og
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121wp-post-author
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121ನಗರದ ಕುಮಾರಕೃಪಾ ಗೆಸ್ಟ್ ಹೌಸ್ನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಣ್ಣತನವನ್ನು ಹೊಂದಿದೆ. ಅವರ ಈ ಸಣ್ಣತನವನ್ನು ಜನರು ಕ್ಷಮಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಸಣ್ಣತನದ ಧೋರಣೆಗೆ ಬಡಜನರು, ರೈತರು ಸೇರಿದಂತೆ ಎಲ್ಲ ಮತದಾರರು ಸಮರ್ಥ ಉತ್ತರ ಕೊಟ್ಟು ಆ ಪಕ್ಷವನ್ನು ರಾಜ್ಯದಲ್ಲಿ ನಾಮಾವಶೇಷಗೊಳಿಸಲಿದ್ದಾರೆ ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿಯವರ ಸರಕಾರವು ರೈತರಿಗೆ ಕಿಸಾನ್ ಸಮ್ಮಾನ್ ಮೂಲಕ ಹೆಚ್ಚುವರಿ ನಿಧಿ, ರೈತ ವಿದ್ಯಾ ನಿಧಿ ಸ್ಕಾಲರ್‍ಶಿಪ್ ಕೊಡುತ್ತಿದೆ. ಎಸ್‍ಸಿ, ಎಸ್‍ಟಿ ವರ್ಗಕ್ಕೆ ವಿಶೇಷ ಪ್ಯಾಕೇಜ್ ಮೂಲಕ ಜನಸಾಮಾನ್ಯರ ಸರಕಾರ ಇಲ್ಲಿದೆ. ಅವರು ಕಾಮನ್ ಮ್ಯಾನ್ ಸಿಎಂ ಆಗಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಎಸ್‍ಸಿ ಹಾಸ್ಟೆಲ್ ಖರೀದಿ ಹಗರಣ, ಪಡಿತರದಲ್ಲೂ ಹಗರಣ, ಅರ್ಜಿ ಹಾಕದ ವ್ಯಕ್ತಿಯನ್ನು ಶಿಕ್ಷಕರನ್ನಾಗಿ ನೇಮಕ ಮಾಡಿದ್ದು, ಪೊಲೀಸರ ನೇಮಕಾತಿಯಲ್ಲೂ ಹಗರಣಗಳು ಸಿದ್ದರಾಮಯ್ಯರ ಅಧಿಕಾರಾವಧಿಯಲ್ಲಿ ನಡೆದಿವೆ. ಕಾಂಗ್ರೆಸ್ ಭ್ರಷ್ಟಾಚಾರದ ತಾಯಿಯಂತಿದೆ. ಭ್ರಷ್ಟರ ಪಕ್ಷವಾದ ಕಾಂಗ್ರೆಸ್, ಸಜ್ಜನ, ಅತ್ಯುತ್ತಮ ಆಡಳಿತ ನೀಡುತ್ತಿರುವ ಬೊಮ್ಮಾಯಿಯವರ ಹೆಸರನ್ನು ಹಾಳು ಮಾಡಲು ವ್ಯರ್ಥ ಆರೋಪ ಮಾಡುತ್ತಿದೆ ಎಂದು ಟೀಕಿಸಿದರು.
