Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Warning: Cannot modify header information - headers already sent by (output started at /home3/buntss5v/iambjp.in/wp-includes/functions.php:6121) in /home3/buntss5v/iambjp.in/wp-includes/feed-rss2.php on line 8
Mangalore – I am BJP https://iambjp.in Making Bharat Vishwa Guru Wed, 18 Aug 2021 12:08:39 +0000 en-US hourly 1 https://wordpress.org/?v=6.8.1 https://iambjp.in/wp-content/uploads/2021/08/cropped-Smal-Logo-32x32.png Mangalore – I am BJP https://iambjp.in 32 32 ಬಂಟ್ವಾಳದ ಜನರಿಗೆ ಆರೋಗ್ಯ ಸೇವೆಯನ್ನು ನೀಡಲು ಸಂಚಾರಿ ಐಸಿಯು ಅಂಬ್ಯುಲೆನ್ಸ್ ಬಸ್ ಸೌಲಭ್ಯ ಪ್ರಾರಂಭಿಸಿದ ಶಾಸಕ ರಾಜೇಶ್ ನಾಯ್ಕ್ https://iambjp.in/archives/382 https://iambjp.in/archives/382#respond Wed, 18 Aug 2021 12:05:22 +0000 https://iambjp.in/?p=382 ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆಯನ್ನು ನೀಡಲು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು  KSRTC ಮತ್ತು ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸಂಚಾರಿ ಬಸ್ ಸೇವೆಯನ್ನು  ಶ್ರೀ ಕ್ಷೇತ್ರ ಪೊಳಲಿಯಿಂದ ಆರಂಭಿಸಿದ್ದಾರೆ.

5 ಬೆಡ್ ನ ಆಕ್ಸಿಜನ್ ಸೌಲಭ್ಯಗಳನ್ನು ಒಳಗೊಂಡ ಈ ಬಸ್ಸಿನಲ್ಲಿ KSRTC ಯ ಒಬ್ಬ ಚಾಲಕ ಹಾಗೂ ಆರೋಗ್ಯ ಇಲಾಖೆಯಿಂದ ಒಬ್ಬ ಡಾಕ್ಟರ್ ಮತ್ತು ಒಬ್ಬ ದಾದಿಯರಿದ್ದಾರೆ.

ವಾರದ 5 ದಿನ (ಸೋಮವಾರದಿಂದ ಶುಕ್ರವಾರ ವಾರದ ವರೆಗೆ ಸರಕಾರಿ ರಜಾ ದಿನ ಹೊರತುಪಡಿಸಿ) ದಿನಕ್ಕೆ ಒಂದು ಪಂಚಾಯತ್ ನಂತೆ ಪ್ರತಿ ಪಂಚಾಯತ್ ಮಟ್ಟಕ್ಕೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರ ದಲ್ಲಿ ಒಟ್ಟು 39 ಗ್ರಾಮ ಪಂಚಾಯತ್ ಗಳಿದ್ದು ಈ ವರೆಗೆ 23 ಗ್ರಾಮ ಪಂಚಾಯತ್ ಗಳಲ್ಲಿ 1500 ಕ್ಕೂ ಮಿಕ್ಕಿ ಜನರಿಗೆ ಈ ಬಸ್ಸಿನ ಸೇವೆಯನ್ನು ನೀಡಲಾಗಿದೆ.

ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪಂಚಾಯತ್ ವ್ಯಾಪ್ತಿಯ ನಿಗದಿ ಪಡಿಸಲಾದ ಒಂದು ಕಡೆಯಲ್ಲಿ ಇದರ ಮೂಲಕ ಸೇವೆ ನೀಡಲಾಗುತ್ತಿದೆ.

