Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Warning: Cannot modify header information - headers already sent by (output started at /home3/buntss5v/iambjp.in/wp-includes/functions.php:6121) in /home3/buntss5v/iambjp.in/wp-includes/feed-rss2.php on line 8
JanAshirwadYatra – I am BJP https://iambjp.in Making Bharat Vishwa Guru Wed, 18 Aug 2021 11:55:59 +0000 en-US hourly 1 https://wordpress.org/?v=6.8.1 https://iambjp.in/wp-content/uploads/2021/08/cropped-Smal-Logo-32x32.png JanAshirwadYatra – I am BJP https://iambjp.in 32 32 ಬಿಜೆಪಿ ಯಾವತ್ತೂ ಮೀಸಲಾತಿ ಪರವಾಗಿದೆ : ಕೇಂದ್ರ ಸಚಿವ ಎ. ನಾರಾಯಣಸ್ವಾಮಿ https://iambjp.in/archives/378 https://iambjp.in/archives/378#respond Wed, 18 Aug 2021 11:55:59 +0000 https://iambjp.in/?p=378 ಬೆಂಗಳೂರು: ದಲಿತ ಸಮುದಾಯ ಪ್ರಜ್ಞಾವಂತರನ್ನು- ವಿದ್ಯಾವಂತರನ್ನು ಹೊಂದಿದೆ. ಬಿಜೆಪಿ ಯಾವತ್ತೂ ಮೀಸಲಾತಿಪರವಾಗಿದೆ ಎಂಬುದು ಅವರಿಗೆ ತಿಳಿದಿದೆ ಎಂದು ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದರು.

ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಇಂದು ಸಭೆಯಲ್ಲಿ ಮಾತನಾಡಿದ ಅವರು, 62 ವರ್ಷ ಕಾಲ ಕಾಂಗ್ರೆಸ್ಸಿಗರು ಹೆಂಡ ಕೊಟ್ಟು ಮತ ಪಡೆದರು. ಗ್ರಾಮ ಪಂಚಾಯಿತಿಯಿಂದ ಪ್ರಧಾನಮಂತ್ರಿ, ರಾಷ್ಟ್ರಪತಿ ವರೆಗೆ ಅಧಿಕಾರ ಅವರದಾಗಿತ್ತು. ಡಾ. ಅಂಬೇಡ್ಕರರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ಪಕ್ಷದವರು ಬಿಜೆಪಿ ಮೀಸಲಾತಿ ವಿರೋಧಿ ಎಂದು ಟೀಕಿಸುತ್ತಾರೆ. ಆದರೆ, ಜನರಿಗೆ ಎಲ್ಲವೂ ತಿಳಿದಿದೆ ಎಂದು ಹೇಳಿದರು.

ಗರಿಷ್ಠ ಸಂಖ್ಯೆಯ ದಲಿತ ಸಚಿವರು ಹಾಗೂ ಹಿಂದುಳಿದ ಸಮುದಾಯಗಳ ಸಚಿವರನ್ನು ಸಂಸತ್ತಿಗೆ ಪರಿಚಯಿಸಲು ಅವಕಾಶ ಕೊಡದ ಕಾಂಗ್ರೆಸ್ ವರ್ತನೆ ಖಂಡನೀಯ ಎಂದರು. ಸಚಿವರನ್ನು ಜನರಿಗೆ ಪರಿಚಯಿಸಲು ಮತ್ತು ಕೇಂದ್ರದ ಸಾಧನೆಗಳ ಕುರಿತು ತಿಳಿಸಲು ಜನಾಶೀರ್ವಾದ ಯಾತ್ರೆ ಮಾಡಲಾಗುತ್ತಿದೆ. ಕಾಂಗ್ರೆಸ್‍ಗೆ ಅಭಿವೃದ್ಧಿ ಬೇಕಾಗಿಲ್ಲ ಎಂದು ಆಕ್ಷೇಪಿಸಿದರು.

ಬಿಜೆಪಿ ಕೇವಲ 13 ವರ್ಷ ದೇಶದ ಆಡಳಿತ ಮಾಡಿದೆ. ಕಾಂಗ್ರೆಸ್ 62 ವರ್ಷಗಳ ಆಡಳಿತ ನೀಡಿದೆ. ಆದರೆ, ಕಾಂಗ್ರೆಸ್ ಪಕ್ಷ ಸಂಸತ್ತಿನ ನಿಯಮಾವಳಿ ಉಲ್ಲಂಘಿಸಿತು. 135 ಕೋಟಿ ಜನರನ್ನು ರಕ್ಷಣೆ ಮಾಡುವುದು ಲೋಕಸಭೆ- ರಾಜ್ಯಸಭೆಯ ಜವಾಬ್ದಾರಿ. ಆದರೆ, ಪುಸ್ತಕ ತೆಗೆದು ಸ್ಪೀಕರ್ ಮುಖಕ್ಕೆ ಎಸೆಯುವ ಸಂಸ್ಕøತಿ ಕಾಂಗ್ರೆಸ್ ಸದಸ್ಯರದು. ಟೇಬಲ್ ಮೇಲೆ ನಿಂತು ನರ್ತಿಸುವ ವಿರೋಧ ಪಕ್ಷದವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

15- 20 ವರ್ಷಗಳ ಹಿಂದೆ ಬಿಜೆಪಿ ಎಂದರೆ ಬ್ರಾಹ್ಮಣರ ಪಕ್ಷ, ಗರ್ಭಗುಡಿ ರಾಜಕೀಯದ ಪಕ್ಷ, ದಲಿತರ ವಿರೋಧಿ ಪಕ್ಷ, ಹಿಂದುಳಿದವರ ಬಗ್ಗೆ ಕಳಕಳಿ ಇಲ್ಲದ ಪಕ್ಷ ಎಂದು ಟೀಕಿಸುತ್ತಿದ್ದರು. 1991- 92ರಲ್ಲಿ ಪಕ್ಷದ ಬಾವುಟ ಕಟ್ಟಿ ಮನೆಗೆ ಬಂದರೆ ಬೆಳಿಗ್ಗೆ ಆ ಬಾವುಟ ಇರುತ್ತಿರಲಿಲ್ಲ. ಬಾವುಟ ಕಟ್ಟಲು ಹೋದರೆ ಓಡಿಸಿಕೊಂಡು ಹೋಗುವ ಸ್ಥಿತಿ ಇತ್ತು. ಆ ದೌರ್ಜನ್ಯಕ್ಕೆ ಹೆದರದವರು ನಾಯಕರಾದರು ಎಂದರು.

