ತಿವೆ. ಈ ಬಗ್ಗೆಯೂ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ಶ್ರೀ ಸಿ.ಟಿ.ರವಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಫಿ ಬೋರ್ಡ್ ಚೇರ್ಮನ್ ಶ್ರೀ ಎಂ. ಎಸ್. ಭೋಜೇಗೌಡ, ಡಾ. ಎಚ್.ಟಿ. ಮೋಹನ್ ಕುಮಾರ್ ಸೇರಿದಂತೆ ಕಾಫಿ ಬೆಳೆಗಾರರ ವಿವಿಧ ಒಕ್ಕೂಟಗಳ ಮುಖಂಡರು ಉಪಸ್ಥಿತರಿದ್ದರು ಎಂದು ಅವರು ತಿಳಿಸಿದ್ದಾರೆ.
ಪಾಂಡಿಚೇರಿ ಮುಖ್ಯಮಂತ್ರಿ ಶ್ರೀ ರಂಗಸ್ವಾಮಿ, ಗೃಹ ಸಚಿವರಾದ ಶ್ರೀ ನಮಶಿವಾಯಂ, ಬಿಜೆಪಿ ರಾಜ್ಯ ಅಧ್ಯಕ್ಷರಾದ ಶ್ರೀ ಸ್ವಾಮಿನಾಥನ್ ಅವರು ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಕೋರಿದರು.
ಪಾಂಡಿಚೇರಿಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ಸೆಲ್ವಗಣಪತಿ ಅವರ ಗೆಲುವು ಖಚಿತ ಎಂದು ಪಾಂಡಿಚೇರಿಯ ಉಸ್ತುವಾರಿಗಳು ಮತ್ತು ಬಿಜೆಪಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರೂ ಆದ ಶ್ರೀ ನಿರ್ಮಲ್‍ಕುಮಾರ್ ಸುರಾಣ ಅವರು ತಿಳಿಸಿದ್ದಾರೆ. ಈ ಹಿಂದೆ ಬಿಜೆಪಿ ಪಾಂಡಿಚೇರಿಯಲ್ಲಿ ಗೆಲುವನ್ನು ಸಾಧಿಸಿದ್ದು, ರಾಜ್ಯಸಭಾ ಸ್ಥಾನವನ್ನೂ ಗೆದ್ದುಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದ ರಾಜಕೀಯ, ತಾಲಿಬಾನ್ ಆಕ್ರಮಣ, ಅಮೇರಿಕದ ಸ್ವಾರ್ಥ ಮನೋಭಾವ, ರಷ್ಯಾ ಮತ್ತು ಚೀನಾಗಳ ಕುತಂತ್ರ ನಡೆ, ಕೊನೆಗೆ ತಾಲಿಬಾನಿಗಳ ಕೈಗೆ ಅಫ್ಘಾನಿಸ್ತಾನದ ಆಡಳಿತ, ಮುಂದೆ ಏನಿದ್ರು ಷರಿಯಾ ಕಾನೂನುಗಳ ಜೊತೆ ಒಂದು ಮತಾಂದತೆಯ ಅಟ್ಟಹಾಸ ಅಷ್ಟೇ, ಈಗ ಅಫ್ಘಾನಿಸ್ತಾನದಲ್ಲಿ ನಡಿತಿರೊದು ಟ್ರೈಲರ್ ಅಷ್ಟೇ, ಪಿಚ್ಚರ್ ಅಭೀ ಬಾಕಿ ಹೈ, ತಾಲಿಬಾನ್ ಉಗ್ರರ ಬಗ್ಗೆ ಮಾಹಿತಿ ಬೇಕು ಅಂದ್ರೆ ರವಿ ಬೆಳಗೆರೆಯವರ “ಮುಸ್ಲಿಂ” ಅದು ದೈವ ಸೈನಿಕರ ಲೋಕ ಅನ್ನೋ ಪುಸ್ತಕ ಓದಿದ್ರೆ ಗೊತ್ತಾಗುತ್ತೆ, ಅಫ್ಘಾನಿಸ್ತಾನದ ವಿಚಾರ ಹಾಗಿರ್ಲಿ ಇಲ್ಲಿ ನಮ್ಮ ವಿಚಾರ ಒಂಚೂರ್ ನೋಡೋಣ…
ಮೋದಿ ಅಧಿಕಾರಕ್ಕೆ ಬಂದ್ಮೇಲೆ ಸೇನೆಯ ಕ್ಯಾಂಪುಗಳ ಮೇಲೆ ಭಯೋತ್ಪಾದನ ದಾಳಿ ಆಗಿರೋದ್ ಬಿಟ್ರೆ ನಾಗರಿಕರ ಮೇಲೆ ( ಮುಂಬೈ ತಾಜ್ ಹೋಟೇಲ್ ಮೇಲಿನ ದಾಳಿ ರೀತಿ) ಯಾವುದೇ ಭಯೋತ್ಪಾದನ ದಾಳಿಗಳು ಆಗಿಲ್ಲ, ಯಾಕಂದ್ರೆ ಭಾರತದ ರಕ್ಷಣಾ ವ್ಯವಸ್ಥೆ ಅಷ್ಟರ ಮಟ್ಟಿಗೆ ಬಲಿಷ್ಠವಾಗಿದೆ…
ಮೋದಿ ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಸೋತಿದ್ದಾರೆ, ಬೆಲೆ ಏರಿಕೆ ಗಗನ ಮುಟ್ಟಿದೆ, ಮೋದಿ ಬರಿ ಭಾಷಣ ಮಾಡುತ್ತಾರೆ, ಎಲ್ಲಿ ಲೇಸರ್ ಬೇಲಿ? ತಾವೇ ರೈಲಿನಲ್ಲಿ ಕಸ ಎಸೆದು ನೋಡಿ ಇದು ಮೋದಿಯ ಸ್ವಚ್ಛ ಭಾರತ ಅಂತ ಅನ್ನೋರ ನಡುವೆ ಮೋದಿ ಸದ್ದಿಲ್ಲದೆ ಭಾರತದ ರಕ್ಷಣಾ ವ್ಯವಸ್ಥೆಯನ್ನ ಅತ್ಯುತ್ತಮವಾಗಿ ನಿರ್ಮಿಸಿದ್ದಾರೆ, ಎಲ್ಲ ಸಹಜವಾಗಿ ಜೀವನ ನಡಿತಿದೆ ಅನ್ನುವಾಗ್ಲೇ ಇಂಟಲಿಜೆನ್ಸ್ ರವರು ಭಟ್ಕಳದ ಯಾವುದೊ ಮನೆಗೆ ನುಗ್ಗಿ ಉಗ್ರರ ಸಂಪರ್ಕ ಹೊಂದಿರುವವರನ್ನ ಕರೆದುಕೊಂಡು ಹೋಗ್ತಾರೆ, ಇನ್ನೆಲ್ಲೋ ಒಳಗಿನ ಶತ್ರುಗಳು ಸಂಚು ರೂಪಿಸಿದ್ರೆ ಅಷ್ಟೇ ಸೂಕ್ಷ್ಮವಾಗಿ ಗುಪ್ತಚರ ಇಲಾಖೆ ಕೆಲಸ ಮಾಡಿ ದಾಳಿ ಆಗದಂತೆ ತಡೆಯುತ್ತೆ, ಒಟ್ನಲ್ ಉಗ್ರರು ಭಾರತದಲ್ಲಿ ಬಾಂಬ್ ಹಾಕೋದ್ ಹಾಳಾಗೋಗ್ಲಿ ಸಣ್ಣ ಗಲಭೆ ಮಾಡೋಕೂ ಯೋಚನೆ ಮಾಡ್ಬೇಕು ಆ ರೀತಿಯ ರಕ್ಷಣಾ ವ್ಯವಸ್ಥೆ ಭಾರತದಲ್ಲಿದೆ…