ಬೀಪಿ, ಶುಗರ್ ಹಾಗೂ ಸಾಮಾನ್ಯ ವೈದ್ಯಕೀಯ ಪರೀಕ್ಷೆ ನಡೆಸಿ ಮೆಡಿಸಿನ್ ನೀಡುವ ವ್ಯವಸ್ಥೆ ಇದ್ದ ಈ ಬಸ್ಸಿನಲ್ಲಿ ಇದೀಗ ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞರಾದ ಡಾ.ಪದ್ಮನಾಭ ಕಾಮತ್ ರವರ ಸಂಸ್ಥೆಯ ಮೂಲಕ ಇಸಿಜಿ ಯಂತ್ರ ಅಳವಡಿಸಿ ಇಂದಿನಿಂದ ಹೃದ್ರೋಗ ತಪಾಸಣೆಯನ್ನು ನಡೆಸಲಾಗುತ್ತದೆ.

]]>
https://iambjp.in/archives/382/feed 0
8 ನೇ ಪರಿಚ್ಛೇಧಕ್ಕೆ ತುಳು ಭಾಷೆಯನ್ನು ಸೇರ್ಪಡಿಸುವಂತೆ ಮುಖ್ಯಮಂತ್ರಿಗಳಿಗೆ ತುಳುವಿನಲ್ಲೇ ಮನವಿ ಮಾಡಿದ ಶಾಸಕ ಹರೀಶ್‌ ಪೂಂಜ https://iambjp.in/archives/233 https://iambjp.in/archives/233#respond Thu, 12 Aug 2021 12:17:50 +0000 https://iambjp.in/?p=233 ಮಂಗಳೂರು : ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರು ತುಳು ಭಾಷೆಯನ್ನು 8 ನೇ ಪರಿಚ್ಛೇಧಕ್ಕೆ ಸೇರಿಸುವಂತೆ ತುಳುವಿನಲ್ಲೇ ಮನವಿ ಮಾಡಿಕೊಂಡು ತುಳುನಾಡಿನ ಜನರ ಶ್ಲಾಘನೆ ಗಳಿಸಿದ್ದಾರೆ.

ಈ ಬಗ್ಗೆ ವಿಡಿಯೋವನ್ನು ಹರೀಶ್‌ ಪೂಂಜಾ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡು ” ಕರ್ನಾಟಕ ರಾಜ್ಯದ ಮುಖ್ಯಮಂತ್ರಿಲಾದ್ ಜವಾಬ್ಧಾರಿ ವಹಿಸೊಂಡಿ ಬೋಕ್ಕ ಸುರೂತ ಸರ್ತಿ ತುಳುನಾಡ್‌ಗ್ ಬತ್ತಿನ ಶ್ರೀ ಬಸವರಾಜ ಬೊಮ್ಮಾಯಿ ಮೆರೆಡ ನಮ್ಮ ಅಪ್ಪೆ ಬಾಷೆ ಆಯಿನ ತುಳು ಬಾಷೆಗ್ 8ನೆ ಪರಿಚ್ಛೇದದ ಮಾನಾದಿಗೆ ಒದಗಾದ್ ಕೊರೋಡು ಪಂಡ್ದ್ ಮಾನ್ಯ ಮುಖ್ಯಮಂತ್ರಿಲೆಡ ಬಿನ್ನ ಮಲ್ತೊಂಡೆ” ಎಂದು ಬರೆದುಕೊಂಡಿದ್ದಾರೆ.

ಶಾಸಕರ ಈ ನಡೆ ತುಳುನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸುತ್ತಿದ್ದಾರೆ. ಆದಷ್ಟು ಶೀಘ್ರವಾಗಿ ತುಳು ಭಾಷೆ 8ನೇ ಪರಿಚ್ಛೇಧಕ್ಕೆ ಸೇರ್ಪಡೆಯಾಗಲಿ.

