Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Warning: Cannot modify header information - headers already sent by (output started at /home3/buntss5v/iambjp.in/wp-includes/functions.php:6121) in /home3/buntss5v/iambjp.in/wp-includes/feed-rss2.php on line 8
Pressmeet – I am BJP https://iambjp.in Making Bharat Vishwa Guru Fri, 07 Jan 2022 12:19:41 +0000 en-US hourly 1 https://wordpress.org/?v=6.8.1 https://iambjp.in/wp-content/uploads/2021/08/cropped-Smal-Logo-32x32.png Pressmeet – I am BJP https://iambjp.in 32 32 ಖರ್ಗೆಯವರಿಂದ ಸುಳ್ಳು ಹೇಳಿಸಿದ ಕಾಂಗ್ರೆಸ್ –  ಛಲವಾದಿ ನಾರಾಯಣಸ್ವಾಮಿ ಆರೋಪ https://iambjp.in/archives/770 https://iambjp.in/archives/770#respond Fri, 07 Jan 2022 12:19:41 +0000 https://iambjp.in/?p=770 ಬೆಂಗಳೂರು: ಪಂಜಾಬ್‍ನಲ್ಲಿ ಪ್ರಧಾನಿಯವರ ಭೇಟಿ ವೇಳೆ ಭದ್ರತಾ ವಿಫಲತೆ ಕುರಿತು ಮಲ್ಲಿಕಾರ್ಜುನ ಖರ್ಗೆಯವರು ಸುಳ್ಳು ಹೇಳಿದ್ದು, ಕಾಂಗ್ರೆಸ್‍ನವರು ಅವರಿಂದ ಸುಳ್ಳು ಹೇಳಿಸಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಸುಳ್ಳನ್ನೇ ಹೇಳುವವರಿಗೆ ಮಾತ್ರ ಅವಕಾಶ ಇದೆ. ಆ ಪಕ್ಷದಲ್ಲಿದ್ದ ನಾನು ಸತ್ಯ ಹೇಳಲು ಬಿಜೆಪಿಗೆ ಬಂದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರು ಯಾವತ್ತೂ ಸುಳ್ಳು ಹೇಳಿದ್ದನ್ನು ನಾನು ನೋಡಿರಲಿಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರಿಂದ ಅವರ ಕೈಯಲ್ಲಿ ಕಾಂಗ್ರೆಸ್‍ನವರು ಸುಳ್ಳು ಹೇಳಿಸಿದ್ದಾರೆ. ದಲಿತ ವಿಚಾರವನ್ನು ತಂದಿದ್ದಾರೆ. ಪಂಜಾಬ್‍ನ ದಲಿತ ಸಿಎಂ ಅವರನ್ನು ಪದಚ್ಯುತಗೊಳಿಸಲು ಪ್ರಧಾನಿ ಹೀಗೆ ಮಾಡಿದ್ದಾರೆ ಎಂದಿದ್ದಾರೆ. ಇದು ಆಕ್ಷೇಪಾರ್ಹ ಎಂದು ತಿಳಿಸಿದರು.

ಖಲಿಸ್ತಾನ ಮತ್ತು ಪಾಕಿಸ್ತಾನದ ಜೊತೆ ಪಂಜಾಬ್ ಸರಕಾರ ಕೈಜೋಡಿಸಿದೆ ಎಂದು ಅವರು ಟೀಕಿಸಿದರು. ಈ ಘಟನೆಯನ್ನು ದೇಶದ ಎಲ್ಲ ಪ್ರಜೆಗಳು ಖಂಡಿಸಬೇಕು ಎಂದು ಅವರು ನುಡಿದರು.

ಭದ್ರತಾ ವಿಫಲತೆಯು ಕ್ರಾಸ್ ಬಾರ್ಡರ್ ಟೆರರಿಸಂನ ಒಂದು ಭಾಗ. ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪರ ಮಾತನಾಡುತ್ತಾರೆ. ಪಾಕ್ ಜೊತೆ ಸೇರಿ ಈ ಕೃತ್ಯವನ್ನು ಪಂಜಾಬ್ ಸರಕಾರ ಮತ್ತು ಕಾಂಗ್ರೆಸ್‍ನವರು ಮಾಡಿದ್ದಾರೆ. ಇದರ ಹಿಂದೆ ಅಂತರರಾಷ್ಟ್ರೀಯ ಪಿತೂರಿ ಇದೆ ಎಂದು ವಿವರಿಸಿದರು.

