Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Warning: Cannot modify header information - headers already sent by (output started at /home3/buntss5v/iambjp.in/wp-includes/functions.php:6121) in /home3/buntss5v/iambjp.in/wp-includes/feed-rss2.php on line 8
Dakshina Kannada – I am BJP https://iambjp.in Making Bharat Vishwa Guru Fri, 24 Jan 2025 13:08:19 +0000 en-US hourly 1 https://wordpress.org/?v=6.8.1 https://iambjp.in/wp-content/uploads/2021/08/cropped-Smal-Logo-32x32.png Dakshina Kannada – I am BJP https://iambjp.in 32 32 ಕೊರಗ ಕಾಲನಿ ರಸ್ತೆಯ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ https://iambjp.in/archives/2218 https://iambjp.in/archives/2218#respond Fri, 24 Jan 2025 13:08:19 +0000 https://iambjp.in/?p=2218 ಕೇಂದ್ರ ಸರಕಾರದ ಪಿಎಂ ಜನ್‌ಮನ್ ಯೋಜನೆ ಅಡಿಯಲ್ಲಿ 2.75 ಕೋಟಿ ಅನುದಾನದಲ್ಲಿ ಕಡಬ ತಾಲೂಕಿನ ರಾಮಕುಂಜ, ಪೆರಾಬೆ, ಅಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಕ್ಕಾಲು ಕೊರಗ ಕಾಲನಿ ರಸ್ತೆಯು ಅಭಿವೃದ್ಧಿಗೊಳ್ಳಲಿದ್ದು ಇದರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಿದರು.

ನಂತರ ಮಾತನಾಡಿದ ಸಂಸದರು, ದೀನ್ ದಯಾಳ್ ಉಪಾಧ್ಯಾಯರ ಅಂತ್ಯೋದಯದ ಪರಿಕಲ್ಪನೆಯಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವಂತಹ ದೂರದೃಷ್ಟಿಯ ಯೋಜನೆಯನ್ನು ಜಾರಿಗೆ ತಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಅನಂತ ಧನ್ಯವಾದಗಳು ಎಂದರು.

 

]]>
https://iambjp.in/archives/2218/feed 0
ಕಟೀಲ್‌ಗೆ ಬಿಕ್‌ ಶಾಕ್, ಕ್ಯಾಪ್ಟನ್‌ಗೆ ಟಿಕೆಟ್‌ ಸಿಗತ್ತಾ !? https://iambjp.in/archives/2137 https://iambjp.in/archives/2137#respond Tue, 30 Jan 2024 04:19:59 +0000 https://iambjp.in/?p=2137 ಲೋಕಸಭಾ ಚುನಾವಣೆಯ ರಣರಂಗ ಕಾವೇರುತ್ತಿದೆ. ದೇಶ 2024 ರ ಲೋಕಸಭಾ ಚುನಾವಣೆಗೆ ಸಜ್ಜುಗೊಂಡಿದ್ದು ರಾಜ್ಯದಲ್ಲೂ ಎಲ್ಲಾ ರಾಜಕೀಯ ಪಕ್ಷಗಳ ಪಾಳಯಗಳಲ್ಲಿ ಚುನಾವಣೆಯ ಪೂರ್ವ ಯಾರಿ ನಡೆಯುತ್ತಿದೆ. ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವೂ ಈ ಬಾರಿ ಭಾರೀ ಸದ್ದು ಮಾಡುತ್ತಿದೆ. ಇಲ್ಲಿ ಹಾಲಿ ಸಂಸದರಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಸ್ವಪಕ್ಷದ ಕಾರ್ಯಕರ್ತರೇ ಅಡ್ಡಗಾಲಾಗುತ್ತಿದ್ದಾರೆ. 4ನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಿದ್ಧತೆ ನಡೆಸುತ್ತಿರುವ ಕಟೀಲ್‌ ಅವರಿಗೆ ಈಗ ಬಿಗ್‌ ಶಾಕ್‌ ಎದುರಾಗಿದೆ.