]]>
https://iambjp.in/archives/233/feed 0
ಶಾಸಕ ಹರೀಶ್‌ ಪೂಂಜಾ ಸಾಧನೆ ತೆರೆದಿಟ್ಟ ಪ್ರತಾಪ್‌ಸಿಂಹ ನಾಯಕ್ https://iambjp.in/archives/209 https://iambjp.in/archives/209#respond Wed, 11 Aug 2021 08:51:30 +0000 https://iambjp.in/?p=209 ಬೆಳ್ತಂಗಡಿ : ಶಾಸಕರಾಗಿ ಹರೀಶ್ ಪೂಂಜ ಅವರು ಅಧಿಕಾರಕ್ಕೆ ಬಂದ ಮೂರೂ ವರ್ಷಗಳಲ್ಲಿ ತಾಲೂಕಿಗೆ ಅಪ್ಪಳಿಸಿದ‌ ನೆರೆ ಮತ್ತು ಕೋವಿಡ್‌ನ ಎರಡೂ ಅಲೆಯ ಹೊಡೆತದ ಮಧ್ಯೆಯೂ ಸರಕಾರದ ಅನುದಾನ ಬಳಸಿ, ತಾಲೂಕಿನ‌ ಜನತೆ ಮತ್ತು ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಮಾದರಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಿಸಿದ್ದಾರೆ. ನಿಷ್ಪಕ್ಷಪಾತತೆಯೊಂದಿಗೆ ಪ್ರತೀ 241 ಬೂತ್ ಮಟ್ಟದಲ್ಲೂ ಅಭಿವೃದ್ಧಿ ಆಗಿದ್ದು ತಾಲೂಕನ್ನು ಅಭಿವೃದ್ದಿಯಲ್ಲಿ ಅಧ್ಯಯನಾತ್ಮಕ ರೀತಿಯಲ್ಲಿ ರೂಪಿಸಿದ್ದಾರೆ. ಟೀಕಿಸುವವರಿಗೆ ಅಭಿವೃದ್ಧಿಯ ಮೂಲಕವೇ ಉತ್ತರ ನೀಡುತ್ತಿದ್ದಾರೆ  ಎಂದು ವಿಧಾನ ಪರಿಷತ್ತು ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.

ಬೆಳ್ತಂಗಡಿ ಸರಕಾರಿ ಪ್ರವಾಸಿ ಬಂಗಲೆಯಲ್ಲಿ ಮಂಗಳವಾರ ಭಾರತೀಯ ಜನತಾ ಪಾರ್ಟಿ‌ ಬೆಳ್ತಂಗಡಿ ಮಂಡಲದ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಂದಿಗ್ದ ಪರಿಸ್ಥಿತಿಯಲ್ಲೂ ಕೂಡ ತಾಲೂಕಿನಲ್ಲಿ ಅಭಿವೃದ್ಧಿಯ ವೇಗ ಕಡಿಮೆಯಾಗಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಜೊತೆ ಸೇರಿ‌ ಇಲ್ಲಿನ‌ ಯುವ ಶಾಸಕರು ‌ಪರಿಸ್ಥಿತಿ ಎದುರಿಸಿದ‌ ರೀತಿ‌ ಎಲ್ಲರಿಗೂ  ಮಾದರಿ. ಚಾರ್ಮಾಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆಯಿಂದ ತೊಂದರೆಯಾದಾಗ ಶ್ರೀ‌ಕ್ಷೇತ್ರ ಧರ್ಮಸ್ಥಳ ಹೆಗ್ಗಡೆಯವರನ್ನು,  ಉಜಿರೆಯ ಬದುಕು ಕಟ್ಟೋಣ ಬನ್ನಿ‌ ತಂಡದವರನ್ನೂ ಸೇರಿದಂತೆ ಸ್ವಯಂ ಸೇವಾ ಸಂಘದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ಅನುದಾನ, ಸ್ಥಳೀಯ ಸಂಪನ್ಮೂಲ ಬಳಸಿ ಅಲ್ಲಿನನವರ ಮನೆಗಳ ಪುನರ್ ನಿರ್ಮಾಣ,  ಕೃಷಿಯ ಮರುಸ್ಥಾಪನೆ ದೃಷ್ಟಿಯಲ್ಲಿ ವಿಶೇಷ ಪ್ರಯತ್ನ ಮಾಡಿದ್ದಾರೆ.‌ ಅವರ ಈ ಕಾರ್ಯವನ್ನು ಬಿಜೆಪಿ ಅಭಿನಂದನೆ ಸಲ್ಲಿಸುತ್ತದೆ ಎಂದರು.

