Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Warning: Cannot modify header information - headers already sent by (output started at /home3/buntss5v/iambjp.in/wp-includes/functions.php:6121) in /home3/buntss5v/iambjp.in/wp-includes/feed-rss2.php on line 8
Nalin Kumar Kateel – I am BJP https://iambjp.in Making Bharat Vishwa Guru Tue, 30 Jan 2024 04:50:15 +0000 en-US hourly 1 https://wordpress.org/?v=6.8.1 https://iambjp.in/wp-content/uploads/2021/08/cropped-Smal-Logo-32x32.png Nalin Kumar Kateel – I am BJP https://iambjp.in 32 32 ಕಟೀಲ್‌ಗೆ ಬಿಕ್‌ ಶಾಕ್, ಕ್ಯಾಪ್ಟನ್‌ಗೆ ಟಿಕೆಟ್‌ ಸಿಗತ್ತಾ !? https://iambjp.in/archives/2137 https://iambjp.in/archives/2137#respond Tue, 30 Jan 2024 04:19:59 +0000 https://iambjp.in/?p=2137 ಲೋಕಸಭಾ ಚುನಾವಣೆಯ ರಣರಂಗ ಕಾವೇರುತ್ತಿದೆ. ದೇಶ 2024 ರ ಲೋಕಸಭಾ ಚುನಾವಣೆಗೆ ಸಜ್ಜುಗೊಂಡಿದ್ದು ರಾಜ್ಯದಲ್ಲೂ ಎಲ್ಲಾ ರಾಜಕೀಯ ಪಕ್ಷಗಳ ಪಾಳಯಗಳಲ್ಲಿ ಚುನಾವಣೆಯ ಪೂರ್ವ ಯಾರಿ ನಡೆಯುತ್ತಿದೆ. ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವೂ ಈ ಬಾರಿ ಭಾರೀ ಸದ್ದು ಮಾಡುತ್ತಿದೆ. ಇಲ್ಲಿ ಹಾಲಿ ಸಂಸದರಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಸ್ವಪಕ್ಷದ ಕಾರ್ಯಕರ್ತರೇ ಅಡ್ಡಗಾಲಾಗುತ್ತಿದ್ದಾರೆ. 4ನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಿದ್ಧತೆ ನಡೆಸುತ್ತಿರುವ ಕಟೀಲ್‌ ಅವರಿಗೆ ಈಗ ಬಿಗ್‌ ಶಾಕ್‌ ಎದುರಾಗಿದೆ.

ಕಾರ್ಯಕರ್ತರ ವಿರೋಧ ಎದುರಿಸುತ್ತಿರುವ ಕಟೀಲ್‌ ಅವರ ಬದಲಿಗೆ ಕ್ಯಾ.ಬ್ರಿಜೇಶ್‌ ಚೌಟ ಅವರನ್ನು ಕಣಕ್ಕಿಳಿಸಲು ಬಿಜೆಪಿ ಪಾಳಯದಲ್ಲಿ ಬಿರುಸಿನ ಕಾರ್ಯಚಟುವಟಿಕೆ ಸದ್ದಿಲ್ಲದೆ ನಡೆಯುತ್ತಿದೆ. ಕ್ಯಾಪ್ಟನ್‌ ಅವರ ಹೆಸರಿಗೆ ವಿರೋಧ ಪಡಿಸುವ ಯಾವ ಕಾರಣವೂ ಕಟೀಲ್‌ ಬೆಂಬಲಿಗರಲ್ಲಿ ಇಲ್ಲ. ಪರಿವಾರ ಸಂಘಟನೆಗಳು ಕೂಡಾ ಕ್ಯಾಪ್ಟನ್‌ ಹೆಸರಿಗೆ ಸಮ್ಮತಿ ಸೂಚಿಸಿವೆ ಎಂದು ಹೇಳಲಾಗುತ್ತಿದೆ.

ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಸುಶಿಕ್ಷಿತರು, ಸಂಘ ಹಾಗೂ ಸೇನೆಯ ಹಿನ್ನೆಲೆ ಹೊಂದಿರುವ ವ್ಯಕ್ತಿ. ರಾಜಕೀಯ ಜೀವನ ಅಥವಾ ಸಾಮಾಜಿಕ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇವರ ಮೇಲಿಲ್ಲ ಎಂಬುದೇ ಕ್ಯಾಪ್ಟನ್‌ ಪಾಲಿನ ಬಹುದೊಡ್ಡ ಪ್ಲಸ್‌ ಪಾಯಿಂಟ್. 2019 ರ ಲೋಕಸಭಾ ಚುನಾವಣೆಯಲ್ಲಿ ಇವರ ಹೆಸರು ಪ್ರಬಲವಾಗಿ ಕೇಳಿಬಂದಿದ್ದರೂ ಅಂತಿಮವಾಗಿ ನಳಿನ್‌ ಅವರು ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾದರು. ಮುಂದೆ ರಾಜಕೀಯ ತುಳಿತಕ್ಕೊಳಗಾಗಿ ಯಾವುದೇ ಪ್ರಮುಖ ಜವಾಬ್ದಾರಿ ಇಲ್ಲದೆ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಪೇರೆಂಟ್‌ ಬಾಡಿಯ ನಿರ್ಲಕ್ಷಕ್ಕೆ ಒಳಗಾಗಿದ್ದರು. ಅದೆಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿ, ತಾಳ್ಮೆಯ ಪ್ರತಿರೂಪ ಎಂಬಂತಿದ್ದರು. ಅವರ ಧ್ಯೇಯ ನಿಷ್ಠೆಗೆ ಈಗ ರಾಜ್ಯ ಕಾರ್ಯದರ್ಶಿ ಹುದ್ದೆ ಒಲಿದುಬಂದಿದೆ, ಅದರ ಬೆನ್ನಲ್ಲೇ ಕಾರ್ಯಕರ್ತರ ಲೋಕಸಭಾ ಅಭ್ಯರ್ಥಿಯಾಗಿ ಜನಮಾನಸದಲ್ಲಿ ಸುದ್ದಿಯಲ್ಲಿದ್ದಾರೆ.

ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುತ್ತಿದ್ದ ನಳಿನ್‌ ಕುಮಾರ್‌ ಕಟೀಲ್‌ ಅವರು ಈಗ ಕಾರ್ಯಕರ್ತರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ, ಇದೆಲ್ಲವೂ ಚುನಾವಣಾ ಗಿಮಿಕ್‌ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧದ ಅಲೆಯಿಂದ ಬೇಸತ್ತಿರುವ ಬಿಜೆಪಿ ತನ್ನ ಕಾರ್ಯಕರ್ತರನ್ನು ತಣಿಸುವ ನಿಟ್ಟಿನಲ್ಲಿ ಈ ಬಾರಿ ಟಿಕೆಟ್ ಬದಲಾವಣೆಯ ನಿರ್ಧಾರ ಮಾಡಿರುವುದು ಬಹುತೇಕ ಪಕ್ಕಾ ಆಗಿದೆ.

]]>
https://iambjp.in/archives/2137/feed 0
ಸೋನಿಯಾ ಕಾಲು ಹಿಡಿದು ಸಿಎಂ ಆಗಿದ್ದ ಸಿದ್ರಾಮಣ್ಣ: ನಳಿನ್‍ಕುಮಾರ್ ಕಟೀಲ್ https://iambjp.in/archives/974 https://iambjp.in/archives/974#respond Thu, 13 Oct 2022 11:46:09 +0000 https://iambjp.in/?p=974 ಬೆಂಗಳೂರು: ಇಂದಿರಾ ಗಾಂಧಿಯನ್ನು ಮೊದಲು ಬೈಯ್ಯುತ್ತಿದ್ದ ಸಿದ್ರಾಮಣ್ಣನವರು ಕೊನೆಗೆ ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಟೀಕಿಸಿದರು.

ಧಾರವಾಡದಲ್ಲಿ ಇಂದು ‘ಜನಸಂಕಲ್ಪ’ ಯಾತ್ರೆಯ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಆದರೆ, ಯಡಿಯೂರಪ್ಪ ಅವರು ಹಾಗಲ್ಲ. ಅವರು ಈ ರಾಜ್ಯದಲ್ಲಿ ಮಾಡಿದಷ್ಟು ಪಾದಯಾತ್ರೆಗಳು, ಸೈಕಲ್ ಯಾತ್ರೆಗಳು ಮತ್ತು ಹೋರಾಟಗಳನ್ನು ಇವತ್ತು ಯಾರೂ ಮಾಡಿಲ್ಲ. ಅದು ಯಾವ ನಾಯಕರಿಂದಲೂ ಸಾಧ್ಯವೂ ಇಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಇವತ್ತಿನ ಸ್ಥಿತಿಗತಿಗಳನ್ನು ನೋಡಿದಾಗ ಅವರಿಗೆ ಕೇವಲ ಅರಳುಮರಳಲ್ಲ. ಸಿದ್ರಾಮಣ್ಣ ಅಧಿಕಾರ ಕಳಕೊಂಡು ಹುಚ್ಚರಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಕೆಟ್ಟ ಕೆಟ್ಟ ಶಬ್ದದಿಂದ ಏಕವಚನದಿಂದ ಮಾತನಾಡಿ ದುರಹಂಕಾರ ತೋರುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಡಿ.ಕೆ.ಶಿವಕುಮಾರ್ – ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುವ ಭಯ ಅವರನ್ನು ಕಾಡುತ್ತಿದೆ. ಅಧಿಕಾರ ಕಳಕೊಂಡು ಹುಚ್ಚರಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.

ರಾಹುಲ್ ಗಾಂಧಿ ಕೇವಲ ಸಂಸದರಷ್ಟೇ. ಕಾಂಗ್ರೆಸ್ ನಾಯಕರಿರಬಹುದು. ಮೋದಿಯವರು ಈ ದೇಶದ ಪ್ರಧಾನಮಂತ್ರಿ. ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದಾಗ ಅವರನ್ನು ಬಿಜೆಪಿ ಹಿರಿಯ ಮುಖಂಡ- ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿಯವರು ಯಾವತ್ತೂ ಏಕವಚನದಿಂದ ಟೀಕಿಸಿರಲಿಲ್ಲ. ವಿರೋಧ ಪಕ್ಷಗಳ ಮಾದರಿ ನಡವಳಿಕೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಮಾದರಿ. ಸಿದ್ರಾಮಣ್ಣನ ವಿರುದ್ಧ ಯಡಿಯೂರಪ್ಪರವರು ಹೇಳಿದ್ದು ಸರಿ ಇದೆ ಎಂದು ಸಮರ್ಥಿಸಿದರು.

