Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Warning: Cannot modify header information - headers already sent by (output started at /home3/buntss5v/iambjp.in/wp-includes/functions.php:6121) in /home3/buntss5v/iambjp.in/wp-includes/feed-rss2.php on line 8
B C Patil – I am BJP https://iambjp.in Making Bharat Vishwa Guru Wed, 17 Nov 2021 09:05:10 +0000 en-US hourly 1 https://wordpress.org/?v=6.8.1 https://iambjp.in/wp-content/uploads/2021/08/cropped-Smal-Logo-32x32.png B C Patil – I am BJP https://iambjp.in 32 32 ಕೃಷಿ ವಿಚಕ್ಷಣಾ ದಳವನ್ನು ಇನ್ನಷ್ಟು ಜಾಗೃತಗೊಳಿಸಲು ಕೃಷಿ ಸಚಿವರ ದಿಟ್ಟ ಕ್ರಮ : ಹುಲಿಬಿಟ್ಟು ಇಲಿ ಹಿಡಿಯಬಾರದು ಎಂದ ಬಿ.ಸಿ.ಪಾಟೀಲ್ https://iambjp.in/archives/683 https://iambjp.in/archives/683#respond Wed, 17 Nov 2021 09:05:10 +0000 https://iambjp.in/?p=683 ಬೆಂಗಳೂರು‌ : ರಾಜ್ಯದಲ್ಲಿ ರೈತರಿಗೆ ಯಾವುದೇ ರೀತಿಯ ಕಳಪೆ ಕೃಷಿ ಪರಿಕರಗಳು, ರಸಗೊಬ್ಬರ,ಕೀಟನಾಶಕಗಳು ಸರಬರಾಜಾಗದಂತೆ ಕೃಷಿ ವಿಚಕ್ಷಣಾ ದಳವನ್ನು ಇನ್ನಷ್ಟು ಜಾಗೃತಗೊಳಿಸಲು ಕೃಷಿ ಸಚಿವ ಬಿ.ಸಿ.ಪಾಟೀಲರು ದಿಟ್ಟ ಕ್ರಮವಹಿಸಿ, “ಹುಲಿ ಬಿಟ್ಟು ಇಲಿ ಹಿಡಿಯಬಾರದು” ಎಂದಿದ್ದಾರೆ.

ವಿಕಾಸಸೌಧದ ಕಚೇರಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲರ ಅಧ್ಯಕ್ಷತೆಯಲ್ಲಿ ಸರ್ಕಾರದ ಕೃಷಿ ಇಲಾಖೆ ಪ್ರಧಾನಕಾರ್ಯದರ್ಶಿ ಉಮಾಶಂಕರ್ ನೇತೃತ್ವದಲ್ಲಿ ಕೃಷಿ ವಿಚಕ್ಷಣಾ ದಳದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

ಸಭೆಯಲ್ಲಿ ಕೃಷಿ ವಿಚಕ್ಷಣಾ ದಳದ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಚುರುಕುಗೊಳಿಸುವುದರೊಂದಿಗೆ ಕಳಪೆ ರಸಗೊಬ್ಬರ, ಕೀಟನಾಶಕಗಳು ತಯಾರಾಗದಂತೆ ಅಕ್ರಮ ದಾಸ್ತಾನು, ಕಾಳಸಂತೆಯಲ್ಲಿ ಮಾರಾಟವಾಗದಂತೆ ತಳಮಟ್ಟದಲ್ಲಿಯೇ ಅವುಗಳನ್ನು ಬುಡಸಹಿತ ಕಿತ್ತುಹಾಕಬೇಕು. ರೈತರಿಗೆ ಅನ್ಯಾಯವಾಗುವಂತಹ ಇಂತಹ ಕುಕೃತ್ಯದಲ್ಲಿ ಯಾರೇ ಅಧಿಕಾರಿಗಳಿಗಾಗಲೀ ಇನ್ಯಾರೇ ಆಗಲೀ ಶಾಮೀಲಾಗದಂತೆ ನೋಡಿಕೊಂಡು ತಪ್ಪನ್ನು ಎಸಗಿದವರ್ಯಾರೇ ಆಗಲೀ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ದಾಳಿ ನಡೆಸುವುದು ಸದುದ್ದೇಶದಿಂದ ಕೂಡಿರಬೇಕು ಹಾಗ ರೈತರಿಗೆ ಉಪಯೋಗವಾಗುವಂತಿರಬೇಕು. ಇಲಾಖೆಗೆ ರೈತರಿಗೆ ದ್ರೋಹ ಬಗೆಯುವವರು ಯಾರೇ ಕಂಡುಬಂದರೂ ಮುಲಾಜಿಲ್ಲದೇ ಅಂತವರ ವಿರುದ್ಧ ಕ್ರಮ ಜರುಗಿಸಿ ಎಂದರು.