ತುಳಿತಕ್ಕೆ ಒಳಗಾದ ನಾಗರಿಕರ ಪರವಾಗಿ, ಸಮಾಜದ ಪರವಾಗಿ ಎದೆ ತಟ್ಟಿ, ತೊಡೆ ತಟ್ಟಿ ನಿಲ್ಲುವವರೇ ನಾಯಕರಾಗುತ್ತಾರೆ. ದಲಿತರನ್ನು ಮುಖ್ಯವಾಹಿನಿಗೆ ತರಬೇಕೆಂಬ ಆಶಯವನ್ನು ಬಿಜೆಪಿ ಸಿದ್ಧಾಂತ ಹೊಂದಿದೆ. ನನಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆಗಳು ಎಂದರು.

ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಸದಾ ಕಾಲ ಬದ್ಧತೆಯನ್ನು ಹೊಂದಿದೆ. ಇಲ್ಲಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಅವರು ತಿಳಿಸಿದರು. ನಾನು ಬಿಜೆಪಿ ಸಿದ್ಧಾಂತವನ್ನು 30 ವರ್ಷ ಒಪ್ಪಿಕೊಂಡು ಬಿಜೆಪಿಯವ ಎಂದು ಬ್ರ್ಯಾಂಡೆಡ್ ಆಗಿದ್ದೇನೆ. ನನಗೂ ಬ್ರ್ಯಾಂಡ್ ಇದೆ. ತ್ಯಾಗ- ಸಂಸ್ಕಾರ- ಲಂಚ ಮುಟ್ಟಿದಿರುವುದೇ ನನ್ನ ಬ್ರ್ಯಾಂಡ್ ಎಂದರು.

ಏಳು ವರ್ಷಗಳ ಕಾಲ ಶ್ರೀ ನರೇಂದ್ರ ಮೋದಿ ಮತ್ತು ಎರಡು ವರ್ಷಗಳ ಕಾಲ ಶ್ರೀ ಯಡಿಯೂರಪ್ಪ ಅವರ ನೇತೃತ್ವದಲ್ಲಿ ದೇಶ- ರಾಜ್ಯವು ಅಭೂತಪೂರ್ವ ಅಭಿವೃದ್ಧಿ ಸಾಧಿಸಿವೆ ಎಂದು ತಿಳಿಸಿದರು. ಸಚಿವನನ್ನಾಗಿ ಮಾಡಿದ ಪಕ್ಷದ ಕೇಂದ್ರ- ರಾಜ್ಯದ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು.

ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಕೆ.ಎಸ್.ನವೀನ್, ಶಾಸಕರಾದ ಶ್ರೀ ಚಂದ್ರಪ್ಪ, ವಿಭಾಗ ಪ್ರಭಾರಿಗಳಾದ ಶ್ರೀ ಸುರೇಶ್, ಜಿಲ್ಲಾಧ್ಯಕ್ಷರಾದ ಶ್ರೀ ಎ. ಮುರಳಿ, ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಭಾಗವಹಿಸಿದ್ದರು.

ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಶ್ರೀ ಎ. ನಾರಾಯಣ ಸ್ವಾಮಿ ಅವರು ಗೋ ಪೂಜೆ ನೆರವೇರಿಸಿದರು. ಅಲ್ಲದೆ ನಿವೃತ್ತ ಯೋಧರಾದ ಶ್ರೀ ಟೀ ಪ್ರಭಾಕರ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದರು. ಯೋಧರ ಸನ್ಮಾನ ಮಾಡಿದ್ದಲ್ಲದೆ, ಹಿರಿಯೂರಿನ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

]]>
https://iambjp.in/archives/378/feed 0
10 ಸಾವಿರ ಕೃಷಿ ಉತ್ಪಾದಕರ ಘಟಕ ಸ್ಥಾಪನೆ – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ https://iambjp.in/archives/375 https://iambjp.in/archives/375#respond Wed, 18 Aug 2021 11:51:00 +0000 https://iambjp.in/?p=375 ಬೆಂಗಳೂರು: ದೇಶದಲ್ಲಿ 10 ಸಾವಿರ ಕೃಷಿ ಉತ್ಪಾದಕರ ಘಟಕಗಳನ್ನು (ಎಫ್‍ಪಿಒ) ಆರಂಭಿಸುವ ಸಂಕಲ್ಪ ನಮ್ಮ ಜನಪರ ಪ್ರಧಾನಿ ಶ್ರೀ ನರೇಂದ್ರ ಮೋದಿಯವರದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ಇಂದು ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕ ರೈತರನ್ನು ಒಗ್ಗೂಡಿಸಿ ಅವರಿಗೆ ಕೃಷಿ ಸಲಕರಣೆಗಳನ್ನು ಒದಗಿಸುವ ಚಿಂತನೆ ಇದೆ. ಈಗಲೂ ಕಡಿಮೆ ಬಾಡಿಗೆಗೆ ಕೃಷಿ ಸಲಕರಣೆಗಳು ಲಭಿಸುತ್ತಿವೆ. ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ಖಾದ್ಯ ತೈಲದ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿ ಆಗುವ ನಿಟ್ಟಿನಲ್ಲಿ ಮುನ್ನಡೆದಿದೆ ಎಂದರು.

