Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Warning: Cannot modify header information - headers already sent by (output started at /home3/buntss5v/iambjp.in/wp-includes/functions.php:6121) in /home3/buntss5v/iambjp.in/wp-includes/feed-rss2.php on line 8
MoS Agriculture – I am BJP https://iambjp.in Making Bharat Vishwa Guru Sun, 05 Sep 2021 07:49:03 +0000 en-US hourly 1 https://wordpress.org/?v=6.8.1 https://iambjp.in/wp-content/uploads/2021/08/cropped-Smal-Logo-32x32.png MoS Agriculture – I am BJP https://iambjp.in 32 32 ಯಾವುದೇ ಯೋಜನೆಯ ರುವಾರಿ ಕರ್ನಾಟಕ : ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ https://iambjp.in/archives/507 https://iambjp.in/archives/507#respond Sun, 05 Sep 2021 07:49:03 +0000 https://iambjp.in/?p=507 ಬೆಂಗಳೂರು : ದೇಶದ ಯಾವುದೇ ಯೋಜನೆಯಾಗಲೀ ಅದರ ರುವಾರಿ ಕರ್ನಾಟಕ ಎಂದರೆ ಅದು ಕರ್ನಾಟಕ.ಕಿಸಾನ್ ಬಜೆಟ್ ಮಂಡಿಸಿದ ಮೊದಲ ಹೆಗ್ಗಳಿಕೆ ಮಾಜಿ ಸಿಎಂ ಯಡಿಯೂರಪ್ಪ ಅವರದ್ದಾಗಿದೆ ಎಂದು ಕೇಂದ್ರ ಕೃಷಿ ಕಲ್ಯಾಣ ರೈತ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಶ್ಲಾಘಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕೃಷಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಸರ್ಕಾರದಿಂದ ಹಮ್ಮಿಕೊಂಡಿದ್ದ ರೈತ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪ್ರತಿವರ್ಷ ಸಹಾಯಧನ‌ ವಿದ್ಯಾರ್ಥಿವೇತನ ನೀಡುವ ದೇಶದ ಮೊದಲ ಯೋಜನೆ ವಿದ್ಯಾನಿಧಿ ಯೋಜನೆ.ಶೇ.75ರಷ್ಟು ಜನ ಮಳೆಯಾಧಾರಿತ ಕೃಷಿ ಮಾಡುತ್ತಿದ್ದು ಕಿಸಾನ್ ಸಮ್ಮಾನ್ ಯೋಜನೆ, ಸಾವಯವ ಹನಿನೀರಾವರಿ ಸೇರಿದಂತೆ ಸಣ್ಣ ರೈತನ ಕಲ್ಯಾಣಕ್ಕಾಗಿ ಬಾಡಿಗೆಗೆ ಕೃಷಿ ಯಂತ್ರೋಪಕರಣ, ಆಹಾರ ಉತ್ಪನ್ನ ಆಹಾರ ಮಾರುಕಟ್ಟೆ ಸೇರಿದಂತೆ ಕೃಷಿ ಉತ್ಪಾದಕರ ಸಂಘದ ಮೂಲಕ ದೇಶದ ಸಣ್ಣ ರೈತ ಲಾಭದಾಯಕನಾಗಲು ಕೃಷಿ ಉದ್ಯಮಿಯಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.

ತೋಟಗಾರಿಕೆ ಇಲಾಖೆಯೂ ಕೂಡ ಕೃಷಿಯಂತೆ ಕೃಷಿ ವಿಶ್ವವಿದ್ಯಾಲಯವಾಗಬೇಕು. ಕಟ್ಟಕಡೆಯ ರೈತನನ್ನು ಕೂಡ ಯೋಜನೆಗಳು ತಲುಪಬೇಕು ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರದ ಸಚಿವರಾದ ನರೇಂದ್ರ ಸಿಂಗ್ ತೋಮರ್, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸಚಿವರಾದ ಬಿ.ಸಿ.ಪಾಟೀಲ್, ಮುನಿರತ್ನ, ಬಿ.ಸಿ ನಾಗೇಶ್ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