ತಳಮಟ್ಟದಲ್ಲಿಯೇ ಗುಣಮಟ್ಟದ ಅನುಮತಿ ನೀಡಿದ ಪ್ಯಾಕಿಂಗ್­ಗಳು ಮೇಲ್ಮಟ್ಟದವರೆಗೂ ಸರಬರಾಜಾಗಿ ಒಪ್ಪಿತ ಗುಣಮಟ್ಟದ ಮಾದರಿಗಳೇ ರೈತರಿಗೂ ತಲುಪುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಕೃಷಿ ಅಧಿಕಾರಿಗಳು ವಿಚಕ್ಷಣಾ ದಳದವರು ಇದರತ್ತ ಹೆಚ್ಚಿನ ಲಕ್ಷ್ಯವಹಿಸಬೇಕು. ಅವರವರ ಜವಾಬ್ದಾರಿ ಕರ್ತವ್ಯಗಳನ್ನು ಅವರವರೇ ನಿರ್ವಹಿಸಬೇಕು. ಸ್ಥಳೀಯವಾಗಿ ಜಿಲ್ಲಾ ಕೃಷಿ ವಿಚಕ್ಷಣಾಧಿಕಾರಿಗಳೇ ಆಯಾ ಭಾಗದಲ್ಲಿ ಹದ್ದಿನ ಕಣ್ಣು ಇಡಬೇಕು. ಮೇಲ್ಮಟ್ಟದ ಅಧಿಕಾರಿಗಳಿಗೆ ಇಂತಹ ಕುಕೃತ್ಯಗಳು ಗಮನಕ್ಕೆ ಬಂದು ಸ್ಥಳೀಯವಾಗಿ ಅಧಿಕಾರಿಗಳಿಗೆ ಬಾರದೇ ಇದ್ದ ಸಂದರ್ಭದಲ್ಲಿ ಒಂದು ವೇಳೆ ರಾಜ್ಯದ ಯಾವುದೇ ಭಾಗದಲ್ಲಿಯೂ ಕೇಂದ್ರ ಕೃಷಿ ಜಾಗೃತಕೋಶದ ಅಧಿಕಾರಿಗಳು ದಾಳಿ ಮಾಡಿ ಕೃಷಿ ಪರಿಕರಗಳನ್ನು ಜಪ್ತು ಮಾಡಿದ ಸಂದರ್ಭದಲ್ಲಿ ಪರಿವೀಕ್ಷಕರಿಗೆ ನೋಟೀಸ್ ನೀಡುವುದಾಗಿ ಕೃಷಿ ಸಚಿವರು ಎಚ್ಚರಿಸಿದರು.

ಬಹುಮುಖ್ಯವಾಗಿ ಕೃಷಿ ಇಲಾಖೆಯ “ಟೋಲ್ ಫ್ರೀ-ಸಹಾಯವಾಣಿ” ದೂರವಾಣಿ ಸಂಖ್ಯೆಯನ್ನು ಜಾಗೃತಕೋಶಕ್ಕೂ ವಿಸ್ತರಿಸುವಂತೆ ಸಭೆಯಲ್ಲಿ ಸೂಚಿಸಿದ ಕೃಷಿ ಸಚಿವರು, ಜಪ್ತಿ ಮಾಡಿದ ಕೃಷಿ ಪರಿಕರಗಳ ವಿಲೇವಾರಿಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗಸೂಚಿ ಹೊರಡಿಸಲು ಕೃಷಿ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಯಿತು. ಇದರೊಂದಿಗೆ ಜಾಗೃತಕೋಶದ ಕಾರ್ಯಕ್ಕೆ ಸುಗಮವಾಗುವಂತೆ ಕೃಷಿ ಪರಿಕರಗಳ ಗುಣಮಟ್ಟ ನಿಯಂತ್ರಣಕ್ಕೆ ಪೂರಕವಾಗಿ ಅಗತ್ಯವಾಗಿ ಬೇಕಾದ ತಂತ್ರಾಂಶ ಹಾಗೂ K-KISAN ಆ‍್ಯಪ್­ನೊಂದಿಗೆ ಜೋಡಿಸಲು ಕ್ರಮವಹಿಸಬೇಕೆಂದು ಬಿ.ಸಿ.ಪಾಟೀಲರು ಅಧಿಕಾರಿಗಳಿಗೆ ಸಲಹೆ ನೀಡಿದರು.

