og
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121wp-post-author
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121ನಂತರ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಹೊಸಬೆಟ್ಟು ತಾವರೆಕೊಳ ಬಡಾವಣೆಯಲ್ಲಿ 78 ಲಕ್ಷ ರೂ ವೆಚ್ಚದಲ್ಲಿ 4 ಹೊಸ ಕಿರು ಸೇತುವೆ ನಿರ್ಮಾಣಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಕೆಲ ಸಮಯದಿಂದ ಈ ಭಾಗದಲ್ಲಿ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದ್ದು, ಬೈಲಾರೆ ತಾವರೆಕೊಳ ಪ್ರದೇಶಗಳು ಮಳೆ ನೀರು ನಿಲ್ಲುವ ಪ್ರದೇಶವಾಗಿದ್ದು 15 ನೇಯ ಹಣಕಾಸು ಅನುದಾನದಡಿ ಸುಸಜ್ಜಿತ ಕಿರು ಸೇತುವೆ ಮಾಡಲಾಗುವುದು ಎಂದರು. ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ. 2, 3 ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಉಪಮೇಯರ್ ವೇದಾವತಿ, ಕಾರ್ಪೋರೇಟರ್ ನಯನ ಆರ್ ಕೋಟ್ಯಾನ್, ಕಾರ್ಪೋರೇಟರ್ ವರುಣ್ ಚೌಟ, ಬಿಜೆಪಿ ಮುಖಂಡರಾದ ವಿಠ್ಠಲ್ ಸಾಲ್ಯಾನ್, ರಾಘವೇಂದ್ರ ಶೆಣೈ, ಸತೀಶ್ ದೇವಾಡಿಗ, ಶಂಕರ್ ಶೆಟ್ಟಿ, ಜಯಂತ ಕರ್ಕೇರ, ಸುರೇಶ್ ಸಾಲ್ಯಾನ್, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು.
]]>
ಅವರು ಕಾವೂರಿನಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ರೈತ ತಾನು ಬೆಳೆಯುವ ಬೆಳೆಯ ಬಗ್ಗೆ ಈ ಆ್ಯಪ್‍ನಲ್ಲಿ ಹಾಕಿ ಮಾಹಿತಿ ನೀಡಿದರೆ ಆರ್‍ಟಿಸಿಯಲ್ಲಿ ದಖಲೀಕರಣಗೊಂಡು ಅನಿರೀಕ್ಷಿತವಾಗಿ ಮಳೆ ಹಾನಿ ಸಂಭವಿಸಿದಲ್ಲಿ ಪರಿಹಾರ, ಸಾಲ ಸೌಲಭ್ಯ ಮತ್ತಿತರ ಪ್ರಯೋಜನಪಡೆಯಬಹುದಾಗಿದೆ. ವಿವಿಧ ಇಲಾಖೆಗಳ ಅಡಿಯಲ್ಲಿ ಈ ಆ್ಯಪ್‍ನಲ್ಲಿ ಇರುವ ಮಾಹಿತಿ ರವಾನೆಯಾಗಿ ದಾಖಲೆಯಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ ಎಂದರು. ರೈತರು ಸ್ವಯಂ ಆಗಿ ಇದನ್ನು ಉಪಯೋಗಿಸಿಕೊಂಡು ಸೌಲಭ್ಯ ಪಡೆಯಬಹುದು ಎಂದರು.
ಉಪಮೇಯರ್ ಸುಮಂಗಳ ರಾವ್, ರಣ್‍ದೀಪ್ ಕಾಂಚನ್, ಕೃಷಿ ಅಧಿಕಾರಿ ಬಷೀರ್ ಅಹ್ಮದ್, ಬಿಜೆಪಿ ಸ್ಥಳೀಯ ಮುಖಂಡರಾದ ಶಿತೇಶ್ ಕೊಂಡೆ, ಶಾನ್ವಾಜ್ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
]]>ಕ್ಯಾಟರಿಂಗ್ ಮಾಲಕರ ಸಂಘ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಹೆಚ್ಚು ಕಷ್ಟದಲ್ಲಿರುವವರಿಗೆ ದಿನಸಿ ಸಾಮಾಗ್ರಿಗಳ ಕಿಟ್ ನೀಡುವುದು, ಕಾರ್ಮಿಕರಿಗೆ ಸೌಲಭ್ಯ ಒದಗಿಸಿಕೊಡುವುದು,ಕೋವಿಡ್ ನಿಯಂತ್ರಣಕ್ಕಾಗಿ ನೀಡಲಾಗುವ ಲಸಿಕೆಯನ್ನು ಎಲ್ಲಾ ಸದಸ್ಯರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕೆಲಸ ಶ್ಲಾಘನೀಯ ಎಂದು ಡಾ. ಭರತ್ ಶೆಟ್ಟಿ ಶುಭ ಹಾರೈಸಿದರು.
ಕ್ಯಾಟರಿಂಗ್ ಮಾಲಕರ ಸಂಘದ ಸ್ಥಾಪಕ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ ರೈ, ಮನಪಾ ಸದಸ್ಯ ಸಂದೀಪ್ ಗರೋಡಿ, ಮಾಜಿ ಅಧ್ಯಕ್ಷ ಸುಧಾಕರ ಕಾಮತ್, ಸತೀಶ್ ಬೋಳಾರ್, ವಿಜಯ್ ಕುಮಾರ್, ಕ್ಯಾಟರಿಂಗ್ ಮಾಲಕರ ಸಂಘದ ಹಿರಿಯ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
]]>