og
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121wp-post-author
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121ತಮ್ಮ ಫೇಸ್ ಬುಕ್ ಖಾತೆಯಲ್ಲಿ “ಈ ಆರ್ಥಿಕ ವರ್ಷದಿಂದ ಹಿಂದುಗಳು ಕಟ್ಟಿರುವ ತೆರಿಗೆ ಹಣ ಹಿಂದುಗಳ ಅಭಿವೃದ್ಧಿಗೆ ಮಾತ್ರ ಉಪಯೋಗ ಆಗಬೇಕು. ಹಿಂದುಗಳು ಕಟ್ಟಿದ ತೆರಿಗೆ ಹಣ ಬೇರೆ ಧರ್ಮದ ಜನರಿಗೆ ಸೇರುವುದು ಹಿಂದುಗಳಿಗೆ ಆಗುವ ಅನ್ಯಾಯ” ಎಂಬುದಾಗಿ ಬರೆದುಕೊಂಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ದಕ್ಷಿಣ ಭಾರತ ಉತ್ತರ ಭಾರತ ಎಂದು ಜನರ ತೆರಿಗೆಯ ದುಡ್ಡನ್ನು ವಿಭಜನೆ ಮಾಡುತ್ತಿದ್ದು ಇದಕ್ಕೆ ದೇಶದೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ನಡೆಯು, ಹಲವಾರು ಕಂದಕಗಳನ್ನು ಸೃಷ್ಟಿ ಮಾಡಿದೆ. ಹಿಂದೂಗಳ ಹಣವನ್ನು ಹಿಂದುಗಳಿಗೆ ಉಪಯೋಗಿಸಿ ಎಂದು ಪ್ರತಿಪಾದಿಸುವ ಮೂಲಕ ಶಾಸಕ ಹರೀಶ್ ಪೂಂಜಾ ಅವರು ಕಾಂಗ್ರೆಸ್ ಸರ್ಕಾರದ ನಡೆಗೆ ಸಡ್ಡು ಹೊಡೆದಿದ್ದಾರೆ.
]]>ಇದಕ್ಕೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸಿದ್ದರಾಮಯ್ಯ ಹೇಳಿಕೆ ಮತ್ತು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಗವತ್ ಅವರ ಹೇಳಿಕೆಯ ಸ್ಕ್ರೀನ್‌ಶಾಟ್ ಹಾಕಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಿದ್ದರಾಮಯ್ಯಗೆ ಕೌಂಟರ್ ನೀಡಿದ್ದಾರೆ.
Agenda Vs Fact pic.twitter.com/fAZOujR7oG
— Gurme Suresh Shetty (Modi Ka Parivar) (@GurmeSuresh) January 29, 2024
ಆರ್‌ಎಸ್‌ಎಸ್ ಮೀಸಲಾತಿ ವಿರೋಧಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಯಾಗಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಗವತ್ ಅವರ “ಸಮಾಜದಲ್ಲಿ ತಾರತಮ್ಯ ಇರುವವರೆಗೆ ಮೀಸಲಾತಿ ಮುಂದುವರೆಯಲಿ” ಎಂಬ ಹೇಳಿಕೆಯ ವರದಿಯನ್ನು ಹಾಕಿ ಕುಟುಕಿದ್ದಾರೆ.
ಮೀಸಲಾತಿ ವಿಚಾರವಾಗಿ ಮೋಹನ್ ಭಾಗವತ್ ಅವರು “ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮದೇ ಸಹಜೀವಿಗಳನ್ನ ಹಿಂದೆ ಇರಿಸಿದ್ದೇವೆ. ನಾವು ಅವರ ಬಗ್ಗೆ ಕಾಳಜಿಯನ್ನೇ ವಹಿಸುತ್ತಿಲ್ಲ. 2000 ವರ್ಷಗಳ ವರೆಗೆ ಈ ಪ್ರಕ್ರಿಯೆ ಹೀಗೆ ಮುಂದುವರಿದಿದೆ. ಹಾಗಾಗಿ ಸಮಾಜದಲ್ಲಿ ಅಸಮಾನತೆಯನ್ನು ತೊಲಗಿಸುವವರೆಗೆ, ಅಸಮಾನತೆಗೆ ಒಳಗಾದವರ ಪುನಶ್ಚೇತನಕ್ಕಾಗಿ ವಿಶೇಷ ಪರಿಹಾರ ನೀಡಬೇಕು. ಅವುಗಳಲ್ಲಿ ಮೀಸಲಾತಿ ಕೂಡ ಒಂದು. ಆದ್ದರಿಂದ ಸಮಾಜದಲ್ಲಿ ತಾರತಮ್ಯ ಇರುವವರೆಗೆ ಮೀಸಲಾತಿ ಅನ್ನೋದು ಮುಂದುವರಿಯಬೇಕು” ಎಂದು ಈ ಹಿಂದೆ ಒತ್ತಾಯಿಸಿದ್ದರು.