]]>
https://iambjp.in/archives/683/feed 0
ಸಂತುಷ್ಟ ರೈತನಿಂದ ಸಮೃದ್ಧ ಭಾರತ : ಕೃಷಿ ಸಚಿವ ಬಿ. ಸಿ. ಪಾಟೀಲ್ https://iambjp.in/archives/510 https://iambjp.in/archives/510#respond Sun, 05 Sep 2021 07:53:04 +0000 https://iambjp.in/?p=510 ಬೆಂಗಳೂರು : ಸಂತುಷ್ಟ ರೈತನಿಂದ ಸಮೃದ್ಧ ಭಾರತ ಸಾಧ್ಯವಾಗಿದ್ದು,ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜೊತೆ ಕರ್ನಾಟಕ ಸರ್ಕಾರವು ಕಟಿಬದ್ಧವಾಗಿ ದುಡಿಯುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

“ವಿದ್ಯಾನಿಧಿ” ರೈತಮಕ್ಕಳಿಗೆ ಶಿಷ್ಯವೇತನ ಯೋಜನೆ ಲೋಕಾರ್ಪಣೆ ಕಾರ್ಯಕ್ರಮವನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೃಷಿ ನಾಶವಾದರೆ ದೇಶಕ್ಕೆ ದುರ್ಭಿಕ್ಷೆ ಬರುವ ಪರಿಸ್ಥಿತಿ ಎದುರಾಗಲಿದೆ ಎಂದು ಹಿಂದೆಯೇ ಹೇಳಲಾಗಿದೆ. ನಾನು ಮತ್ತು ನಮ್ಮ ಮುಖ್ಯಮಂತ್ರಿಗಳಿಬ್ಬರು ಸರ್ವಜ್ಞನ ನಾಡಿನಿಂದ ಬಂದವರು. ಕೃಷಿ ಮತ್ತು ಕೃಷಿಕ ಅತ್ಯಂತ ಪ್ರಾಮಾಣಿಕವಾಗಿ ಭೂಮಿ ಮಳೆಯನ್ನು ನಂಬಿ ಬದುಕುವಂತಹದ್ದು. ಬೆಳೆಹಾನಿ, ಬರ, ಪ್ರವಾಹ ಇದೆಲ್ಲದರ ಸಂಘರ್ಷದ ನಡುವೆ ರೈತ ಬದುಕಬೇಕಾಗುವಂತಹ ಸ್ಥಿತಿ ತಪ್ಪಿಸಲು ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಮೊದಲ ದಿನವೇ “ವಿದ್ಯಾನಿಧಿ” ರೈತ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಯೋಜನೆ ಘೋಷಿಸಿದರು.