ಶಬ್ದಗಳ ಬಳಕೆ ಮಾಡುವುದನ್ನು ಸಿದ್ರಾಮಣ್ಣ ಕಲಿಯಲಿ. ಅವರು ಗೌರವಯುತವಾಗಿ ನಡೆದರೆ ಎಲ್ಲರೂ ಗೌರವದಿಂದ ನಡೆದುಕೊಳ್ಳುತ್ತಾರೆ. ಅವರು ಬೇಜವಾಬ್ದಾರಿಯಿಂದ ನಡೆದರೆ ಅನಿವಾರ್ಯವಾಗಿ ಬೇಜವಾಬ್ದಾರಿ ಉತ್ತರ ಕೊಡಬೇಕಾಗುತ್ತದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಸಿದ್ರಾಮಣ್ಣನನ್ನು ಕಂಡರೆ ನಮಗ್ಯಾಕೆ ಭಯ ಇರಬೇಕು? ಡಿಕೆಶಿ, ಪರಮೇಶ್ವರ್, ಖರ್ಗೆಗೆ ಭಯ ಇರಬೇಕು. ಅವರೆಲ್ಲರ ಭಯ ಇವರಿಗೆ, ಇವರ ಭಯ ಅವರಿಗೆ ಇದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಕಾಂಗ್ರೆಸ್ ಈಗ ಪಾದಯಾತ್ರೆ ಆರಂಭಿಸಿದೆ. ನಮ್ಮ ಪಕ್ಷ ಬೆಳೆದಿರುವುದೇ ಯಾತ್ರೆಯ ಮುಖಾಂತರ. ಸಿದ್ರಾಮಣ್ಣ ಯಾರ್ಯಾರದೋ ಕಾಲು ಹಿಡಿದು, ಭಿಕ್ಷೆ ಬೇಡಿ ಮುಖ್ಯಮಂತ್ರಿ ಆದವರು. ದೇವೇಗೌಡರ ಕಾಲಿಗೆ ಅಡ್ಡ ಬಿದ್ದು, ಬೆಳೆದವರು. ಮೊದಲು ಅವರ ಕಾಲಡಿಯಲ್ಲಿ ಕುಳಿತು ನಂತರ ಕಾಲಿನಲ್ಲಿ ತುಳಿದವರು ಎಂದು ಟೀಕಿಸಿದರು.

ಹಿಜಾಬ್ ವಿಚಾರ ನ್ಯಾಯಾಲಯದ ಮುಂದೆ ಇರುವ ಕಾರಣ ನಾನು ಅದರ ಬಗ್ಗೆ ಚರ್ಚಿಸುವುದಿಲ್ಲ ಎಂದು ಅವರು ತಿಳಿಸಿದರು.

]]>
https://iambjp.in/archives/974/feed 0
ಪಿಎಫ್‍ಐ ನಿಷೇಧ ಅತ್ಯಂತ ಸಮರ್ಥ ನಿರ್ಧಾರ – ನಳಿನ್‍ಕುಮಾರ್ ಕಟೀಲ್ https://iambjp.in/archives/937 https://iambjp.in/archives/937#respond Wed, 28 Sep 2022 06:33:58 +0000 https://iambjp.in/?p=937 ಬೆಂಗಳೂರು: ವಿದೇಶಿ ದೇಣಿಗೆ ಮೂಲಕ ಸಮಾಜವಿದ್ರೋಹಿ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಪಿಎಫ್‍ಐ ನಿಷೇಧ ಅತ್ಯಂತ ಸಮರ್ಥ ನಿರ್ಧಾರ ಮತ್ತು ಇದು ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದು, ಕೇಂದ್ರ ಸರಕಾರಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ.

ಪಿಎಫ್‍ಐ ನಾಯಕರು ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹೊಂದಿದ್ದರು. ಕೇಂದ್ರ ಸರಕಾರ ಮಹತ್ವದ ಬೆಳವಣಿಗೆಯೊಂದರಲ್ಲಿ, ಪಿಎಫ್‍ಐ ಹಾಗೂ ಅದರ ಇತರ ಸಹವರ್ತಿ ಸಂಸ್ಥೆಗಳನ್ನು, ಐದು ವರ್ಷಗಳವರೆಗೆ ನಿಷೇಧಿಸಿದೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಕೋಮು ಸೌಹಾರ್ದ ಕೆಡಿಸಿ, ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ, ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹಿನ್ನೆಲೆ ನಿಷೇಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿμÉೀಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೆ, ಇತರ ಸಹ ಸಂಸ್ಥೆಗಳ ವಿರುದ್ಧ ಕೇಂದ್ರ ಸರಕಾರ ಸೂಕ್ತ ಕ್ರಮ ತೆಗೆದುಕೊಂಡಿದೆ. ಕೇಂದ್ರ ಸರಕಾರ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ, ನಿμÉೀಧ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಭವಿಷ್ಯದಲ್ಲಿ ವಿದ್ರೋಹಿ ಹಾಗು ವಿಚ್ಛಿದ್ರಕಾರಿ ಮನಸ್ಥಿತಿಯ ಸಂಘಟನೆಗಳು ಸಮಾಜದ ಒಳಗಡೆ ರೂಪುಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ನಿಷೇಧದ ಸುತ್ತ ಯಾವ ರಾಜಕೀಯ ಪಕ್ಷವೂ ತುಷ್ಟೀಕರಣದ ಮತ್ತು ತಕ್ಷಣದ ರಾಜಕೀಯ ಲಾಭ ಪಡೆದುಕೊಳ್ಳುವ ಪ್ರಯತ್ನದ ರಾಜಕಾರಣ ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯರ ನೇತೃತ್ವದ ಸರಕಾರವು ಇಂಥ ಸಮಾಜವಿದ್ರೋಹಿಗಳ ಮೇಲಿನ ಪ್ರಕರಣಗಳನ್ನು ರದ್ದು ಮಾಡಿ ಅವುಗಳ ಬೆಳವಣಿಗೆಗೆ ಸಹಕರಿಸಿತ್ತು. ಇದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ಕೊಡುವುದು ಖಚಿತ ಎಂದು ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

]]>
https://iambjp.in/archives/937/feed 0
ಬಿಜೆಪಿಗೆ ಅತಿ ಹೆಚ್ಚು ವಿಧಾನಪರಿಷತ್ ಸ್ಥಾನ – ನಳಿನ್‍ ಕುಮಾರ್ ಕಟೀಲ್ ವಿಶ್ವಾಸ https://iambjp.in/archives/699 https://iambjp.in/archives/699#respond Thu, 18 Nov 2021 11:06:09 +0000 https://iambjp.in/?p=699 ಬೆಂಗಳೂರು: ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ, ಹೆಚ್ಚು ಅನುದಾನ, ಗೌರವಧನವನ್ನು ಬಿಜೆಪಿ ಸರಕಾರಗಳು ನೀಡಿವೆ. ಆದ್ದರಿಂದ ಸ್ವಾಭಿಮಾನದ ಬದುಕು ನೀಡಲು ಪಂಚಾಯಿತಿ ಸದಸ್ಯರ ಗೌರವಧನವನ್ನು 10 ಸಾವಿರಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.

ಕೊಪ್ಪಳದಲ್ಲಿ ಇಂದು ನಡೆದ ಜನಸ್ವರಾಜ್ ಯಾತ್ರೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅನುದಾನವನ್ನು ನೀಡಲಾಗಿದೆ. ಮುಂದಿನ ಸಾಲಿನಲ್ಲಿ 5,500 ಗ್ರಾಮಗಳಿಗೆ ಅಮೃತ ಯೋಜನೆ ವಿಸ್ತರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು. ಗರಿಷ್ಠ ಪ್ರಮಾಣದ ಪಂಚಾಯಿತಿ ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚಿನ ವಿಧಾನಪರಿಷತ್ ಸ್ಥಾನಗಳು ಸಿಗಲಿವೆ. ಇನ್ನೆರಡು ದಿನಗಳಲ್ಲಿ ಪಕ್ಷದ ಅಭ್ಯರ್ಥಿಗಳ ವಿವರ ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಕೇವಲ ಮೋಸ, ಸುಳ್ಳು, ವಂಚನೆಯನ್ನೇ ಮಾಡುತ್ತಾ ಬಂದಿದೆ. ಕಾಂಗ್ರೆಸ್ ಕಾಲದಲ್ಲೇ ರಫೇಲ್ ಹಗರಣ ನಡೆದಿದೆ. ಬಿಟ್ ಕಾಯಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್‍ನವರು ಬಿಟ್ ಕಾಯಿನ್‍ನ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರು ಇರುವುದನ್ನು ಪತ್ರಿಕೆಗಳೇ ಬರೆದಿವೆ ಎಂದರು.

ಕಾಂಗ್ರೆಸ್ ಆಡಳಿತ ಡ್ರಗ್ ಮಾಫಿಯಾದಡಿ ಬದುಕಿತ್ತು. ಡ್ರಗ್ ಮಾಫಿಯಾವನ್ನು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ನಿಯಂತ್ರಿಸಿದೆ. ಬೊಮ್ಮಾಯಿಯವರ ನೇತೃತ್ವದಲ್ಲಿ ಪಕ್ಷ ಸದೃಢವಾಗಿದೆ ಎಂದು ವಿವರಿಸಿದರು.

ಅಭಿವೃದ್ಧಿಗೆ ಹಲವು ಯೋಜನೆ

ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣಕ್ಕೆ 1,200 ಕೋಟಿ ಮಂಜೂರು ಮಾಡಿ ಕೆಲಸ ಮಾಡಿಸಿದ ಸಮಾಧಾನ ನನಗಿದೆ. 10-15 ವರ್ಷ ಕಾಂಗ್ರೆಸ್ ಆಡಳಿತವಿದ್ದರೂ ಇದನ್ನು ಗಮನಿಸಿರಲಿಲ್ಲ. ಇದು ಕಾಂಗ್ರೆಸ್ ನೀತಿ ಎಂದರು. ಕೃಷ್ಣಾ ನೀರಾವರಿ ಯೋಜನೆಗಳ ವಿಚಾರದಲ್ಲೂ ಇದೇ ಮಾದರಿಯಲ್ಲಿ ಕಾಂಗ್ರೆಸ್‍ನಿಂದ ಕಡೆಗಣನೆ ಮಾಡಲಾಯಿತು ಎಂದು ಆಕ್ಷೇಪಿಸಿದರು. ಕೊಪ್ಪಳಕ್ಕೆ ನೀರಾವರಿ ವಿಚಾರದಲ್ಲಿ ಸತತ ಅನ್ಯಾಯ ಮಾಡಲಾಗಿತ್ತು ಎಂದರು.