ಇದು ಮೋದಿ ಅಮಿತ್ ಶಾ ರವರ ಚಾಣಾಕ್ಷತನವೂ ಹೌದು, ಇನ್ನು ಕೇಂದ್ರ ಸರ್ಕಾರ ಕೊಟ್ಟಿರೊ ಸ್ವಾತಂತ್ರ್ಯವನ್ನ ಕಾಶ್ಮೀರದಲ್ಲಿ ಭಾರತೀಯ ಸೇನೆ ಯಾವ ರೀತಿ ಬಳಸಿಕೊಂಡು ಉಗ್ರರ ಬೇಟೆ ಆಡ್ತಿದೆ ಅನ್ನೋದು ಎಲ್ರಿಗೂ ಗೊತ್ತಿರುವ ವಿಚಾರ, ಸದೃಢ ನಾಯಕತ್ವ ಇರೋದ್ರಿಂದ ಕಾಶ್ಮೀರದ ಪರಿಸ್ಥಿತಿ ಈಗ ಲಾಲ್ ಚೌಕ್ನಲ್ಲಿ ತ್ರಿವರ್ಣಧ್ವಜ ಹಾಕುವಷ್ಟರ ಮಟ್ಟಕ್ಕೆ ಉತ್ತಮವಾಗಿದೆ, ಇಲ್ದಿದ್ರೆ ಅಲ್ಲಿನ ಪರಿಸ್ಥಿತಿ ಸಿರಿಯಾ ಅಫ್ಘಾನಿಸ್ತಾನದ ಥರ ಆಗಿರ್ತಿತ್ತು…
ರಾಜಕೀಯದಲ್ಲಿ ಸೋಲು ಗೆಲವು ಸಹಜ, ಬೆಲೆ ಏರಿಕೆಯೇ ಪ್ರಮುಖ ಕಾರಣ ಓಟ್ ಹಾಕ್ದೆ ಇರೋಕೆ ಅಂತ ಮೋದಿಯನ್ನ ಸೋಲಿಸಿದ್ರೆ ಮತ್ತೊಂದು ಪಕ್ಷ ಅಧಿಕಾರಕ್ಕೆ ಬರುತ್ತೆ ಮತ್ತೊಬ್ಬರು ಪ್ರಧಾನಿ ಆಗ್ತಾರೆ, ದೇಶ ಅದರ ಪಾಡಿಗೆ ಅದು ನಡಿಯುತ್ತೆ, ಆದ್ರೆ ಸ್ವಲ್ಪ ಹುಷಾರು ತಪ್ಪಿದರೂ ಭಾರತ ಇನ್ನಿಲ್ಲದ ತೊಂದರೆಗೆ ಸಿಲುಕುತ್ತೆ, ನಾಲ್ಕು ಕೋಟಿ ಅಫ್ಘಾನಿಸ್ತಾನಿಗಳು ಕೇವಲ ಜೀವ ಉಳಿಸಿಕೊಳ್ಳುವ ಸಲುವಾಗಿ ವಿಮಾನದ ರೆಕ್ಕೆಯ ಹತ್ತಿರ ಹತ್ತಿ ಕುಳಿತು ಕೆಳಗೆ ಬಿದ್ದು ಸಾಯ್ತಿದ್ದಾರೆ ಅಂದ್ರೆ ಅಲ್ಲಿನ ಪರಿಸ್ಥಿತಿ ಅದಿನ್ನೆಷ್ಟು ಘೋರವಾಗಿ ಇರ್ಬೋದು, ಅಮೆರಿಕಾದ ಏರ್‌ಪೋರ್ಟ್ ಗಳಲ್ಲಿ ಮುಸಲ್ಮಾನರನ್ನ ಹೇಗೆ ಚೆಕ್ ಮಾಡ್ತಾರೆ ಅಂತ ಶಾರುಕ್ ಖಾನಿಗೆ ಗೊತ್ತು, ಚೀನಾದಲ್ಲಿ ಮುಸಲ್ಮಾನರನ್ನ ಹೇಗೆ ನೆಡೆಸಿಕೊಳ್ತಾರೆ ಅನ್ನೋದು ಅಮೀರ್ ಖಾನಿಗೂ ಗೊತ್ತು, ಭಾರತದಲ್ಲಿ ಮುಸಲ್ಮಾನರು ಹೇಗೆ ಬದುಕ್ತಿದ್ದಾರೆ ಅನ್ನೋದು ಈ ದೇಶದ ಎಡಮಂಗಗಳಿಗೂ ಗೊತ್ತು, ಆದ್ರೂ ಭಾರತ ಸುರಕ್ಷಿತವಲ್ಲ ಅಂತ ಬಾಯಿ ಬಡ್ಕೋತಾರೆ ಅದನ್ನ ಬಸೀರ ಹೆಡ್ಲೈನ್ ಹಾಕಿ ವಿಕೃತಿ ಮೆರಿತಾನೆ…