ಶಾಸಕರು ತಾಲೂಕಿನಲ್ಲಿ ಅನುಷ್ಟಾನಿಸಿದ ಯೋಜನೆಗಳ ವ್ಯಾಪ್ತಿಯನ್ನು ನೋಡಿದರೆ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆಗೆ ಪರ್ಯಾಯವಾಗಿ ನೀರಿನ ಯೋಜನೆ ಮಾಡುವ ಉದ್ದೇಶದಿಂದ ಒಟ್ಟು ಪ್ರಯತ್ನ ಮಾಡಿದರ ಫಲವಾಗಿ ನೀರಾವರಿ ಯೋಜನೆಯ ಇತಿಹಾಸದಲ್ಲೇ ಅಪೂರ್ವವಾದದ್ದು. ತಾಲೂಕಿನಲ್ಲಿ ಆಗಿರುವ ಕಿಂಡಿ‌ ಅಣೆಕಟ್ಟುಗಳು, ಜಿಲ್ಲೆಯ ಇತಿಹಸದಲೇ ಮೊದಲ‌ ಬಾರಿಗೆ ಮಂಜೂರಾಗಿರುವ ಏತ ನೀರಾವರಿ ಯೋಜನೆಯಿಂದ ನೀರಿನ‌ ಅಂತರ್ಜಲ‌ ಮಟ್ಟ ಏರಿಸುವ ಕೆಲಸವಾಗಿದೆ. ತಾಲೂಕಿನಲ್ಲಿ 28 ಕಿಂಡಿ ಅಣೆಕಟ್ಟುಗಳು ಪೂರ್ತಿ ಯಾಗುತ್ತಿದೆ. ಇದರಿಂದ 94 ಕಿ.ಮೀ ನೀರು ನಿಲ್ಲಿಸುವ ಪ್ರಯತ್ನ ಆಗಿದೆ.

ದ.ಕ‌ ಜಿಲ್ಲೆಯ 240 ಕೋಟಿ ರೂ.‌ಅನುದಾನದಲ್ಲಿ ಏತ‌ನೀರಾವರಿ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಮಂಜೂರಾತಿಯಾಗಿದ್ದು, ಇದರಿಂದಾಗಿ 300 ಕಿ.ಮೀ ವ್ಯಾಪ್ತಿಯಲ್ಲಿ ನೀರಿನ‌ ಅಭಾವ‌ ನೀಗಿಸುವ ವಾತಾವರಣ ನಿರ್ಮಾಣವಾಗುತ್ತದೆ.‌ ಅಂತರ್ಜಲ ಮಟ್ಟ ಏರುತ್ತದೆ.‌ ಕೊಳವೆಬಾವಿ ಸಮಸ್ಯೆಗಳಿಗೆ ಉತ್ತರ ದೊರೆಯುತ್ತದೆ.‌ ಕೇಂದ್ರ ಸರಕಾರದ ಜಲಜೀವನ್ ಮೆಷಿನ್ ನಡಿ ಪ್ರತೀ ಮನೆಗೆ ನಳ್ಳಿ ನೀರು ಒದಗಿಸುವ ಕನಸಿನ ಯೋಜನೆಯೂ ಪೂರ್ಣವಾಗುತ್ತದೆ ಎಂದರು.
ಈ ಹಿಂದೆ ಸರಕಾರಗಳು ವಿಶ್ವಬ್ಯಾಂಕ್ ನಿಂದ ಸಾಲ ಪಡೆದು ತಂದ ಕೆಲವು ನೀರಾವರಿ ಯೋಜನೆಗಳು ನೀರಿನ‌ಲಭ್ಯತೆ ಇಲ್ಲದೆ ಫಲ ನೀಡದ  ಇತಿಹಾಸ ಇರುವಾಗ ಈ ಕಿಂಡಿ‌ ಅಣೆಕಟ್ಟು ಮತ್ತು ಏತನೀರಾವರಿ ಯೋಜನೆಗಳು ಮಾದರಿಯಾಗಿದೆ.‌

