Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Warning: Cannot modify header information - headers already sent by (output started at /home3/buntss5v/iambjp.in/wp-includes/functions.php:6121) in /home3/buntss5v/iambjp.in/wp-includes/feed-rss2.php on line 8
Trending – I am BJP https://iambjp.in Making Bharat Vishwa Guru Wed, 31 Jan 2024 07:08:05 +0000 en-US hourly 1 https://wordpress.org/?v=6.8.1 https://iambjp.in/wp-content/uploads/2021/08/cropped-Smal-Logo-32x32.png Trending – I am BJP https://iambjp.in 32 32 ನಮ್ಮ ಮತ ಅಕ್ಷತೆಯ ಕಾಳಿಗೆ, ಏನಿವಾಗ!? https://iambjp.in/archives/2164 https://iambjp.in/archives/2164#respond Wed, 31 Jan 2024 07:08:05 +0000 https://iambjp.in/?p=2164 ಬಿಜೆಪಿ ಪಕ್ಷದವರು ಅಕ್ಷತೆ ಕಾಳು ನೀಡಿ ಮತ ಕೇಳುತ್ತಿದ್ದಾರೆ, ನಾವು ಐದು ಗ್ಯಾರಂಟಿಗಳನ್ನು ನೀಡಿ ಮತ ಕೇಳುತ್ತಿದ್ದೇವೆ. ನಿಮ್ಮ ಮತ ಅಕ್ಷತೆ ಕಾಳಿಗೋ ಅಥವಾ ಐದು ಗ್ಯಾರಂಟಿಗಳಿಗೋ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಪ್ರಶ್ನಿಸಿದ್ದಾರೆ.

ಬಾಲಕೃಷ್ಣರೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮತ ಅಕ್ಷತೆ ಕಾಳಿನ ಪರವಾಗಿಯೇ ಇರುತ್ತದೆ, ಏಕೆಂದರೆ ಆ ಅಕ್ಷತೆ ಅಕ್ಕಿಯ ಹಿಂದೆ ನಮ್ಮವರ ಬಲಿದಾನ, ತ್ಯಾಗ, ಶೌರ್ಯವಿದೆ. ನಾವು ಐದು ವರ್ಷದ ಅವಧಿಯ ಸರ್ಕಾರದ ಗ್ಯಾರಂಟಿಗಳಿಗೆ ಮರುಳಾಗುವ ಜನರಲ್ಲ ನಾವು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದಿದ್ದರೆ ಗ್ಯಾರಂಟಿ ಯೋಜನೆಗಳು ರದ್ದಾಗಲಿವೆ ಎಂದೂ ನೀವು ಹೇಳಿದ್ದೀರಿ. ಇದು ನಿಮ್ಮ ಮತ್ತು ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನೀತಿಯ ಭಾಗವಾಗಿದೆ. ಅಕ್ಷತೆ ಕಾಳಿಗೂ, ಗ್ಯಾರಂಟಿ ಯೋಜನೆಗಳಿಗೂ ಒಂದಕ್ಕೊಂದು ಸಂಬಂಧ ಕಲ್ಪಿಸುವ ಮೂಲಕ ಕಾಂಗ್ರೆಸ್ ಪಕ್ಷವೇ ಅಯೋಧ್ಯೆಯನ್ನು ಚುನಾವಣಾ ವಿಷಯವನ್ನಾಗಿ ಮಾಡುತ್ತಿದೆ.

ಶ್ರೀರಾಮ ಮಂದಿರ ಲೋಕಾರ್ಪಣೆಯ ಕಾರ್ಯಕ್ರಮವನ್ನು ಜಗತ್ತು ಸಂಭ್ರಮಿಸಿದೆ, ಭಾರತವಂತೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಈ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಂಡಿದೆ. ಅಯೋಧ್ಯ ಲೋಕಾರ್ಪಣೆಯ ದಿನ ರಾಮಜ್ಯೋತಿ ಬೆಳಗುವ ಮೂಲಕ ದೇಶ ಸಂಭ್ರಮಿಸಿತ್ತು. ರಾಮಮಂದಿರ ಲೋಕಾರ್ಪಣೆಗೆ ಮುನ್ನ ದೇಶಾದ್ಯಂತ ರಾಮ ಮಂತ್ರಾಕ್ಷತೆಯ ವಿತರಣೆ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ದೇಶದ ಎಲ್ಲಾ ಮನೆಮನೆಗಳು ವಿತರಿಸುವ ಕಾರ್ಯ ಮಾಡಿತ್ತು, ಇದಕ್ಕೆ ಬಿಜೆಪಿ ಪಕ್ಷ ಕೂಡ ಜೊತೆಯಾಗಿತ್ತು.