]]>
https://iambjp.in/archives/507/feed 0
2023 ರ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ https://iambjp.in/archives/449 https://iambjp.in/archives/449#respond Fri, 27 Aug 2021 12:26:39 +0000 https://iambjp.in/?p=449 ಬೆಂಗಳೂರು : 2023 ರ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಲಾಗುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯಲು ಸಾಕಷ್ಟು ವಾತಾವರಣ ಹೆಚ್ಚಾಗಿದೆ. 2023 ರ ವೇಳೆಗೆ ಕರ್ನಾಟಕ ಸಿರಿಧಾನ್ಯ ರಫ್ತು ಮಾಡುವಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲನೇ ರಾಜ್ಯವಾಗಬೇಕು. ಎಲ್ಲಾ ದೇಶಗಳು ಈ ಪ್ರಸ್ತಾವನೆಯನ್ನು ಎಲ್ಲಾ ದೇಶಗಳು ಒಪ್ಪಿಕೊಂಡಿವೆ ಎಂದು ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.

ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ಸಿರಿಧಾನ್ಯಕ್ಕೆ ಹೆಚ್ಚು ಒತ್ತು ನೀಡಲು ಹೆಚ್ಚು ಬೆಳೆಯಲು ಉತ್ತಮ ವಾತಾವರಣವಿದೆ. ಭಾರತದ ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ದಕ್ಷಿಣ ಭಾರತದ ಎಲ್ಲಾ ತೋಟಗಾರಿಕಾ ಮತ್ತು ಆಹಾರಧಾನ್ಯಗಳ ರಫ್ತುದಾರರನ್ನು ಸೇರಿಸಿ ಸೆಪ್ಟೆಂಬರ್ 22 ರಂದು ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ರಫ್ತುದಾರರು ಇದರಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯದ ಕೃಷಿ ಇಲಾಖೆ ಮಾಡಿದ ಮೊಬೈಲ್ ಬೆಳೆ ಆಪ್ ಸಮೀಕ್ಷೆ ಇಡೀ ದೇಶಕ್ಕೆ ಮಾದರಿಯಾಗಿದೆ.ಒಂದು ಜಿಲ್ಲೆಒಂದು ಉತ್ಪನ್ನ ಯೋಜನೆಗೆ ಒತ್ತು ನೀಡಿ ಗುಣಮಟ್ಟದ ಉತ್ಪಾದನೆ, ಸಂಗ್ರಹಣೆ, ಮಾರ್ಕೆಟಿಂಗ್, ಮಾರಾಟ ಮಾಡಲು ಪ್ರತಿಯೊಂದು ಜಿಲ್ಲೆಯಲ್ಲಿಯೂ ಕ್ಲಸ್ಟರ್ ಮಾಡಲು ನಿರ್ಧರಿಸಲಾಗಿದೆ ಎಂದರು.

ರೈತ ಕೃಷಿಯಲ್ಲಿ ಮುಂದುವರೆದು ಲಾಭದಾಯಕವಾಕಬೇಕು. ಕೃಷಿ ಜೀವನಾಧಾರ ಕಸುಬಾಗಿದ್ದು, ಒಟ್ಟು ಕೃಷಿಕರಲ್ಲಿ ಶೇ.80 ರಷ್ಟು ಸಣ್ಣ ಮತ್ತು ಮಧ್ಯಮ ಕೃಷಿಕರಿದ್ದಾರೆ. ಈ ಸಣ್ಣ ಮತ್ತು ಮಧ್ಯಮ ರೈತರು ನಗರಕ್ಕೆ ವಲಸೆ ಬರುವುದು ಹೆಚ್ಚಾಗುತ್ತಿದ್ದು, ಕಳೆದ 5-6 ವರ್ಷಗಳಲ್ಲಿ ಕೃಷಿಕನ ಬದುಕಿಗೆ ಒತ್ತು ಕೊಡಲು ಹಾಗೂ ರೈತನನ್ನು ರೈತರ ಆದಾಯ ಇಮ್ಮಡಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ.