ಪಂಜಾಬ್‍ನಲ್ಲಿ ಕಾಂಗ್ರೆಸ್ ಪಕ್ಷ ಒಡೆಯಿತು. ಗೋವಾದಲ್ಲೂ 8 ಶಾಸಕರು ಪಕ್ಷ ತೊರೆದರು. ರಾಜಸ್ಥಾನದಲ್ಲೂ ಕಾಂಗ್ರೆಸ್ ಒಳಜಗಳ ಮುಂದುವರಿದಿದೆ. ಕರ್ನಾಟಕದಲ್ಲೂ ಎರಡು ಮುಖಂಡರ ನಡುವೆ ಭಿನ್ನಮತ ಭುಗಿಲೇಳಲಿದೆ. ನೀವು ನೋಡುತ್ತಿರಿ ಎಂದು ತಿಳಿಸಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಒಂದೆಡೆ ನಡೆದಿದೆ. ಇನ್ನೊಂದೆಡೆ ‘ಕಾಂಗ್ರೆಸ್ ಚೋಡೋ’ ಮುಂದುವರಿದಿದೆ. ಕರ್ನಾಟಕದಲ್ಲೂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಡುವಿನ ಜಗಳ ಮುಂದುವರಿಯಲಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಷಡ್ಯಂತ್ರದ, ಭ್ರಷ್ಟಾಚಾರದ ಪಕ್ಷ. ಫೋನ್ ಟ್ಯಾಪಿಂಗ್, ವಿಡಿಯೋ ಟೇಪ್ ಮಾಡುವುದು, ಇಲ್ಲಸಲ್ಲದ ಆರೋಪ ಮಾಡುವುದು ಈ ಪಕ್ಷದ ನಾಯಕರ ಸಣ್ಣತನವನ್ನು ತೋರಿಸುತ್ತದೆ. ವಿಚಾರಶೂನ್ಯವಾದ ಕಾಂಗ್ರೆಸ್‍ನವರು ಇಂಥ ಆರೋಪ ಮಾಡುತ್ತಾರೆ. ಹಗಲಿರುಳು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ಬೊಮ್ಮಾಯಿಯವರ ವಿರುದ್ಧ ಇಂಥ ಆಧಾರರಹಿತ ಆರೋಪ ಮಾಡುವ ಕಾಂಗ್ರೆಸ್ಸಿಗರನ್ನು ಎಂದೂ ಕ್ಷಮಿಸುವುದಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಜನರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಪಿಎಫ್‍ಐ ಪ್ರಕರಣಗಳ ರದ್ದು ಕುರಿತಂತೆ ರಾಜ್ಯದ ಬಿಜೆಪಿ ಸರಕಾರ ಪುನರ್ ಪರಿಶೀಲಿಸಲಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ನಾಯಕರೇ ಇಲ್ಲದ, ದೂರದೃಷ್ಟಿರಹಿತ ಕಾಂಗ್ರೆಸ್ ಪಕ್ಷವು ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆಯಿಂದ ನಾಮಾವಶೇಷ ಆಗಲಿದೆ ಎಂದು ನುಡಿದರು. ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರ ಪಡೆಯಲಿದೆ ಎಂದು ತಿಳಿಸಿದರು.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್- ಸಚಿನ್ ಪೈಲಟ್ ಅವರ ನಡುವೆ ತಳವಾರು ಕಾಳಗ ಮುಂದುವರಿಯುತ್ತಿದೆ ಎಂದ ಅವರು, ಆ ರಾಜ್ಯದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಆಡಳಿತ ವಿರೋಧಿ ಅಲೆ ಅಲ್ಲಿದೆ. ಮುಂದಿನ ವರ್ಷ ನಾವು ಅಲ್ಲಿ ಸರಕಾರ ರಚಿಸುತ್ತೇವೆ ಎಂದು ತಿಳಿಸಿದರು.
ದೇಶದ ಏಕತೆ ಮತ್ತು ಅಖಂಡತೆಗಾಗಿ ಸಂಕಲ್ಪ, ರಾಜ್ಯದ ಗೌರವಕ್ಕೆ ಬದ್ಧತೆಯ ಸಂಕಲ್ಪವನ್ನು ಕಾರ್ಯಕರ್ತರು ಮಾಡಲಿದ್ದಾರೆ. ಕೇಂದ್ರದ ಮೋದಿಜಿ ಮತ್ತು ರಾಜ್ಯದ ಬೊಮ್ಮಾಯಿಯವರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಸಂಕಲ್ಪವನ್ನು ಕಾರ್ಯಕರ್ತರು ಮಾಡಲಿದ್ದಾರೆ. ಡಬಲ್ ಎಂಜಿನ್ ಸರಕಾರಗಳನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪವೂ ನಡೆಯಲಿದೆ ಎಂದು ತಮ್ಮ ಕಲ್ಯಾಣ ಕರ್ನಾಟಕದ ಪ್ರವಾಸದ ಉದ್ದೇಶದ ಸಂಬಂಧದ ಪ್ರಶ್ನೆಗೆ ಉತ್ತರ ನೀಡಿದರು.