ಕೋವಿಡ್ ಲಾಕ್ಡೌನ್ ನಡುವೆಯೂ ಆಹಾರ ಉತ್ಪಾದನೆ ಹೆಚ್ಚಿದ್ದು ಇದರಲ್ಲಿ ಸುಮಾರು ಶೇ.10ರಷ್ಟು ಪಾಲು ದೇಶದ ಆಹಾರ ಉತ್ಪಾದನೆಯಲ್ಲಿ ಕರ್ನಾಟಕದ್ದು ಇದೆ. ಪ್ರತಿಯೊಂದು ರೈತ ಸಂಪರ್ಕ ಕೇಂದ್ರದಲ್ಲಿ 2 ಲಕ್ಷ ವಿದ್ಯಾರ್ಥಿಗಳು ಈ ವಿದ್ಯಾನಿಧಿ ಲೋಕಾರ್ಪಣೆ ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ. ಕೇಂದ್ರದ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರ ನೇತೃತ್ವದಲ್ಲಿ ಈ ವಿದ್ಯಾನಿಧಿ ಲೋಕಾರ್ಪಣೆಯಾಗುತ್ತಿದೆ. ಕಳೆದ ವರ್ಷ 60 ಕೃಷಿ ಸಂಜೀವಿನಿ ವಾಹನಗಳನ್ನು ರೈತರ ಹೊಲಕ್ಕೆ ಲ್ಯಾಂಡ್ ಟೂ ಲ್ಯಾಬ್ ವಾಹನಗಳನ್ನು ಲೋಕಾರ್ಪಣೆ ಮಾಡಲಾಗಿದೆ. ರೈತನ ಹೊಲಕ್ಕೆ ನೇರವಾಗಿ ತೆರಳಿ ಪರಿಹಾರ ನೀಡುವ ಯಶಸ್ಸು ಕರ್ನಾಟಕ ಸರ್ಕಾರದ್ದಿದೆ. ರೈತ ಸೇವಾ ಸಂಸ್ಥೆಯಿಂದ ಎಲ್ಲಾ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿ ಸಂಜೀವಿನಿ ವಾಹನ ನೀಡಲು ಸರ್ಕಾರ ಅವಕಾಶ ನೀಡಬೇಕೆಂದು ಸಿಎಂ ಬಳಿ ಮನವಿ ಮಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಸ್ವಾಭಿಮಾನಿ ರೈತ ಎನ್ನುವ ಗುರುತಿನ ಚೀಟಿ ಸುಮಾರು 1.5 ಲಕ್ಷ ರೈತರಿಗೆ ಈಗಾಗಲೇ ವಿತರಿಸಲಾಗಿದೆ. ರಾಜ್ಯದ ಎಲ್ಲಾ ರೈತರಿಗೂ ಈ ಗುರುತಿನ ಚೀಟಿ ನೀಡಲು ಸಿಎಂ ಮುಂದಾಗಬೇಕೆಂದು ಬಿ.ಸಿ.ಪಾಟೀಲ್ ಮನವಿ ಮಾಡಿದರು. ಕೃಷಿ ಯಂತ್ರೋಪಕರಣಗಳಿಗೆ ರಿಯಾಯಿತಿ ನೀಡಲಾಗುತ್ತಿದೆ. ವಿದೇಶಗಳಿಂದ ಎಣ್ಣೆಯನ್ನು ಆಮದು ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿ ಎಣ್ಣೆಕಾಳು ಬೆಳೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಕೋಲಾರ ರೈತರ ಮಾದರಿಯಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ಅಳವಡಿಸಿ ರೈತ ಲಾಭದಾಯಕನಾಗಲು ರೈತರೊಂದಿಗೊಂದು ದಿನ ಕಾರ್ಯಕ್ರಮ ಹಮ್ಮಿಕೊಂಡು ಈಗಾಗಲೇ 8 ಜಿಲ್ಲೆಗಳಲ್ಲಿ ರೈತರೊಂದಿಗೊಂದು ದಿನ ಕಾರ್ಯಕ್ರಮ‌ ಮಾಡಲಾಗಿದೆ.

18-20 ಲಕ್ಷ ರೈತ ವಿದ್ಯಾರ್ಥಿಗಳು ಈ ವಿದ್ಯಾನಿಧಿ ಯೋಜನೆಯ ಫಲ ಪಡೆಯುತ್ತಿದ್ದಾರೆ. ಕಳೆದ ಬಾರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹೆಚ್ಚಿಗೆ ಆಧಾರ್ ಕಾರ್ಡ್ ಅಳವಡಿಸಿದ ದೇಶದ ಮೊದಲ ಕೀರ್ತಿಗೆ ಕರ್ನಾಟಕ ಕೇಂದ್ರದಿಂದ ಪ್ರಶಸ್ತಿಗೆ ಪಡೆದಿದೆ. ರೈತರೇ ತಮ್ಮ ಬೆಳೆಗೆ ತಾವೇ ಸಮೀಕ್ಷೆ ನಡೆಸಿ ಸರ್ಟಿಫಿಕೇಟ್ ನೀಡುವಂತಹ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಮಾಡಲಾಗುತ್ತಿದ್ದು, ಎಲ್ಲಾ ಇಲಾಖೆಗಳು ಇದಕ್ಕೆ ಕೈಜೋಡಿಸಿವೆ. ಕೇಂದ್ರ ಸರ್ಕಾರ ಕರ್ನಾಟಕವನ್ನು “ಅಗ್ರಿ ಟ್ರೆಂಡ್ ಸೆಟ್ಟರ್ “ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಕಾರ್ಯಕ್ರಮವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದು, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮಾರ್,‌ ಶೋಭಾ ಕರಂದ್ಲಾಜೆ, ತೋಟಗಾರಿಕಾ ಸಚಿವ ಮುನಿರತ್ನ, ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಸೇರಿದಂತೆ‌ ಮತ್ತಿತರರು ಉಪಸ್ಥಿತರಿದ್ದರು.