ಕಾರ್ಯಕರ್ತರ ವಿರೋಧ ಎದುರಿಸುತ್ತಿರುವ ಕಟೀಲ್‌ ಅವರ ಬದಲಿಗೆ ಕ್ಯಾ.ಬ್ರಿಜೇಶ್‌ ಚೌಟ ಅವರನ್ನು ಕಣಕ್ಕಿಳಿಸಲು ಬಿಜೆಪಿ ಪಾಳಯದಲ್ಲಿ ಬಿರುಸಿನ ಕಾರ್ಯಚಟುವಟಿಕೆ ಸದ್ದಿಲ್ಲದೆ ನಡೆಯುತ್ತಿದೆ. ಕ್ಯಾಪ್ಟನ್‌ ಅವರ ಹೆಸರಿಗೆ ವಿರೋಧ ಪಡಿಸುವ ಯಾವ ಕಾರಣವೂ ಕಟೀಲ್‌ ಬೆಂಬಲಿಗರಲ್ಲಿ ಇಲ್ಲ. ಪರಿವಾರ ಸಂಘಟನೆಗಳು ಕೂಡಾ ಕ್ಯಾಪ್ಟನ್‌ ಹೆಸರಿಗೆ ಸಮ್ಮತಿ ಸೂಚಿಸಿವೆ ಎಂದು ಹೇಳಲಾಗುತ್ತಿದೆ.

ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಸುಶಿಕ್ಷಿತರು, ಸಂಘ ಹಾಗೂ ಸೇನೆಯ ಹಿನ್ನೆಲೆ ಹೊಂದಿರುವ ವ್ಯಕ್ತಿ. ರಾಜಕೀಯ ಜೀವನ ಅಥವಾ ಸಾಮಾಜಿಕ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇವರ ಮೇಲಿಲ್ಲ ಎಂಬುದೇ ಕ್ಯಾಪ್ಟನ್‌ ಪಾಲಿನ ಬಹುದೊಡ್ಡ ಪ್ಲಸ್‌ ಪಾಯಿಂಟ್. 2019 ರ ಲೋಕಸಭಾ ಚುನಾವಣೆಯಲ್ಲಿ ಇವರ ಹೆಸರು ಪ್ರಬಲವಾಗಿ ಕೇಳಿಬಂದಿದ್ದರೂ ಅಂತಿಮವಾಗಿ ನಳಿನ್‌ ಅವರು ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾದರು. ಮುಂದೆ ರಾಜಕೀಯ ತುಳಿತಕ್ಕೊಳಗಾಗಿ ಯಾವುದೇ ಪ್ರಮುಖ ಜವಾಬ್ದಾರಿ ಇಲ್ಲದೆ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಪೇರೆಂಟ್‌ ಬಾಡಿಯ ನಿರ್ಲಕ್ಷಕ್ಕೆ ಒಳಗಾಗಿದ್ದರು. ಅದೆಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿ, ತಾಳ್ಮೆಯ ಪ್ರತಿರೂಪ ಎಂಬಂತಿದ್ದರು. ಅವರ ಧ್ಯೇಯ ನಿಷ್ಠೆಗೆ ಈಗ ರಾಜ್ಯ ಕಾರ್ಯದರ್ಶಿ ಹುದ್ದೆ ಒಲಿದುಬಂದಿದೆ, ಅದರ ಬೆನ್ನಲ್ಲೇ ಕಾರ್ಯಕರ್ತರ ಲೋಕಸಭಾ ಅಭ್ಯರ್ಥಿಯಾಗಿ ಜನಮಾನಸದಲ್ಲಿ ಸುದ್ದಿಯಲ್ಲಿದ್ದಾರೆ.

ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುತ್ತಿದ್ದ ನಳಿನ್‌ ಕುಮಾರ್‌ ಕಟೀಲ್‌ ಅವರು ಈಗ ಕಾರ್ಯಕರ್ತರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ, ಇದೆಲ್ಲವೂ ಚುನಾವಣಾ ಗಿಮಿಕ್‌ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧದ ಅಲೆಯಿಂದ ಬೇಸತ್ತಿರುವ ಬಿಜೆಪಿ ತನ್ನ ಕಾರ್ಯಕರ್ತರನ್ನು ತಣಿಸುವ ನಿಟ್ಟಿನಲ್ಲಿ ಈ ಬಾರಿ ಟಿಕೆಟ್ ಬದಲಾವಣೆಯ ನಿರ್ಧಾರ ಮಾಡಿರುವುದು ಬಹುತೇಕ ಪಕ್ಕಾ ಆಗಿದೆ.