ವಿವಿಧ ಏತ ನೀರಾವರಿ ಕಾಮಗಾರಿ ಅನುಷ್ಠಾನ, ಕೊಪ್ಪಳ ಜಿಲ್ಲೆಗೇ ನೀರಾವರಿಗೆ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಘೋಷಣೆಯು ಕೇವಲ ಘೋಷಣೆಗೇ ಸೀಮಿತವಾಯಿತು. ಉತ್ತರ ಕರ್ನಾಟಕದ ರೈತರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ ಎಂದರು. ಒಂದೂವರೆ ವರ್ಷದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು. ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನೂ ಕಡೆಗಣಿಸಲಾಗಿದೆ. ಅದನ್ನು ಬೇಗನೆ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.

ಜನಪರ ಕೆಲಸಗಳ ಬದ್ಧತೆ, ದೂರದೃಷ್ಟಿ ಸರಕಾರಕ್ಕೆ ಇರಬೇಕು. ಹೈದರಾಬಾದ್ ಕರ್ನಾಟಕ ಗುಲಾಮಗಿರಿಯ ಸಂಕೇತ. ಅದರ ಹೆಸರನ್ನು ಕಲ್ಯಾಣ ಕರ್ನಾಟಕ ಮಾಡಲು ನಮ್ಮ ನಾಯಕರಾದ ಯಡಿಯೂರಪ್ಪ ಅವರು ಪ್ರೇರಣೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ನೀಡಲಾಗುವುದು ಎಂದು ತಿಳಿಸಿದರು. ತುಂಗಭದ್ರಾ ಅಣೆಕಟ್ಟಿನ ಹೂಳು ತೆಗೆಸಲು ಕೊಪ್ಪಳದ ಶ್ರೀಗಳು ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ. ಸಮಾನಾಂತರ ಬ್ಯಾರೇಜ್ ನಿರ್ಮಾಣಕ್ಕೆ ಯೋಜನೆ ಸಿದ್ಧವಿದೆ. ಬ್ಯಾರೇಜ್ ಕಟ್ಟಲು ಹೆಜ್ಜೆ ಮುಂದಿಡಲಿದ್ದೇವೆ ಎಂದು ಹೇಳಿದರು.

ಕನ್ನಡ ನಾಡನ್ನು ಸುಭಿಕ್ಷ, ಸುರಕ್ಷಿತ, ಸಂಪದ್ಭರಿತ ನಾಡಾಗಿ ಪರಿವರ್ತಿಸುವ ಸಂಕಲ್ಪ ನನ್ನದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಎಲ್ಲ ರೀತಿಯ ಸೌಕರ್ಯ ನೀಡಲಾಗುವುದು. ಅದಕ್ಕಾಗಿಯೇ ರಾಜ್ಯದ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಕೊಡುವ ಯೋಜನೆ ಜಾರಿಗೊಳಿಸಲಾಗಿದೆ. ರೈತರು, ರೈತ ಕುಟುಂಬ ಉಳಿದರೆ ದೇಶ ಉಳಿದೀತೆಂಬ ಚಿಂತನೆ ಇದರ ಹಿಂದಿದೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಮಾಸಾಶನವನ್ನೂ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಅಮೃತ ಯೋಜನೆಯಡಿ 750 ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ನಡೆಯುತ್ತಿದೆ. ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿಗೆ ಒತ್ತು ಕೊಡಲಾಗಿದೆ ಎಂದು ತಿಳಿಸಿದರು. ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ವಿವರಿಸಿದರು. ನೈಜ ಅಧಿಕಾರ ವಿಕೇಂದ್ರೀಕರಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಧಿಕಾರದ ಕನಸು ಭಗ್ನವಾಗಿದೆ. ಅದಕ್ಕಾಗಿಯೇ ಕೆಸರೆರೆಚಾಟ ಮುಂದುವರಿಸಿದ್ದು, ಅವರ ಕೈಗೇ ಕೆಸರು ಹತ್ತಿದೆ. ಕಾಂಗ್ರೆಸ್ ಕಾಲದಲ್ಲೇ ಬಿಟ್ ಕಾಯಿನ್ ಅವ್ಯವಹಾರ ಆಗಿದೆ ಎಂದು ಸ್ಪಷ್ಟಪಡಿಸಿದರು. 2016ರಲ್ಲೇ ತನಿಖೆ ಮಾಡಿದ್ದರೆ ಎಲ್ಲವೂ ಬಹಿರಂಗ ಆಗುತ್ತಿತ್ತಲ್ಲವೇ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಮಾತನಾಡಿ, ವಿಧಾನಪರಿಷತ್‍ನ 25 ಸ್ಥಾನಗಳ ಪೈಕಿ 20 ಅನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು. ಸುಳ್ಳು ಹೇಳುವುದೇ ಕಾಂಗ್ರೆಸ್ ಸಾಧನೆ ಎಂದು ಅವರು ಟೀಕಿಸಿದರು. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲುವುದು ಅನಿವಾರ್ಯ ಎಂದರು.

ರಾಜ್ಯ ಸಚಿವರಾದ ಹಾಲಪ್ಪ ಆಚಾರ್, ಮುರುಗೇಶ್ ನಿರಾಣಿ, ಸಂಸದರುಗಳಾದ ಕರಡಿ ಸಂಗಣ್ಣ, ಪ್ರತಾಪ್ ಸಿಂಹ, ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

]]>
https://iambjp.in/archives/699/feed 0
ಕೊಪ್ಪಳದಲ್ಲಿ ಜನಸ್ವರಾಜ್ ಸಮಾವೇಶ ಆರಂಭ https://iambjp.in/archives/692 https://iambjp.in/archives/692#respond Thu, 18 Nov 2021 10:22:48 +0000 https://iambjp.in/?p=692 ಕೊಪ್ಪಳದಲ್ಲಿ ಜನಸ್ವರಾಜ್ ಯಾತ್ರೆಯು ಇಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್, ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಿತು.

ಪಕ್ಷವನ್ನು ಸದೃಢಗೊಳಿಸುವುದು ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ದೃಷ್ಟಿಯಿಂದ ನಾಲ್ಕು ತಂಡಗಳಲ್ಲಿ ಜನಸ್ವರಾಜ್ ಯಾತ್ರೆ ನಡೆಯುತ್ತಿದೆ ಎಂದು ಮುಖಂಡರು ತಿಳಿಸಿದರು. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಅವರು ಮನವಿ ಮಾಡಿದರು.

ಕೇಂದ್ರಮಂತ್ರಿಗಳಾದ ಭಗವಂತ ಖೂಬಾ ರಾಜ್ಯಸಚಿವರಾದ ಹಾಲಪ್ಪ ಆಚಾರ್ ಮುರುಗೇಶ್ ನಿರಾಣಿ ಸಂಸದರಗಳಾದ ಕರಡಿ ಸಂಗಣ್ಣ ಪ್ರತಾಪ್ ಸಿಂಹ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

]]>
https://iambjp.in/archives/692/feed 0
ಸ್ವಾಮಿ ವಿವೇಕಾನಂದರ ಕನಸು ನನಸು ಮಾಡುತ್ತಿರುವ ನರೇಂದ್ರ ಮೋದಿ – ನಳಿನ್‍ ಕುಮಾರ್ ಕಟೀಲ್ https://iambjp.in/archives/633 https://iambjp.in/archives/633#respond Sun, 10 Oct 2021 15:42:20 +0000 https://iambjp.in/?p=633 ಬೆಂಗಳೂರು: ಸ್ವಾಮಿ ವಿವೇಕಾನಂದರ ಜಗದ್ವಂದ್ಯ ಭಾರತದ ಕನಸು ನನಸು ಮಾಡಲು ನರೇಂದ್ರ ಮೋದಿ ಅವರು ಶಿಲಾನ್ಯಾಸ ಮಾಡಿದರು. ಅವರ ಪರಿಶ್ರಮದ ಫಲವಾಗಿ ಜಗತ್ತಿನ ಅತಿ ಎತ್ತರಕ್ಕೆ ಭಾರತ ಏರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.

ಬಿಟಿಎಂ ಲೇಔಟ್‍ನಲ್ಲಿ ಯುವ ಮೋರ್ಚಾ ಸಂಘಟಿಸಿದ ಅತಿ ದೊಡ್ಡ ನವಭಾರತ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅತ್ಯುತ್ತಮ ಮೇಳ ಸಂಘಟಿಸಿದ ಯುವ ಮೋರ್ಚಾವನ್ನು ಅವರು ಅಭಿನಂದಿಸಿದರು.

ವಿವೇಕಾನಂದರು ಜಗದ್ವಂದ್ಯ ಭಾರತದ ಕನಸನ್ನು ಕಂಡರು. ಅದನ್ನು ಸಾಕಾರಗೊಳಿಸಲು ಯೋಜನೆಗಳನ್ನು ಮಾಡಿದರು. ಸ್ವದೇಶಿ ಚಿಂತನೆಗಳಿಂದ ದೇಶ ಮುನ್ನಡೆಯಬೇಕು. ಗುಲಾಮಗಿರಿಯಿಂದ ಮುಕ್ತವಾಗಬೇಕು ಎಂಬ ಆಶಯ ಅವರದಾಗಿತ್ತು. ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲಿ 65 ವರ್ಷ ಕಾಂಗ್ರೆಸ್ ದೇಶದ ಆಡಳಿತ ನಡೆಸಿತು. ಕಾಂಗ್ರೆಸ್ ಬಡತನ, ಹಸಿವು, ರೋಗ ಮತ್ತು ನಿರುದ್ಯೋಗವನ್ನು ದೇಶದ ಜನರಿಗೆ ಕೊಡುಗೆಯಾಗಿ ನೀಡಿತ್ತು ಎಂದು ವಿವರಿಸಿದರು. ವಂಶಾಡಳಿತದ ರಾಜಕಾರಣ ಕಾಂಗ್ರೆಸ್ ಕೊಡುಗೆ ಎಂದು ತಿಳಿಸಿದರು.