]]>
https://iambjp.in/archives/510/feed 0
ಕರ್ನಾಟಕ ರಾಜ್ಯದ ಯಶಸ್ವಿ ಕೃಷಿ ಸಚಿವರೆಂದರೆ ಅದು ಬಿ. ಸಿ. ಪಾಟೀಲ್ : ಕೇಂದ್ರ ಸಚಿವ ತೋಮರ್ https://iambjp.in/archives/504 https://iambjp.in/archives/504#respond Sun, 05 Sep 2021 07:44:46 +0000 https://iambjp.in/?p=504 ಕರ್ನಾಟಕ ರಾಜ್ಯದ ಯಶಸ್ವಿ ಕೃಷಿ ಸಚಿವರೆಂದರೆ ಅದು ಬಿ. ಸಿ. ಪಾಟೀಲ್ ಎಂದು ಕೇಂದ್ರ ಕೃಷಿ ಕಲ್ಯಾಣ ಸಚಿವರಾದ ನರೇಂದ್ರ ಸಿಂಗ್ ತೋಮರ್ ಶ್ಲಾಘಿಸಿದ್ದಾರೆ.

ಇಂದು ಕರ್ನಾಟಕ ರಾಜ್ಯಕ್ಕೆ ಮಹತ್ವಪೂರ್ಣ ಹಾಗೂ ಸಂತಸ‌ ದಿನ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಲೆಲ್ಲಾ ಅಭಿವೃದ್ಧಿ ಹಾಗೂ ರೈತರ ಪ್ರಗತಿಗೆ ದುಡಿದಿದೆ. ಈಗ ಬಸವರಾಜ ಬೊಮ್ಮಾಯಿ ಸಹ ಮುಖ್ಯಮಂತ್ರಿಯಾಗಿ ರೈತ ಮಕ್ಕಳ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಿದ್ದಾರೆ .ರೈತ ಮಕ್ಕಳಿಗಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಉನ್ನತಶಿಕ್ಷಣಕ್ಕೆ ಇಂತಹ ಯೋಜನೆ ರೂಪಿಸಿರುವುದು ಶ್ಲಾಘನೀಯ. ಇದಕ್ಕಾಗಿ ನಾನು ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ರೈತ ಎಷ್ಟೇ ತೊಂದರೆಯಲ್ಲಿದ್ದರೂ ತನ್ನ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಉನ್ನತ ಹುದ್ದೆಗೇರಬೇಕೆಂಬ ಕನಸು ಇದ್ದೇ ಇರುತ್ತದೆ. ಇಂತಹ ಕನಸನ್ನು ಬೊಮ್ಮಾಯಿ ಈಡೇರಿಸುತ್ತಿದ್ದಾರೆ ಎಂದರು.