]]>ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೊನ್ನೆ ತಾನೇ ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ ಮಾಡಿದ್ದೀರಿ. ಶೋಷಿತರ ಎಲ್ಲ ಮತ ಪಡೆದ ನೀವು ಅವರಿಗೆ ಏನು ಕೊಟ್ಟಿದ್ದೀರಿ ಎಂದು ಕೇಳಿದರು. ನಿಮ್ಮ ಈ ಸಮಾವೇಶ ಕೇವಲ ‘ಚಿಕನ್ ಬಿರಿಯಾನಿಗೆ’ ಸೀಮಿತವಾಗಲಿಲ್ಲವೇ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಹಿಂದವನ್ನು ಕೈಬಿಟ್ಟು ಅಲ್ಪಸಂಖ್ಯಾತರನ್ನು ಮಾತ್ರ (ಅ) ಅಪ್ಪಿಕೊಂಡಿದ್ದಿರಿ ಎಂದು ಟೀಕಿಸಿದರು.
ಅಂಬೇಡ್ಕರ್ ನಿಗಮ, ಬಂಜಾರ ನಿಗಮ, ಆದಿಜಾಂಬವ ನಿಗಮ, ಅಂಬಿಗರ ಚೌಡಯ್ಯ ನಿಗಮ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಇತ್ಯಾದಿ ಹಿಂದುಳಿದ ವರ್ಗಗಳಿಗೆ ಎಸ್.ಸಿ., ಎಸ್.ಟಿ. ನಿಗಮಗಳಿಗೆ ಯಾವುದೇ ಹಣಕಾಸಿನ ಅನುದಾನ ನೀಡದಿರುವುದು ಸರಿಯೇ? ಎಂದರು. ಅವುಗಳಿಗೆ ಕೊಡುವ ಎಲ್ಲ ಹಣಕಾಸು ಅನುದಾನ ರದ್ದು ಮಾಡಿದ್ದಾರೆ ಎಂದು ವಿವರಿಸಿದರು.
ಬಿಜೆಪಿಯವರು ಮಾತ್ರ ಹಿಂದುಗಳೇ? ನಾವು ಹಿಂದುಗಳಲ್ಲವೇ ಎಂದು ಮಾನ್ಯ ಸಿದ್ದರಾಮಯ್ಯ ಮತ್ತು ಮಾನ್ಯ ಡಿ.ಕೆ.ಶಿವಕುಮಾರ್ ಅವರು ಕೇಳುತ್ತಿದ್ದಾರೆ. ನೀವೂ ಹಿಂದುಗಳಾಗಿದ್ದರೆ ಕೆರೆಗೋಡಿನಲ್ಲಿ ಹಾಕಿದ ಭಗವಾಧ್ವಜ, ಕೇಸರಿ ಧ್ವಜವನ್ನು ಇಳಿಸಿದಿರಿ? ಎಸ್‍ಸಿ ಎಸ್‍ಟಿ ಅಭಿವೃದ್ಧಿಗೆ ನೀಡಿದ ಹಣ, ಆದಿಜಾಂಬವ ಅಭಿವೃದ್ಧಿ ನಿಗಮ, ಬಂಜಾರ ಅಭಿವೃದ್ಧಿ ನಿಗಮಕ್ಕೆ ನೀಡಿದ ಅನುದಾನವನ್ನು ಸಂಪೂರ್ಣವಾಗಿ ಯಾಕೆ ನಿಲ್ಲಿಸಿದಿರಿ ಎಂದೂ ಅವರು ಪ್ರಶ್ನೆ ಮಾಡಿದರು.