ಭವಿಷ್ಯತ್ ಕಾಲಕ್ಕೆ ಬೆಳಕು ನೀಡಿದ ನಾಯಕ ನರೇಂದ್ರ ಮೋದಿ ಎಂದು ತಿಳಿಸಿದ ಅವರು, ದೇಶದಲ್ಲಿ 2014ರವರೆಗೆ ಯುವಕರು ಸ್ವಾಮಿ ವಿವೇಕಾನಂದರನ್ನು ಪೂಜಿಸಿ ಆರಾಧಿಸಿದರು. ಯುವಕರು ಅಮಿತಾಬ್ ಬಚ್ಚನ್, ಶಾರುಖ್ ಖಾನನ್ನು ಪ್ರೀತಿಸಿದ್ದು ಕಂಡಿದ್ದೇವೆ. ಆದರೆ, 2014ರ ಬಳಿಕ ಈ ದೇಶದ ಯುವಕರು ನರೇಂದ್ರ ಮೋದಿಯವರನ್ನು ಆರಾಧಿಸಿದ್ದಾರೆ. ಅವರನ್ನೇ ಪ್ರೀತಿಸಿದ್ದಾರೆ. ನರೇಂದ್ರ ಮೋದಿ ಈ ದೇಶದ ಐಕಾನ್ ಆಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.

ಯಾವ ದೇಶಗಳು ಭಾರತವನ್ನು ಭಿಕ್ಷುಕರ ರಾಷ್ಟ್ರ, ರೋಗಗ್ರಸ್ತ ದೇಶ, ನಿರುದ್ಯೋಗಿಗಳ ದೇಶ ಎಂದು ಹೀನಾಯವಾಗಿ ಕಂಡು ಕರೆಯುತ್ತಿದ್ದವೋ ಅಂಥ ದೇಶಗಳು ಕೋವಿಡ್ ಬಂದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಡೆ ನೋಡಿ ಲಸಿಕೆ ಕಳುಹಿಸಿ ಕೊಡಲು ವಿನಂತಿಸಿದವು. ಆ ದೇಶಗಳಿಗೆ ಲಸಿಕೆ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ ಎಂದು ಮೆಚ್ಚುಗೆ ಸೂಚಿಸಿದರು.

ನರೇಂದ್ರ ಮೋದಿಯವರು ಕೇವಲ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿಲ್ಲ. ಜಗದ್ವಂದ್ಯ ಭಾರತಕ್ಕೂ ಶಿಲಾನ್ಯಾಸ ಮಾಡಿದ್ದಾರೆ. ಅತಿ ಹೆಚ್ಚು ಪ್ರೀತಿಯ ನಾಯಕ ನರೇಂದ್ರ ಮೋದಿ ಮತ್ತು ಅತ್ಯಂತ ಪ್ರೀತಿಯ ದೇಶ ಭಾರತ ಎಂದು ಅಮೇರಿಕದ ಅಧ್ಯಕ್ಷರೂ ತಿಳಿಸುವಂತಾಗಿದೆ ಎಂದು ವಿವರಿಸಿದರು.

ಆರ್‍ಆರ್ ನಗರದಲ್ಲಿ ಕಮಲ ಅರಳಿದೆ. ಅಂಥ ಜಾಗದಲ್ಲಿ ಕಮಲ ಅರಳಿದ ಮೇಲೆ ಇನ್ನು ಬಿಟಿಎಂ ಲೇಔಟ್ ಬಾಕಿ ಆದೀತೇ ಎಂದು ಪ್ರಶ್ನಿಸಿದ ಅವರು, ಮುಂದಿನ ದಿನಗಳಲ್ಲಿ ಸಿದ್ದರಾಮಣ್ಣ, ರಾಮಲಿಂಗಾರೆಡ್ಡಿಗೆ ಚುನಾವಣೆಗೆ ನಿಲ್ಲಲು ಜಾಗ ಇಲ್ಲದ ಸ್ಥಿತಿ ಉಂಟಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷರು ಮತ್ತು ಸಂಸದರೂ ಆದ ತೇಜಸ್ವಿ ಸೂರ್ಯ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ॥ ಸಂದೀಪ್ ಕುಮಾರ್ ಕೆ. ಸಿ, ಸಚಿವರಾದ ಮುನಿರತ್ನ, ಜಿಲ್ಲಾ ಪ್ರಭಾರಿಗಳಾದ ಗೋಪಿನಾಥ್ ರೆಡ್ಡಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಕೋಶಾಧ್ಯಕ್ಷರು ಹಾಗೂ ನವಭಾರತ ಮೇಳದ ರಾಜ್ಯ ಸಂಚಾಲಕರಾದ ಅನಿಲ್ ಶೆಟ್ಟಿ, ಮಂಡಲದ ಅಧ್ಯಕ್ಷರಾದ ರಾಜೇಂದ್ರ, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಜಿತ್ ಹೆಗ್ಡೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ್ ಮತ್ತು ಸುದರ್ಶನ್, ಖಜಾಂಚಿ ಶ್ರೀಧರ್ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

]]>
https://iambjp.in/archives/633/feed 0
ಅಂಚೆ ಕಾರ್ಡ್ ಮಹಾ ಅಭಿಯಾನದಲ್ಲಿ ಪತ್ರ ಬರೆದು ಕಾರ್ಯಕರ್ತರಿಗೆ ಪ್ರೇರಣೆಯಾದ ನಳಿನ್‍ಕುಮಾರ್ ಕಟೀಲ್ https://iambjp.in/archives/619 https://iambjp.in/archives/619#respond Mon, 04 Oct 2021 10:47:26 +0000 https://iambjp.in/?p=619 ಬೆಂಗಳೂರು: ದೇಶದ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು 20 ವರ್ಷಗಳ ಸೇವೆ ಮತ್ತು ಸಮರ್ಪಣೆಯ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7ರ ತನಕ ಮಾನ್ಯ ಪ್ರಧಾನಮಂತ್ರಿಗಳಿಗೆ ಶುಭಾಶಯ, ಅಭಿನಂದನಾ ಪತ್ರ ಬರೆಯುವ ಪೋಸ್ಟ್  ಕಾರ್ಡ್ ಮಹಾ ಅಭಿಯಾನ ನಡೆಯುತ್ತಿದೆ. ಇದರ ಅಂಗವಾಗಿ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಪ್ರಧಾನಿಯವರಿಗೆ ಶುಭಾಶಯ ಕೋರಿ ಅಂಚೆ ಕಾರ್ಡ್ ಬರೆದು ಕಾರ್ಯಕರ್ತರು, ಮುಖಂಡರಿಗೆ ಮಾದರಿ ಆಗಿದ್ದಾರೆ.‌

“ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಸಾದರ ವಂದನೆಗಳು ಮತ್ತು ಜನುಮದಿನದ ಹಾರ್ದಿಕ ಶುಭಾಶಯಗಳು. ತಮ್ಮ 20 ವರ್ಷದ ಅಧಿಕಾರಾವಧಿಯಲ್ಲಿ ಶೋಷಿತರ, ಹಿಂದುಳಿದ ವರ್ಗಗಳ, ಬಡವರ ಹಾಗೂ ಸರ್ವ ವರ್ಗದ ಪರ ಯೋಜನೆಗಳು- ಅಭಿವೃದ್ಧಿ ಪರವಾದ ಆಡಳಿತ, ಭ್ರಷ್ಟಾಚಾರರಹಿತ ಅಧಿಕಾರಾವಧಿ, ಅತ್ಯುತ್ತಮ ಆಡಳಿತ- ದಾಖಲೆಯ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡುತ್ತಿರುವುದು ಅಭಿನಂದನೀಯ” ಎಂದು ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

“ಭಾರತವನ್ನು ವಿಶ್ವಗುರುವನ್ನಾಗಿಸುವ ತಮ್ಮ ಮಹೋನ್ನತ ಸಂಕಲ್ಪ ಸಾಕಾರಗೊಳಿಸುವಂತಹ ಸೌಭಾಗ್ಯ- ಆಯುರಾರೋಗ್ಯವನ್ನು ತಾಯಿ ಭಾರತಾಂಬೆ ಕರುಣಿಸಲಿ” ಎಂದು ಅವರು ಹಾರೈಸಿದ್ದಾರೆ.

]]>
https://iambjp.in/archives/619/feed 0
ರಾಜ್ಯದ 3 ಪಾಲಿಕೆಗಳಲ್ಲೂ ಬಿಜೆಪಿಯದೇ ಅಧಿಕಾರ – ನಳಿನ್‍ ಕುಮಾರ್ ಕಟೀಲ್ https://iambjp.in/archives/522 https://iambjp.in/archives/522#respond Mon, 06 Sep 2021 10:29:32 +0000 https://iambjp.in/?p=522 ಬೆಂಗಳೂರು: ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳಲ್ಲಿ ಭಾರತೀಯ ಜನತಾ ಪಾರ್ಟಿಯೇ ಅಧಿಕಾರ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಇಂದು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 3 ಪಾಲಿಕೆಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಲಭಿಸಿದೆ. ಬೆಳಗಾವಿಯಲ್ಲಿ ಮೊದಲ ಬಾರಿಗೆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿದ್ದು ರಾಷ್ಟ್ರೀಯ ವಿಚಾರಧಾರೆ, ಬಿಜೆಪಿಯ ಉತ್ತಮ ಆಡಳಿತವನ್ನು ಜನರು ಬೆಂಬಲಿಸಿದ್ದಾರೆ ಎಂದು ವಿವರಿಸಿದರು.

ಹುಬ್ಬಳ್ಳಿ- ಧಾರವಾಡದಲ್ಲಿ ನಮ್ಮ ಆಡಳಿತ ಮುಂದುವರಿಯುತ್ತಿದೆ. ಈ ಅವಳಿ ನಗರಕ್ಕೆ ಶ್ರೀ ಯಡಿಯೂರಪ್ಪ ಅವರು ಅತಿ ಹೆಚ್ಚು ಅನುದಾನ ನೀಡಿದ್ದರು. ಬೆಳಗಾವಿಯಲ್ಲೂ ನಮ್ಮ ಶಾಸಕರು, ಜನಪ್ರತಿನಿಧಿಗಳ, ಕಾರ್ಯಕರ್ತರ ಪ್ರಯತ್ನ ಫಲ ನೀಡಿದೆ ಎಂದರು.