ಕೃಷಿ ದೇಶದ ಅತ್ಯಗತ್ಯವಾಗಿದೆ. ರೈತ ಸಾಕಷ್ಟು ಪರಿಶ್ರಮದ ನಡುವೆ ದೇಶದ ಜನರ ಹೊಟ್ಟೆತುಂಬಿಸುತ್ತಿದ್ದಾರೆ. ಹಸಿದವರ ಹೊಟ್ಟೆ ತುಂಬಿಸುವ ರೈತ ಹಣಕ್ಕಾಗಿ ಭೂಮಿಯನ್ನು ಮಾರದಿರಲು ಕೃಷಿಕ ಕೃಷಿಕನಾಗಿ ಲಾಭದಾಯಕವಾಗಲು ಕೃಷಿ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಕರ್ನಾಟಕ ಇಡೀ ದೇಶದ ಕೃಷಿ ಪ್ರಗತಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೃಷಿ ಸಂಜೀವಿನಿ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಸೇರಿದಂತೆ ಅನೇಕ ಪ್ರಗತಿಪರ ಯೋಜನೆಗಳು ದೇಶದಲ್ಲಿ ಕರ್ನಾಟಕದ ಹೆಸರನ್ನು ಮತ್ತೆ ಬೆಳಗಿಸಿದೆ. ಕರ್ನಾಟಕದ ಕೃಷಿ ಮಾದರಿಯನ್ನು ಪ್ರಗತಿಯನ್ನು ಇತರೆ ರಾಜ್ಯಗಳು ಸಹ ಅಳವಡಿಸಬೇಕೆಂದು ತೋಮರ್ ಕರೆ ನೀಡಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಜೈಜವಾನ್ ಜೈಕಿಸಾನ್ ಎಂದರು. ಇದರ ಜೊತೆಗೆ ವಾಜಪೇಯಿಯವರು ಜೈವಿಜ್ಞಾನ್ ಎಂದರು. ಈಗ ಪ್ರಧಾನಿ ಮೋದಿಯವರು ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆಲ್ಲ ಸೇರಿ‌ 2023 ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದ್ದು ಇದನ್ನು‌ ನಾವು ಮುಟ್ಟುತ್ತೇವೆಂಬ ವಿಶ್ವಾಸವಿರುವುದಾಗಿ ತೋಮರ್‌ ಅವರು ಸ್ಪಷ್ಟಪಡಿಸಿದರು.

]]>
https://iambjp.in/archives/504/feed 0
ಈ ಬಾರಿಯ ಮೊಬೈಲ್ ಆ‍್ಯಪ್ ಬೆಳೆ ಸಮೀಕ್ಷೆ ಯಶಸ್ಸಿಗೂ ಎಲ್ಲರೂ ಕೈಜೋಡಿಸಿ :‌ ಸಚಿವ ಬಿ. ಸಿ. ಪಾಟೀಲ್ https://iambjp.in/archives/456 https://iambjp.in/archives/456#respond Tue, 31 Aug 2021 07:21:55 +0000 https://iambjp.in/?p=456 ಬೆಂಗಳೂರು, ಆ.31 : ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷದಿಂದ ಕೈಗೊಂಡಿರುವ ಮೊಬೈಲ್ ಆ‍್ಯಪ್ ಬೆಳೆ ಸಮೀಕ್ಷೆ ದೇಶದ್ಯಾಂತ ಗಮನ ಸೆಳೆದಿದ್ದು, ಕೇಂದ್ರದಿಂದ ಮೆಚ್ಚುಗೆಗೆ ಪಾತ್ರವಾಗಿರುವ ಈ ಮೊಬೈಲ್ ಬೆಳೆ ಸಮೀಕ್ಷೆ ಈ ಬಾರಿಯೂ ಕೂಡ ಯಶಸ್ವಿಯಾಗಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.

ವಿಕಾಸಸೌಧದ ಕಚೇರಿಯಲ್ಲಿ ಕೃಷಿ ಇಲಾಖಾಧಿಕಾರಿಗಳೊಂದಿಗೆ 2021-22 ನೇ ಸಾಲಿನ ಮೊಬೈಲ್ ಆ‍್ಯಪ್ ಬೆಳೆ ಸಮೀಕ್ಷೆ ಪ್ರಗತಿ ಕುರಿತು ಬಿ.ಸಿ.ಪಾಟೀಲ್ ಸಭೆ ನಡೆಸಿದರು.

ಕಳೆದ ವರ್ಷ ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಕ್ಷಿಪ್ರ ಗತಿಯಲ್ಲಿ ಇತರೆ ಇಲಾಖೆಗಳ ಸಹಯೋಗದಲ್ಲಿ ಕೈಗೊಂಡು ಯಶಸ್ವಿಯೂ ಆಗಿದೆ. ಇತರೆ ರಾಜ್ಯಗಳಿಗೆ ಕರ್ನಾಟಕ ಕೃಷಿ ಇಲಾಖೆಯ ಈ ಸಾಧನೆ ಮಾದರಿಯೂ ಆಗಿದೆ. ಕೇಂದ್ರದಿಂದ ಅಗ್ರಿ ಟ್ರೆಂಡ್ ಸೆಟ್ಟರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಸಾಧನೆ ಇನ್ನು ಮುಂದೆಯೂ ಆಗಬೇಕು. ರೈತ ತಾನೇ ತನ್ನ ಬೆಳೆಗೆ ಪ್ರಮಾಣ ಪತ್ರ ನೀಡುವಂತಹ ಜಮೀನಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಹನೆಂದು ಹೇಳಿಕೊಳ್ಳುವಂತಹ ಮೊಬೈಲ್ ಬೆಳೆ ಸಮೀಕ್ಷೆ ನಿರಂತರ ನಡೆಯಬೇಕು. ಕಳೆದ ಬಾರಿಯಂತೆ ಎಲ್ಲಾ ಕೃಷಿ ಅಧಿಕಾರಿಗಳು ಈ ಪ್ರಕ್ರಿಯೆ ಯಶಸ್ಸಿಗೆ ಮತ್ತೆ ಚುರುಕಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