ಇದು ಮುಲ್ಲಾ ಮೌಲ್ವಿ ಸರಕಾರ..
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಘೋಷಿಸಿ 1 ಸಾವಿರ ಕೋಟಿಯ ಕಾರ್ಯಾದೇಶ ಮಾಡಿಸಿದ್ದಾರೆ. ಹಿಂದುಗಳಿಗೇನು ಕೊಟ್ಟಿರಿ? ತೆಂಗಿನಕಾಯಿ ಚಿಪ್ಪು ಕೊಟ್ಟಿರಿ. ಇದ್ಯಾವ ನ್ಯಾಯ ಸಿದ್ದರಾಮಯ್ಯನವರೇ ಎಂದು ಆಕ್ಷೇಪಿಸಿದರು. ಇದು ಸಿದ್ದರಾಮಯ್ಯರ ಸರಕಾರ ಅಲ್ಲ. ಮುಲ್ಲಾ ಮೌಲ್ವಿಗಳ ಸರಕಾರ ಎಂದು ಎನ್.ರವಿಕುಮಾರ್ ಅವರು ಆರೋಪಿಸಿದರು.
ಬಿಜೆಪಿ ಸರ್ಕಾರವಿದ್ದಾಗ ಮತಾಂತರ ಮತ್ತು ಗೋಹತ್ಯೆ ನಿಷೇಧ ಕಾನೂನುಗಳನ್ನು ಜಾರಿಗೊಳಿಸಲಾಗಿತ್ತು, ಆದರೆ ಈಗ ನಿರಂತರ ಗೋಹತ್ಯೆ ಮತ್ತು ರಾಜಾರೋಷವಾಗಿ ಮತಾಂತರಕ್ಕೆ ಅನುಮತಿ ನೀಡಿರುವುದು ಸರಿಯೇ? ನಿಮ್ಮದು ಹಿಂದೂಗಳ ಸರಕಾರವೇ ಎಂದು ಪ್ರಶ್ನಿಸಿದರು.
ಶಿವನ ದೇವಸ್ಥಾನ, ಕಾಳಮ್ಮನ ದೇವಸ್ಥಾನ, ಬಸವಣ್ಣನ ದೇವಸ್ಥಾನ ಸೇರಿ ರಾಜ್ಯದ ಸಾವಿರಾರು, ಲಕ್ಷಾಂತರ ದೇವಾಲಯಗಳ ಹಣ ಸರ್ಕಾರಕ್ಕೆ ಬೇಕು. ಆದರೆ, ಹಿಂದೂಗಳ ಆರಾಧ್ಯ ದೈವ ಹನುಮ ಧ್ವಜ ಹಾರಿಸುವುದು ಏಕೆ ಬೇಡ? ಇದು ಯಾವ ಸೆಕ್ಯುಲರಿಸಂ? ಎಂದು ಸಿದ್ದರಾಮಯ್ಯರಿಗೆ ಪ್ರಶ್ನೆ ಹಾಕಿದರು.
ಸಮಾಜ ಮುಂದೆ ಬರಲು ಎಸ್.ಸಿ., ಎಸ್.ಟಿ. ಗಳಿಗೆ, ಒಬಿಸಿಗಳಿಗೆ ಆದ್ಯತೆ ಕೊಡಲಾಗುತ್ತದೆ. ಎಸ್.ಸಿ., ಎಸ್.ಟಿ. ವರ್ಗಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣದಲ್ಲಿ 11,114 ಕೋಟಿ ಹಣವನ್ನು ನಿಮ್ಮ ಗ್ಯಾರಂಟಿಗಳಿಗೆ ಬಳಸಿದ್ದೇಕೆ? ಯಾಕೆಂದರೆ ನಿಮ್ಮದು ಮುಲ್ಲಾ ಮೌಲ್ವಿ ಸರಕಾರ ಅಲ್ಲವೇ ಎಂದು ಕೇಳಿದರು.