ಕಲಬುರ್ಗಿ ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಂತಿತ್ತು. ಅಲ್ಲಿಯೂ ಅತಿ ಹೆಚ್ಚು ಸ್ಥಾನ ಗಳಿಸಿದ್ದೇವೆ. ಲೋಕಸಭೆ ಮತ್ತು ಇತರ ಚುನಾವಣೆಗಳಲ್ಲಿ ಬಂದ ಫಲಿತಾಂಶದ ಮಾದರಿ ಮುಂದುವರಿದಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರಕಾರದ ಸಾಧನೆಗಳು, ಶ್ರೀ ಯಡಿಯೂರಪ್ಪ ಅವರ ಎರಡು ವರ್ಷಗಳ ಆಡಳಿತ, ಶ್ರೀ ಬಸವರಾಜ ಬೊಮ್ಮಾಯಿ ಅವರ ಕಲ್ಯಾಣ ಕರ್ನಾಟಕದ ಚಿಂತನೆಯ ಆಡಳಿತದಿಂದ ಜನಾಶೀರ್ವಾದ ನಮಗೆ ಸಿಕ್ಕಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಟವೆಲ್ ಹಾಕಬೇಡಿ ಎಂಬ ಸ್ಪಷ್ಟ ಸಂದೇಶವನ್ನು ಜನರು ಕಾಂಗ್ರೆಸ್ ಪಕ್ಷದವರಿಗೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ವಿಫಲರಾಗಿದ್ದಾರೆ ಎಂಬ ಸಂದೇಶ ಹೋಗಬೇಕೆಂಬ ಉದ್ದೇಶದಿಂದ ಸಿದ್ದರಾಮಣ್ಣ ಅವರು ಈ ಬಾರಿ ಹೆಚ್ಚಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರಲಿಲ್ಲ ಎಂದು ತಿಳಿಸಿದರು.

2 ಸರಕಾರಗಳ ಅಭಿವೃದ್ಧಿ ಕಾರ್ಯಗಳು, ವ್ಯವಸ್ಥಿತ ಚುನಾವಣಾ ತಂತ್ರಗಾರಿಕೆ, ಸಂಘಟನಾ ಪ್ರಯತ್ನ- ನಮಗೆ ಉತ್ತಮ ಫಲ ಕೊಟ್ಟಿದೆ. ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಉಸ್ತುವಾರಿಗಳೂ ಆದ ಶ್ರೀ ನಿರ್ಮಲ್ ಕುಮಾರ್ ಸುರಾಣಾ ಅವರ ನೇತೃತ್ವದಲ್ಲಿ ವಿವಿಧ ತಂಡಗಳ ಜನಪ್ರತಿನಿಧಿಗಳ, ಕಾರ್ಯಕರ್ತರ ಪರಿಶ್ರಮದಿಂದ ನಾವು ಗೆಲುವು ಸಾಧಿಸಿದ್ದೇವೆ ಎಂದರು.

3 ನಗರಪಾಲಿಕೆಗಳು, ಕೆಲವು ಉಪ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಇದಕ್ಕಾಗಿ ಮತದಾರರನ್ನು ಅಭಿನಂದಿಸುವುದಾಗಿ ಹಾಗೂ ನಮಗೆ ಆಶೀರ್ವಾದ ಮಾಡಿದ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.

ಶ್ರೀ ಯಡಿಯೂರಪ್ಪ ಅವರ ಮಾರ್ಗದರ್ಶನದಡಿ ಮತ್ತು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಈ ಚುನಾವಣೆ ನಡೆದಿದೆ. ನೆಚ್ಚಿನ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ಜನಪರ ಆಡಳಿತ ಮತ್ತು ಶ್ರೀ ಯಡಿಯೂರಪ್ಪ ಅವರ ಮಾರ್ಗದರ್ಶನದಡಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರದ ಜನೋಪಯೋಗಿ ಕಾರ್ಯಗಳಿಗೆ ಜನಮನ್ನಣೆ ದೊರಕಿದೆ. ಈ ಮೂಲಕ ಜನರು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದಾರೆ ಎಂದರು.

ಶ್ರೀ ಯಡಿಯೂರಪ್ಪ ಅವರು ಮತ್ತು ನಾನು ಜೊತೆಯಾಗಿ ರಾಜ್ಯ ಪ್ರವಾಸ ಮಾಡಲಿದ್ದೇವೆ. ಈ ಕುರಿತ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು. ಶ್ರೀ ಯಡಿಯೂರಪ್ಪ ಅವರ ಮಾರ್ಗದರ್ಶನ, ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಡಿ ಪಕ್ಷವು ತಂಡಸ್ಫೂರ್ತಿಯಿಂದ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ ಎಂದರು.

ಮೂರು ಮಹಾನಗರ ಪಾಲಿಕೆಗಳ ಚುನಾವಣೆಯ ಉಸ್ತುವಾರಿಗಳೂ ಆದ ಶ್ರೀ ನಿರ್ಮಲ್ ಕುಮಾರ್ ಸುರಾಣಾ, ರೈತ ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಆದ ಶ್ರೀ ಈರಣ್ಣ ಕಡಾಡಿ ಹಾಗೂ ರಾಜ್ಯ ಮಾಧ್ಯಮ ಸಂಚಾಲಕರಾದ ಶ್ರೀ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

]]>
https://iambjp.in/archives/522/feed 0
ಕೆ.ಆರ್. ಕ್ಷೇತ್ರದಲ್ಲಾಗಿರುವ ಸಂಘಟನೆಯನ್ನು ನಿಮ್ಮ ಕ್ಷೇತ್ರದ ಒಂದು ಬೂತ್­ನಲ್ಲಿ ಮಾಡಿ ತೋರಿಸಿ ಎಂದು ಸವಾಲೆಸೆದ ಕಟೀಲ್ https://iambjp.in/archives/518 https://iambjp.in/archives/518#respond Mon, 06 Sep 2021 03:50:39 +0000 https://iambjp.in/?p=518 ಸೆಪ್ಟೆಂಬರ್ 5 ಭಾನುವಾರದಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ವತಿಯಿಂದ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರ ನೇತೃತ್ವದಲ್ಲಿ ಬಿ.ಎಲ್.ಎ – 2 ಗಳ ನೇಮಕವಾಗಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಬಿ.ಎಲ್.ಎ – 2 ಗಳ ಸಮಾವೇಶವು ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ನೆರವೇರಿತು, ಅಲ್ಲದೇ ಐ.ಡಿ ಕಾರ್ಡ್­ಗಳನ್ನೂ ಸಹ ಮಾನ್ಯ ರಾಜ್ಯಾಧ್ಯಕ್ಷರು ವಿತರಣೆ ಮಾಡಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಮಾನ್ಯ ಭಾಜಪಾ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ರಾಜಕಾರಣದಲ್ಲಿ ಆತ್ಮ ಬಿ.ಎಲ್.ಎ 2 ಆಗಿದೆ, ರಾಮದಾಸ್ ಅವರು ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು ಮಾಡಿ ಬಿ.ಎಲ್.ಎ. 2 ಗಳ ನೇಮಕ ಮಾಡಿದ್ದಾರೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ರಾಜ್ಯ ಅಧ್ಯಕ್ಷರ ಮನೆ ಯಿಂದ ಪಾರ್ಟಿ ಬೆಳೆಯುವುದಿಲ್ಲ, ಪಾರ್ಟಿ ಬೆಳೆಯುವುದು ಕಾರ್ಯಕರ್ತರಿಂದ. ಒಂದು ಕಾಲದಲ್ಲಿ ಅಭ್ಯರ್ಥಿಗಳನ್ನು ಹುಡುಕುತ್ತಿದ್ದೇವೆ.

ಕೆ.ಆರ್ ಕ್ಷೇತ್ರದಲ್ಲಿ 11 ಸಾವಿರ ಪೇಜ್ ಪ್ರಮುಖರ ನೇಮಕವಾಗಿದೆ ಮನೆ ಮನೆಯಲ್ಲಿ ಕೆ.ಆರ್ ಕ್ಷೇತ್ರದಲ್ಲಿ ಪಾರ್ಟಿ ಬಹಳ ಸಂಘಟನಾತ್ಮಕವಾಗಿ ಇದೆ. ಕಾಂಗ್ರೆಸ್ ಇಂದು ದೇಶದಲ್ಲಿ ವಿನಾಶದ ಅಂಚಿನಲ್ಲಿದೆ ಆದರೆ ಮನೆ ಮನೆಯಲ್ಲಿ ಕಮಲ ಅರಳುತ್ತಿದೆ. ಕೆ.ಆರ್ ಕ್ಷೇತ್ರವನ್ನು ನೋಡಿ ನಾನು ಹೇಳುತ್ತೇನೆ ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಭಾಜಪಾ ಕ್ಕೆ ವಿನಾಶವೇ ಇಲ್ಲ ಎಂದು. ಇಂದು ಭಾಜಪಾ ಸುಭದ್ರವಾಗಿದೆ ಎಂದರೆ ಅದಕ್ಕೆ ನಮ್ಮ ಕಾರ್ಯ ಪದ್ಧತಿಯೇ ಕಾರಣ. ಸಿದ್ದರಾಮಯ್ಯನವರಿಗೆ ನಾನು ಹೇಳುತ್ತೇನೆ ನಿಮ್ಮ ಊರಿನ ಹತ್ತಿರವೇ ಇರುವ ಕೆ.ಆರ್ ಕ್ಷೇತ್ರಕ್ಕೆ ಬಂದು ನೋಡಿ ಹೇಗೆ ಪಾರ್ಟಿ ಕಟ್ಟಿದ್ದಾರೆ ಎಂದು, ನಿಮಗೆ ಸಾಧ್ಯವಾದರೆ ನಿಮ್ಮ ಒಂದು ಬೂತ್ ನಲ್ಲಿ ಈ ರೀತಿ ಪಾರ್ಟಿಯನ್ನ ಕಟ್ಟಿ. ನಾವು ಮತಗಟ್ಟೆಯನ್ನು ನೆಂಬಿದ್ದೇವೆ, ಆದರೆ ಕಾಂಗ್ರೆಸ್ ಬರೀ ರಾಜಕಾರಣವನ್ನು ನಂಬಿದ್ದಾರೆ.

