og
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121wp-post-author
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121ನಂತರ ಮಾತನಾಡಿದ ಸಂಸದರು, ದೀನ್ ದಯಾಳ್ ಉಪಾಧ್ಯಾಯರ ಅಂತ್ಯೋದಯದ ಪರಿಕಲ್ಪನೆಯಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವಂತಹ ದೂರದೃಷ್ಟಿಯ ಯೋಜನೆಯನ್ನು ಜಾರಿಗೆ ತಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಅನಂತ ಧನ್ಯವಾದಗಳು ಎಂದರು.
]]>
ಬೈಂದೂರು : ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಯು ಕಳೆದ ಹಲವು ವರ್ಷಗಳಿಂದ ವಲಸೆ ಕಾರ್ಮಿಕರಿಗೆ ಉದ್ಯೋಗದಾತ ಜಿಲ್ಲೆಯಾಗಿ ಪರಿಣಮಿಸಿದ್ದಾರೂ ಸರಕಾರ ವಲಸೆ ಕಾರ್ಮಿಕರಿಗೆ ಕನಿಷ್ಠ ಬೇಕಾಗುವ ವಸತಿ, ನೀರು, ಶೌಚಾಲಯದ ವ್ಯವಸ್ಥೆ ಮಾಡುವಲ್ಲಿ ಸಂಪೂರ್ಣ ಸಫಲವಾಗಿಲ್ಲ.
ಜಿಲ್ಲೆಯಲ್ಲಿ ಪ್ರಸ್ತುತ ಕಟ್ಟಡ ನಿರ್ಮಾಣ,ಗಾರೆ ಕೆಲಸ, ರಸ್ತೆ ಕಾಮಗಾರಿ, ಮನೆಗೆಲಸ ಅಷ್ಟೇ ಅಲ್ಲದೆ ಕೃಷಿ ಕೆಲಸಗಳಿಗೂ ವಲಸೆ ಕಾರ್ಮಿಕರನ್ನು ಹೆಚ್ಚಾಗಿ ಅವಲಂಬಿಸಲಾಗುತ್ತಿದೆ. ಬಾಗಲಕೋಟೆ, ಬಳ್ಳಾರಿ, ರಾಯಚೂರು, ಹಾವೇರಿ, ವಿಜಯ ಪುರ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಹಾಗೂ ಹೊರ ರಾಜ್ಯಗಳ ವಲಸೆ ಕಾರ್ಮಿಕರು ಹೊಟ್ಟೆ ಪಾಡಿಗಾಗಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಸಮರ್ಪಕವಾದ ಸೂರಿಲ್ಲ. ಇದ್ದ ಕಡೆ ವ್ಯವಸ್ಥೆ ಅವ್ಯವಸ್ಥೆ ಯಿಂದ ಕೂಡಿದೆ. ಜಿಲ್ಲೆಯ ಹಲವು ಕಡೆ ವಲಸೆ ಕಾರ್ಮಿಕರಿಗೆ ಮೂಲ ಸೌಕರ್ಯವಿಲ್ಲದೆ ಶಾಲಾ ಮೈದಾನದಲ್ಲಿ ಮಲಗುವ ಅಥವಾ ದುಬಾರಿ ಮನೆ ಬಾಡಿಗೆ ನೀಡಲಾಗದ ಪರಿಸ್ಥಿಯಲ್ಲಿ ಇದ್ದಾರೆ ಹಾಗಾಗಿ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತವೇ ವಸತಿ ಸಮುಚ್ಚಯದ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ವಲಸೆ ಕಾರ್ಮಿಕರು ಇರುವ ಪರಿಸರದಲ್ಲಿ ಉಂಟಾಗುವ ಅನೈರ್ಮಲ್ಯತೆಯನ್ನು ತಡೆಗಟ್ಟ ಬಹುದು.