ಚುನಾವಣೆ ಹತ್ತಿರ ಬಂತೆಂದರೆ ನೀವು ಶೋಷಿತರ ಸಮಾವೇಶ, ಹಿಂದುಳಿದವರ ಸಮಾವೇಶ, ಅಲ್ಪಸಂಖ್ಯಾತರ ಸಮಾವೇಶ ಮಾಡುತ್ತೀರಿ. ಯಾಕೆ ಸಿದ್ದರಾಮಯ್ಯನವರೇ ಈಗ ಅಹಿಂದ ಕೈಬಿಟ್ಟಿದ್ದೀರಿ ಎಂದು ಪ್ರಶ್ನೆ ಕೇಳಿದರು. ಹಿಂದುಳಿದವರಿಗೆ ನೀವು ತೆಂಗಿನಕಾಯಿ ಚಿಪ್ಪು ಕೊಟ್ಟಿರಲ್ಲವೇ? ಎಂದು ಪ್ರಶ್ನಿಸಿದರು.
ಕೆರೆಗೋಡಿನಲ್ಲಿ ಹಿಂದೂ ಧ್ವಜವನ್ನು ತಕ್ಷಣ ಕೆಳಗಿಳಿಸುತ್ತೀರಿ. ಸರಕಾರಿ ಕಚೇರಿಗಳ ಮುಂದೆ, ಸರಕಾರಿ ಸಮುದಾಯ ಭವನದಲ್ಲಿ ಕೋಮುದ್ವೇಷ ಬಿತ್ತದಿರಿ ಎನ್ನುವ ನಿಮ್ಮ ಸರಕಾರವು ಕೋಮು ಸಂಘರ್ಷ ಉಂಟು ಮಾಡುವ ಟಿಪ್ಪು ಸುಲ್ತಾನ ಜಯಂತಿಯನ್ನು ವಿಧಾನಸೌಧದಲ್ಲಿ ಮಾಡಬಹುದೇ? ಬ್ಯಾಂಕ್ವೆಟ್ ಹಾಲ್‍ನಲ್ಲಿ ಮಾಡಬಹುದೇ? ಹಾಗಾಗಿ ನಿಮ್ಮ ಸರಕಾರ ಮುಲ್ಲಾ ಮೌಲ್ವಿ ಸರಕಾರ ಎಂದು ಟೀಕಿಸಿದರು.
ಹಿಂದೂಗಳ ಹೋರಾಟವಾದರೆ ಅವರ ಮೇಲೆ ಲಾಠಿಚಾರ್ಜ್ ಮಾಡುತ್ತಾರೆ. ಅವರ ಮೇಲೆ ಕೇಸು ಹಾಕುತ್ತಾರೆ. ಆದರೆ, ಕೆಎಫ್‍ಡಿ, ಪಿಎಫ್‍ಐ ಮೇಲಿನ ಕೇಸ್ ವಾಪಾಸ್ ಪಡೆಯುತ್ತೀರಿ. ಹಾಗಾಗಿ ಮುಲ್ಲಾ ಮೌಲ್ವಿ ಸರಕಾರ ನಿಮ್ಮದಲ್ಲವೇ ಎಂದರು. 1,600 ಜನ ಪುಂಡ ಪೋಕರಿಗಳು, ಉಗ್ರವಾದಿಗಳನ್ನು ಬಿಡುಗಡೆ ಮಾಡಿದ್ದೀರಿ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯನವರು ಕನ್ನಡ ವ್ಯಾಕರಣ ಮಾಸ್ತರ್. ಯಾರಾದರೂ ಏಕವಚನದಲ್ಲಿ ಮಾತನಾಡಿದರೆ ಅವರಿಗೆ ಕೋಪ ಬರುತ್ತದೆ. ಆದರೆ, ಸಿದ್ದರಾಮಯ್ಯನವರು ಯಾರಿಗೆ ಬೇಕಾದರೂ ಏಕವಚನದಲ್ಲಿ ಮಾತನಾಡಬಹುದು. ಮೋದಿಯವರಿಗೆ ಏಕವಚನ, ಯಡಿಯೂರಪ್ಪನವರಿಗೆ ಏಕವಚನದಲ್ಲಿ ಮಾತನಾಡಬಹುದು. ಮಾನ್ಯ ರಾಷ್ಟ್ರಪತಿ, ಒಬ್ಬ ಮಹಿಳೆಗೂ ಏಕವಚನದಲ್ಲಿ ಸಂಬೋಧನೆ ಸರಿಯೇ ಎಂದು ಕೇಳಿದರು. ಇದು ಸಂಸ್ಕಾರ ಇಲ್ಲದ ಸರಕಾರ ಎಂದು ಆರೋಪಿಸಿದರು.