ಈ ಆರೋಪ ಮಾಡಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಎಂದು ಖರ್ಗೆಯವರನ್ನು ಪ್ರಶ್ನಿಸಿದ ಅವರು, ಪ್ರಧಾನಿಯವರು ಬರುವ ಮೊದಲು ಸರ್ವೇ ಮಾಡಿರ್ತಾರೆ. ಪಂಜಾಬ್ ಸಿಎಂ ರೈತರ ಮುಂದೆ ನಿಂತು ಮಾತನಾಡುವುದು ಅವಶ್ಯಕತೆ ಇತ್ತೇ? ಪ್ರಧಾನಿ ಬರುವಾಗ ಹೋರಾಟ, ಪ್ರತಿಭಟನೆಗೆ ಅವಕಾಶವಿಲ್ಲ. ಪಂಜಾಬ್‍ನಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಸಿಎಂ, ಮುಖ್ಯ ಕಾರ್ಯದರ್ಶಿ ಬರದಿರುವುದು ಏಕೆ? ಎಂದು ಕೇಳಿದರು.

ದಲಿತರೊಬ್ಬರನ್ನು ಸಿಎಂ ಮಾಡಿ ಅವರಿಗೆ ಅಪವಾದ ಬರಲು ಈ ರೀತಿ ಕಾಂಗ್ರೆಸ್ ಮಾಡಿಸಿತೇ? ಕೇವಲ 3 ತಿಂಗಳಿಗೆ ಅಲ್ಲಿ ದಲಿತ ಸಿಎಂ ಮಾಡಿದ್ದೇಕೆ? ಕರ್ನಾಟಕದಲ್ಲಿ ಆರು ದಶಕದಿಂದ ದಲಿತ ಸಿಎಂ ಬೇಡಿಕೆ ಇದ್ದರೂ ಮಾಡಿಲ್ಲವೇಕೆ ಎಂದು ಅವರು ಪ್ರಶ್ನಿಸಿದರು. ಕರ್ನಾಟಕದಲ್ಲಿ ಮಳೆ ಬಿದ್ದರೆ ಕಾಂಗ್ರೆಸ್ ಮುಖಂಡರು ಪಂಜಾಬ್‍ನಲ್ಲಿ ಕೊಡೆ ಹಿಡಿಯುವವರು ಎಂದು ವ್ಯಂಗ್ಯವಾಗಿ ತಿಳಿಸಿದರು.

ಇಂಥ ಭದ್ರತಾ ವಿಫಲತೆ ಯಾವತ್ತೂ ನಡೆದಿಲ್ಲ. ಕಾಂಗ್ರೆಸ್ ಇದರ ಬಗ್ಗೆ ಖುಷಿ ಪಡುತ್ತಿದೆ. ನಿಮಗೆ ಮೋದಿಯವರ ಬಗ್ಗೆ ದ್ವೇಷ ಇರಬಹುದು. ಈ ರೀತಿ ದ್ವೇಷ ಪಡುವುದು ಸರಿಯೇ? ಎಂದು ಕೇಳಿದರು. ಪ್ರಧಾನಿಯವರು ಅದೇ ರಸ್ತೆಯಲ್ಲಿ ಹೋದುದೇಕೆ ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್ ದೊಡ್ಡ ಅವಿವೇಕಿ. ಇವರೆಲ್ಲ ರಾಜಕಾರಣಿಯಾಗಲು ಅರ್ಹರೇ? ಈ ದೇಶದ ಕಾನೂನಿಗಿಂತ ಅವರು ದೊಡ್ಡವರೇ? ಎಂದು ಕೇಳಿದರು.