]]>
https://iambjp.in/archives/2137/feed 0
ತನಗೆ ಮರುಜನ್ಮ ನೀಡಿದ ಬಂಟ್ವಾಳದ ಮಾಣಿಕ್ಯನೊಂದಿಗೆ ಪ್ರತಿವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಾಲಕ ನಿಶಾನ್ ಪೂಜಾರಿ https://iambjp.in/archives/369 https://iambjp.in/archives/369#respond Wed, 18 Aug 2021 10:56:46 +0000 https://iambjp.in/?p=369 2014ರ ಫೆಬ್ರವರಿಯಲ್ಲಿ ಪಾಣೆಮಂಗಳೂರು ಸೇತುವೆಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬರಿಮಾರು ಗ್ರಾಮದ 4 ಜನ ಮೃತಪಟ್ಟು ತನ್ನ ಪೋಷಕರನ್ನು ಕಳೆದುಕೊಂಡು ಗಂಭೀರ ಗಾಯಗೊಂಡಿದ್ದ ಬಾಲಕ ನಿಶಾನ್ ಪೂಜಾರಿ ಬದುಕುಳಿದ ನತದೃಷ್ಟನಾಗಿದ್ದ. ಈ ದುರ್ಘಟನೆಯ ಸಂದರ್ಭದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು (ಆ ಸಮಯದಲ್ಲಿ ಶಾಸಕರಾಗಿರಲಿಲ್ಲ) ಪುಟ್ಟ ಪೋರನನ್ನು ವಿದ್ಯಾಭ್ಯಾಸಕ್ಕಾಗಿ ದತ್ತು ತೆಗೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೆ ಈ ಘಟನೆಯಲ್ಲಿ ಪೋಷಕರನ್ನು ಕಳೆದುಕೊಂಡ ಉಳಿದ ಮಕ್ಕಳ ಪಾಲನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಅಪಘಾತದಲ್ಲಿ ಕಾಲನ್ನು ಕಳೆದುಕೊಂಡಿದ್ದ ನಿಶಾನ್ ಪೂಜಾರಿಯವರಿಗೆ ಸಂಸದ ನಳಿನ್ ಕುಮಾರ್ ಕಟೀಲು ಇವರ ಸಂಸದರ ನಿಧಿಯಿಂದ ಮತ್ತು ತನ್ನ ವೈಯುಕ್ತಿಕ ಸಹಾಯ ಸೇರಿ ಸುಮಾರು 5 ಲಕ್ಷ ವೆಚ್ಚದಲ್ಲಿ ಕೃತಕ ಕಾಲು ಅಳವಡಿಸಲಾಗಿತ್ತು. ನಂತರ ಬಂಟ್ವಾಳ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿಶಾನ್‌ಗೆ ವಿದ್ಯಾಭ್ಯಾಸದ ವ್ಯವಸ್ಥೆ ಕಲ್ಪಿಸಿದ ರಾಜೇಶ್‌ ನಾಯ್ಕ್‌ ಅವರು ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದ್ದಾರೆ.

ತನಗಾದ ಕಹಿ ಘಟನೆ ಮರೆತು ನಿಶಾನ್ ಪೂಜಾರಿ ತನಗೆ ಮರುಜನ್ಮ ನೀಡಿದ ಬಂಟ್ವಾಳದ ಮಾಣಿಕ್ಯ ರಾಜೇಶಣ್ಣನೊಂದಿಗೆ ಪ್ರತಿವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಬಾಲಕ ನಿಶಾನ್‌ ಅವರ ಜನ್ಮದಿನದಂದು ಶುಭಾಶಯ ತಿಳಿಸಿ ಮನತುಂಬಿ ಹರಸಿದ್ದಾರೆ. ಶಾಸಕ ರಾಜೇಶ್‌ ನಾಯ್ಕ್‌ ಅವರು ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ನಿಶಾನ್‌ ಜೊತೆಗಿನ ಫೋಟೋ ಹಾಕಿ ಪೊಳಲಿ ಶ್ರೀ ರಾಜರಾಜೇಶ್ವರಿ ತಾಯಿ ಹರಸಲಿ ಎಂದು ಪ್ರಾರ್ಥಿಸಿಕೊಂಡಿದ್ಧಾರೆ.