ಏಕವಚನದಲ್ಲಿ ಮಾತನಾಡಿದ್ದೀರಿ ಎಂದು ಅನಂತಕುಮಾರ್ ಹೆಗಡೆಯವರಿಗೆ ನೀವು ಪಾಠ ಮಾಡುತ್ತೀರಿ. ನಿಮಗೆ ಪಾಠ ಮಾಡುವವರು ಯಾರೂ ಇಲ್ಲವೇ? ಮೌಲ್ವಿ ಸರಕಾರದ ಮುಖ್ಯಸ್ಥರಾದ ಸಿದ್ದರಾಮಯ್ಯನವರೇ ನಿಮಗೆ ಈ ಪ್ರಶ್ನೆ ಕೇಳುತ್ತೇನೆ ಎಂದರು.
ರಾಜ್ಯ ಸರಕಾರವು ಈ 12 ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ಅವರು ಆಗ್ರಹಿಸಿದರು. ಇದು ಎಸ್‍ಸಿ, ಎಸ್‍ಟಿಗಳಿಗೆ ನ್ಯಾಯ ಕೊಡತಕ್ಕಂಥ, ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡತಕ್ಕಂಥ ಸರಕಾರ ಅಲ್ಲ. ಇದು ಅಹಿಂದ ಸರಕಾರ ಅಲ್ಲ. ಕರ್ನಾಟಕದ 6.5 ಕೋಟಿ ಜನರ ಸರಕಾರ ಅಲ್ಲ. ಇದು ಮುಲ್ಲಾ ಮೌಲ್ವಿಗಳನ್ನು ಮಾತ್ರ ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಒಂದು ವಿಶಿಷ್ಟವಾದ ಸೆಕ್ಯುಲರಿಸಂ ಬೋಧಿಸುವ ಮುಲ್ಲಾ ಮೌಲ್ವಿಗಳ ಸರಕಾರ ಎಂದು ಪುನರುಚ್ಚರಿಸಿದರು. ಈ ಸರಕಾರದಿಂದ ಕರ್ನಾಟಕಕ್ಕೆ ನ್ಯಾಯ ಸಿಗಲು ಸಾಧ್ಯವಿದೆಯೇ ಎಂದೂ ಕೇಳಿದರು.
]]>ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿದ್ದು ರಾಜ್ಯದ 28 ಕ್ಷೇತ್ರಗಳನ್ನೂ ಬಿಜೆಪಿ ಮೈತ್ರಿ ಗೆದ್ದರೆ ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸುವ ಗ್ಯಾರೆಂಟಿ ನಾವು ಕೊಡುತ್ತೇವೆ. ಕಾಂಗ್ರೆಸ್‌ನ ಐದು ಗ್ಯಾರೆಂಟಿಗೆ ನಮ್ಮದು ಒಂದೇ ಗ್ಯಾರೆಂಟಿ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ವತಿಯಿಂದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ ಸರ್ಕಾರ ಪತನದ ಸುದ್ದಿ ಹೊರಹಾಕಿದ್ದಾರೆ.
ಕಾಂಗ್ರೆಸ್ ನಾಯಕರು ಗ್ಯಾರೆಂಟಿಗಳ ಬಗ್ಗೆ ಹೇಳಿದ್ದೇ ಹೇಳಿದ್ದು, ಚುನಾವಣೆಗೂ ಮುನ್ನ 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಆದರೆ ಈಗ ಕೊಡುತ್ತಿರುವ ಐದು ಕೆಜಿ ಕೂಡ ಮೋದಿ ಸರ್ಕಾರದ್ದು, ಇದು ಜನರಿಗೆ ಮಾಡುತ್ತಿರುವ ಮೋಸ. 200 ಯುನಿಟ್ ಉಚಿತ ವಿದ್ಯುತ್ ಫ್ರೀ ಕೊಡುತ್ತೇವೆ ಹೇಳಿ ಈಗ ಅದಕ್ಕೂ ಕಂಡೀಷನ್ ಹಾಕಿದ್ದಾರೆ, ರಾಜ್ಯದಲ್ಲಿ ಒಬ್ಬರಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡಿರುವ ದಾಖಲೆ ಇದ್ದರೆ ಕೊಡಿ, ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
]]>ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇವರಿಗೆ ಸಂವಿಧಾನ ಕುರಿತ ಪರಿಜ್ಞಾನ ಇಲ್ಲ. ಇವರು ಜನರ ಭಾವನೆ ಅರ್ಥ ಮಾಡಿಕೊಂಡಿಲ್ಲ. ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು. ಕೆರೆಗೋಡಿನಲ್ಲಿ ಕಾನೂನು ಪ್ರಕಾರ ಅನುಮತಿ ಪಡೆದೇ ಧ್ವಜ ಹಾರಿಸಿದ್ದಾರೆ. ಕಾನೂನು ಪ್ರಕಾರ ತಪ್ಪಾಗಿದ್ದರೆ ನೋಟಿಸ್ ಕೊಡಬೇಕಿತ್ತು ತಾನೇ ಎಂದು ಕೇಳಿದರು. ಈಗಲಾದರೂ ಸರಕಾರ ಗ್ರಾಮಸ್ಥರ ಭಾವನೆಗೆ ಗೌರವ ಕೊಡುವ ಕೆಲಸ ಮಾಡಲಿ ಎಂದು ಒತ್ತಾಯವನ್ನು ಮುಂದಿಟ್ಟರು.