ರಾಜಕೀಯ ಪರ ವಿರೋಧ, ಸಿದ್ಧಾಂತಗಳ ಭಿನ್ನಾಭಿಪ್ರಾಯ, ಜಾತಿ ರಾಜಕಾರಣ, ಭ್ರಷ್ಟ ವ್ಯವಸ್ಥೆ, ಇದೆಲ್ಲದರ ನಡುವೆ ಭಾರತವನ್ನ ಮೋದಿ ಮುನ್ನೆಡಿಸಿದ ರೀತಿಯನ್ನ ಭವಿಷ್ಯದಲ್ಲಿ ಎಲ್ಲರೂ ನೆನೆಪು ಮಾಡಿಕೊಳ್ತಾರೆ, ಮುಂದಿನ ಸವಾಲು ತಾಲಿಬಾನಿಗಳಿಂದ ಭಾರತಕ್ಕೆ ಆಗುವ ಅಪಾಯ ತಡೆಯೋದು ಹಾಗೂ ಭಾರತದ ಅನ್ನ ತಿಂದು ತಾಲಿಬಾನಿಗಳ ಪರ ನಿಲ್ಲೊ ಭಾರತದ ಕೆಲವು ವಿಕೃತ ಮನಸ್ಥಿತಿಗಳ ವಿರುದ್ಧ ಹೋರಾಡೋದು, ಇವೆರಡೂ ಸಮಸ್ಯೆಗಳನ್ನ ದಿಟ್ಟವಾಗಿ ಎದುರಿಸೊ ತಾಕತ್ತು ಸಧ್ಯಕ್ಕಿರೊ ಕೇಂದ್ರ ಸರ್ಕಾರಕ್ಕೆ ಇದೆ, ಇದನ್ನೂ ಮೀರಿ ಭಾರತದಲ್ಲಿ ಅನಾಹುತಗಳು ಜರುಗಿದ್ರೆ ಅದಕ್ಕೆ ನಮ್ಮಲ್ಲಿರೊ ತಾಲಿಬಾನಿ ಮನಸ್ಥಿತಿಗಳೇ ಕಾರಣ ಆಗಿರ್ತಾರೆ…
ಕ್ರೆಡಿಟ್ ಭಾರತೀಯ ಸೇನೆಗಾದ್ರು ಕೊಡಿ, ಗುಪ್ತಚರ ಇಲಾಖೆಗಾದ್ರು ಕೊಡಿ ಅಥ್ವ ಕೇಂದ್ರ ಸರ್ಕಾರಕ್ಕಾದ್ರು ಕೊಡಿ ಆದ್ರೆ ಸಧ್ಯಕ್ಕಂತೂ ಭಾರತ ಸುರಕ್ಷಿತವಾದ ಕೈಗಳಲ್ಲಿ ಇರೋದಂತೂ ಸತ್ಯ…
]]>ಇದೇ ಸಂದರ್ಭದಲ್ಲಿ ಈಗಾಗಲೇ ರಾಜ್ಯದಲ್ಲಿ ಅನುಷ್ಠಾನಗೊಂಡು ಕಾಮಗಾರಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳ ಮಾಹಿತಿಯನ್ನು ಕೇಂದ್ರ ಸಚಿವರಿಗೆ ನೀಡಲಾಯಿತು ಹಾಗೂ ರಾಜ್ಯದ ಹೊಸ ನೀರಾವರಿ ಯೋಜನೆಗಳ ಸಮಗ್ರ ಮಾಹಿತಿಯನ್ನು ಮಾನ್ಯ ಸಚಿವರಿಗೆ ನೀಡಿ ಹಣವನ್ನು ಬಿಡುಗಡೆ ಮಾಡಲು ವಿನಂತಿಸಲಾಯಿತು.