ವ್ಯಾಪಕ ಜನಬೆಂಬಲ ಪಡೆದ ಈ ಕಾರ್ಯವನ್ನು ಕಾಂಗ್ರೆಸ್ ಪಕ್ಷಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಕಾಂಗ್ರೆಸ್ ನಾಯಕರು ನಿಮ್ಮ ಮತ ಅಕ್ಷತೆಯ ಕಾಳಿಗೋ ಅಥವಾ ಕಾಂಗ್ರೆಸ್ ಗ್ಯಾರಂಟಿಗಳಿಗೋ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ನಾಯಕರ ಪ್ರಕಾರ ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲದಿದ್ದರೆ ಕಾಂಗ್ರೆಸ್ ಘೋಷಿಸಿದ ಉಚಿತ ಗ್ಯಾರಂಟಿಗಳು ರದ್ದಾಗಲಿವೆಯಂತೆ.

ಈಗಾಗಲೇ ಮೋದಿ ಅಲೆ ಎದ್ದು ಮೋದಿ ಪರವಾದ ಆಡಳಿತ ಕ್ಕೆ ಜನರು ಮೆಚ್ಚಿದ್ದು ಈ ಬಾರಿಯೂ ಸ್ಪಷ್ಟ ಬಹುಮತಗಳೊಂದಿಗೆ ಮೋದಿ ಸರ್ಕಾರವೇ ಆಡಳಿತಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಹಿಂದೂ ವಿರೋಧಿ ನೀತಿಯಿಂದಾಗಿ ಕಾಂಗ್ರೆಸ್‌ ನೆಲಕಚ್ಚುವ ಎಲ್ಲಾ ಲಕ್ಷಣ ಕಾಣುತ್ತಿದೆ. ಹೀಗಿರುವಾಗ ಗ್ಯಾರಂಟಿಗಳನ್ನು ಗುರಾಣಿಯಾಗಿಸಿಕೊಂಡು ಮತಬೇಟೆಯಾಡುವ ಕಾಂಗ್ರೆಸ್‌ ಉದ್ದೇಶ ಎಂದೂ ಸಫಲವಾಗದು.

]]>
https://iambjp.in/archives/2164/feed 0
ವೈರಲ್‌ ಪೋಸ್ಟ್‌ – ʻಬಿಟ್ಟಿ ಭಾಗ್ಯಕ್ಕೆ ದಿನಕ್ಕೊಂದು ಕಂಡಿಷನ್‌ಗಳುʼ ಪುಸ್ತಕ ಬಿಡುಗಡೆ https://iambjp.in/archives/2104 https://iambjp.in/archives/2104#respond Sat, 10 Jun 2023 04:29:09 +0000 https://iambjp.in/?p=2104 ‘ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ವಿಸ್ತಾರವಾದ ಕೃತಿ ರಚಿಸಿ ಬಿಡುಗಡೆಗೆ ಸಿದ್ಧವಾದ ಮಾನ್ಯ ಮುಖ್ಯಮಂತ್ರಿಗಳು’ ಇದು ಯಾರೊ ಒಬ್ಬರು ಹೇಳುತ್ತಿರೋದಲ್ಲ, ಇವತ್ತಿನ ಸೋಷಿಯಲ್ ಮಿಡಿಯಾ ಪೂರಾ ಇದೇ ಚರ್ಚೆ. ಪುಸ್ತಕದ ಟೈಟಲ್ ಏನ್ ಗೊತ್ತಾ? ‘ಬಿಟ್ಟಿ ಭಾಗ್ಯಕ್ಕೆ ದಿನಕ್ಕೊಂದು ಕಂಡಿಷನ್‌ಗಳು’ ಅಂತ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೊ ಮುಂಚೆ ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರ ಆಧಾರದ ಮೇಲೆ ಬಹುಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಅದನ್ನು ಪೂರೈಸೋಕೆ ಆಗದೇ ಹೆಣಗಾಡುತ್ತಿದೆ. ಬಿಟ್ಟಿ ಭಾಗ್ಯಗಳ ಮೇಲೆ ದಿನಕ್ಕೊಂದರಂತೆ ಕಂಡಿಷನ್‌ಗಳನ್ನು ಹಾಕ್ತಿದೆ. ಮೊದಲು 200 ಯುನಿಟ್ ‘ನಂಗೂ ಫ್ರೀ ನಿಂಗೂ ಫ್ರೀ’ ಅಂದವ್ರು, ಈಗ ವರ್ಷದಲ್ಲಿ ಬಳಸಿದ ಸರಾಸರಿ ಲೆಕ್ಕ ಹಾಕಿ, ಅದಕ್ಕೆ ತಕ್ಕಂತೆ ಫ್ರೀ ಕೊಡ್ತಿವಿ ಅಂತ ಕಂಡಿಷನ್ ಹಾಕಿದ್ರು. ಹೀಗೆ ಕಂಡಿಷನ್ ಲಿಸ್ಟು ದಿನಕ್ಕೊಂದರಂತೆ ಬೆಳಿತಿದೆ.