ಶಿಕ್ಷಣ ಕ್ಷೇತ್ರದಲ್ಲೂ 5.50 ಕೋಟಿ ರೂ. ಎಂ.ಆರ್.ಪಿ.ಎಲ್ ಅನುದಾನದಲ್ಲಿ 55 ಸರಕಾರಿ ಶಾಲೆಗಳಲ್ಲಿ ವ್ಯವಸ್ಥಿತವಾದ ಶೌಚಾಲಯದ ನಿರ್ಮಿಸಿರುವುದು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಜನರಿಗೆ ಆಸಕ್ತಿ ಮೂಡುವ ರೀತಿಯ ವಿಚಾರವಾಗಿದೆ. ಒಟ್ಟಿನಲ್ಲಿ ತಾಲೂಕನ್ನು ಅಭಿವೃದ್ಧಿಯ ದೃಷ್ಟಿಯಲ್ಲಿ ಓರ್ವ ಶಾಸಕ ಏನು ಮಾಡಬಹುದು ಎಂಬುದನ್ನು ಅಧ್ಯಯನ‌ ಮಾಡುವ ರೀತಿಯಲ್ಲಿ ರೂಪಿಸಿದ್ದಾರೆ.‌

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮಾದರಿಯಲ್ಲಿ ಗ್ರಾಮಾಂತರದ ರಸ್ತೆಯನ್ನೂ 18 ಅಡಿ ಮಾಡಿ, ಎರಡು ವಾಹನ ಹಾದುಹೋಗುವ ರೀತಿಯಲ್ಲಿ ಸರ್ವ ಋತು ರಸ್ತೆಯಾಗಿ ಮಾಡಿದ್ದಾರೆ.‌ ಉತ್ತಮ ಕಲ್ಪನೆ, ಕನಸು ಇದ್ದಾಗ ಹೇಗೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದು ತೋರಿಸಿದ್ದಾರೆ. ಒಟ್ಟಾರೆಯಾಗಿ ತಾಲೂಕನ್ನು ಪ್ರವಾಸೋದ್ಯಮ ರೀತಿಯಲ್ಲಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ.