ರೈತರನ್ನು ದಲ್ಲಾಳಿಗಳ ಸಮಸ್ಯೆಯಿಂದ ಮುಕ್ತರನ್ನಾಗಿಸಿದ ಕೇಂದ್ರ ಸರಕಾರ ನಮ್ಮದು ಎಂದ ಅವರು, ಈಗ ಆಹಾರ ಪದಾರ್ಥ, ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಹಿಂದೆ ಆಹಾರಕ್ಕಾಗಿ ವಿದೇಶಗಳ ಎದುರು ಅಂಗಲಾಚುವ ಸ್ಥಿತಿ ಇತ್ತು ಎಂದು ತಿಳಿಸಿದರು.

2014ರಲ್ಲಿ ಯುಪಿಎ ಸರಕಾರ ಇದ್ದಾಗ ಬಜೆಟ್‍ನಡಿ ಕೇವಲ 21 ಸಾವಿರ ಕೋಟಿಯನ್ನು ಕೃಷಿ ಕ್ಷೇತ್ರಕ್ಕೆ ಬಳಸಲಾಗುತ್ತಿತ್ತು. ಕೇವಲ ಆರೇಳು ವರ್ಷಗಳಲ್ಲಿ 1,30,000 ಕೋಟಿ ರೂಪಾಯಿ ಕೃಷಿ ಅಭಿವೃದ್ಧಿಗೆ ಕೊಡಲಾಗಿದೆ. ಸುಮಾರು ಶೇ 460ರಷ್ಟು ಬಜೆಟ್‍ನಡಿ ಹೆಚ್ಚಳವನ್ನು ಇದೊಂದು ಕ್ಷೇತ್ರದಲ್ಲೇ ನಾವು ಕಾಣುತ್ತಿದ್ದೇವೆ ಎಂದು ವಿವರಿಸಿದರು.

ಇದಲ್ಲದೆ ಕೃಷಿ ಮೂಲಸೌಕರ್ಯ ಹೆಚ್ಚಳಕ್ಕೆ 1 ಲಕ್ಷ ಕೋಟಿಯ ಹೆಚ್ಚುವರಿ ಹಣವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನೀಡಿದ್ದಾರೆ. ಇದು ಬಿಜೆಪಿ ಸರಕಾರದ ಕೃಷಿಕರ ಅಭಿವೃದ್ಧಿ ಕುರಿತ ಬದ್ಧತೆಗೆ ಸ್ಪಷ್ಟ ನಿದರ್ಶನ ಎಂದು ತಿಳಿಸಿದರು. ಸಣ್ಣಪುಟ್ಟ ಸ್ವಸಹಾಯ ಸಂಘಗಳನ್ನು ರಚಿಸಿ ಈರುಳ್ಳಿ, ಆಲೂಗಡ್ಡೆ ಮತ್ತಿತರ ಉತ್ಪನ್ನಗಳ ಸಂಸ್ಕರಣೆ- ಮೌಲ್ಯವರ್ಧನೆ ನಡೆಸಲು ಅವಕಾಶವಿದೆ ಎಂದು ಕಿವಿಮಾತು ಹೇಳಿದರು.

ರಾಜ್ಯದಿಂದ ಕಾಫಿ ಮತ್ತು ಕರಿಮೆಣಸು ಮಾತ್ರ ರಫ್ತಾಗುತ್ತಿದೆ. ಕಾಫಿ ಬೆಳೆಗಾರರಿಗೂ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ. ತೆಂಗು ಮತ್ತು ತೆಂಗಿನ ಉತ್ಪನ್ನಗಳ ರಫ್ತು ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಬೆಳೆಗಾರರಿಗೆ ಹೆಚ್ಚು ದರ ಲಭಿಸಲಿದೆ ಎಂದು ತಿಳಿಸಿದರು.

ಕೋವಿಡ್ ಸಮಸ್ಯೆ ಇದ್ದರೂ ಕೃಷಿಕರ ಆದಾಯ ದ್ವಿಗುಣಗೊಳಿಸಲು ಹಲವಾರು ಯೋಜನೆಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಜಾರಿಗೊಳಿಸಿದ್ದಾರೆ. ಬಿತ್ತನೆ ಬೀಜ ಅಭಿವೃದ್ಧಿ, ಶೇ 80ರಷ್ಟು ಸಣ್ಣ ರೈತರ ಅಭಿವೃದ್ಧಿಗೂ ಕೇಂದ್ರದ ಬಿಜೆಪಿ ಸರಕಾರ ಅನೇಕ ಯೋಜನೆಗಳನ್ನು ಭ್ರಷ್ಟಾಚಾರವಿಲ್ಲದೆ ಅನುಷ್ಠಾನಕ್ಕೆ ತಂದಿದೆ ಎಂದು ತಿಳಿಸಿದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ಇಲ್ಲಿನವರೆಗೆ 21 ಕೋಟಿ ರೈತರಿಗೆ 1,57,000 ಕೋಟಿ ರೂಪಾಯಿ ಬ್ಯಾಂಕ್ ಖಾತೆಗಳಿಗೆ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾವಣೆಗೊಂಡಿದೆ. ಫಸಲ್ ಬಿಮಾ ಯೋಜನೆಯನ್ನು ಸರಳಗೊಳಿಸಿದ್ದು, ರೈತರು ಉತ್ಪನ್ನ ನಷ್ಟವಾದ ಕುರಿತ ದಾಖಲೆಗಳನ್ನು ಯಾವುದೇ ಅಧಿಕಾರಿಗಳು, ಮಧ್ಯವರ್ತಿಗಳ ನೆರವಿಲ್ಲದೆ ತಮ್ಮ ಮೊಬೈಲ್ ಮೂಲಕ ಅಪ್‍ಲೋಡ್ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಿದರು.

ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಒಗ್ಗೂಡಿ ರೈತರು ಸ್ವಾವಲಂಬಿ ಆಗುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ರೈತರ ಉತ್ಪನ್ನಕ್ಕೆ ಹೆಚ್ಚಿನ ದರ ಸಿಗುವ ನಿಟ್ಟಿನಲ್ಲಿ ಪ್ತಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಸಂಸತ್ತಿಗೆ ನೂತನ ಸಚಿವರ ಪರಿಚಯ ಮಾಡಲು ವಿರೋಧ ಪಕ್ಷಗಳು ಅವಕಾಶ ಕೊಡಲಿಲ್ಲ. ಇದೇ ಕಾರಣಕ್ಕೆ ಸುಮಾರು 500ರಷ್ಟು ಸಂಸದರ ಬದಲಾಗಿ 130 ಕೋಟಿ ಜನರ ಮುಂದೆ ಹೊಸ ಸಚಿವರನ್ನು ತೆಗೆದುಕೊಂಡು ಹೋಗಲು ಮತ್ತು ಜನರಿಗೆ ನೂತನ ಸಚಿವರನ್ನು ಪರಿಚಯಿಸಲು ನಿರ್ಧರಿಸಲಾಯಿತು. ಅದೇ ಕಾರಣಕ್ಕೆ ಈ ಯಾತ್ರೆ ನಡೆಯುತ್ತಿದೆ ಎಂದು ತಿಳಿಸಿದರು.

ಸ್ಥಳೀಯವಾಗಿ ಹೆಚ್ಚಿನ ಗುರುತೇ ಇಲ್ಲದ ನನ್ನನ್ನು ಗೆಲ್ಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ನನಗೆ ಸಚಿವ ಸ್ಥಾನ ಅದರಲ್ಲೂ ಕೃಷಿ ಖಾತೆ ಸಿಕ್ಕಿದೆ. ಇದಕ್ಕಾಗಿ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳು ಎಂದರು. ಗರಿಷ್ಠ ಜಂಟಿ ಕಾರ್ಯದರ್ಶಿಗಳಿರುವ ಖಾತೆ ಇದು. ಹಲವಾರು ಯೋಜನೆಗಳನ್ನು ಈ ಖಾತೆಗೆ ಪ್ರಧಾನಿಯವರು ಕೊಟ್ಟಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಉಪಸಭಾಪತಿಗಳಾದ ಶ್ರೀ ಪ್ರಾಣೇಶ್, ಜಿಲ್ಲಾಧ್ಯಕ್ಷರಾದ ಶ್ರೀ ಕಲ್ಮರುಡಪ್ಪ, ಮಾಜಿ ಸಚಿವರಾದ ಶ್ರೀ ಜೀವರಾಜ್, ರಾಜ್ಯ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಶ್ರೀ ತುಳಸಿ ಮುನಿರಾಜು ಗೌಡ, ಶಾಸಕರಾದ ಶ್ರೀ ಎಂ.ಪಿ. ಕುಮಾರಸ್ವಾಮಿ, ಶ್ರೀ ಸುರೇಶ್, ಶ್ರೀ ಬೆಳ್ಳಿ ಪ್ರಕಾಶ್, ಕಾಫಿ ಮಂಡಳಿ ಅಧ್ಯಕ್ಷರಾದ ಶ್ರೀ ಎಮ್.ಎಸ್. ಬೋಜೆಗೌಡ, ವಿಭಾಗ ಪ್ರಭಾರಿಗಳಾದ ಶ್ರೀ ಗಿರೀಶ್ ಪಟೇಲ್, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

]]>
https://iambjp.in/archives/375/feed 0
ದೇಶದಲ್ಲಿ ಹಿಂದುಳಿದವರ ಮತ್ತು ದಲಿತರ ಹೊಸ ಯುಗ ಆರಂಭ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ https://iambjp.in/archives/346 https://iambjp.in/archives/346#respond Tue, 17 Aug 2021 09:54:41 +0000 https://iambjp.in/?p=346 ಬೆಂಗಳೂರು: ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವಸಂಪುಟದ ವಿಸ್ತರಣೆ ಮೂಲಕ ದೇಶದಲ್ಲಿ ಹಿಂದುಳಿದವರ ಮತ್ತು ದಲಿತರ ಹೊಸ ಯುಗ ಆರಂಭವಾಗಿದೆ ಎಂದು ಕೇಂದ್ರ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದರು.

ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ನೆಲಮಂಗಲದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ನಾಯಕ, ಗುಜರಾತ್‍ನ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ವಿಶ್ವದ ಗಮನ ಸೆಳೆದ ಶ್ರೀ ಮೋದಿಯವರು ಎರಡನೇ ಬಾರಿ ಮಂತ್ರಿಮಂಡಲ ವಿಸ್ತರಣೆ ಮಾಡಿದಾಗ ಎಸ್‍ಸಿ- 12, ಎಸ್‍ಟಿ- 6, ಪರಿಶಿಷ್ಟ ಪಂಗಡದ (ಟ್ರೈಬಲ್) ಇಬ್ಬರಿಗೆ ಸೇರಿದಂತೆ 20 ಮಂದಿಗೆ ಸಚಿವರಾಗುವ ಅವಕಾಶ ನೀಡಿದರು. ರಾಜ್ಯದಲ್ಲಿ ಹಿಂದೆ ಕೇಂದ್ರದ ಇಬ್ಬರು ಸಚಿವರಿದ್ದರು. ಈಗ ಮತ್ತೆ ನಾಲ್ವರಿಗೆ ಸಚಿವರಾಗುವ ಅವಕಾಶ ಲಭಿಸಿದ್ದು, ಅದಕ್ಕಾಗಿ ಪ್ರಧಾನಿಯವರಿಗೆ ಕೃತಜ್ಞತೆ ಸಮರ್ಪಿಸುವುದಾಗಿ ತಿಳಿಸಿದರು.

ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಿ ದೇಶಕ್ಕೆ ಪರಿಚಯಿಸುವುದು ಸತ್ ಸಂಪ್ರದಾಯ. ಅದಕ್ಕೆ ವಿರೋಧ ಪಕ್ಷದವರು ಅವಕಾಶ ಮಾಡಿಕೊಟ್ಟಿಲ್ಲ. ಕಾಂಗ್ರೆಸ್‍ನವರು ಸದನ ನಡೆಯದಂತೆ ನೋಡಿಕೊಂಡರು. ಇದೇ ಕಾರಣಕ್ಕೆ ನೂತನ ಸಚಿವರ ಪರಿಚಯವನ್ನು ಜನಾಶೀರ್ವಾದದ ಮೂಲಕ ಮಾಡಿಕೊಡಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಪಕ್ಷದ ಮುಖಂಡರು ಮುಂದಾಗಿದ್ದಾರೆ ಎಂದು ವಿವರಿಸಿದರು.

ಕೇಂದ್ರ ಸರಕಾರದ ಏಳು ವರ್ಷಗಳ ಸಾಧನೆ, ಬಿಜೆಪಿಯ ರಾಜ್ಯ ಸರಕಾರಗಳ ಸಾಧನೆ, ಸಚಿವರಾಗಿ ತಮ್ಮ ಖಾತೆಯಿಂದ ಲಭಿಸಲಿರುವ ಸೌಲಭ್ಯಗಳ ಕಿರು ಪರಿಚಯ ಮಾಡಿಕೊಡಲು ಈ ಯಾತ್ರೆಯನ್ನು ಬಳಸಲು ತಿಳಿಸಿದ್ದಾರೆ. ಪಕ್ಷದ ಸಂದೇಶದಂತೆ ಸಚಿವರು, ಇತರ ಜನಪ್ರತಿನಿಧಗಳು, ಪಕ್ಷದ ಪದಾಧಿಕಾರಿಗಳ ಜೊತೆಗೂಡಿ ಜನಾಶೀರ್ವಾದ ಯಾತ್ರೆ ನಡೆಸಲಾಗುತ್ತಿದೆ ಎಂದರು.

56 ವರ್ಷಗಳ ಕಾಂಗ್ರೆಸ್ ಆಡಳಿತ, ಅನೇಕ ಪ್ರಧಾನಮಂತ್ರಿಗಳ ಕಾರ್ಯವೈಖರಿಯನ್ನು ನಾವು ನೋಡಿದ್ದೇವೆ. ಹಿಂದೆ ಫೇಸ್‍ಬುಕ್, ಇಲೆಕ್ಟ್ರಾನಿಕ್ ಮೀಡಿಯಾಗಳು ಇರಲಿಲ್ಲ. ಆದರೆ, ಹಿಂದೆ ಮುದ್ರಣ ಮಾಧ್ಯಮಗಳಲ್ಲಿ ವಿದೇಶಗಳಲ್ಲಿ ಪ್ರಧಾನಿಗಳ ನಾಯಕರ ಭೇಟಿ, ಊಟ, ವಿಹಾರದ ಕುರಿತ ಸುದ್ದಿಗಳು ಇರುತ್ತಿದ್ದವು. ಸ್ವಾತಂತ್ರ್ಯ ತಂದು ಕೊಟ್ಟವರು ನಾವೇ, ದಲಿತರ ಉದ್ಧಾರ ಮಾಡುತ್ತೇವೆ, ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತೇವೆ- ಮತ ಕೊಡಿ ಎಂದು ಕೇಳುತ್ತಿದ್ದರು. ಆದರೆ, ಅಭಿವೃದ್ಧಿ ಎಂಬುದು ಕೇವಲ ಕನಸಾಗಿಯೇ ಇತ್ತು ಎಂದರು.

ಸುಮಾರು 5 ದಶಕಕ್ಕೂ ಹೆಚ್ಚು ಕಾಲ ಈಶಾನ್ಯ ರಾಜ್ಯಗಳಿಗೆ ರೈಲ್ವೆ, ವಿಮಾನಗಳ ಸಂಪರ್ಕ ಇರಲಿಲ್ಲ. ಈ ರಾಜ್ಯಗಳ ಕಡೆ ವಿಶೇಷ ಗಮನ ಕೊಟ್ಟ ಶ್ರೀ ನರೇಂದ್ರ ಮೋದಿ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ವಿವರಿಸಿದರು.
ಶ್ರೀ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಮನೆಯಲ್ಲಿ ಶೌಚಾಲಯ ಇರುವಂತಾಗುವ ಸ್ವಚ್ಛ ಭಾರತ ಯೋಜನೆ, ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಉಜಾಲಾ ಯೋಜನೆ, ವಿದ್ಯುತ್ ಸ್ವಾವಲಂಬಿತನ ಸಾಧ್ಯವಾಗಿದೆ. ವಸತಿ ಯೋಜನೆಯಲ್ಲೂ ಕ್ರಾಂತಿ ನಡೆದಿದೆ. ಫಸಲ್ ಬಿಮಾ ಯೋಜನೆ, ರೈತ ಸಮ್ಮಾನ್ ಯೋಜನೆ ಸೇರಿದಂತೆ ಅನೇಕ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.