ಸಣ್ಣ ನೀರಾವರಿ ಇಲಾಖೆ ಕಡೆಯಿಂದ ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಪ್ರಮುಖ ನೀರಾವರಿ ಯೋಜನೆಗಳ ವಿವರ ಕೆಳಕಂಡಂತಿದೆ.
1.ಅಟಲ್ ಭೂಜಲ್ ಯೋಜನೆ.
2.ಕೃಷ್ಣ ಕಣಿವೆಯಲ್ಲಿ ಚೆಕ್ ಡ್ಯಾಮ್/ಪಿಕ್ ಅಪ್ ಗಳ ನಿರ್ಮಾಣ ದ ಬೃಹತ್ ಯೋಜನೆ.
3.ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ತುಂಬಿಸುವ ಯೋಜನೆ
4.ತುಮಕೂರು ಜಿಲ್ಲೆಯಲ್ಲಿ ಅಂತರ್ಜಲ ಅತೀ ಬಳಕೆ ಶೋಷಿತ ಪ್ರದೇಶದ ಕೆರೆಗಳನ್ನು ತುಂಬಿಸುವ ಬೃಹತ್ ಯೋಜನೆ.
5.ಪಶ್ಚಿಮ ವಾಹಿನಿ ಯೋಜನೆ
6.ಖಾರ್ ಲ್ಯಾಂಡ್ ಯೋಜನೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ನಾರಾಯಣ ಸ್ವಾಮಿ, ಭಗವಂತ ಖೂಬಾ, ಶಾಸಕರಾದ ಮಸಾಲಾ ಜಯರಾಂ, ವಿಧಾನಪರಿಷತ್ ಶಾಸಕರಾದ ನಾರಾಯಣ ಸ್ವಾಮಿ ಹಾಗೂ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
]]>ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ತನ್ನ ಪಾಲಿನ ಶೇಕಡ 50% ಅನುದಾನವನ್ನು ಮೂಲಭೂತ ಸೌಕರ್ಯ ಇಲಾಖೆ ಮೂಲಕ ಕಾದಿರಿಸಿದ್ದು, ಕೇಂದ್ರ ಸರ್ಕಾರದಿಂದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಪುತ್ತೂರು ಎಪಿಎಂಸಿ ಅಧ್ಯಕ್ಷರಾದ ದಿನೇಶ್ ಮೆದು ಹಾಗೂ ನಿರ್ದೇಶಕರಾದ ಬಾಲಕೃಷ್ಣ ಬಾಣಜಾಲು ಅವರು ಉಪಸ್ಥಿತರಿದ್ದರು.
]]>ಹೊಸ ಶಿಕ್ಷಣ ನೀತಿಗೆ ಕ್ಯಾಬಿನೆಟ್ ಹಸಿರು ನಿಶಾನೆ ನೀಡಿದೆ. 34 ವರ್ಷಗಳ ನಂತರ, ಶಿಕ್ಷಣ ನೀತಿಯಲ್ಲಿ ಬದಲಾವಣೆ ಕಂಡುಬಂದಿದೆ. ಹೊಸ ಶಿಕ್ಷಣ ನೀತಿಯ ಗಮನಾರ್ಹ ಲಕ್ಷಣಗಳು ಈ ಕೆಳಗಿನಂತಿವೆ :
5 ವರ್ಷಗಳ ಮೂಲಭೂತ
1. ನರ್ಸರಿ – 4 ವರ್ಷಗಳು
2. ಜೂನಿಯರ್ ಕೆಜಿ – 5 ವರ್ಷಗಳು
3. ಪ್ರೀ ಕೆಜಿ – 6 ವರ್ಷಗಳು