ಮೋದಿ ನೇತೃತ್ವದಲ್ಲಿ 1.31 ಸಾವಿರ ಕೋಟಿ ಈ ವರ್ಷ ಕೃಷಿ ಬಜೆಟ್ ಆಗಿದೆ. ಇದನ್ನು ಹೊರತುಪಡಿಸಿ ಕೃಷಿ ಮೂಲಭೂತ ನಿಧಿ ಅಡಿಯಲ್ಲಿ 1 ಲಕ್ಷ ಕೋ.ರೂ.ಹೆಚ್ಚುವರಿ ಹಣವನ್ನು ಕೊಯ್ಲೋತ್ತರ ಉತ್ಪಾದನೆಗೆ ಮಾರ್ಕೆಟಿಂಗ್ ಗೆ ಕೇಂದ್ರ ಹಣ ತೊಡಗಿಸುತ್ತಿದೆ. ಸಣ್ಣ ರೈತ ಕೃಷಿ ಜೊತೆ ಮಿಶ್ರ ಬೆಳೆ ಬೆಳೆದ ರೈತ ಲಾಭದಾಯಕವಾಗಿದೆ. ಡೈರಿ, ಹಸು ಸಾಕಾಣೆ, ಪಶುಸಂಗೋಪನೆ, ಅಗ್ರೋ ಫಾರೆಸ್ಟ್ರಿ, ಮೀನುಗಾರಿಕೆ ಸೇರಿದಂತೆ ಹಲವಾರು ಉಪಕಸುಬುಗಳಿಗೆ ಸರ್ಕಾರ ನೆರವು ನೀಡುತ್ತಿದೆ.ಎಲ್ಲಾ ರಾಜ್ಯ ಒಗ್ಗೂಡಿ ರೈತನನ್ನು ಲಾಭದಾಯಕನನ್ನಾಗಿಸಲು ಕೇಂದ್ರ ಕಾರ್ಯಕ್ರಮ ಹಮ್ಮಿಕೊಂಡಿದೆ. ಮೀನುಗಾರಿಗೆ, ಪಶುಸಂಗೋಪನೆ ಸೇರಿದಂತೆ ಬೇರೆಬೇರೆ ಕಸುಬುಗಳಿಗೆ ಒತ್ತು ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಾಯ ಮಾಡುತ್ತಿವೆ. ಎಲ್ಲಾ ಸಣ್ಣ ರೈತರನ್ನು ಒಗ್ಗೂಡಿಸಲು ಎಫ್.ಪಿ.ಒ (ಕೃಷಿ ಉತ್ಪಾದಕರ ಸಂಘ) 10 ಸಾವಿರ ಕೃಷಿ ಉತ್ಪಾದಕರ ಸಂಘ ಮಾಡಲು ಕೇಂದ್ರ ಒತ್ತು ನೀಡಲು ನಿರ್ಧರಿಸಿದೆ.750 ಎಫ್.ಪಿ.ಓಗಳನ್ನು ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಾಗಲು ಸಿಎಂ ಬೊಮ್ಮಾಯಿ ಕರೆ ನೀಡಿದ್ದಾರೆ. ಅದರಂತೆ ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಎಫ್.ಪಿ.ಓ ಮಾಡಲು ಉದ್ದೇಶಿಸಲಾಗಿದೆ.