ರಾಜ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆ ಕುರಿತಂತೆ ಬೊಮ್ಮಾಯಿಯವರು ಸಕಾಲದಲ್ಲಿ ಸಮರ್ಪಕ ನಿರ್ಣಯ ಮಾಡಲಿದ್ದಾರೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ದೇಶಾದ್ಯಂತ ಗಲಭೆ, ದಂಗೆ ಕಾರ್ಯದಲ್ಲಿ ಪಿಎಫ್‍ಐ ನಿರತವಾಗಿತ್ತು. ಸಮಾಜವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡಿತ್ತು. ಆತಂಕವಾದಿ ಘಟನೆಗಳಲ್ಲೂ ಅದು ಒಳಗೊಂಡಿತ್ತು. ದೇಶವನ್ನು ಅಸ್ಥಿರಗೊಳಿಸಲು ವಿದೇಶದಿಂದ ಹಣ ಪಡೆಯುತ್ತಿದ್ದ ಈ ಸಂಸ್ಥೆಯನ್ನು ನಿಷೇಧಿಸಿದ್ದು, ಅತ್ಯಂತ ಉತ್ತಮ ನಿರ್ಧಾರ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.
ರಾಜಸ್ಥಾನದಲ್ಲೂ ಹಲವು ಜಿಲ್ಲೆಗಳಲ್ಲಿ ನಡೆದ ದಂಗೆ, ಗಲಭೆಗಳಲ್ಲಿ ಪಿಎಫ್‍ಐ ಒಳಗೊಂಡಿತ್ತು. ಕರೋಲಿ, ಜೋಧಪುರ, ಉದಯಪುರ ಜಿಲ್ಲೆಗಳಲ್ಲಿ ಈ ಗಲಭೆಗಳು, ಹಿಂದೂಗಳ ಹತ್ಯೆಗಳು ಆಗಿದ್ದವು ಎಂದ ಅವರು, ಕರ್ನಾಟಕದಲ್ಲೂ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಯೋಜಿತ ರೀತಿಯಲ್ಲಿ ಹಿಂದೂಗಳ ಹತ್ಯೆಗಳು ಆಗಿದ್ದವು. ದೇಶವನ್ನು ಅಖಂಡವಾಗಿಡಲು ಪಿಎಫ್‍ಐ ನಿಷೇಧ ಅನಿವಾರ್ಯವಾಗಿತ್ತು ಎಂದರು.
ರಾಜಸ್ಥಾನ, ಹೈದರಾಬಾದ್, ಕರ್ನಾಟಕದ ವಿವಿಧೆಡೆ ನಡೆದ ಹಿಂದೂಗಳ ಹತ್ಯೆಯಲ್ಲಿ ಪಿಎಫ್‍ಐ ಕೈವಾಡ ಮತ್ತು ಷಡ್ಯಂತ್ರ ಇದೆ ಎಂಬುದು ಪತ್ತೆಯಾಗಿತ್ತು. ಹಲವು ರಾಜ್ಯಗಳಲ್ಲಿ ಇಂಥ ಹಿಂಸಾಚಾರ ನಡೆದ ಕಾರಣ ಎನ್‍ಐಎ ಈ ದಾಳಿ ನಡೆಸಿದೆ ಎಂದು ವಿವರಿಸಿದರು.
]]>ಮೋದಿ ಯುಗ್ ಉತ್ಸವದ ಪುಸ್ತಕವನ್ನು ಮಾನ್ಯ ಶಾಸಕರು ದೆಹಲಿಗೆ ತೆರಳಿ ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಕರ್ನಾಟಕ ಭಾಜಪಾ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಲವಾರು ಪಕ್ಷದ ಮುಖಂಡರು ಹಾಗೂ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ನೀಡಿದ್ದರು.