ಹಿಂದೆ ರಾಜ್ಯದಲ್ಲಿ ಸಚಿವನಾಗಿದ್ದಾಗ ದಲಿತರು- ಹಿಂದುಳಿದವರ ಏಳಿಗೆಗೆ ಶ್ರಮಿಸಿದ್ದೇನೆ. ಕೇಂದ್ರ ಸಚಿವನಾಗಿ ಹಿಂದುಳಿದವರು ಮತ್ತು ದಲಿತರ ಅಭಿವೃದ್ಧಿಗೆ ಪ್ರಾಮಾಣಿಕತೆಯಿಂದ ಶ್ರಮಿಸಲಿದ್ದೇನೆ ಎಂದು ಅವರು ಹೇಳಿದರು.

ದೇಶದಾದ್ಯಂತ ಐಎಎಸ್, ಐಪಿಎಸ್ ಅಧಿಕಾರಿಗಳ ಕೊರತೆ ಇದೆ. ಆ ಕೊರತೆಯನ್ನು ನೀಗಿಸಬೇಕಿದೆ. ಆಡಳಿತ ವ್ಯವಸ್ಥೆಯಲ್ಲಿ ದಲಿತರ ಸಹಭಾಗಿತ್ವ ಬೇಕಿದೆ. ಆ ನಿಟ್ಟಿನಲ್ಲಿ ಐಎಎಸ್ ಕೋಚಿಂಗ್ ಅನ್ನು ಎಲ್ಲ ರಾಜ್ಯಗಳ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ಆರಂಭಿಸಲಾಗುವುದು. ತಲಾ 100 ಜನರಿಗೆ ಕೋಚಿಂಗ್ ಕೊಡಲಾಗುವುದು ಎಂದರು.

ಎಲ್ಲ ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಅಂಬೇಡ್ಕರ್ ನವೋದಯ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಅವರು ಪ್ರಕಟಿಸಿದರು. ಸ್ಕಿಲ್ ಇಂಡಿಯಾದಡಿ ತಾಂತ್ರಿಕ ಶಿಕ್ಷಣವನ್ನೂ ನೀಡಲಾಗುವುದು ಎಂದರು.

ರಾಜ್ಯದ ಸಚಿವರಾದ ಶ್ರೀ ಎಂ.ಟಿ.ಬಿ. ನಾಗರಾಜ್, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಕೆ.ಎಸ್. ನವೀನ್, ಜಿಲ್ಲಾಧ್ಯಕ್ಷರಾದ ಶ್ರೀ ರಾಮಲಿಂಗಪ್ಪ, ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

]]>
https://iambjp.in/archives/346/feed 0
ಕರ್ನಾಟಕದಲ್ಲಿ ಫಾರ್ಮಾ ಪಾರ್ಕ್, ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ – ಕೇಂದ್ರ ಸಚಿವ ಭಗವಂತ್ ಖೂಬಾ https://iambjp.in/archives/343 https://iambjp.in/archives/343#respond Tue, 17 Aug 2021 07:46:40 +0000 https://iambjp.in/?p=343 ಬೆಂಗಳೂರು: ಕರ್ನಾಟಕದಲ್ಲಿ ಒಂದು ಫಾರ್ಮಾ ಪಾರ್ಕ್ ಮತ್ತು ಒಂದು ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸಲು ಕೇಂದ್ರ ಸರಕಾರ ಯೋಜಿಸಿದೆ ಎಂದು ಕೇಂದ್ರ ನವೀನ ಮತ್ತು ನವೀಕರಿಸಬಲ್ಲ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಶ್ರೀ ಭಗವಂತ್ ಖೂಬಾ ಅವರು ತಿಳಿಸಿದರು.

ಬೀದರ್‌ನಲ್ಲಿ ಇಂದು ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿ ಫಾರ್ಮ ಪಾರ್ಕ್ ಅನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಜಮೀನು ಹೊರತುಪಡಿಸಿ ಇತರ ಮೂಲಸೌಕರ್ಯಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಹೂಡಿಕೆ ಇರುವ ಯೋಜನೆ ಇದಾಗಿದೆ. ರಾಜ್ಯ ಸರಕಾರ ಜಮೀನು ನೀಡಬೇಕಾಗುವುದು. ಹೂಡಿಕೆದಾರರಿಗೆ ರಾಜ್ಯ ಸರಕಾರದಿಂದ ಕಡಿಮೆ ದರದಲ್ಲಿ ವಿದ್ಯುತ್, ನೀರು, ಜಮೀನು, ಟ್ರೀಟ್‍ಮೆಂಟ್ ಪ್ಲಾಂಟ್ ನೀಡಬೇಕಾಗುತ್ತದೆ. ಬಹುತೇಕ ನಮ್ಮ ರಾಜ್ಯಕ್ಕೆ ಇದು ಸಿಗುವ ಅವಕಾಶವಿದೆ ಎಂದರು.

ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಮಂಗಳೂರು ಮತ್ತು ಯಾದಗಿರಿಯಿಂದ ಪ್ರಸ್ತಾವನೆ ಬಂದಿದೆ. ಕೆಮಿಕಲ್ ಇಂಡಸ್ಟ್ರಿಗಳಿರುವ ಕಾರಣ ಮಂಗಳೂರಿನಲ್ಲಿ ಇದು ಸ್ಥಾಪನೆ ಆಗುವ ಸಾಧ್ಯತೆ ಹೆಚ್ಚು. ಮೂಲಸೌಕರ್ಯಕ್ಕೆ 100 ಕೋಟಿ ಹೂಡಿಕೆ ಇರುತ್ತದೆ ಎಂದು ತಿಳಿಸಿದರು.ರಾಜ್ಯ ಸರಕಾರ ಹೆಚ್ಚು ಮುತುವರ್ಜಿ – ಹಣದ ಸಹಕಾರ ವಹಿಸಿದಾಗ ಯೋಜನೆ ಸಿಗಲು ಸಾಧ್ಯವಾಗುತ್ತದೆ. ಬೀದರ್ ಜಿಲ್ಲೆಗೆ ಬರಬೇಕಿದ್ದ ಯೋಜನೆಗಳು ಹಿಂದೆ ಕಾಂಗ್ರೆಸ್ ರಾಜ್ಯ ಸರಕಾರದ ಅಸಹಕಾರ, ಜಮೀನು ಸಿಗದ ಕಾರಣದಿಂದ ಅನುಷ್ಠಾನಗೊಂಡಿರಲಿಲ್ಲ ಎಂದು ಅವರು ವಿವರಿಸಿದರು. ಈಗ ಕೇಂದ್ರ- ರಾಜ್ಯ ಸರಕಾರಗಳೆರಡೂ ಬಿಜೆಪಿಯದ್ದೇ ಇವೆ. ಆದ್ದರಿಂದ ಸಮಸ್ಯೆ ಆಗಲಾರದು ಎಂದರು.

ಪ್ರಧಾನಿಯವರ ಜನಪ್ರಿಯತೆ ಹೆಚ್ಚಳದ ಆತಂಕದಿಂದ ಬಿಜೆಪಿಯೇತರ ರಾಜ್ಯ ಸರಕಾರಗಳು ಕಡಿಮೆ ಬೆಲೆಯ ಔಷಧಿ ನೀಡುವ ಜನೌಷಧಿ ಕೇಂದ್ರಗಳನ್ನು ತೆರೆದಿಲ್ಲ. ಅಂಥ ರಾಜ್ಯಗಳಲ್ಲಿ ತಮ್ಮ ಖಾತೆ ವತಿಯಿಂದ ಜನೌಷಧಿ ಕೇಂದ್ರಗಳನ್ನು ತೆರೆದು ವಹಿವಾಟು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.

ಬೀದರ್‍ನಲ್ಲಿ ಮುನ್ಸಿಪಾಲಿಟಿ ಜೊತೆ ಸಹಭಾಗಿತ್ವದಲ್ಲಿ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಯಾರಾದರೂ ಹೂಡಿಕೆದಾರರು ಮುಂದಾದರೆ ಅವಕಾಶ ನೀಡಲಾಗುವುದು ಎಂದರು. ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ 3.75 ಕೋಟಿಯಿಂದ 4 ಕೋಟಿ ಹೂಡಿಕೆ ಅಗತ್ಯವಿದೆ. ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ 4ರಿಂದ 5 ಹೂಡಿಕೆದಾರರು ಖಾಸಗಿ- ಸಾರ್ವಜನಿಕ ರಂಗದ ಸಹಭಾಗಿತ್ವದಡಿ ವಿದ್ಯುತ್ ಉತ್ಪಾದನೆಗೆ ಉತ್ಸಾಹ ತೋರುತ್ತಿದ್ದಾರೆ ಎಂದು ವಿವರಿಸಿದರು.

ರೈತರಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಜನಪ್ರಿಯಗೊಳಿಸಲು ಮಾಧ್ಯಮಗಳ ನೆರವು ಪಡೆಯಲಾಗುವುದು ಎಂದ ಅವರು, ಈ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರದ ಸಚಿವನಾಗಿ ಗರಿಷ್ಠ ಪ್ರಯತ್ನ ಮಾಡಲಿದ್ದೇನೆ ಎಂದು ತಿಳಿಸಿದರು.

ಜಿಲ್ಲೆಯ ಆರು ಶಾಸಕರು ಪಕ್ಷಭೇದ ಮರೆತು ಜಿಲ್ಲೆಗೆ ಅವಶ್ಯಕ ಯೋಜನೆಗಳ ಜಾರಿಗೆ ಶ್ರಮಿಸಬೇಕಿದೆ. ರಾಜಕಾರಣ ಮಾಡಲು ಹತ್ತಾರು ವಿಷಯ ಇರುತ್ತದೆ. ಆದರೆ, ಅಭಿವೃದ್ಧಿ ಯೋಜನೆ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಕಿವಿಮಾತು ಹೇಳಿದರು. ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಹಿರೇಮನಿ, ವಿಭಾಗ ಸಹಪ್ರಭಾರಿಗಳಾದ ಶ್ರೀ ಈಶ್ವರ್ ಸಿಂಗ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಶೋಕ್ ಹೊಕ್ರಾಣೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