ಪೆಟ್ರೋಲ್­ಗೆ ಪರ್ಯಾಯವಾಗಿ ಎಥೆನಾಲ್ ಬಳಸಬಹುದಾಗಿದ್ದು, ಕರ್ನಾಟಕದಲ್ಲಿ ಮಂಡ್ಯ ಸೇರಿದಂತೆ ಬಹುತೇಕ ನೀರಾವರಿ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದು, ಸಕ್ಕರೆಯಿಂದ ಎಥಿನಾಲ್ ತಯಾರಿಸಲು ಒತ್ತು ನೀಡಲಾಗುತ್ತಿದ್ದೆ. 9. 5 ಬಿಲಿಯನ್ ಮೆಟ್ರಿಕ್ ಟನ್ ಸಕ್ಕರೆಯಿಂದ ಎಥಿನಾಲ್ ಮಾಡಲಾಗಿದೆ. ಅದರಂತೆ ಗೋಧಿ ಸೇರಿದಂತೆ ಬಹುತೇಕ ಧಾನ್ಯಗಳಿಂದಲೂ ಎಥಿನಾಲ್ ತಯಾರಿಸಬಹುದಾಗಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರ ಅಭಿವೃದ್ಧಿ ಪಡಿಸಿರುವ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು.ಆಂಧ್ರ ಪ್ರದೇಶದಲ್ಲಿ ಕೃಷಿ ಭರವಸಾ ಯೋಜನೆ ಜಾರಿ ಮಾಡಿದ್ದಾರೆ. ತಮಿಳುನಾಡಿನಲ್ಲಿ ತರಕಾರಿ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಈ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕು. ರಫ್ತು ಉದ್ಯಮಕ್ಕೆ ಉತ್ತೇಜನ ನೀಡಲು ಕ್ರಮ ವಹಿಸಲಾಗುವುದು. ಒಳನಾಡಿನ ಮೀನುಗಾರಿಕೆಗೆ ಉತ್ತೇಜನ. ರೇಷ್ಮೆ ಬೆಳೆ ಉತ್ತೇಜನ, ರೇಷ್ಮೆಗೆ ಈ ಮಾರುಕಟ್ಟೆ ಜಾರಿಗೆ ತರಲು ತೀರ್ಮಾನ. ಶೇ 50 ರಷ್ಟು ರೈತರು ಇ ಪೇಮೆಂಟ್ ವ್ಯವಸ್ಥೆಗೆ ಅಳವಡಿಸಿಕೊಂಡಿದ್ದಾರೆ.57.ಕೋಟಿ ರೈತರಿಗೆ ನೇರವಾಗಿ ಅವರ ಅಕೌಂಟ್ ಗೆ ಬೆಳೆ ವಿಮೆ ಹಣ ತಲುಪಿಸಲಾಗಿದೆ. ದೇಶ ಇತಿಹಾಸದಲ್ಲಿ 320 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಲಾಗಿದೆ. ಫುಡ್ ಪ್ರೊಸೆಸ್ಸಿಂಗ್ ಆಹಾರ ರಫ್ತು ಮಾಡಲು ಕೈಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕ ವಿಂಗ್ ಮಾಡಲು ಮನವಿ ಮಾಡಿದ್ದೇನೆ. ಅವರೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.

ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಎನ್ ಆರ್.ಇಜಿ ಮೂಲಕ ಜಾರಿಗೆ ಆದ್ಯತೆ ನೀಡಲಾಗುವುದು. ಎಫ್‌ಪಿಒಗಳ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುವುದು. ಎಫ್.ಪಿಒ 25 ವಿವಿಧ ರೀತಿಯ ಕ್ರಮಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಪ್ರವಾಹ ಪರಿಹಾರವಾಗಿ ಎನ್ ಡಿ ಆರ್ ಎಫ್ ಮೂಲಕ 630 ಕೋಟಿ ಬಿಡುಗಡೆ ಮಾಡಲಾಗಿದೆ. ಕೊರೊನಾದಿಂದ ಎರಡು ವರ್ಷ ಹಿನ್ನಡೆಯಾಗಿದೆ. ಕೊರೊನಾ.ಕಾರಣದಿಂದ ಸ್ವಲ್ಪ ಮುಂದೂಡಿಕೆಯಾಗಿದೆ.ರಸಗೊಬ್ಬರ ಬೆಲೆ ಹೆಚ್ಚಳವಾದರೂ ಕೇಂದ್ರ ಸರ್ಕಾರ ಸಬ್ಸಿಡಿ ಕೊಡುತ್ತಿದೆ. ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದ ಮೂರು ಬಿಲ್ ಗಳ ಬಗ್ಗೆ ಬಹಳ ಸ್ಪಷ್ಟವಿದೆ. ಮೂವತ್ತು ವರ್ಷಗಳಿಂದ ಅನೇಕ ಸಮಿತಿಗಳು ನೀಡಿರುವ ವರದಿಗಳ ಆಧಾರದಲ್ಲಿ ಕಾಯ್ದೆಗಳನ್ನು ಜಾರಿಗೆ ಜಾರಿಗೆ ತರಲಾಗಿದೆ. ಸ್ವಾಮಿನಾಥನ್ ವರದಿ ಪ್ರಕಾರ ಎಪಿಎಂಸಿಯಲ್ಲಿ ರೈತರಿಗೆ ಅನ್ಯಾಯಗುತ್ತಿದೆ ಎಂದು ಹೇಳಿದ್ದಾರೆ. ರೈತರ ಜೊತೆ ಕೇಂದ್ರ ಸರ್ಕಾರ ಮಾತುಕತೆಗೆ ಸಿದ್ಧವಿದೆ ಎಂದರು.