ಸರ್ಕಾರ ಕಂಡಿಷನ್‌ಗಳನ್ನೆಲ್ಲಾ ಸೇರಿಸಿ ಒಂದು ಪುಸ್ತಕ ಮಾಡಿರಬಹುದು ಅಂತ ಕೆಲವರ ಅಭಿಪ್ರಾಯ. ಮತ್ತೂ ಕೆಲವರು ಇದು ಯಾರೊ ವಿರೋಧಿಗಳು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿರೋದಕ್ಕೆ ಮಾಡಿರಬಹುದು ಅಂತ ಹೇಳ್ತಿದ್ದಾರೆ. ಆದ್ರೆ ಹಲವರು, ಸರ್ಕಾರ ಬಂದ ಒಂದು ತಿಂಗಳೊಳಗೇ ಸಿದ್ದರಾಮಯ್ಯನವರು ಸಮಯ ಮಾಡಿಕೊಂಡು ಪುಸ್ತಕವನ್ನೇ ಬರೆದುಬಿಟ್ಟಿದ್ದಾರೆ ಅಂತ ಖುಷಿಪಟ್ಟಿದ್ದಾರೆ.

ಒಟ್ಟಿನಲ್ಲಿ  ಫೇಸ್‌ಬುಕ್, ಟ್ವಿಟರ್, ವಾಟ್ಸಪ್ ಸ್ಟೇಟಸ್‌ಗಳಲ್ಲೆಲ್ಲಾ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದ್ದೇ ಸುದ್ದಿ.

https://twitter.com/SharadaDiamond/status/1667091456757202944

 

]]>
https://iambjp.in/archives/2104/feed 0
ಕೇರಳ ಸ್ಟೋರಿಯಲ್ಲಿ ಆತಂಕವಾದದ ಅನಾವರಣ: ಜೆ.ಪಿ.ನಡ್ಡಾ https://iambjp.in/archives/2041 https://iambjp.in/archives/2041#respond Sun, 07 May 2023 16:47:11 +0000 https://iambjp.in/?p=2041 ಬೆಂಗಳೂರು: ಬಾಂಬ್, ಬಂದೂಕು, ಪಿಸ್ತೂಲ್ ಆತಂಕವಾದದ ಜೊತೆಗೂಡಿವೆ. ಇನ್ನೊಂದು ಪ್ರಮುಖ ರೀತಿಯ ನೂತನ ಭಯಾನಕ ಭಯೋತ್ಪಾದನೆಯ ವ್ಯವಸ್ಥೆಯನ್ನು ‘ಕೇರಳ ಸ್ಟೋರಿ’ ಅನಾವರಣಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಿಳಿಸಿದರು.

ಎಂ.ಜಿ. ರಸ್ತೆಯಲ್ಲಿರುವ ಐನಾಕ್ಸ್ ಚಿತ್ರಮಂದಿರದಲ್ಲಿ “ದಿ ಕೇರಳ ಸ್ಟೋರಿ” ಸಿನಿಮಾವನ್ನು ವೀಕ್ಷಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಕೇರಳದ ಈ ಭಯಾನಕ ವ್ಯವಸ್ಥೆಯು ಕೇರಳ ಸ್ಟೋರಿಯಲ್ಲಿದೆ ಎಂದರು.

ಹೊಸ ಥರದ ಆತಂಕವಾದದ ಬಗ್ಗೆ ಈ ಸಿನಿಮಾ ಮಾಹಿತಿ ಕೊಡುತ್ತಿದೆ. ಯುವಜನರನ್ನು ಪ್ರಾಯೋಜಿತ ರೀತಿಯಲ್ಲಿ ಆತಂಕವಾದದತ್ತ ಸೆಳೆಯುವುದನ್ನು ಈ ಸಿನಿಮಾ ತೋರಿಸುತ್ತದೆ. ಭಯೋತ್ಪಾದನೆಯ ದಾರಿಯಲ್ಲಿ ನಡೆದ ಯುವಜನರು ಮತ್ತೆ ಹಿಂತಿರುಗಲಾಗದ ಹಂತ ತಲುಪುತ್ತಾರೆ ಎಂದು ವಿಶ್ಲೇಷಿಸಿದರು.

ಈ ಸಿನಿಮಾ ವೀಕ್ಷಿಸಿ ಸಮಾಜದ ಹೆಚ್ಚು ಹೆಚ್ಚು ಜನರು ಈ ಷಡ್ಯಂತ್ರದ ಕುರಿತು ಜಾಗೃತಗೊಳ್ಳಲಿ. ಇದಕ್ಕೆ ಧರ್ಮ, ಒಂದು ರಾಜ್ಯ ಎಂಬ ಸೀಮಿತತೆ ಇಲ್ಲ. ಕೇರಳದ ಈ ಗಂಭೀರ ಸಮಸ್ಯೆ ಕುರಿತು ಅಲ್ಲಿನ ಮಾಜಿ ಮುಖ್ಯಮಂತ್ರಿಯೂ ಆತಂಕ ಸೂಚಿಸಿದ್ದಾರೆ ಎಂದರು.

ನಮ್ಮ ಸಮಾಜವನ್ನು ದುರ್ಬಲಗೊಳಿಸಲು ನಡೆಯುವ ಷಡ್ಯಂತ್ರದ ವಿಷಯವನ್ನು ಇದು ತಿಳಿಸಿದೆ. ನಾನು ಈಗಾಗಲೇ ಸಿನಿಮಾ ವೀಕ್ಷಿಸಿದ್ದೇನೆ ಎಂದು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಸಂಸದ ತೇಜಸ್ವಿಸೂರ್ಯ, ರಾಷ್ಟ್ರೀಯ ವಕ್ತಾರ ಜಾಫರ್ ಇಸ್ಲಾಂ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಅವರೂ ನಡ್ಡಾ ಅವರ ಜೊತೆ ಈ ಸಿನಿಮಾ ವೀಕ್ಷಿಸಿದರು.

]]>
https://iambjp.in/archives/2041/feed 0
ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿವೆ ಪ್ರತಿಮೆಗಳು.! https://iambjp.in/archives/1024 https://iambjp.in/archives/1024#respond Fri, 28 Oct 2022 05:29:07 +0000 https://iambjp.in/?p=1024 ನಾವು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ದೊಡ್ಡ ಪ್ರತಿಮೆಗಳನ್ನು ನೋಡಿ ಅಬ್ಬಾ ಎಂದು ಬೆರಗಾಗುತ್ತಿದ್ದೆವು ಉದಾಹರಣೆಗೆ ಅಮೆರಿಕಾದಲ್ಲಿರುವ ಸ್ಟ್ಯಾಚು ಆಫ್ ಲಿಬರ್ಟಿ. ಅಂತಹ ಪ್ರತಿಮೆಗಳನ್ನು ನೋಡಿ ನಮ್ಮ ದೇಶದಲ್ಲೂ ಇರಬಾರದಿತ್ತ ಎಂದುಕೊಳ್ಳುತ್ತಿದ್ದೆವು 2014 ರ ನಂತರ ದಲ್ಲಿ ಮೋದಿಜಿ ಪ್ರಧಾನಿಯಾದ ಮೇಲೆ ನಮ್ಮ ದೇಶದಲ್ಲೂ ಅದು ಸಾಧ್ಯವಾಗಿದ್ದು ಸಂತಸದ ವಿಷಯವೇ ಸರಿ.!