ಏತ ನೀರಾವರಿಯಿಂದ ಎಂಟು ಗ್ರಾಮಗಳಿಗೆ ಪ್ರಯೋಜನದ ಜೊತೆಗೆ ಮುಗೆರಡ್ಕ -ಉಪ್ಪಿನಂಗಡಿ ಹೈಬೇ ಸೇರಿಸುವ ಕಾರ್ಯ,  ಗುರುವಾಯನಕೆರೆ ಕೆರೆಯನ್ನು ಪ್ರವಾಸೋದ್ಯಮ ದೃಷ್ಟಿಯಲ್ಲಿ ಅಭಿವೃದ್ಧಿ ಪಡಿಸಲು 15 ಕೋಟಿ ರೂ.‌ ಯೋಜನೆ ಅನುಷ್ಠಾನಕ್ಕೆ ತರುತ್ತಿದ್ದಾರೆ.ನಗರದ ಪ್ರಮುಖ ಭಾಗದಲ್ಲಿ ಸಾಲುಮರ ತಿಮ್ಮಕ್ಕ ಪಾರ್ಕ್ ಹೆಸರಿನಲ್ಲಿ 28 ಎಕ್ರೆ ಜಾಗದಲ್ಲಿ ಪ್ರವಾಸೋದ್ಯಮ ಕೇಂದ್ರ ಆಗುವ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ತರುತ್ತಿದ್ದಾರೆ‌. ಉಜಿರೆ ನಿನ್ನಿಕಲ್ಲು ಬಳಿ 100 ಎಕ್ರೆ ಸ್ಥಳವನ್ನು ಕೈಗಾರಿಕಾ ಪಾರ್ಕ್ ಮಾಡುವಲ್ಲಿ ದೂರಗಾಮಿ ಯೋಜನೆ ರೂಪಿಸಿದ್ದು ಅದು ಮಂಜೂರಾಗುವ ಹಂತಕ್ಕೆ ಬಂದು ನಿಂತಿದೆ. ಪ್ರತೀ‌ ಪಂಚಾಯತ್ ಗಳಲ್ಲೂ ತ್ಯಾಜ್ಯ ವಿಲೇವಾರಿ‌ ದೃಷ್ಟಿಯಲ್ಲಿ ಕೆಲಸ ಹಾಗೂ  ತಾಲೂಕಿನ‌ ಎಲ್ಲಾ ತ್ಯಾಜ್ಯಗಳನದನೂ ವಿಲೇ ವಾರಿ ಮಾಡುವ ದೃಷ್ಟಿಯಿಂದ ಸಂಪೂರ್ಣ ನೈರ್ಮಲ್ಯ ದೊಂದಿಗೆ  ಸಂಜೆ ವೇಳೆ ವಾಕಿಂಗ್ ಮಾಡುವ ರೀತಿಯಲ್ಲಿ ಸಂಸ್ಕರಣ ಘಟಕ ನಿರ್ಮಿಸುವ ಉದ್ದೇಶ ಅವರ ಪರಿಕಲ್ಪನೆ ಯಲ್ಲಿದೆ. ಬೆಳ್ತಂಗಡಿ ಮಾದರಿ‌ ಶಾಲೆಯನ್ನು ಕನ್ನಡ ಕಲಿಯುವ ಪ್ರೇರಣೆ ದೊಡ್ಡ ರೂಪವನ್ನು ಕೊಡುವ ದೊಡ್ಡ ಉದ್ದೇಶದಿಂದ ಮಹತ್ವಪೂರ್ಣವಾಗಿ  ಕಟ್ಟಲು ಕನಸು ಇಟ್ಟುಕೊಂಡಿದ್ದಾರೆ. ಒಟ್ಟಾರೆಯಾಗಿ ತಾಲೂಕಿನಲ್ಲಿ ಅಭಿವೃದ್ದಿ‌ ಒಂದೇ ನಮ್ಮ ಮಂತ್ರ ರೀತಿಯಲ್ಲಿ ಕೆಲಸ‌ ಮಾಡುತ್ತಿದ್ದಾರೆ. ಕೇಂದ್ರದ ಯೋಜನೆಗಳನ್ನು ಅಭಿವೃದ್ಧಿಯ ಹಿನ್ನೆಲೆಯಲ್ಲಿ‌ ಇನ್ನಷ್ಟು ಹೊಸ‌ಯೋಚನೆ, ಯೋಜನೆಗಳನ್ನು ತರುವ ದೃಷ್ಟಿಯಲ್ಲಿ ವಿರೋಧ ಪಕ್ಷದವರಿಗೆ ಚರ್ಚೆಗೆ ಅವಕಾಶವೇ ಇಲ್ಲದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ವಿರೋಧ ಪಕ್ಷಗಳು  ಚರ್ಚೆ ಮಾಡಬೇಕಾದ ಜಾಗದಲ್ಲಿ ಚರ್ಚೆಗಳನ್ನು ಮಾಡದೆ ಬೀದಿ ಬೀದಿಯಲ್ಲಿ ನಿಂತು ಚರ್ಚೆ ಮಾಡುವುದು ಸರಿಯಲ್ಲ.  ಪ್ರತಿಪಕ್ಷ ಎಂಬ ಕಾರಣಕ್ಕೆ ಮಾತನಾಡುತ್ತಾರೆಯೇ ಹೊರತು ಅಭಿವೃದ್ಧಿ ಪೂರಕವಾಗಿ ಚರ್ಚಿಸದೇ ಇರುವುದು ಖೇದಕರ. ಈ ರೀತಿಯಾಗಿ ಮೊಸರಿನಲ್ಲಿ ಕಲ್ಲು ಹುಡುಕುವವರಿಗೆ ಸಮಾಧಾನ ಹೇಳಲು ನಮ್ಮಿಂದ ಸಾಧ್ಯವಿಲ್ಲ. ಯಾರೇ ಆಗಲಿ ‌ಮಾಡಿದ ಕೆಲಸ ಹೇಳುವುದರಲ್ಲಿ ಸಣ್ಣತನ ಅಲ್ಲ.‌ಒಳ್ಳೆಯ ಕೆಲಸ ಮಾಡಿದರೆ ಕನಿಷ್ಠ ಪಕ್ಷ ಒಳ್ಳೆಯ ಮಾತನ್ನಾದರೂ ಹೇಳಬಹುದು. ಸುಮ್ಮನೆ ಟೀಕಿಸಿ ಅಭಿವೃದ್ಧಿಯ ವೇಗ ಕುಂಠಿತಗೊಳಿಸಬೇಡಿ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಪ್ರತ್ಯುತ್ತರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ‌ ಶಾಸಕ‌ ಪ್ರಭಾಕರ ಬಂಗೇರ, ಬಿಜೆಪಿ ಮಂಡಲದ‌ ಅಧ್ಯಕ್ಷ ಜಯಂತ ಕೋಟ್ಯಾನ್, ಮಾಜಿ‌ ಅಧ್ಯಕ್ಷರುಗಳಾದ ಬಾಲಕೃಷ್ಣ ವಿ ಶೆಟ್ಟಿ ಸವಣಾಲು ಮತ್ತು ಪೂವಾಜೆ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.