]]>
https://iambjp.in/archives/449/feed 0
ರೈತರ ಆದಾಯ ದ್ವಿಗುಣಗೊಳಿಸಲು ಶ್ರಮ – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ https://iambjp.in/archives/326 https://iambjp.in/archives/326#respond Mon, 16 Aug 2021 08:48:48 +0000 https://iambjp.in/?p=326 ಬೆಂಗಳೂರು: ರೈತರ ಆದಾಯ ದ್ವಿಗುಣಗೊಳಿಸಲು ಪ್ರಧಾನಿಯವರು ಶ್ರಮಿಸುತ್ತಿದ್ದು, ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆ ಯೋಜನೆಗಳನ್ನು ಕೊನೆಯ ರೈತರ ತನಕ ತಲುಪಿಸಲು ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರ ನೇತೃತ್ವದಲ್ಲಿ ಶ್ರಮಿಸುವುದಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ಮಂಡ್ಯದಲ್ಲಿ ಇಂದು ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಖಾದ್ಯ ತೈಲ, ಎಣ್ಣೆಯಲ್ಲಿ ನಾವು ಸ್ವಾವಲಂಬನೆ ಸಾಧಿಸಬೇಕಿದೆ. ಶೇ 70 ಖಾದ್ಯ ತೈಲ ಬೇರೆ ದೇಶಗಳಿಂದ ಬರುತ್ತಿದೆ. ಟ್ರ್ಯಾಕ್ಟರ್, ಟಿಲ್ಲರ್ ಸಬ್ಸಿಡಿಯಲ್ಲಿ ನೀಡುವುದು, ಬಾಡಿಗೆಯಲ್ಲಿ ಯಂತ್ರೋಪಕರಣ ಒದಗಿಸುವುದು, ಕೃಷಿ ಸಿಂಚಾಯಿ ಯೋಜನೆಗೆ ವಿಶೇಷವಾದ ಅನುಕೂಲತೆ, ರಸಗೊಬ್ಬರಕ್ಕೆ ಸಬ್ಸಿಡಿ, ಖಾದ್ಯ ತೈಲವನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ಸ್ವಾವಲಂಬಿತನ ಸಾಧಿಸಲಾಗುವುದು ಎಂದು ನುಡಿದರು.

ರಾಜ್ಯದಲ್ಲಿ ನಾಲ್ಕು ಸಚಿವರು ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಹಳ ಅದ್ಭುತವಾದ ಸ್ವಾಗತವನ್ನು ಮಂಡ್ಯ ಮತ್ತು ಮದ್ದೂರಿನ ಜನರು ನನಗೆ ನೀಡಿದ್ದಾರೆ ಎಂದು ವಿವರಿಸಿದರು.

ದೇಶದಾದ್ಯಂತ ನೂತನ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ಆರಂಭವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಸಮುದಾಯ, ಮಹಿಳೆಯರಿಗೆ ಶ್ರೀ ನರೇಂದ್ರ ಮೋದಿ ಅವರ ಕೇಂದ್ರ ಸಚಿವ ಸಂಪುಟದಲ್ಲಿ ಆದ್ಯತೆ ಕೊಡಲಾಗಿದೆ ಎಂದು ತಿಳಿಸಿದರು. ಅತ್ಯಂತ ಹಿಂದುಳಿದ ಪ್ರದೇಶದ ರೈತನ ಮಗಳಾದ ತಮಗೆ ಸಚಿವ ಸ್ಥಾನ ನೀಡಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು.