ಶಾಸಕರಾದ ರಾಮದಾಸ್ ಅವರ ಮನೆ ಮುಂದೆ ನಾಮಫಲಕ ಹಾಕುವ ಕಾರ್ಯ ಇಂದು ಇಡೀ ರಾಜ್ಯದಲ್ಲಿ ವಿಸ್ತಾರ ಆಗಿದೆ. ಬಿ.ಎಲ್.ಎ – 2 ಪಾರ್ಟಿ ಮತ್ತು ಸರ್ಕಾರದ ಕೊಂಡಿಗಳು ನೀವು ಅತ್ಯಂತ ಶ್ರೇಷ್ಠ ಕಾರ್ಯ ಮಾಡುತ್ತಿದ್ದೀರಿ, ನಿಜಕ್ಕೂ ನೀವು ಪುಣ್ಯವಂತರು. ರಾಜ್ಯದ ಎಲ್ಲಾ 80% ನಷ್ಟು ಬೂತ್­ಗಳಲ್ಲಿ ಪಂಚ ರತ್ನ ಪೂರ್ಣವಾಗಿದೆ, ಪೇಜ್ ಪ್ರಮುಖರು ಆಯ್ಕೆಯಾಗಿದ್ದಾರೆ ಇದು ನಮ್ಮ ಭಾಜಪಾದ ಶಕ್ತಿ. ರಾಜ್ಯದಲ್ಲಿ ಮೊದಲ ಬಾರಿಗೆ ಬೂತ್ ಅಧ್ಯಕ್ಷರ ಕಾರ್ಯಾಗಾರ, ಪೇಜ್ ಪ್ರಮುಖರ ಕಾರ್ಯಾಗಾರ, ಬೂತ್ ಅಧ್ಯಕ್ಷರ ಮನೆ ಮುಂದೆ ನಾಮಫಲಕ ಅಳವಡಿಸುವ ಕಾರ್ಯ ಪ್ರಪ್ರಥಮವಾಗಿ ಮಾಡಿದ್ದು ಕೆ.ಆರ್ ಕ್ಷೇತ್ರದಲ್ಲಿ. ನಾವು ಸಂಘಟನಾತ್ಮಕವಾಗಿ ಇನ್ನಷ್ಟು ಕಾರ್ಯಪ್ರವೃತ್ತವಾಗಬೇಕಿದೆ. ರಾಷ್ಟ್ರದಲ್ಲಿ ಇನ್ನೊಂದು ಮಾದರಿಯನ್ನು ಕೆ.ಆರ್ ಕ್ಷೇತ್ರದಲ್ಲಿ ಮಾಡಲಾಗಿದೆ ಅದೇ ಕ್ಷೇತ್ರದ 18 ರಿಂದ 25 ವರ್ಷಗಳವರೆಗಿನ ಯುವ ಜನತೆಯನ್ನು ಕರೆದು ರಾಷ್ಟ್ರೀಯತೆಯ ಬಗ್ಗೆ ಚಿಂತನೆಯನ್ನು ತುಂಬುವ ಪ್ರಯೋಗ ಮಾಡಿದ್ದಾರೆ ಇದು ನಿಜಕ್ಕೂ ಪ್ರಶಂಸನೀಯ ಹಾಗೂ ರಾಷ್ಟ್ರಮಟ್ಟದಲ್ಲಿಯೇ ಒಂದು ವಿನೂತನವಾದ ಕಾರ್ಯ.

ರಾಮದಾಸ್ ಅವರ ನೇತೃತ್ವದಲ್ಲಿ ಪಾರ್ಟಿಯನ್ನು ಅದ್ಭುತವಾಗಿ ಕೆ.ಆರ್ ಕ್ಷೇತ್ರದಲ್ಲಿ ಕಟ್ಟಿದ್ದಾರೆ. ಬೂತ್ ಅಧ್ಯಕ್ಷರಾಗಿದ್ದ ಅಮಿತ್ ಶಾ ಭಾಜಪಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು, ಬೂತ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ವೆಂಕಯ್ಯ ನಾಯ್ಡು ಅವರು ಇಂದು ರಾಷ್ಟ್ರದ ಉಪರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅಂತಹ ಶಕ್ತಿ ಭಾಜಪಾಕ್ಕೆ ಇದೆ. ರಾಮದಾಸ್ ಅವರ ನೇತೃತ್ವದಲ್ಲಿ ಕೆ.ಆರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಘಟನಾತ್ಮಕ ಈ ಮಾದರಿ ಕಾರ್ಯಗಳು ರಾಜ್ಯಕ್ಕೆ ಲಾಭ ಸಿಗಲಿ ಎಂದು ಆಶಿಸುತ್ತೇನೆ ಎಂದರು.

]]>
https://iambjp.in/archives/518/feed 0
ಸಮರ್ಥ ಸಂಘಟಕ ನಳಿನ್‌ ಕುಮಾರ್‌ ಕಟೀಲ್ https://iambjp.in/archives/444 https://iambjp.in/archives/444#respond Fri, 27 Aug 2021 10:16:23 +0000 https://iambjp.in/?p=444

ಬಿಜೆಪಿ ರಾಜ್ಯಧ್ಯಕ್ಷರಾಗಿ ಶ್ರೀ ನಳಿನ್ ಕುಮಾರ್ ಕಟೀಲ್ ಅವರು 2019 ರ ಆಗಸ್ಟ್‌ನಲ್ಲಿ ಅಧಿಕಾರ ಸ್ವೀಕರಿಸಿ 22 ತಿಂಗಳುಗಳಾಗಿದ್ದು, ಈ ಕ್ಷಿಪ್ರ ಸಮಯದಲ್ಲಿ ಬಹುಪಾಲು ಅಂದರೆ ಸುಮಾರು 16 ತಿಂಗಳುಗಳು ಕೋವಿಡ್‌ನ ಕರಿನೆರಳಿನ ಕಠಿಣ ಸಮಯವಾಗಿತ್ತು. ಕೋವಿಡ್‌ನ ಕಾರಣ ಈ ಹಿಂದೆ ಇತ್ತೀಚೆಗೆ ಎಂದೂ ಕಾಣದ ಪರಿಸ್ಥಿತಿ ಉಂಟಾಗಿದ್ದು, ಪಕ್ಷ ಸಂಘಟನೆ, ಕಾರ್ಯ ಚಟುವಟಿಕೆಗಳು, ಚುನಾವಣೆ ಮತ್ತು ಕೋವಿಡ್‌ನ ಸೇವಾ ಕಾರ್ಯಗಳು ಅತ್ಯಂತ ಸವಾಲನ್ನು ಒಡ್ಡಿದ್ದವು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ನೊಗ ಹೊತ್ತಿದ್ದ ಶ್ರೀ ನಳಿನ್ ಕುಮಾರ್ ಕಟೀಲ್‌ರವರು ಮಿಂಚಿನಂತೆ ರಾಜ್ಯಾದ್ಯಂತ ಸುಮಾರು 18 ಬಾರಿ ರಾಜ್ಯ ಪ್ರವಾಸವನ್ನು (11 ಬಾರಿ ರಾಜ್ಯ ಸಂಘಟನಾತ್ಮಕ ಪ್ರವಾಸ, 3 ಬಾರಿ ಚುನಾವಣಾ ಸಂಬಂಧ ರಾಜ್ಯ ಪ್ರವಾಸ, 3 ಬಾರಿ ಕೋವಿಡ್- 19 ಸೇವಾ ಕಾರ್ಯ ಪ್ರವಾಸ ಮತ್ತು ಜಿಲ್ಲಾ ಕಾರ್ಯಾಲಯ ಕಟ್ಟಡಗಳ ನಿರ್ಮಾಣ ಪರೀಶೀಲನಾ ರಾಜ್ಯ ಪ್ರವಾಸ) ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಈ ಪ್ರವಾಸ ಸಂದರ್ಭದಲ್ಲಿ ರಾಜ್ಯದ 311 ಮಂಡಲಗಳ ಪೈಕಿ ಸುಮಾರು 300 ರಷ್ಟು ಮಂಡಲಗಳನ್ನು ಈಗಾಗಲೇ ತಲುಪಿ ಸುಮಾರು 270 ದಿನಗಳ ನಿವಾಸಿ ಪ್ರವಾಸ ನಡೆದಿದೆ. ಪ್ರತಿ ತಿಂಗಳು ಸರಾಸರಿ 15 ದಿನಗಳ ರಾಜ್ಯ ಪ್ರವಾಸ ನಡೆಸಲಾಗಿದ್ದು, ದಿನಂಪ್ರತಿ ಸರಾಸರಿ 350 ಕಿ.ಮೀ ಅಂದಾಜಿನಂತೆ 1,40,000 ಕಿ.ಮೀ ಗಳಷ್ಟು ರಸ್ತೆ ಪ್ರಯಾಣ ನಡೆಸಲಾಗಿದೆ.

ಪರಿಚಯ ಪ್ರವಾಸ – ರಾಜ್ಯಧ್ಯಕ್ಷರಾಗಿ ನಿಯುಕ್ತಿಗೊಂಡು ಅಧಿಕಾರ ಸ್ವೀಕರಿಸಿದ ತಕ್ಷಣ ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದು ಮೈಸೂರು ಜಿಲ್ಲೆಯಿಂದ ಆರಂಭಿಸಿ ರಾಜ್ಯದ ಎಲ್ಲ ಸಂಘಟನಾತ್ಮಕ ಜಿಲ್ಲೆಗಳಿಗೆ ರಾಜ್ಯ ಅಧ್ಯಕ್ಷರ ಪರಿಚಯ ಪ್ರವಾಸ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಲಯ ಕಟ್ಟಡಗಳ ನಿವೇಶನ ಪರಿಶೀಲನೆ, ನಿರ್ಮಾಣ ಕುರಿತಾದ ಸಭೆಗಳನ್ನೂ ನಡೆಸಲಾಯಿತು.ಈ ಪ್ರವಾಸವು ನೂತನ ರಾಜ್ಯಧ್ಯಕ್ಷರು ರಾಜ್ಯದ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಶಾಸಕರು, ಪ್ರಮುಖರು ಮತ್ತು ಜಿಲ್ಲೆಯ ತಳಮಟ್ಟದ ಕಾರ್ಯಕರ್ತರ ಸಂಪರ್ಕ ಸಾಧಿಸುವ ಬಲಿಷ್ಟ ಕೊಂಡಿಯಾಯಿತು. ಇದೇ ಪ್ರವಾಸದಲ್ಲಿ ಪರಿವಾರ ಪ್ರಮುಖರ ಬೇಟಿ ಮತ್ತು ಸಭೆಗಳನ್ನೂ ನಡೆಸಲಾಗಿದೆ.ರಾಜ್ಯದ ಪ್ರಮುಖ ಮಠ ಮಾನ್ಯಗಳಿಗೆ ಭೇಟಿ ನೀಡಿ ಎಲ್ಲ ಸ್ವಾಮೀಜಿಗಳು ಮತ್ತು ಸಾದು-ಸಂತರ ಆಶೀರ್ವಾದ ಪಡೆಯಲಾಯಿತು.