]]>
https://iambjp.in/archives/209/feed 0
ಮಂಗಳೂರು ರಥಬೀದಿಯಲ್ಲಿರುವ ಶ್ರೀ ಮಹಮ್ಮಾಯಿ ದೇವಸ್ಥಾನದ ಕೆರೆ ರೂ. 45.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ – ಶಾಸಕ ವೇದವ್ಯಾಸ್‌ ಕಾಮತ್ https://iambjp.in/archives/146 https://iambjp.in/archives/146#respond Tue, 10 Aug 2021 09:43:14 +0000 https://iambjp.in/?p=146 ಮಂಗಳೂರು :  ನಗರದ ರಥಬೀದಿಯಲ್ಲಿರುವ ಶ್ರೀ ಮಹಮ್ಮಾಯಿ ದೇವಸ್ಥಾನದ ಕೆರೆಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 45.50 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣದ ಶಾಸಕರಾದ ಡಿ ವೇದವ್ಯಾಸ್ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಇಂದು ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಶ್ರೀಮತಿ ಪೂರ್ಣಿಮಾ, ಶ್ರೀಮತಿ ಜಯಶ್ರೀ ಕುಡ್ವಾ, ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ದಕ್ಷಿಣ ಮಂಡಲದ ಉಪಾಧ್ಯಕ್ಷರಾದ ರಮೇಶ್ ಹೆಗ್ಡೆ, ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಭಾಸ್ಕರಚಂದ್ರ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ  ಪ್ರಾಧಿಕಾರದ ಅಧಿಕಾರಿಗಳು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

]]>
https://iambjp.in/archives/146/feed 0