2021-22ನೇ ಸಾಲಿನಲ್ಲಿ ಪೂರ್ವ ಮುಂಗಾರಿನಲ್ಲಿ 2.94 ಲಕ್ಷ ತಾಕುಗಳನ್ನು ರೈತರೇ ಸ್ವತಃ ರೈತರ ಆ‍್ಯಪ್ ನಲ್ಲಿ ಹಾಗೂ 44.77 ಲಕ್ಷ ತಾಕುಗಳನ್ನು ಖಾಸಗಿ ನಿವಾಸಿಗಳ ಆ‍್ಯಪ್ ನಲ್ಲಿ ಬೆಳೆ ಮಾಹಿತಿಯನ್ನು ದಾಖಲು ಮಾಡಲಾಗಿರುತ್ತದೆ.2021-22ನೇ ಸಾಲಿನಲ್ಲಿ ಮುಂಗಾರಿನಲ್ಲಿ 6.18 ಲಕ್ಷ ತಾಕುಗಳನ್ನು ರೈತರೇ ಸ್ವತಃ ರೈತರ ಆ‍್ಯಪ್ ನಲ್ಲಿ ಹಾಗೂ 0.66 ಲಕ್ಷ ತಾಕುಗಳನ್ನು ಖಾಸಗಿ ನಿವಾಸಿಗಳ ಆ‍್ಯಪ್ ನಲ್ಲಿ ಆ.30 ರವರೆಗೆ ಅಪ್ಲೋಡ್ ಮಾಡಲಾಗಿದ್ದು ಬೆಳೆ ಸಮೀಕ್ಷೆಯು ಪ್ರಗತಿಯಲ್ಲಿದೆ.

ಅಂದ್ಹಾಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮುಂಗಾರು ಹಂಗಾಮಿನಲ್ಲಿ ಸುಮಾರು 2.09 ಕೋಟಿ ತಾಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಿದ್ದು, ರೈತರಿಂದಲೇ ಅವರ ಜಮೀನಿನ ಬೆಳೆ ಮಾಹಿತಿಯನ್ನು ಆ‍್ಯಪ್ ಮೂಲಕ ಅಪ್ಲೋಡ್ ಮಾಡಿಸುವ ಉದ್ದೇಶವನ್ನು ಹೊಂದಿದ್ದು, ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ರೈತರೇ ಸ್ವತಃ ಬೆಳೆ ಸಮೀಕ್ಷೆ ಮಾಹಿತಿಯನ್ನು ದಾಖಲಿಸಬೇಕೆಂದು ಕೃಷಿ ಸಚಿವರು ಈ ಮೂಲಕ ಮತ್ತೆ ರೈತರಲ್ಲಿ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಕೃಷಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ, ಆಯುಕ್ತ ಬ್ರಿಜೆಶ್ ಕುಮಾರ್ ದೀಕ್ಷಿತ್, ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.