4. 1 ನೇ ತರಗತಿ – 7 ವರ್ಷಗಳು
5. 2 ನೇ ತರಗತಿ 8 ವರ್ಷಗಳು
3 ವರ್ಷಗಳ ಪೂರ್ವಸಿದ್ಧತೆ
6. 3 ನೇ ತರಗತಿ 9 ವರ್ಷಗಳು
7. 4 ನೇ ತರಗತಿ 10 ವರ್ಷಗಳು
8. 5 ನೇ ತರಗತಿ 11 ವರ್ಷಗಳು
3 ವರ್ಷಗಳ ಮಧ್ಯ
9. 6 ನೇ ತರಗತಿ 12 ವರ್ಷಗಳು
10. 7 ನೇ ತರಗತಿ 13 ವರ್ಷಗಳು
11. 8 ನೇ ತರಗತಿ 14 ವರ್ಷಗಳು
4 ವರ್ಷಗಳ ದ್ವಿತೀಯ
12. 9 ನೇ ತರಗತಿ 15 ವರ್ಷಗಳು
13. ಎಸ್ಎಸ್ಸಿ ತರಗತಿ 16 ವರ್ಷಗಳು
14. 11 ನೇ ತರಗತಿ / ಪ್ರಥಮ ವರ್ಷದ ಜೂನಿಯರ್ ಕಾಲೇಜ್ – 17 ವರ್ಷಗಳು
15. 1೨ ನೇ ತರಗತಿ / ದ್ವಿತೀಯ ವರ್ಷದ ಜೂನಿಯರ್ ಕಾಲೇಜ್ – 18 ವರ್ಷಗಳು
ವಿಶೇಷ ಮತ್ತು ಪ್ರಮುಖ ವಿಷಯಗಳು:
ಬೋರ್ಡ್ 12 ನೇ ತರಗತಿಯಲ್ಲಿ ಮಾತ್ರ ಇರುತ್ತದೆ, ಎಂಫಿಲ್ ಮುಚ್ಚಲಾಗುವುದು, ಕಾಲೇಜು ಪದವಿ 4 ವರ್ಷಗಳು.
10 ನೇ ಬೋರ್ಡ್ ಮುಗಿದಿದೆ, ಎಂಫಿಲ್ ಕೂಡ ಮುಚ್ಚಲ್ಪಡುತ್ತದೆ.
ಈಗ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾತೃಭಾಷೆ, ಸ್ಥಳೀಯ ಭಾಷೆ ಮತ್ತು ರಾಷ್ಟ್ರೀಯ ಭಾಷೆಯಲ್ಲಿ ಮಾತ್ರ ಕಲಿಸಲಾಗುತ್ತದೆ. ಉಳಿದ ವಿಷಯ, ಅದು ಇಂಗ್ಲಿಷ್ ಆಗಿದ್ದರೂ, ಒಂದು ವಿಷಯವಾಗಿ ಕಲಿಸಲಾಗುತ್ತದೆ.
ಈಗ ಬೋರ್ಡ್ ಪರೀಕ್ಷೆಯನ್ನು 12 ರಲ್ಲಿ ಮಾತ್ರ ನೀಡಬೇಕಾಗುತ್ತದೆ. ಮೊದಲು 10 ನೇ ಬೋರ್ಡ್ ಪರೀಕ್ಷೆಯನ್ನು ನೀಡುವುದು ಕಡ್ಡಾಯವಾಗಿತ್ತು, ಅದು ಈಗ ನಡೆಯುವುದಿಲ್ಲ.
9 ರಿಂದ 12 ನೇ ತರಗತಿಯವರೆಗೆ ಸೆಮಿಸ್ಟರ್‌ನಲ್ಲಿ ಪರೀಕ್ಷೆ ನಡೆಯಲಿದೆ. 5+3+3+4 ಸೂತ್ರದ ಅಡಿಯಲ್ಲಿ ಶಾಲೆಯನ್ನು ಕಲಿಸಲಾಗುತ್ತದೆ.*
ಅದೇ ಸಮಯದಲ್ಲಿ, ಕಾಲೇಜು ಪದವಿ 3 ಮತ್ತು 4 ವರ್ಷಗಳಾಗಿರುತ್ತದೆ. ಅಂದರೆ, ಪದವಿಯ ಮೊದಲ ವರ್ಷದ ಪ್ರಮಾಣಪತ್ರ, ಎರಡನೇ ವರ್ಷದಲ್ಲಿ ಡಿಪ್ಲೊಮಾ, ಮೂರನೇ ವರ್ಷದಲ್ಲಿ ಪದವಿ.