ಕಾಂಗ್ರೆಸ್‍ನ ಸಂಭ್ರಮಕ್ಕೆ ದೇಶದ ಜನರು ಉತ್ತರ ಕೊಡಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್‍ನ ಕೈಗೊಂಬೆ ಆಗಬಾರದು. ದಲಿತ ಸಮುದಾಯ ತಲೆ ತಗ್ಗಿಸುವಂತೆ ಮಾಡದಿರಿ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರು ತಾವೂ ದಲಿತ ಎಂದು ಹೇಳುವುದಾದರೆ ಪ್ರಧಾನಿಯವರೂ ಹಿಂದುಳಿದವರು. ಅವರೂ ದಲಿತರಲ್ಲವೇ? ಪ್ರಧಾನಿ ಬಗ್ಗೆ ಮಾತನಾಡುವ ಖರ್ಗೆಯವರಿಗೆ ಸಿದ್ದರಾಮಯ್ಯನವರು ಬುದ್ಧಿವಾದ ಹೇಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‍ನವರು ಸುಳ್ಳು ಹೇಳುವುದನ್ನು ಬಿಡಬೇಕು. ಮುಂದಿನ ಚುನಾವಣೆಯಲ್ಲಿ 45- 50 ಲೋಕಸಭಾ ಸೀಟು ಕೂಡ ಕಾಂಗ್ರೆಸ್‍ಗೆ ಸಿಗುವುದಿಲ್ಲ. ಮೋದಿಯವರು ಇನ್ನಷ್ಟು ಶಕ್ತಿಯುತವಾಗಿ ಮುಂದಿನ ಚುನಾವಣೆಯಲ್ಲಿ ಗೆದ್ದು ಬರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

]]>
https://iambjp.in/archives/770/feed 0
ಸಿದ್ದರಾಮಯ್ಯ ರಾಜಕೀಯದ ಚೇಳಿನಂತೆ – ಛಲವಾದಿ ನಾರಾಯಣಸ್ವಾಮಿ https://iambjp.in/archives/665 https://iambjp.in/archives/665#respond Thu, 28 Oct 2021 11:28:57 +0000 https://iambjp.in/?p=665 “ಕಿಸಾನ್ ಸಮ್ಮಾನ್” – ಕರ್ನಾಟಕಕ್ಕೆ ಮೊದಲನೇ ರಾಜ್ಯ ಪ್ರಶಸ್ತಿ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಬೆಂಗಳೂರು: ಕೇಂದ್ರ ಸರಕಾರವು ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರ ರೂಪಾಯಿಯನ್ನು ರೈತರಿಗೆ ನೀಡಿದರೆ, ರಾಜ್ಯ ಸರಕಾರವು ಅದಕ್ಕೆ ಪೂರಕವಾಗಿ 4 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಿದೆ. ರಾಜ್ಯದ 50 ಲಕ್ಷಕ್ಕೂ ಹೆಚ್ಚು ರೈತರಿಗೆ ಕೇಂದ್ರದಿಂದ 7,103 ಕೋಟಿ ಮತ್ತು ರಾಜ್ಯದಿಂದ 2,849 ಕೋಟಿ ರೂಪಾಯಿ ವಿತರಣೆಯಾಗಿದೆ. ಶೇ 97ರಷ್ಟು ರೈತರ ಖಾತೆಗಳು ಆಧಾರ್ ಲಿಂಕ್ ಆಗಿದ್ದು, ನೇರ ವರ್ಗಾವಣೆ (ಡಿಬಿಟಿ) ಸಾಧ್ಯವಾಗಿದೆ. ಈ ಚಟುವಟಿಕೆಗೆ 2020- 21ನೇ ಸಾಲಿನಲ್ಲಿ ಕರ್ನಾಟಕಕ್ಕೆ ಮೊದಲನೇ ರಾಜ್ಯ ಪ್ರಶಸ್ತಿ ಲಭಿಸಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರೂ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ಶೇಕಡಾ 1.5 ರಷ್ಟು ಮಾರುಕಟ್ಟೆ ಶುಲ್ಕ ವಿಧಿಸುತ್ತಿದ್ದವು. ಅದನ್ನು ಶೇಕಡಾ 0.60ಗೆ ಇಳಿಸಲಾಗಿದೆ. 2020ರ ಜನವರಿ 31ಕ್ಕೆ ಇದ್ದ ಮಧ್ಯಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇದರಿಂದ 55,546 ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಜಲ ಸಂಪನ್ಮೂಲ ಇಲಾಖೆಯಲ್ಲಿ ಕಳೆದ 2 ವರ್ಷಗಳಲ್ಲಿ ಭಾರಿ ಮತ್ತು ಮಧ್ಯಮ ನೀರಾವರಿಗೆ ರಾಜ್ಯದಲ್ಲಿ 33,465 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದರಿಂದ 61,147 ಹೆಕ್ಟೇರ್ ಹೆಚ್ಚು ಜಮೀನು ನೀರಾವರಿಗೆ ಒಳಪಟ್ಟಿದೆ. ಸಣ್ಣ ನೀರಾವರಿ ಇಲಾಖೆಯಲ್ಲಿ 1201.52 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳ 1,199 ಗ್ರಾಮ ಪಂಚಾಯತ್‍ಗಳಲ್ಲಿ 39,703 ಚದರ ಕಿಮೀ ಪ್ರದೇಶದಲ್ಲಿ ನೀರಾವರಿ ಯೋಜನೆ ಕಾರ್ಯಾನುಷ್ಠಾನ ಮಾಡಲಾಗಿದೆ ಎಂದು ವಿವರಿಸಿದರು.