ಬೈಂದೂರು ಹಾಗೂ ಕುಂದಾಪುರ ಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಇರುವುದರಿಂದ ಅವರಿಗೆ ವಸತಿ ಸಮುಚ್ಚಯ ಮಾದರಿಯಲ್ಲಿ ತಾತ್ಕಾಲಿಕವಾಗಿ ಕಡಿಮೆ ಬಾಡಿಗೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಹಾಗೂ ಪ್ರಸ್ತಾವನೆ ತಯಾರಿಸಲು ಈಗಾಗಲೇ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರಕಾರದ ಹಂತದಲ್ಲಿ ಸಂಬಂಧ ಪಟ್ಟ ಸಚಿವರ ಗಮನಕ್ಕೂ ಈ ವಿಚಾರವನ್ನು ಪತ್ರ ಮುಖೇನ ತರಲಾಗಿದೆ ಹಾಗೂ ಉಡುಪಿ ಜಿಲ್ಲಾಡಳಿತ ಈ ಉದ್ದೇಶಕ್ಕೆ ಅಗತ್ಯ ವಾಗಿ ಬೇಕಾಗಿರುವ ಕನಿಷ್ಠ ನಿವೇಶನ ವನ್ನು ಒದಗಿಸಬೇಕು ಪ್ರಕಟಣೆಯಲ್ಲಿ ಶಾಸಕರು ತಿಳಿಸಿದ್ದಾರೆ..
]]>ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಕಾರ್ಯಕ್ರಮವನ್ನು ಆಯೊಜಿಸಿದ ಮಹಿಳಾಮೋರ್ಚಾದವರಿಗೆ ಮತ್ತು ನೆರೆದಿದ್ದ ವಿದ್ಯಾರ್ಥಿನಿಯರಿಗೆ ಅಭಿನಂದನೆ ತಿಳಿಸುತ್ತಾ ಇಂದಿನ ಕಾರ್ಯಕ್ರಮ ಬಹಳ ವಿಶೇಷವಾದದ್ದು ಕಾರಣ ಇದೆ ಅದರ ಬಗ್ಗೆ ನೆರೆದಿದ್ದವರಿಗೆ ಶಾಸಕರು ಪ್ರಶ್ನಿಸಿದರು ಇಂದು ವ್ಯಾಸ ಪೂರ್ಣಿಮೆ ಇಂದು ಸಹೋದರ ಸಹೋದರಿಯರಿಗೆ ಬಹಳಾ ವಿಶೇಷ ಅಂದು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುತ್ತಾ ನಾವು ಪೂರ್ಣಪ್ರಮಾಣದಲ್ಲಿ ನಿನ್ನ ರಕ್ಷಣೆಯಲ್ಲಿ ಇರುತ್ತೇವೆ ಎಂದು ಸಂಕಲ್ಪ ಮಾಡೋಣ, ಈ ಭಾರತದ ಭವಿಷ್ಯ ರೂಪಿಸುವ ನೀವಲ್ಲರು ತಾಯಿ ಭಾರತೀಯ ರಕ್ಷಣೆ ಮಾಡಲು ನಿಲ್ಲಬೇಕಿದ್ದು ನಿಮ್ಮೆಲ್ಲರ ರಕ್ಷಣೆಯ ಜವಾಬ್ದಾರಿ ನನ್ನದಾಗಿರುತ್ತದೆ.
ನಾವೆಲ್ಲಾ ಕಳೆದ 3 ದಶಕಗಳಿಂದ ಸಮಾಜ ಸೇವೆಯಲ್ಲಿ ನಿರಂತರವಾಗಿದ್ದೇವೆ ಮುಂದಿನ ಪೀಳಿಗೆಯಲ್ಲಿ ಸಮಾಜ ಸೇವೆ ಮಾಡುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕಿರುತ್ತದೆ. ಕಷ್ಟದಲ್ಲಿ ಇರುವವರಿಗೆ ನಮ್ಮ ಕೈಯಲ್ಲಿ ಆಗುವಂತಹ ಸೇವೆಯನ್ನು ಸಲ್ಲಿಸಬೇಕಿರುತ್ತದೆ. ಕೇಂದ್ರ ಸರ್ಕಾರದ , ರಾಜ್ಯ ಸರ್ಕಾರದ ಹಲವಾರು ಜನಪರ ಯೋಜನೆಗಳಿದ್ದು ಇಂತಹ ಯೋಜನೆಗಳನ್ನು ಅರ್ಹ ಸಾರ್ವಜನಿಕರಿಗೆ ತಲುಪಿಸುವ ಮೂಲಕ ಸೇವೆ ಸಲ್ಲಿಸಬಹುದು.