]]>
https://iambjp.in/archives/369/feed 0
ತೌಖ್ತೆ ಚಂಡಮಾರುತ : ತೀವ್ರ ಹಾನಿಗೊಂಡಿರುವ ಹೆದ್ದಾರಿ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ದ.ಕ. ಜಿಲ್ಲಾ ಶಾಸಕರು https://iambjp.in/archives/256 https://iambjp.in/archives/256#respond Fri, 13 Aug 2021 07:42:02 +0000 https://iambjp.in/?p=256 ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2021-22 ನೇ ಸಾಲಿನಲ್ಲಿ ತೌಖ್ತೆ ಚಂಡಮಾರುತದ ಪ್ರಭಾವದಿಂದ ಹಾಗೂ ಸುರಿದ ಭಾರೀ ಮಳೆಯಿಂದಾಗಿ ರಾಜ್ಯ ಹೆದ್ದಾರಿಗಳು ತೀವ್ರ ಹಾನಿಗೊಂಡಿರುವ ಪ್ರಯುಕ್ತ ಕೂಡಲೇ ದುರಸ್ತಿಗೊಳಿಸಿ ಅಭಿವೃದ್ಧಿ ಪಡಿಸುವ ಹಾಗೂ ಇದಕ್ಕಾಗಿ ಅನುದಾನ ಬಿಡುಗಡೆಗೊಳಿಸುವ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಸಕರು ಮಾನ್ಯ ಸಚಿವರಾದ ಎಸ್. ಅಂಗಾರ ಹಾಗೂ ಕೋಟಾ ಶ್ರೀನಿವಾಸ್ ಪೂಜಾರಿ ಅವರ ನೇತೃತ್ವದಲ್ಲಿ ಇಂದು  ಮುಖ್ಯಮಂತ್ರಿಗಳಾದ  ಬಸವರಾಜು ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

 

]]>
https://iambjp.in/archives/256/feed 0
ದ.ಕ. ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ https://iambjp.in/archives/229 https://iambjp.in/archives/229#respond Thu, 12 Aug 2021 06:43:10 +0000 https://iambjp.in/?p=229 ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಮನಪಾ ಮಾಜಿ ಸದಸ್ಯರು, ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿರುವ ಶ್ರೀಮತಿ ಹೇಮಲತಾ ಪ್ರಭು ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ರವರು ಕೈಮಗ್ಗದ ಸೀರೆಯೊಂದಿಗೆ ಗೌರವಿಸಿದರು.

ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ ಗಟ್ಟಿ, ಪ್ರಮುಖರಾದ ಶ್ರೀಮತಿ ಪೂಜಾ ಪೈ, ಶ್ರೀಮತಿ ಸೇವಂತಿ ಶ್ರೀಯಾನ್, ರೂಪಾಧರ್ಮಯ್ಯ, ಆಶಾ ಡಿಸಿಲ್ವಾ, ಸರೋಜ ಪೆರ್ಮುದೆ, ಮಮತಾ ಕೇಶವ್, ಸುಮ ಶೆಟ್ಟಿ, ಉಪಸ್ಥಿತರಿದ್ದರು.

]]>
https://iambjp.in/archives/229/feed 0
ಪುತ್ತೂರಿನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ನಳಿನ್ ಕುಮಾರ್ ಕಟೀಲ್ ಮನವಿ https://iambjp.in/archives/212 https://iambjp.in/archives/212#respond Wed, 11 Aug 2021 09:33:09 +0000 https://iambjp.in/?p=212 ನವದೆಹಲಿ / ಪುತ್ತೂರು : ಪುತ್ತೂರು ನಗರಕ್ಕೆ ಅತ್ಯವಶ್ಯಕ ಯೋಜನೆಯಾದ ಎ.ಪಿ.ಎಂ.ಸಿ ಯನ್ನು ಸಂಪರ್ಕಿಸುವ ರಸ್ತೆಗೆ ರೈಲ್ವೆ ಕೆಳಸೇತುವೆಯನ್ನು ನಿರ್ಮಾಣ ಮಾಡುವ ಬಗ್ಗೆ ಇಂದು ದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ರೈಲ್ವೆ ಖಾತೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅವರು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ತನ್ನ ಪಾಲಿನ ಶೇಕಡ 50% ಅನುದಾನವನ್ನು ಮೂಲಭೂತ ಸೌಕರ್ಯ ಇಲಾಖೆ ಮೂಲಕ ಕಾದಿರಿಸಿದ್ದು, ಕೇಂದ್ರ ಸರ್ಕಾರದಿಂದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಪುತ್ತೂರು ಎಪಿಎಂಸಿ ಅಧ್ಯಕ್ಷರಾದ  ದಿನೇಶ್ ಮೆದು ಹಾಗೂ ನಿರ್ದೇಶಕರಾದ  ಬಾಲಕೃಷ್ಣ ಬಾಣಜಾಲು ಅವರು ಉಪಸ್ಥಿತರಿದ್ದರು.

]]>
https://iambjp.in/archives/212/feed 0