ಮಂಡ್ಯದ ಸಕ್ಕರೆ- ಬೆಲ್ಲ ರಫ್ತು ಮಾಡಲು ಉತ್ತೇಜನ ಕೊಡಲಾಗುವುದು. ಕೋವಿಡ್ ಸಂದರ್ಭದಲ್ಲಿ ಹಲವಾರು ದೇಶಗಳಲ್ಲಿ ಆಹಾರದ ಕೊರತೆ ಕಾಡಿತ್ತು. ಆದರೆ, ಭಾರತವು ಆಹಾರದ ಸಮಸ್ಯೆ ಎಸುರಿಸಲಿಲ್ಲ. ರೈತರ ಪರಿಶ್ರಮದ ಪರಿಣಾಮವಾಗಿ ಭಾರತದ ಎಲ್ಲರಿಗೂ ಆಹಾರ ಸಮಸ್ಯೆ ಕಾಡಲಿಲ್ಲ. ಎಲ್ಲರಿಗೂ ಆಹಾರ ಲಭಿಸಿದೆ ಎಂದು ವಿಶ್ಲೇಷಿಸಿದರು.

ರೈತರಿಗೆ ಹೆಚ್ಚು ಅನುಕೂಲ ಮಾಡುವ ಸಂಕಲ್ಪ ಕೇಂದ್ರದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರದ್ದಾಗಿದೆ. 1,23,000 ಕೋಟಿ ರೂಪಾಯಿಯನ್ನು ಕೃಷಿ ಇಲಾಖೆಗೆ ಈ ಸಾಲಿನ ಬಜೆಟ್‍ನಲ್ಲಿ ಮೀಸಲಿಡಲಾಗಿದೆ. ಸಂಶೋಧನೆ ಮತ್ತು ಶಿಕ್ಷಣಕ್ಕೆ 8,500 ಕೋಟಿ ರೂಪಾಯಿ ನೀಡಿದ್ದಾರೆ. ಇದು ರೈತರನ್ನು ಸಮರ್ಪಕವಾಗಿ ತಲುಪಲು ಪ್ರಯತ್ನಿಸುವುದಾಗಿ ತಿಳಿಸಿದರು.

ರೈತರ ಉನ್ನತಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಜೊತೆಗೂಡಿ ಕೆಲಸ ಮಾಡುವುದಾಗಿ ಅವರು ತಿಳಿಸಿದರು. ಮಹಿಳೆಯರ ಜೊತೆ ಗದ್ದೆ ನಾಟಿ ಮಾಡಿದರು. ಪಡಿತರ ಕೇಂದ್ರಕ್ಕೂ ಭೇಟಿ ನೀಡಿ ಪಡಿತರ ಸಕಾಲದಲ್ಲಿ ಲಭಿಸುತ್ತಿರುವ ಕುರಿತು ಮಾಹಿತಿ ಪಡೆದುಕೊಂಡರು.

ರಾಜ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ನಾರಾಯಣ ಗೌಡ, ಶಾಸಕರಾದ ಶ್ರೀ ಎಲ್.ನಾಗೇಂದ್ರ,. ವಿಭಾಗ ಪ್ರಭಾರಿಗಳಾದ ಶ್ರೀ ಮೈ.ವಿ.ರವಿಶಂಕರ್, ಜಿಲ್ಲಾ ಅಧ್ಯಕ್ಷರಾದ ಶ್ರೀ ಕೆ. ಜೆ. ವಿಜಯ ಕುಮಾರ್, ಮುಖಂಡರಾದ ಶ್ರೀ ಎ. ಮಂಜು. ಡಾ|| ಸಿದ್ದರಾಮಯ್ಯ, ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

]]>
https://iambjp.in/archives/326/feed 0