ನಾವು ಸ್ವತಂತ್ರ ಪಡೆಯುವುದರ ಹಿಂದೆ ಹಲವಾರು ತ್ಯಾಗಗಳಿದೆ ಲಕ್ಷಾಂತರ ಜನ ತ್ಯಾಗ ಮಾಡಿರುತ್ತಾರೆ. ರಾಜಕಾರಣ ಹಾಳಾದ್ದಲ್ಲಿ ದೇಶ ಹಾಳಾಗುವುದು, ದೇಶವೇ ಹಾಳಾದರೆ ಇನ್ನು ನಾವು ನೀವು ಇರಲು ಹೇಗೆ ಸಾದ್ಯ. ಇತ್ತಿಚಿನ ದಿನಗಳಲ್ಲಿ ಆಫ್ಘಾನ್ ದೇಶದಲ್ಲಿ ತಾಲಿಬಾನಿಗಳು ನಡೆಸುತ್ತಿರುವ ಅಟ್ಟಹಾಸವನ್ನು ಇಡೀ ಪ್ರಪಂಚವೇ ನೋಡುತ್ತಿದೆ ಅಲ್ಲಿಯ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ಪ್ರಪಂಚಾಧ್ಯಂತ ವಿರೋಧ ವ್ಯಕ್ತವಾಗಿದೆ. ನಾವು ಯಾವುದೇ ಸಂದರ್ಭ ಬಂದರೂ ಅನ್ಯಾಯದ ವಿರುದ್ದ ನಿಂತುಕೊಳ್ಳಬೇಕು ಎಂದು ತಿಳಿಸಿದರು.
ನೆರೆದಿದ್ದವರೆಲ್ಲರು ಭಾರತ್ ಮಾತಾ ಕಿ ಜೈ. ಎಂದು ಘೋಷಣೆ ಕೂಗಿ ತಮ್ಮ ತಮ್ಮ ಹೆಸರುಗಳನ್ನು ಹೇಳುತ್ತಾ …………….ಎಂಬ ಹೆಸರಿನವಳಾದ ನಾನು ಯುವ ಭಾರತೀಯಳಾಗಿ ದೇಶಪ್ರೇಮಿಯಾಗಿ, ದೇಶ ನಿರ್ಮಾಣಕ್ಕಾಗಿ ನನ್ನ ದಿನದ ಕೆಲವು ಸಮಯವನ್ನು ಮುಡಿಪಾಗಿಟ್ಟು ಕನಿಷ್ಟ 25 ಜನ ಯುವತಿಯರನ್ನು ದೇಶದ ಕಾರ್ಯಕ್ಕಾಗಿ ಜೋಡಿಸಿ ಭಾರತದ ರಕ್ಷಣೆಯನ್ನು ಮಾಡುತ್ತೇನೆಂದು ಪ್ರಮಾಣ ಮಾಡುತ್ತೇನೆ. ಎಂದು ಸಂಕಲ್ಪ ಮಾಡಿದರು.
]]>
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರು ವಿನಯ ನೇತ್ರ, ಪ್ರಮುಖರಾದ ಪ್ರಭಾಮಾಲಿನಿ. ಕಸ್ತೂರಿ ಪಂಜ, ಮಂಗಳ ಆಚಾರ್ಯ, ದಿನೇಶ ಅಮುಟುರು, ತೀರ್ಪುಗಾರರಾದ ಡಾ.ವಸಂತ ಕುಮಾರ್, ರತ್ನಾವತಿ ಬೈಕಾಡಿ ಉಪಸ್ಥಿತರಿದ್ದರು.