ಗುಜರಾತ್­ನಲ್ಲಿ ಸರ್ದಾರ್ ಪಟೇಲರ ಏಕತಾ ಪ್ರತಿಮೆ

2018 ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆಯನ್ನು ಪ್ರಧಾನಿ ಮೋದಿಯವರು ದೇಶಕ್ಕರ್ಪಿಸಿದರು. ಗುಜರಾತ್‌ನ ಕೇವಡಿಯಾ ದಲ್ಲಿರುವ ಸರ್ದಾರ್ ಪಟೇಲರ ಪ್ರತಿಮೆ ಪ್ರಪಂಚದ ಅತ್ಯಂತ ದೊಡ್ಡ ಪ್ರತಿಮೆಯಾಗಿದ್ದು ಸುಮಾರು 182 ಮೀಟರ್ ಉದ್ದವಿದೆ. ಸರ್ದಾರ್ ಪಟೇಲರ ನೇತೃತ್ವದಲ್ಲಿ ಭಾರತದಲ್ಲಿದ್ದ ಸುಮಾರು 562 ರಾಜಾಡಳಿತ ಪ್ರದೇಶಗಳನ್ನು ಒಟ್ಟು ಮಾಡಿದ್ದರು ಅವರ ನೆನಪಿಗಾಗಿ ಈ ಉಕ್ಕಿನ ಪ್ರತಿಮೆ ಭಾರತ ಸರ್ಕಾರ ನಿರ್ಮಾಣ ಮಾಡಿತು. 182 ಮೀಟರ್ ಎತ್ತರ ಈ ಪ್ರತಿಮೆಗೆ 25 ಸಾವಿರ ಟನ್ ಉಕ್ಕು, 90 ಸಾವಿರ ಟನ್ ಸಿಮೆಂಟ್, ಸುಮಾರು ಏಳು ಕಿಲೋಮೀಟರ್ ತ್ರಿಜ್ಯದಿಂದ ಕಾಣುವ ಹಾಗೇ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಈ ಪ್ರತಿಮೆ ನಿರ್ಮಾಣಕ್ಕೆ ದೇಶದ ಹಲವು ಕಡೆಯಿಂದ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು.

ತೆಲಂಗಾಣದಲ್ಲಿ ಸಮಾನತೆಯ ಪ್ರತಿಮೆ

ಜಗತ್ತಿನ ಎರಡನೇ ಅತಿ ದೊಡ್ಡ ಪ್ರತಿಮೆಯಾದ 216 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ‘ಸಮಾನತೆಯ ಪ್ರತಿಮೆ’ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ 2022 ಫೆಬ್ರವರಿಯಂದು ರಾಮಾನುಜರ ಜನ್ಮದಿನದಂದು ಉದ್ಘಾಟಿಸಿದರು.

ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯ ಅವರ 216 ಅಡಿ ಎತ್ತರದ ಪ್ರತಿಮೆಯನ್ನು ‘ಪಂಚಲೋಹ’ದಿಂದ ಮಾಡಲಾಗಿದೆ. ಅಂದರೆ, ಚಿನ್ನ, ಬೆಳ್ಳಿ, ಕಂಚು, ಹಿತ್ತಾಳೆ ಹಾಗೂ ಸತುವಿನಿಂದ ಮಾಡಲಾಗಿದೆ. ಇದು ಜಗತ್ತಿನಲ್ಲಿ ಕುಳಿತ ಸ್ಥಿತಿಯಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ.