ಕೋವಿಡ್ ಬಂದು ಶಾಲಾ ಕಾಲೇಜು ಬಂದ್ ಆಗಿದ್ದರೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆ ಮತ್ತು ಇತರ ಸೇವಾ ಸೌಲಭ್ಯಕ್ಕೆ ಸಂಬಂಧಿಸಿ ಶಿಕ್ಷಕ ಮಿತ್ರ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಶಿಕ್ಷಕರ ಕಚೇರಿ ಅಲೆದಾಟ ತಪ್ಪಿಸಲಾಗಿದೆ. 100 ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ತಲಾ 2 ಕೋಟಿಯಂತೆ 200 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೇವೆ ಎಂದರು. ಎಲ್ಲ ಸಮಸ್ಯೆಗಳ ನಡುವೆ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪರಿಣಾಮಕಾರಿ ಅನುಷ್ಠಾನ ಮಾಡಲಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಕೆಲಸ ನಡೆದಿದೆ. ಕಾಲೇಜುಗಳ 2,500 ತರಗತಿ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್‍ರೂಂ ಆಗಿ ಪರಿವರ್ತಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳ ಆನ್‍ಲೈನ್ ಕಲಿಕೆಗೆ ಪೂರಕವಾಗಿ 2.65 ಲಕ್ಷ ಲ್ಯಾಪ್‍ಟಾಪ್ ಅಥವಾ ಟ್ಯಾಬ್ಲೆಟ್ ಕೊಡಲಾಗಿದೆ. ಟಾಟಾ ಟೆಕ್ನಾಲಜೀಸ್ ಸಹಭಾಗಿತ್ವದಲ್ಲಿ ರಾಜ್ಯದ 150 ಸರಕಾರಿ ಐಟಿಐಗಳನ್ನು ಉನ್ನತೀಕರಣಕ್ಕೆ 4,636 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿಗಳ ಅತ್ಯಂತ ಪ್ರಮುಖ ಯೋಜನೆ ಸ್ವನಿಧಿಯಡಿ ರಾಜ್ಯದಲ್ಲಿ 1.11 ಲಕ್ಷ ಬೀದಿ ವ್ಯಾಪಾರಿಗಳಿಗೆ ತಲಾ 10 ಸಾವಿರದಂತೆ ಸಾಲ ಸೌಲಭ್ಯ ಕೊಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ 2.22 ಲಕ್ಷ ಮನೆಗಳನ್ನು ಈವರೆಗೆ ನಿರ್ಮಿಸಲಾಗಿದೆ. 1,821 ಘೋಷಿತ ಕೊಳಚೆ ಪ್ರದೇಶಗಳಲ್ಲಿ 3.36 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು.

ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳಡಿ ಕಳೆದ 2 ವರ್ಷಗಳಲ್ಲಿ 10.5 ಲಕ್ಷ ರೋಗಿಗಳಿಗೆ 1,849.64 ಕೋಟಿ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗಿದೆ. ಇದೇ ಅವಧಿಯಲ್ಲಿ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಯಾದಗಿರಿಯಲ್ಲಿ ಒಟ್ಟು 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳನ್ನು ಆರಂಭಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ತಂದೆತಾಯಿ ಇಬ್ಬರನ್ನೂ ಕಳೆದುಕೊಂಡ ಅನಾಥ ಕುಟುಂಬಗಳ 18 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಬೆಳವಣಿಗೆಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಪ್ರತಿ ತಿಂಗಳು 3,500 ರೂಪಾಯಿ ನೀಡಲಾಗುತ್ತಿದೆ. ಹೆಣ್ಣುಮಗುವಿಗೆ 21 ವರ್ಷದ ಬಳಿಕ ಉನ್ನತ ಶಿಕ್ಷಣ, ವಿವಾಹಕ್ಕೆ ಸಂಬಂಧಿಸಿ 1 ಲಕ್ಷ ರೂಪಾಯಿ ನೆರವು ನೀಡಲಾಗಿದೆ ಎಂದರು.

ಬಂಡವಾಳ ಆಕರ್ಷಣೆಯಲ್ಲಿ 2020ರಲ್ಲಿ ರಾಜ್ಯವು ದೇಶಕ್ಕೆ ಮೊದಲ ಸ್ಥಾನ ಪಡೆದಿದೆ. 1.62 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ನೋಂದಣಿಯಾಗಿವೆ. ಏಪ್ರಿಲ್ ಮೇ ತಿಂಗಳಿನಲ್ಲಿ 17,718 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಗಿದೆ. ಇದರಿಂದ 19,729 ಉದ್ಯೋಗಾವಕಾಶ ಲಭಿಸಿದೆ ಎಂದರು.

ಕೇಂದ್ರ ಸರಕಾರದ ಸಹಯೋಗದಲ್ಲಿ 4762 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಅನುಷ್ಠಾನ, 2,484 ಕೋಟಿ ವೆಚ್ಚದಲ್ಲಿ 399 ಕಿಮೀ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, 35 ಸಾವಿರ ಕೋಟಿಗೂ ಹೆಚ್ಚು ಮೊತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 1980 ಕಿಮೀ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ವಿವರಿಸಿದರು.

ರಾಜ್ಯಗಳ ಸ್ಟಾರ್ಟಪ್ ರ್ಯಾಂಕಿಂಗ್‍ನಲ್ಲಿ ಸತತ 2ನೇ ಬಾರಿ ಅತ್ಯುತ್ತಮ ಕಾರ್ಯನಿರ್ವಹಣೆ ಪ್ರಶಸ್ತಿ, ನೀತಿ ಆಯೋಗದ ಇನೊವೇಶನ್ ಇಂಡಿಯಾ ಇಂಡೆಕ್ಸ್‍ನಡಿ ಕರ್ನಾಟಕ 2019-20ರಲ್ಲಿ ರಾಜ್ಯವು ಪ್ರಥಮ ಸ್ಥಾನ ಪಡೆದಿದೆ. ನಾವೀನ್ಯತಾ ಪ್ರಾಧಿಕಾರ ಸ್ಥಾಪಿಸಲು ರಾಜ್ಯಕ್ಕೆ ಅನುಮತಿ ಲಭಿಸಿದೆ. ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ (ಜ್ಞಾನಸೇತು) ಸ್ಥಾಪಿಸಲಾಗಿದೆ. ಕಲಬುರ್ಗಿ, ಬೀದರ್‍ನಲ್ಲಿ ವಿಮಾನನಿಲ್ದಾಣ ಪ್ರಾರಂಭಗೊಂಡಿದೆ. ಶಿವಮೊಗ್ಗ, ವಿಜಯಪುರ ವಿಮಾನನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಹಾಸನದಲ್ಲೂ ಗ್ರೀನ್‍ಫೀಲ್ಡ್ ಏರ್‍ಪೋರ್ಟ್ 190 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಕಾಮಗಾರಿ ನಡೆದಿದೆ ಎಂದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ರಾಜ್ಯದ ಕೃಷಿಕರ ಮಕ್ಕಳಿಗೆ ಸುಮಾರು 1 ಸಾವಿರ ಕೋಟಿ ವೆಚ್ಚದಲ್ಲಿ ಪಿಯುಸಿ, ಪದವಿ ಕಲಿಕೆಗೆ ಸ್ಕಾಲರ್‍ಶಿಪ್ ಘೋಷಿಸಿದ್ದಾರೆ. ಜೊತೆಗೆ ಹಿರಿಯ ನಾಗರಿಕರು, ವಿಶೇಷ ಚೇತನ ಮಕ್ಕಳು ಮತ್ತು ವಿಧವೆಯರ ಮಾಸಾಶನವನ್ನೂ ಏರಿಸಿದ್ದಾರೆ ಎಂದರು.