ಜಿಲ್ಲಾ ಪ್ರಮುಖರ ಸಭೆ –  ರಾಜ್ಯದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾ ಪ್ರಮುಖರ ಸಭೆ ಪ್ರವಾಸ ನಡೆಸಲಾಯಿತು. ಈ ಪ್ರವಾಸದಲ್ಲಿ ಪಕ್ಷದ ಅತ್ಯಂತ ತಳಮಟ್ಟದ ಸ್ತರವಾದ ಬೂತ್ ಅಧ್ಯಕ್ಷರುಗಳು ಮತ್ತು ಶಕ್ತಿಕೇಂದ್ರ ರಚನೆಯ ಬಗ್ಗೆ ತೀವ್ರ ಗಮನ ಹರಿಸಲಾಯಿತು.ರಾಜ್ಯದಲ್ಲೇ ಪ್ರಥಮ ಬಾರಿಗೆ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಧ್ಯಕ್ಷರು ತಮ್ಮ ಪಕ್ಷದ ಬೂತ್ ಅಧ್ಯಕ್ಷರ ಮನೆಯಲ್ಲಿ ಪಕ್ಷದ ಧ್ವಜ ಅನಾವರಣಗೊಳಿಸಿ, ಬೂತ್ ಅಧ್ಯಕ್ಷರ ನಾಮಫಲಕವನ್ನು ಅಧೀಕೃತವಾಗಿ ಮನೆಗೆ ಆಳವಡಿಸಿ ಬೂತ್ ಮಟ್ಟದ ಕಾರ್ಯಕರ್ತರ ಮನೋಬಲ ಮುಮ್ಮಡಿಗೊಳಿಸುವಂತಹ ನಭೂತೋ ಎನ್ನುವಂತಹ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

3 ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಪ್ರಚಾರದಲ್ಲಿ ಎಲ್ಲ ಕ್ಷೇತ್ರಗಳ ಚುನಾವಣಾ ಪ್ರಚಾರ ಪ್ರವಾಸ ನಡೆಸಿ 12 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ. ಮಂಗಳೂರು ಮಹಾನಗರ ಪಾಲಿಕೆ ಚುನಾವಣಾ ಪ್ರಚಾರ ಯಶಸ್ವಿಗೊಳಿಸಿ ಪಾಲಿಕೆಯಲ್ಲಿ ಬಿಜೆಪಿಯ ದಿಗ್ವಿಜಯ.

ಜಿಲ್ಲಾ ವಿಶೇಷ ಸಭೆ ಪ್ರವಾಸ – ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಜಿಲ್ಲಾ ವಿಶೇಷ ಸಭೆ ಪ್ರವಾಸ ನಡೆಸಿ ಸಂಘಟನಾತ್ಮಕ ರಚನೆಯ ಅಧ್ಯಯನ ಪ್ರವಾಸ ನಡೆಸಲಾಗಿದೆ. ಸದಸ್ಯತಾ ಆಬಿಯಾನದ ಬಗ್ಗೆ ವಿಶೇಷ ಗಮನ ಹರಿಸಲಾಯಿತು.

ನೂತನ ಜಿಲ್ಲಾಧ್ಯಕ್ಷರುಗಳ ಪದಗ್ರಹಣ ಸಭೆ ಪ್ರವಾಸ – ಜನವರಿ 16, 2020 ರಂದು ರಾಜ್ಯಧ್ಯಕ್ಷರ ಅಧೀಕೃತ ಆಯ್ಕೆಯಾದ ತಕ್ಷಣ ರಾಜ್ಯ ಪ್ರವಾಸ ಆರಂಭಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ದಾಖಲೆಯೆಂಬಂತೆ ಎಲ್ಲಾ 37 ಸಂಘಟನಾತ್ಮಕ ಜಿಲ್ಲೆಗಳಿಗೆ ರಾಜ್ಯಧ್ಯಕ್ಷರು ತಮ್ಮ ಪ್ರವಾಸದಲ್ಲಿ ನೂತನ ಜಿಲ್ಲಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಬೃಹತ್ ಸಾರ್ವಜನಿಕ ಸಭೆಗಳ ಮೂಲಕ ನಡೆಸಿದರು. ಸಹಸ್ರಾರು ಜನರ ಸಮ್ಮುಖದಲ್ಲಿ ನಿಕಟಪೂರ್ವ ಜಿಲಾಧ್ಯಕ್ಷರು ನೂತನ ಜಿಲ್ಲಾಧ್ಯಕ್ಷರಿಗೆ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಪಕ್ಷದ ಧ್ವಜ ಹಸ್ತಾಂತರಿಸಿ ಅಧಿಕಾರ ಗ್ರಹಣ ನಡೆಸಿದಂತಹ ಕಾರ್ಯಕ್ರಮವು ಯಾವುದೇ ರಾಜ್ಯಾಧ್ಯಕ್ಷರ ಕಾರ್ಯಕಾಲದಲ್ಲಿ ಅವೀಸ್ಮರಣೀಯ ಮತ್ತು ಅದ್ವೀತಿಯ. ರಾಜ್ಯಾಧ್ಯಕ್ಷರ ಸೂಚನೆಯಂತೆ ಈ ಕಾರ್ಯಕ್ರಮವನ್ನು ಮುಂದುವರಸಿ ನೂತನ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ರಾಜ್ಯದ 311 ಮಂಡಲಗಳ ನೂತನ ಅಧ್ಯಕ್ಷರ ಪದಗ್ರಹಣ, ನೂತನ ಮಂಡಲ ಅಧ್ಯಕ್ಷರ ಸಮ್ಮುಖದಲ್ಲಿ ವಾರ್ಡ್ ಮತ್ತು ಬೂತ್ ಅಧ್ಯಕ್ಷರುಗಳ ಪದಗ್ರಹಣದಂತಹ ಅದ್ಬುತ ಸಂಘಟನಾತ್ಮಕ ಪರಿಯೋಜನೆ.

ದೇಶದಲ್ಲಿ ಬಂದೊದಗಿದ ಕೋವಿಡ್ 19 ರ ಸಂಕಷ್ಟ ಕಾಲದಲ್ಲಿ ರಾಜ್ಯಾದ್ಯಂತ ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರ ಸಶಕ್ತ ಪಡೆಯು ರಾಷ್ಟ್ರೀಯ ಬಿಜೆಪಿಯ ಆಶಯದಂತೆ ರಾಜ್ಯಧ್ಯಕ್ಷರ ಸಮರ್ಥ ನೇತೃತ್ವದಲ್ಲಿ ಇಡಿ ರಾಜ್ಯದಲ್ಲಿ ಅದ್ಬುತ ಕೋವಿಡ್ 19 ಸಂಕಷ್ಟ ಸೇವಾ ಕಾರ್ಯ ನಡೆಸಲಾಯಿತು.ರಾಜ್ಯದಲ್ಲಿ ಅನ್‌ಲಾಕ್ ಘೊಷಣೆಯದ ತಕ್ಷಣದಲ್ಲಿ ರಾಜ್ಯಧ್ಯಕ್ಷರು ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ನಡೆಸಿದರು. ಈ ಪ್ರವಾಸದಲ್ಲಿ ಅಭೂತಪೂರ್ವವೆಂಬಂತೆ ರಾಜ್ಯದ ಎಲ್ಲ ೩೧೧ ಮಂಡಲಗಳ ಕೋವಿಡ್ 19 ಸಂಕಷ್ಟ ಸೇವಾ ಕಾರ್ಯದ ಮಂಡಲವಾರು ವರದಿಯನ್ನು ಖುದ್ದು ರಾಜ್ಯಾಧ್ಯಕ್ಷರೇ ಪ್ರತಿ ಮಂಡಲದ ಅಧ್ಯಕ್ಷರಿಂದ ಕೇಳಿಕೊಂಡರು. ಈ ಪ್ರವಾಸ ಕೋವಿಡ್‌ನ ಸೇವಾ ಕಾರ್ಯದಲ್ಲಿ ಭಾಗಿಯಾದ ಎಲ್ಲ ಕಾರ್ಯಕರ್ತರಿಗೆ ಹುರುಪು ಮತ್ತು ಹುಮ್ಮಸ್ಸು ತಂದಿತು.

ನೂತನ ಜಿಲ್ಲಾ ಪಧಾದಿಕಾರಿಗಳು ಮತ್ತು ನೂತನ ಜಿಲ್ಲಾ ಕೋರ್ ಸಮಿತಿಗಳನ್ನು ಯಶಸ್ವಿಯಾಗಿ ರಚಿಸಿದ ನಂತರದಲ್ಲಿ ರಾಜ್ಯಧ್ಯಕ್ಷರು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ನಡೆಸಿ ನೂತನ ಜಿಲ್ಲಾ ಪಧಾದಿಕಾರಿಗಳು ಮತ್ತು ನೂತನ ಜಿಲ್ಲಾ ಕೋರ್ ಸಮಿತಿಗಳ ಸಭೆಯನ್ನು ನಡೆಸಿ, ಮುಂದಿನ ದಿನಗಳ ಕಾರ್ಯಸೂಚಿ, ಕೋವಿಡ್ ಸೇವಾ ಕಾರ್ಯದ ಯೋಜನೆಗಳ ಬಗ್ಗೆ ನಿರ್ದೇಶನ ನೀಡಲಾಯಿತು.