ಕರ್ನಾಟಕದಲ್ಲಿ ಕೆಂಪೇಗೌಡರ ಪ್ರಗತಿಯ ಪ್ರತಿಮೆ

ಬೆಂಗಳೂರು ಎಂದು ಹೆಸರು ಕೇಳಿದರೆ ಇಡೀ ಪ್ರಪಂಚವೇ ಒಮ್ಮೆ ತಿರುಗಿ ನೋಡುತ್ತದೆ, ಪ್ರಪಂಚಕ್ಕೆ ಸಾಕಷ್ಟು ಕೊಡುಗೆಗಳನ್ನು ಬೆಂಗಳೂರು ನೀಡುತ್ತಿದೆ. ಇಂತಹಾ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರು, ಬೆಂಗಳೂರಿನಲ್ಲಿ ವಿವಿಧ ದಿಕ್ಕಿನಲ್ಲಿ ಮಹಾಧ್ವಾರಗಳನ್ನು ನಿರ್ಮಿಸಿದರು. ನಗರದ ಹಲವೆಡೆ ಕೆರೆ ಕಟ್ಟೆಗಳನ್ನು ಕಟ್ಟಿಸಿದರು. ಹಲವು ಪ್ರದೇಶಗಳಲ್ಲಿ ದೇವಸ್ಥಾನಗಳನ್ನು ಕಟ್ಟಿದರು. ವಿವಿಧ ಸಮುದಾಯಗಳ ಕಸುಬುಗಳ ಬೆಳವಣಿಗೆಗೆ ಪೂರಕವಾದ ವ್ಯವಹಾರದ ವಾತಾವರಣ ನಿರ್ಮಿಸಿದರು. ಅದಕ್ಕಾಗಿ ವಿವಿಧ ಪೇಟೆಗಳು ಮತ್ತು ಬೀದಿಗಳನ್ನು ಹುಟ್ಟುಹಾಕಿದರು.

ಬೆಂಗಳೂರಿಗೆ ನದಿ ಮೂಲಗಳಿರಲಿಲ್ಲ. ಹೀಗಾಗಿ, ಕೃಷಿ ಮತ್ತು ಕುಡಿಯುವ ನೀರಿಗಾಗಿ ಧರ್ಮಾಂಬುಧಿ ಕೆರೆ, ಕೆಂಪಾಂಬುಧಿ ಕೆರೆ, ಹಲಸೂರು, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಸೇರಿದಂತೆ ನೂರಾರು ಕೆರೆ-ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು.ಹೊಸ ತಂತ್ರಜಾನವನ್ನು 500 ವರ್ಷಗಳ ಹಿಂದೆ ಬಳಕೆ ಮಾಡಿರುವಂತ ಖ್ಯಾತಿ ಬೆಂಗಳೂರಿಗೆ ಇದ್ದರೆ, ಆ ಶ್ರೇಯಸ್ಸು ಕೆಂಪೇಗೌಡರಿಗೆ ಸೇರಬೇಕು. ಇಂತಹ ಒಂದು ಸುಂದರವಾದ ಬೆಂಗಳೂರನ್ನು ಕಟ್ಟಿದ್ದರಿಂದ ಇದರ ಒಟ್ಟು ಪರಿಣಾಮ ಇಡೀ ಕನ್ನಡ ನಾಡಿನ ಮೇಲೆ ಆಗಿದೆ. ಇಡೀ ಕನ್ನಡ ನಾಡಿನ ಜನತೆಯ ಬದುಕಿನ ಮೇಲೆ ಆಗಿದೆ. ಕನ್ನಡ ನಾಡಿನಲ್ಲಾಗುತ್ತಿರುವ ಪ್ರಗತಿಯಲ್ಲಾಗಿದೆ. ಒಬ್ಬ ಮುತ್ಸದಿ ರಾಜ ಯಾವ ರೀತಿ ಎಲ್ಲರ ಮೇಲೆ ಪ್ರಭಾವ ಬೀರಬಲ್ಲ ಮತ್ತು ಕಾಲ ಗಡಿ ಮೀರಿ ಜನರ ಮನಸ್ಸಿನಲ್ಲಿ ಉಳಿಯಬಲ್ಲ ಎಂಬುದನ್ನು ಕೆಂಪೇಗೌಡರ ಬದುಕಿನಿಂದ ನಾವು ನೋಡುತ್ತಿದ್ದೇವೆ.