ಕಳೆದ 2 ದಿನಗಳಿಂದ ಬಿಜೆಪಿ ರಾಜ್ಯ ಕಾರ್ಯಕಾರಣಿಯು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದು ನಿನ್ನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನ ಕಾರ್ಯಗಳ ಬಗ್ಗೆ ಶಾಸಕರನ್ನು, ಸಚಿವರನ್ನು ಕುರಿತು ಮಾತನಾಡುವಾಗ ನಾನು ನೋಡಿದ್ದೇನೆ ಇಲ್ಲಿ ಮೈಸೂರಿನ ಶಾಸಕರಾದ ರಾಮದಾಸ್ ಜಿ ಕುಳಿತಿದ್ದಾರೆ ಅವರ ಕ್ಷೇತ್ರದಲ್ಲಿ ಕ್ಯಾಂಪ್ ಗಳನ್ನು ಮಾಡಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಆರ್.ಅಶೋಕ್, ಡಾ.ಸುಧಾಕರ್ ಎಲ್ಲರೂ ಅಲ್ಲಿಗೆ ಹೋಗಿ ನೋಡಿದ್ದಾರೆ ಒಂದೊಂದೂ ಯೋಜನೆಗಳ ಅನುಷ್ಠಾನದ ಬಗ್ಗೆ ಒಂದು ಪುಸ್ತಕವನ್ನೂ ಸಹ ಅವರು ಮಾಡಿದ್ದಾರೆ ಅವರಿಗೆ ಎಲ್ಲರೂ ಸೇರಿ ಚಪ್ಪಾಳೆ ಬಡಿಯಿರಿ, ಅವರು ಶಾಸಕರಾಗಿ ಆದಿವಾಸಿಗಳಿಗೆ, ಬಡವರಿಗೆ ಯೋಜನೆಗಳ ಅನುಷ್ಠಾನವನ್ನು ಮಾಡಿದ್ದಾರೆ. ನೀವುಗಳೂ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಕ್ಯಾOಪ್ ಹಾಕಿಕೊಂಡು ಈ ರೀತಿ ಯೋಜನೆಗಳ ಅನುಷ್ಠಾನ ಮಾಡಿಸಿ ಮನೆ ಮನೆಗೆ ತೆರಳಿ ಇದು ಮೋದಿಜಿ ಸರ್ಕಾರದ ಯೋಜನೆ, ಇದು ಬೊಮ್ಮಾಯಿ ಸರ್ಕಾರದ ಯೋಜನೆ ಎಂದು ತಿಳಿ ಹೇಳುವ ಕೆಲಸ ಮಾಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾನ್ಯ ಶಾಸಕರು ಶ್ರೀಯುತ ಅರುಣ್ ಸಿಂಗ್ ಜಿ ಅವರ ಈ ಪ್ರಶಂಸೆಯ ಮಾತುಗಳು ನನಗೆ ಕೆಲಸ ಮಾಡಲು ಮತ್ತಷ್ಟು ಹುರುಪು ಬಂದಂತಾಗಿದೆ. ಕ್ಷೇತ್ರದಲ್ಲಿ ಈ ಮಟ್ಟಿಗೆ ಯೋಜನೆ ಅನುಷ್ಠಾನ ಆಗುತ್ತಿದೆ ಅಂದರೆ ಅದರ ಹಿಂದೆ ನಮ್ಮ ಕಾರ್ಯಕರ್ತರ ಹಾಗೂ ಅಧಿಕಾರಿಗಳ ಶ್ರಮ ಹೇಳತೀರದು, ಅವರಿಗೆ ಈ ಸಂದರ್ಭದಲ್ಲಿ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸಂಘಟನೆ ಹಾಗೂ ಸರ್ಕಾರ ಜೊತೆ ಗೂಡಿ ಕ್ಷೇತ್ರದ ಜನತೆಗೆ ಸರ್ಕಾರಿ ಯೋಜನೆಗಳನ್ನು ತಲುಪಿಸುವಲ್ಲಿ ಕ್ಷೇತ್ರವನ್ನು ನಂ.1 ಮಾಡುವತ್ತ ನಾವು ಹೆಜ್ಜೆ ಇಡುತ್ತಿದ್ದೇವೆ ಎಂದರು.
]]>ವಿಶೇಷವಾಗಿ ಶಾಸಕ ರಾಮದಾಸ್ ತನ್ನ ಕ್ಷೇತ್ರದ ಕಾರ್ಯಕರ್ತರನ್ನು ಹಾಗೂ ಪದಾಧಿಕಾರಿಗಳನ್ನ ಹಾಗೂ ಅವರ ಸಾಧನೆಗಳನ್ನು ಅರುಣ್ ಸಿಂಗ್ ಜಿ ಗೆ ವಿವರಿಸಿದರು, ಇದಕ್ಕೆ ಅರುಣ್ ಸಿಂಗ್ ಜಿ ಹರ್ಷ ವ್ಯಕ್ತಪಡಿಸಿದ್ದಾರೆ ಅಲ್ಲದೇ ಕ್ಷೇತ್ರದಲ್ಲಿ 11 ಸಾವಿರ ಪೇಜ್ ಪ್ರಮುಖರನ್ನು ಗುರುತಿಸಿದ ವಿಷಯವನ್ನು ರಾಮದಾಸ್ ಅವರು ಹೇಳಿದ್ದಕ್ಕೆ ಅರುಣ್ ಸಿಂಗ್ ಜಿ ಅವರು ಬಹಳ ಹರ್ಷ ವ್ಯಕ್ತಪಡಿಸಿದರು.
]]>