ಏಕಾಏಕಿ ಮುಂಜಾನೆ ಹೋಗಿ ಭಗವಾಧ್ವಜ ಇಳಿಸಿದ್ದು ಸರಿಯೇ? ನಿಯಮ ಮೀರಿ ರಾಷ್ಟ್ರಧ್ವಜ ಹಾರಿಸಿದ್ದು ಸರಿಯೇ ಎಂದೂ ಅವರು ಪ್ರಶ್ನಿಸಿದರು. ಸ್ಥಳೀಯರು ಕೆರೆಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನೂ ಯಾಕೆ ಎಫ್‍ಐಆರ್ ಮಾಡಿಲ್ಲ ಎಂದು ಕೇಳಿದರು.
ರಾಷ್ಟ್ರಧ್ವಜವನ್ನು ಪೂರ್ತಿ ಏರಿಸಿಲ್ಲ. ಇದೇನು ಸರಕಾರವೇ? ಯಾವ ರೀತಿ ನಡವಳಿಕೆ ಇದು ಎಂದು ಕೇಳಿದರು. ಬಿಜೆಪಿ- ಜೆಡಿಎಸ್ ನಡುವೆ ವೈಮನಸ್ಸು ಏನಿಲ್ಲ. ಮತ್ತೊಮ್ಮೆ ಮೋದಿ, ಮತ್ತೊಮ್ಮೆ ಬಿಜೆಪಿ ಎಂಬುದೇ ನಮ್ಮಲ್ಲರ ಗುರಿ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಮಾಜಿ ಪ್ರಧಾನಿ ದೇವೇಗೌಡರು ಕೂಡ ಅಭಿಮಾನದಿಂದ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಲಿ ಎನ್ನುತ್ತಿದ್ದಾರೆ ಎಂದು ವಿವರಿಸಿದರು. ಮತ್ತೊಮ್ಮೆ ಬಿಜೆಪಿ, ಮತ್ತೊಮ್ಮೆ ಮೋದಿಜೀ ಬೇಕೆಂದು ಜನರು ಈಗಾಗಲೇ ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದರು.
ಇದೊಂದು ತುಘಲಕ್ ಸರಕಾರ. ಕಾನೂನನ್ನು ಇವರು ಗೌರವಿಸುವುದಿಲ್ಲ ಎಂದು ಟೀಕಿಸಿದರು. ಅದು ಗ್ರಾಮಸ್ಥರೇ ಹಣ ಸೇರಿಸಿ ನಿಲ್ಲಿಸಿದ ಧ್ವಜಸ್ತಂಭ. ಪಂಚಾಯತ್ ಕೂಡ ರಾಷ್ಟ್ರಧ್ವಜ, ನಾಡಧ್ವಜ, ಭಗವಾಧ್ವಜ ಹಾರಿಸಲು ಅನುಮತಿ ಕೊಟ್ಟಿದೆ ಎಂದು ಗಮನ ಸೆಳೆದರು. ಮಾಜಿ ಸಚಿವ ಗೋಪಾಲಯ್ಯ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಅವರು ಇದ್ದರು.
]]>