ಕೆಂಪೇಗೌಡರ ವಿವೇಚನಾಯುತ ಯೋಜನೆಗೆ ಮತ್ತು ಕತೃತ್ವಶಕ್ತಿಯುಳ್ಳ ವ್ಯಕ್ತಿತ್ವಕ್ಕೆ 481 ವರ್ಷಗಳ ಬಳಿಕವೂ ಜನತೆ ಋುಣಪೂರ್ವಕವಾಗಿ ನೆನೆಯುತ್ತಲೇ ಇದ್ದಾರೆ. ನಗರದ ಹೊರವಲಯದಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತಿ ದೊಡ್ಡ ಬಸ್‌ ನಿಲ್ದಾಣ, ಮೆಟ್ರೊ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲಾಗಿದೆ. ಅಲ್ಲದೇ ಇದೀಗ ಬೆಂಗಳೂರು ವಿಮಾನ ನಿಲ್ದಾಣದ ಬಳಿಯಲ್ಲಿ ಅವರ ಪ್ರತಿಮೆ ಅನಾವರಣಗೊಳ್ಳಲು ಸಜ್ಜಾಗಿದೆ. 90 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯು 18 ಅಡಿ ಎತ್ತರದ ಕಾಂಕ್ರೀಟ್ ಪೀಠದ ಮೇಲೆ ಸ್ಥಾಪಿಸಲಾಗಿದೆ, ರಾಮ್ ಸುತಾರ್ ಆರ್ಟ್ಸ್ ಕ್ರಿಯೇಷನ್ಸ್ ಕಲಾವಿದರು ಇದನ್ನು ಸಿದ್ಧಪಡಿಸಿದ್ದಾರೆ. ಪ್ರತಿಮೆಯು 100 ಟನ್ ಕಂಚಿನಿಂದ ನಿರ್ಮಾಣಗೊಂಡಿದ್ದು, 120 ಟನ್ ಉಕ್ಕು ಬಳಸಲಾಗಿದೆ. ಪೀಠದ ನಾಲ್ಕು ದಿಕ್ಕಿನಲ್ಲೂ ಸಹ ಕೆಂಪೇಗೌಡರ ಇತಿಹಾಸದ ಬರಹಗಳಿವೆ. ಆಕ್ಟೊಬರ್ 21 ಶುಕ್ರವಾರದಂದು ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ನಾಡಿನಾದ್ಯಂತ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು, ನಾಡಿನಾದ್ಯಂತ ಶುಕ್ರವಾರದಿಂದ ನವೆಂಬರ್ 7 ರವರೆಗೆ ರಾಜ್ಯದ ವಿವಿಧ ಕಡೆ ಪವಿತ್ರ, ಚಾರಿತ್ರಿಕ ಸ್ಥಳಗಳಿಂದ ಮಣ್ಣು ಸಂಗ್ರಹಿಸಿ, ಕೆಂಪೇಗೌಡರ ಪ್ರತಿಮೆಯ ತಳಹದಿಯಲ್ಲಿ ಅದನ್ನು ಲೀನ ಮಾಡಬೇಕು ಎನ್ನುವ ಮಹತ್ವಕಾಂಕ್ಷೆಯ ‘ಬನ್ನಿ ನಾಡ ಕಟ್ಟೋಣ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಡಾ.ಅಶ್ವಥ್ ನಾರಾಯಣ್ ಅವರು ವಿಶೇಷವಾಗಿ ಪ್ರತಿಮೆ ನಿರ್ಮಾಣದಲ್ಲಿ ಆಸಕ್ತಿ ವಹಿಸಿ ಪ್ರತಿಯೊಂದು ಹಂತದಲ್ಲೂ ಮಾಹಿತಿ ಪಡೆದು ಪ್ರತಿಮೆ ನಿರ್ಮಾಣಕ್ಕೆ ಅವರದೇ ಆದ ಕೊಡುಗೆಯನ್ನು ನೀದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 11 ರಂದು ಕೆಂಪೇಗೌಡ ವಿಮಾನ ನಿಲ್ದಾಣದ ಥೀಮ್‍ ಪಾರ್ಕ್‍ನಲ್ಲಿ ನಿರ್ಮಿಸಲಾಗಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ.

]]>
https://iambjp.in/archives/1024/feed 0