3 ವರ್ಷದ ಪದವಿ ಉನ್ನತ ಶಿಕ್ಷಣ ಪಡೆಯಲು ಇಚ್ಛಿಸದ ವಿದ್ಯಾರ್ಥಿಗಳಿಗೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು 4 ವರ್ಷದ ಪದವಿಯನ್ನು ಮಾಡಬೇಕಾಗುತ್ತದೆ. 4 ವರ್ಷದ ಪದವಿ ಮಾಡುವ ವಿದ್ಯಾರ್ಥಿಗಳು ಒಂದು ವರ್ಷದಲ್ಲಿ ಎಂಎ ಮಾಡಲು ಸಾಧ್ಯವಾಗುತ್ತದೆ.
ಈಗ ವಿದ್ಯಾರ್ಥಿಗಳು ಎಂಫಿಲ್ ಮಾಡಬೇಕಾಗಿಲ್ಲ. ಬದಲಾಗಿ, ಎಂಎ ವಿದ್ಯಾರ್ಥಿಗಳು ಈಗ ನೇರವಾಗಿ ಪಿಎಚ್‌ಡಿ ಮಾಡಲು ಸಾಧ್ಯವಾಗುತ್ತದೆ. 10 ರಲ್ಲಿ ಯಾವುದೇ ಬೋರ್ಡ್ ಪರೀಕ್ಷೆ ಇರುವುದಿಲ್ಲ.
ವಿದ್ಯಾರ್ಥಿಗಳು ಈ ನಡುವೆ ಇತರ ಕೋರ್ಸ್‌ಗಳನ್ನು ಮಾಡಲು ಸಾಧ್ಯವಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವು 2035 ರ ವೇಳೆಗೆ 50 ಪ್ರತಿಶತವಾಗಿರುತ್ತದೆ. ಅದೇ ಸಮಯದಲ್ಲಿ, ಹೊಸ ಶಿಕ್ಷಣ ನೀತಿಯಡಿಯಲ್ಲಿ, ಒಬ್ಬ ವಿದ್ಯಾರ್ಥಿಯು ಕೋರ್ಸ್‌ನ ಮಧ್ಯದಲ್ಲಿ ಇನ್ನೊಂದು ಕೋರ್ಸ್ ಮಾಡಲು ಬಯಸಿದರೆ, ನಂತರ ಮೊದಲ ಕೋರ್ಸ್‌ನಿಂದ ಸೀಮಿತ ಅವಧಿಗೆ ವಿರಾಮವನ್ನು ತೆಗೆದುಕೊಳ್ಳುವ ಮೂಲಕ ಅವನು ಎರಡನೇ ಕೋರ್ಸ್ ಮಾಡಬಹುದು.
ಉನ್ನತ ಶಿಕ್ಷಣದಲ್ಲೂ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ. ಸುಧಾರಣೆಗಳು ಶ್ರೇಣೀಕೃತ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಸ್ವಾಯತ್ತತೆ ಇತ್ಯಾದಿಗಳನ್ನು ಒಳಗೊಂಡಿವೆ. ಇದಲ್ಲದೇ, ಪ್ರಾದೇಶಿಕ ಭಾಷೆಗಳಲ್ಲಿ ಇ-ಕೋರ್ಸ್‌ಗಳನ್ನು ಆರಂಭಿಸಲಾಗುವುದು. ವರ್ಚುವಲ್ ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ರಾಷ್ಟ್ರೀಯ ಶೈಕ್ಷಣಿಕ ವೈಜ್ಞಾನಿಕ ವೇದಿಕೆ (NETF) ಆರಂಭಿಸಲಾಗುವುದು. ದೇಶದಲ್ಲಿ 45 ಸಾವಿರ ಕಾಲೇಜುಗಳಿವೆ.
ಸರ್ಕಾರಿ, ಖಾಸಗಿ, ಡೀಮ್ಡ್ ಎಲ್ಲಾ ಸಂಸ್ಥೆಗಳಿಗೆ ಒಂದೇ ನಿಯಮಗಳು ಇರುತ್ತವೆ.