]]>
https://iambjp.in/archives/343/feed 0
ರೈತರ ಆದಾಯ ದ್ವಿಗುಣಗೊಳಿಸಲು ಶ್ರಮ – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ https://iambjp.in/archives/326 https://iambjp.in/archives/326#respond Mon, 16 Aug 2021 08:48:48 +0000 https://iambjp.in/?p=326 ಬೆಂಗಳೂರು: ರೈತರ ಆದಾಯ ದ್ವಿಗುಣಗೊಳಿಸಲು ಪ್ರಧಾನಿಯವರು ಶ್ರಮಿಸುತ್ತಿದ್ದು, ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆ ಯೋಜನೆಗಳನ್ನು ಕೊನೆಯ ರೈತರ ತನಕ ತಲುಪಿಸಲು ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರ ನೇತೃತ್ವದಲ್ಲಿ ಶ್ರಮಿಸುವುದಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ಮಂಡ್ಯದಲ್ಲಿ ಇಂದು ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಾದ್ಯ ತೈಲ, ಎಣ್ಣೆಯಲ್ಲಿ ನಾವು ಸ್ವಾವಲಂಬನೆ ಸಾಧಿಸಬೇಕಿದೆ. ಶೇ 70 ಖಾದ್ಯ ತೈಲ ಬೇರೆ ದೇಶಗಳಿಂದ ಬರುತ್ತಿದೆ. ಟ್ರ್ಯಾಕ್ಟರ್, ಟಿಲ್ಲರ್ ಸಬ್ಸಿಡಿಯಲ್ಲಿ ನೀಡುವುದು, ಬಾಡಿಗೆಯಲ್ಲಿ ಯಂತ್ರೋಪಕರಣ ಒದಗಿಸುವುದು, ಕೃಷಿ ಸಿಂಚಾಯಿ ಯೋಜನೆಗೆ ವಿಶೇಷವಾದ ಅನುಕೂಲತೆ, ರಸಗೊಬ್ಬರಕ್ಕೆ ಸಬ್ಸಿಡಿ, ಖಾದ್ಯ ತೈಲವನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ಸ್ವಾವಲಂಬಿತನ ಸಾಧಿಸಲಾಗುವುದು ಎಂದು ನುಡಿದರು.

ರಾಜ್ಯದಲ್ಲಿ ನಾಲ್ಕು ಸಚಿವರು ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಹಳ ಅದ್ಭುತವಾದ ಸ್ವಾಗತವನ್ನು ಮಂಡ್ಯ ಮತ್ತು ಮದ್ದೂರಿನ ಜನರು ನನಗೆ ನೀಡಿದ್ದಾರೆ ಎಂದು ವಿವರಿಸಿದರು.

ದೇಶದಾದ್ಯಂತ ನೂತನ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ಆರಂಭವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಸಮುದಾಯ, ಮಹಿಳೆಯರಿಗೆ ಶ್ರೀ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟದಲ್ಲಿ ಆದ್ಯತೆ ಕೊಡಲಾಗಿದೆ ಎಂದು ತಿಳಿಸಿದರು. ಅತ್ಯಂತ ಹಿಂದುಳಿದ ಪ್ರದೇಶದ ರೈತನ ಮಗಳಾದ ತಮಗೆ ಸಚಿವ ಸ್ಥಾನ ನೀಡಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು.

ಮಂಡ್ಯದ ಸಕ್ಕರೆ- ಬೆಲ್ಲ ರಫ್ತು ಮಾಡಲು ಉತ್ತೇಜನ ಕೊಡಲಾಗುವುದು. ಕೋವಿಡ್ ಸಂದರ್ಭದಲ್ಲಿ ಹಲವಾರು ದೇಶಗಳಲ್ಲಿ ಆಹಾರದ ಕೊರತೆ ಕಾಡಿತ್ತು. ಆದರೆ, ಭಾರತವು ಆಹಾರದ ಸಮಸ್ಯೆ ಎಸುರಿಸಲಿಲ್ಲ. ರೈತರ ಪರಿಶ್ರಮದ ಪರಿಣಾಮವಾಗಿ ಭಾರತದ ಎಲ್ಲರಿಗೂ ಆಹಾರ ಸಮಸ್ಯೆ ಕಾಡಲಿಲ್ಲ. ಎಲ್ಲರಿಗೂ ಆಹಾರ ಲಭಿಸಿದೆ ಎಂದು ವಿಶ್ಲೇಷಿಸಿದರು.

ರೈತರಿಗೆ ಹೆಚ್ಚು ಅನುಕೂಲ ಮಾಡುವ ಸಂಕಲ್ಪ ಕೇಂದ್ರದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರದ್ದಾಗಿದೆ. 1,23,000 ಕೋಟಿ ರೂಪಾಯಿಯನ್ನು ಕೃಷಿ ಇಲಾಖೆಗೆ ಈ ಸಾಲಿನ ಬಜೆಟ್‍ನಲ್ಲಿ ಮೀಸಲಿಡಲಾಗಿದೆ. ಸಂಶೋಧನೆ ಮತ್ತು ಶಿಕ್ಷಣಕ್ಕೆ 8,500 ಕೋಟಿ ರೂಪಾಯಿ ನೀಡಿದ್ದಾರೆ. ಇದು ರೈತರನ್ನು ಸಮರ್ಪಕವಾಗಿ ತಲುಪಲು ಪ್ರಯತ್ನಿಸುವುದಾಗಿ ತಿಳಿಸಿದರು.

ರೈತರ ಉನ್ನತಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಜೊತೆಗೂಡಿ ಕೆಲಸ ಮಾಡುವುದಾಗಿ ಅವರು ತಿಳಿಸಿದರು. ಮಹಿಳೆಯರ ಜೊತೆ ಗದ್ದೆ ನಾಟಿ ಮಾಡಿದರು. ಪಡಿತರ ಕೇಂದ್ರಕ್ಕೂ ಭೇಟಿ ನೀಡಿ ಪಡಿತರ ಸಕಾಲದಲ್ಲಿ ಲಭಿಸುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು.

ರಾಜ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ನಾರಾಯಣ ಗೌಡ, ಶಾಸಕರಾದ ಶ್ರೀ ಎಲ್.ನಾಗೇಂದ್ರ,. ವಿಭಾಗ ಪ್ರಭಾರಿಗಳಾದ ಶ್ರೀ ಮೈ.ವಿ.ರವಿಶಂಕರ್, ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ. ಜೆ. ವಿಜಯ ಕುಮಾರ್, ಮುಖಂಡರಾದ ಶ್ರೀ ಎ. ಮಂಜು. ಡಾ|| ಸಿದ್ದರಾಮಯ್ಯ, ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

]]>
https://iambjp.in/archives/326/feed 0