]]>
https://iambjp.in/archives/456/feed 0
ಕರ್ನಾಟಕ ರಾಜ್ಯದ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸಚಿವರಿಗೆ‌ ಬಿ. ಸಿ. ಪಾಟೀಲ್ ಮನವಿ https://iambjp.in/archives/153 https://iambjp.in/archives/153#respond Tue, 10 Aug 2021 11:18:18 +0000 https://iambjp.in/?p=153 ನವದೆಹಲಿ/ಬೆಂಗಳೂರು : ಕೃಷಿ ಸಚಿವರಾದ ಬಿ.ಸಿ.ಪಾಟೀಲರು ನವದೆಹಲಿಯಲ್ಲಿ ಮಂಗಳವಾರ ಕೇಂದ್ರದ ರಾಜ್ಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಕೇಂದ್ರದ ರಾಜ್ಯ ರಾಸಾಯನಿಕ ಸಚಿವ ಭಗವಂತ್ ಖೂಬಾ ಅವರನ್ನು ಭೇಟಿ ಮಾಡಿ, ಶುಭಕೋರಿ ರಾಜ್ಯದ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಭೇಟಿ ವೇಳೆ ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ, ಖಾರಿಫ್‌ನಲ್ಲಿ ನಿರೀಕ್ಷೆ ಮೀರಿ ಸುಮಾರು 77 ಲಕ್ಷ ಹೆಕ್ಟೇರ್ ದಾಖಲೆಯ ಪ್ರಮಾಣದಷ್ಟು ಬಿತ್ತನೆ ಆಗಿತ್ತು. ಈ ಬಾರಿಯೂ ಕೂಡ ಬೇಗನೇ ಬಿತ್ತನೆಯಾಗಿದ್ದು,ಕೃಷಿ ಚಟುವಟಿಕೆ ಚುರುಕುಪಡೆದಿದೆ. ಆದ್ದರಿಂದ ಫಸಲು ಬರಲು ಯಾವುದೇ ರೀತಿಯ ಕೊರತೆಯಾಗದಂತೆ ಯೂರಿಯಾ ಸೇರಿದಂತೆ ಇತರೆ ರಸಗೊಬ್ಬರಗಳನ್ನು ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ಮೇರೆಗೆ ಪೂರೈಸುವಂತೆ ಕೇಂದ್ರ ರಾಸಾಯನಿಕ ಸಚಿವರಿಗೆ ಮನವಿ ಮಾಡಿದರು.

ಪ್ರಸಕ್ತ ವರ್ಷದಲ್ಲಿ, ಬಿತ್ತನೆಯ ಪ್ರದೇಶದಲ್ಲಿ ದಾಖಲೆಯ ಹೆಚ್ಚಳ ಮತ್ತು ಸಾಮಾನ್ಯ ಮಳೆಗಿಂತ ಅಧಿಕ ಮಳೆಯಿಂದಾಗಿ, ರಾಜ್ಯಗಳ ಯೂರಿಯಾದ ಅವಶ್ಯಕತೆಯೂ ಅನುಗುಣವಾಗಿ ಹೆಚ್ಚಾಗಿದೆ. ರಾಜ್ಯದಲ್ಲಿ ಸದ್ಯ 0.32 ಲಕ್ಷ ಟನ್ ಯೂರಿಯ ಬಫರ್ ಸ್ಟಾಕ್ ಇದೆ. ಈ ವರ್ಷದಲ್ಲಿ 07 ನೇ ಆಗಸ್ಟ್, 2021 ರವರೆಗೆ ಯೂರಿಯಾ ಪೂರೈಕೆಯು 6.18 ಲಕ್ಷ ಮೆಟ್ರಿಕ್ ಟನ್ ಆಗಿದೆ. ಈ ಬಾರಿಯೂ ಸಹ ಯಾವುದೇ ರೀತಿಯ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಅಲ್ಲದೇ ಕರ್ನಾಟಕ ರಾಜ್ಯದಲ್ಲಿ ಎಣ್ಣೆಕಾಳು ಬೆಳೆಗಳಿಗೆ ಉತ್ತೇಜನ ಮಾಡಲು ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಬೇಕು.ಹಾಗೂ ಕೃಷಿ ಉತ್ಪನ್ನಗಳ ಹೆಚ್ಚಳಕ್ಕೆ ಹೆಚ್ಚು ಉತ್ತೇಜನ ನೀಡಬೇಕೆಂದು ಕೇಂದ್ರದ ಉಭಯ ಸಚಿವರಲ್ಲಿ ಬಿ.ಸಿ.ಪಾಟೀಲರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜಕುಮಾರ ಕತ್ರಿ, ಅಪರ ಕೃಷಿ ನಿರ್ದೇಶಕರು (ಸಾವಯವ ಕೃಷಿ)ವೆಂಟಕರಮಣರೆಡ್ಡಿ ಜೊತೆಗಿದ್ದರು.

]]>
https://iambjp.in/archives/153/feed 0