ರಾಜ್ಯದ 4 ವಿಧಾನ ಪರಿಷತ್ ಮತ್ತು 2 ವಿಧಾನ ಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ರಾಜ್ಯಧ್ಯಕ್ಷರು ಭರ್ಜರಿ ಚುನಾವಣಾ ಪ್ರಚಾರ ನಡೆಸಿ ಎಲ್ಲ 6 ಕ್ಷೇತ್ರಗಳಲ್ಲಿ ಬಿಜೆಪಿಯ ಜಯಭೇರಿ. ಇದೇ ಪ್ರವಾಸದಲ್ಲಿ ಮುಂಬರಲಿರುವ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಮತ್ತು ಬೆಳಗಾವಿ ಲೋಕಸಭಾ ಉಪಚುನವಣಾ ಕುರಿತ ಪೂರ್ವಭಾವಿ ಸಭೆಗಳನ್ನು ನಡೆಸಿ ಚುನಾವಣೆಗೆ ಪಕ್ಷವನ್ನು ಸರ್ವ ಸನ್ನದ್ಧಗೊಳಿಸಲಾಗಿದೆ.

ರಾಜ್ಯದ ವಿಭಾಗ ಮಟ್ಟದಲ್ಲಿ ಜಿಲ್ಲಾ ವಿಷಯ ಪ್ರಮುಖರ ಸಭೆ ಈಗಾಗಲೇ ನಡೆಸಿದ್ದು, ಹಲವು ಜಿಲ್ಲೆಗಳ ಜಿಲ್ಲಾ ಪ್ರಶಿಕ್ಷಣ ವರ್ಗಗಳಿಗೆ ಪ್ರವಾಸ ಈಗಾಗಲೇ ನಡೆಯುತ್ತಿದೆ. ಈ ಕಳೆದ ಒಂದು ವರ್ಷದಲ್ಲಿ ರಾಜ್ಯ ಕಾರ್ಯಕಾರಿಣಿ. ರಾಜ್ಯ ಪಧಾಧಿಕಾರಿಗಳ ಸಭೆ, ರಾಜ್ಯ ಮೋರ್ಚಗಳ ಸಭೆ, ಪ್ರಕೋಷ್ಟ ಪ್ರಮುಖರ ಸಭೆಗಳನ್ನು ಸಹಾ ನಡೆಸಲಾಗಿದೆ.

ಜಿಲ್ಲಾ ಕೋರ್ ಸಮಿತಿ ಸಭೆ ಪ್ರವಾಸ (2ನೇ ಸುತ್ತು) – ರಾಜ್ಯದ 37 ಬಿಜೆಪಿ ಜಿಲ್ಲೆಗಳ ಕೋರ್ ಸಮಿತಿ ಸಭೆಗಳನ್ನು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ನಡೆಸಲಾಗಿದೆ.

ವಿವಿಧ ಮೋರ್ಚಾಗಳ ರಾಜ್ಯ ಕಾರ್ಯಕಾರಿಣಿ ಸಭೆಗಳ ಪ್ರವಾಸ – ರಾಜ್ಯದ ಮೋರ್ಚಾಗಳ ಕಾರ್ಯಕಾರಿಣಿ ಸಭೆಗಳನ್ನು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಏರ್ಪಡಿಸಿದ್ದು, ಈ ಸಭೆಗಳನ್ನು ಅತ್ಯಂತ ಯಶಸ್ವಿಯಾಗಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಸಲಾಯಿತು.

ಗ್ರಾಮ ಸೇವಕ್ ಸಮಾವೇಶ ಪ್ರವಾಸ – ರಾಜ್ಯದ ಅನೇಕ ಸ್ಥಳಗಳಲ್ಲಿ ಗ್ರಾಮ ಜನಪ್ರತಿನಿಧಿಗಳಿಗೆ ಗೌರವ ಸಲ್ಲಿಸುವ ಬಿಜೆಪಿಯ ರಾಷ್ಟ್ರಮಟ್ಟದ ಕಾರ್ಯಕ್ರಮವಾದ ಗ್ರಾಮ ಸೇವಕ್ ಸಮಾವೇಶಗಳನ್ನು ರಾಜ್ಯಾಧ್ಯಕ್ಷರ ರಾಜ್ಯ ಪ್ರವಾಸದಲ್ಲಿ ನಡೆಸಲಾಯಿತು. ಬೆಳಗಾವಿಯಲ್ಲಿ ಕೇಂದ್ರದ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಷಾರವರ ನೇತೃತ್ವದಲ್ಲಿ ಗ್ರಾಮ ಸೇವಕ್ ಸಮಾವೇಶದ ಸಮಾರೋಪ ಸಭೆಯನ್ನು ಅಭೂತಪೂರ್ವವಾಗಿ ನಡೆಸಲಾಯಿತು.

ವಿಭಾಗ ಮಟ್ಟದ ವಿಶೇಷ ಸಭೆಗಳ ಪ್ರವಾಸ – ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿಯ ಎಲ್ಲಾ ಹತ್ತೂ ವಿಭಾಗಗಳ ವಿಶೇಷ ಸಭೆಗಳನ್ನು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಸಿ ಪ್ರವಾಸ ಮಾಡಲಾಗಿದೆ.

ಪ್ರಕೋಷ್ಠಗಳ ರಾಜ್ಯ/ಜಿಲ್ಲಾ ಸಂಚಾಲಕರು, ಸಹ ಸಂಚಾಲಕರ ಸಭೆ ಪ್ರವಾಸ – ರಾಜ್ಯ ಮತ್ತು ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ, ಸಹ ಸಂಚಾಲಕರ ಸಭೆಗಳನ್ನು ನಿರಂತರವಾಗಿ ರಾಜ್ಯಾದಂತ ರಾಜ್ಯಾಧ್ಯಕ್ಷರ ಪ್ರವಾಸದಲ್ಲಿ ವಿವಿಧ ಕೇಂದ್ರಗಳಲ್ಲಿ ನಡೆಸಲಾಯಿತು.

ರಾಜ್ಯ ಪದಾಧಿಕಾರಿಗಳ ಸಭೆ – ರಾಜ್ಯ ಪದಾಧಿಕಾರಿಗಳ ಸಭೆಯನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

ಲೋಕಸಭಾ/ವಿಧಾನಸಭಾ ಉಪಚುನಾವಣೆ ತಯಾರಿ ಮತ್ತು ಪ್ರಚಾರ ಪ್ರವಾಸ – ಬೆಳಗಾವಿ ಲೋಕಸಭಾ, ಬಸವ ಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಘೋಷಣೆಗೂ ಮುನ್ನ ಎಲ್ಲ ಮೂರು ಕ್ಷೇತ್ರಗಳಲ್ಲಿ ವ್ಯಾಪಕ ಪ್ರವಾಸ ನಡೆಸಿ ಸಕಲ ಸಿದ್ಧತೆಯನ್ನು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು. ಉಪಚುನಾವಣೆಗಳಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಲಾಯಿತು. ಈ ಪರಿಣಾಮ ಬೆಳಗಾವಿ ಲೋಕಸಭೆ ಮತ್ತು ಬಸವ ಕಲ್ಯಾಣದಲ್ಲಿ ಅಭೂತಪೂರ್ವ ಜಯಗಳಿಸಲಾಯಿತು.

ಕೋವಿಡ್ ಎರಡನ ಅಲೆ ಕಾರ್ಯ ಚಟುವಟಿಕೆ ಮತ್ತು ಪರಿಹಾರ ಕಾರ್ಯ ಪ್ರವಾಸ – ಹೆಮ್ಮಾರಿ ಕೋವಿಡ್‌ನ ವಿರುದ್ಧ ಹೋರಾಟದ ಸಂದರ್ಭದಲ್ಲಿ ರಾಜ್ಯಾದ್ಯಂತ ಜನತೆಯ ನೋವಿಗೆ ಸ್ಪಂದಿಸುತ್ತಿರುವ ಏಕಮಾತ್ರ ಪಕ್ಷವಾದ ಬಿಜೆಪಿಯು ಮುಂಚೂಣಿಯಲ್ಲಿದೆ. ಪಕ್ಷದ ಎಲ್ಲ ಪ್ರಮುಖರು ಮತ್ತು ಕಾರ್ಯಕರ್ತರು ಅತ್ಯಂತ ಸಹೃದಯತೆಯಿಂದ ಸಕ್ರಿಯವಾಗಿ ಕೋವಿಡ್ ಬಾದಿತರಿಗೆ ಬೆಡ್, ಆಕ್ಸಿಜನ್, ಚುಚ್ಚುಮದ್ದು, ಐಸಿಯು ಮತ್ತು ವೆಂಟಿಲೇಟರ್‌ಗಳ ಸೌಕರ್ಯ ಕಲ್ಪಿಸುವುದು. ಬಡ ಮತ್ತು ದುರ್ಬಲ ವರ್ಗದವರಿಗೆ ಆಹಾರ ಕಿಟ್‌ಗಳ ವಿತರಣೆ, ಅನಾಥ ಶವಗಳ ಅತ್ಯಂತ ಗೌರವ ಪೂರ್ವಕ ಸಂಸ್ಕಾರ ಇತರೆ ಹತ್ತು ಹಲವು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ರಾಜ್ಯಾದ್ಯಂತ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪ್ರವಾಸ ನಡೆಸಿ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಹತ್ತು ಹಲವು ಕೋವಿಡ್ ಕೇರ್ ಸೆಂಟರ್‌ಗಳು, ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಯಂತ ಮಹತ್ವದ ಕಾರ್ಯಗಳನ್ನು ಮಾಡಲಾಯಿತು.

ಜಿಲ್ಲಾ ಕಾರ್ಯಾಲಯ ಕಟ್ಟಡ ನಿರ್ಮಾಣ ಪರಿಶೀಲನೆ ಪ್ರವಾಸ – ಯಾವುದೇ ರಾಜಕೀಯ ಪಕ್ಷದ ಆಧಾರವಾದ ಸ್ವಂತ ಕಾರ್ಯಾಲಯಗಳ ಕಟ್ಟಡ ನಿರ್ಮಾಣಕ್ಕೆ ಅತ್ಯಂತ ಹೆಚ್ಚಿನ ಮಹತ್ವ ನೀಡಲಾಗಿದ್ದು, ಈ ವರೆಗೆ ಹತ್ತು ಹಲವು ಜಿಲ್ಲೆಗಳ ಕಾರ್ಯಾಲಯ ಕಟ್ಟಡ ನಿರ್ಮಾಣದ ಪರಿಶೀಲನೆ ಮತ್ತು ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಈಗಾಗಲೇ ಎರಡು ಸುತ್ತುಗಳ ಜಿಲ್ಲಾ ಪ್ರವಾಸ ಮಾಡಲಾಗಿದೆ.

]]>
https://iambjp.in/archives/444/feed 0