ಉಪ ಚುನಾವಣೆ ಅಭಿವೃದ್ಧಿಯ ಹಿನ್ನೆಲೆಯಲ್ಲೇ ನಡೆಯಬೇಕಿತ್ತು. ಕೇಂದ್ರದ ವಿದೇಶಾಂಗ, ಶಿಕ್ಷಣ, ಕೃಷಿ, ರಕ್ಷಣಾ ನೀತಿ, ದೇಶವನ್ನು ಒಂದು ಉತ್ಪಾದಕಾ ವಲಯವಾಗಿ (ಮ್ಯಾನುಫ್ಯಾಕ್ಚರಿಂಗ್ ಹಬ್) ಪರಿವರ್ತಿಸಿ ಉದ್ಯೋಗ ಸೃಷ್ಟಿಗೆ ಮುಂದಾಗಿರುವುದು, ಸಣ್ಣ ಮತ್ತು ಮಧ್ಯಮ ಉತ್ಪಾದನಾ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆ, ಕೋವಿಡ್ ಸಂದರ್ಭದಲ್ಲಿ ಆತ್ಮನಿರ್ಭರ ಪ್ಯಾಕೇಜ್, ಜಗತ್ತಿನ ನಾಯಕತ್ವ ವಹಿಸಿರುವುದು- ಈ ಎಲ್ಲ ಸಂಗತಿಗಳ ಚರ್ಚೆ ಆಗಬೇಕಿತ್ತು ಎಂದು ತಿಳಿಸಿದರು.

6.5 ಕೋಟಿಗೂ ಹೆಚ್ಚು ಕನ್ನಡಿಗರಲ್ಲಿ ಕನ್ನಡ ಜಾಗೃತಿ ಮೂಡಿಸಲು ಸಾಮೂಹಿಕವಾಗಿ 3 ಕನ್ನಡ ಗೀತೆಗಳನ್ನು ಹಾಡಿ ಕನ್ನಡ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಸಚಿವ ಸುನೀಲ್‍ಕುಮಾರ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಅಭಿನಂದಿಸುತ್ತದೆ. ಕನ್ನಡತನ ಜಾಗೃತಗೊಳಿಸುವ ಮತ್ತು ಕನ್ನಡದ ಬಗ್ಗೆ ವಿಶೇಷ ಅಭಿಮಾನ ಬೆಳೆಸುವ ದೊಡ್ಡ ಕೆಲಸ ಮಾಡುತ್ತಿರುವುದಕ್ಕೆ ಅಭಿನಂದಿಸುತ್ತದೆ. ಕೋವಿಡ್ ನಿಯಂತ್ರಣದಲ್ಲಿರಲು ಲಸಿಕೆ ಕಾರಣವಾಗಿದ್ದು, ಕನ್ನಡ ರಾಜ್ಯೋತ್ಸವವನ್ನು ಜನತೆ ಸಂಭ್ರಮದಿಂದ ಆಚರಿಸಲು ಅವಕಾಶ ಮಾಡಿಕೊಡುವಂತೆ ಅವರು ಸರಕಾರವನ್ನು ಪಕ್ಷದ ಪರವಾಗಿ ಒತ್ತಾಯಿಸಿದರು.

ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. “ನೀವು ಕಾಂಗ್ರೆಸ್‍ನವರಲ್ಲ; ನೀವೆಲ್ಲೋ ಜನತಾದಳದಲ್ಲಿ ಇದ್ದವರು. ನೀವು ಕೂಡ ಕಾಂಗ್ರೆಸ್‍ಗೆ ಹೋಗಿದ್ದೀರಿ. ನೀವು ಯಾವ ಪಾಡಿಗಾಗಿ ಹೋಗಿದ್ದೀರೆಂದು ಸ್ಪಷ್ಟಪಡಿಸಿ” ಎಂದು ಸವಾಲೆಸೆದರು.

ದಲಿತರ ಬಗ್ಗೆ ಈ ರೀತಿ ಅವಹೇಳನಕಾರಿ ಮಾತನಾಡಲು ನಿಮಗೆ ಯಾವರೀತಿಯ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು. ನೀವು ಮುಖ್ಯಮಂತ್ರಿ ಆಗಿದ್ದವರು. ಕಾಂಗ್ರೆಸ್‍ನಲ್ಲಿ ಹಲವು ದಶಕ ಕಾಲ ದುಡಿದ ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಕೂಗು ಇತ್ತು. ಆಗ ನೀವು ಹೊರಗಡೆಯಿಂದ ಬಂದವರು, ಇಡೀ ಕಾಂಗ್ರೆಸ್ಸನ್ನು ಬ್ಲ್ಯಾಕ್‍ಮೇಲ್ ಮಾಡಿ, ಮುಖಂಡರನ್ನು ತುಳಿದು, ದಲಿತರ ಸಂಹಾರ ಮಾಡಿ ನೀವು ಮುಖ್ಯಮಂತ್ರಿಯಾದವರು. ಸಿದ್ದರಾಮಯ್ಯ ಒಬ್ಬ ಕಪಟ ರಾಜಕಾರಣಿ, ಅವರಿಗೆ ಇನ್ನೊಬ್ಬರನ್ನು ತುಳಿದೇ ಗೊತ್ತು ಎಂದು ಅಭಿಪ್ರಾಯಪಟ್ಟರು.

“ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ಚರ್ಚೆ ನಡೆಯುತ್ತಿದ್ದಾಗ 2008ರಲ್ಲಿ ಕೇವಲ 250 ಮತಗಳ ಅಂತರದಲ್ಲಿ ಗೆದ್ದ ನೀವು ಬಹುದೊಡ್ಡ ನಾಯಕರಾದಿರಿ. ನೀವೆಷ್ಟು ಕಳಪೆ ನಾಯಕ ಎಂಬುದು ನಿಮ್ಮ ಕ್ಷೇತ್ರದ ಜನರಿಗೆ ಗೊತ್ತಿತ್ತು. ಆವತ್ತು ಅಧ್ಯಕ್ಷರಾಗಿದ್ದ ಖರ್ಗೆಯವರನ್ನು ಆವತ್ತೇ ತುಳಿದು ಇಲ್ಲಿಂದ ಓಡಿಸಿದಿರಿ. ಡಾ. ಪರಮೇಶ್ವರ್ ಅವರಿಗೆ ಅವಕಾಶ ಸಿಗಬಾರದೆಂದು ಅವರನ್ನು ಸೋಲಿಸಿದಿರಿ” ಎಂದು ತಿಳಿಸಿದರು.

ಸಿದ್ದರಾಮಯ್ಯರ ಬಗ್ಗೆ ಮಾತನಾಡಿದರೆ ಮತ್ತೆಲ್ಲಿ ಸೋಲಿಸಿಬಿಡುತ್ತಾರೋ ಎಂಬ ಭಯ ಆ ಪಕ್ಷದ ನಾಯಕರಿಗಿದೆ. ಕಾಂಗ್ರೆಸ್‍ನಲ್ಲಿ ಬಹಳ ಪ್ರಭಾವಿ ಲೀಡರ್‍ಗಳಿಲ್ಲ. ಅದನ್ನು ಅರ್ಥ ಮಾಡಿಕೊಂಡ ಸಿದ್ದರಾಮಯ್ಯ ಬಹಳ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ನುಡಿದರು. ಕಾಂಗ್ರೆಸ್‍ನ ಕೆಲವು ಲೀಡರ್‍ಗಳು ಬೋನ್‍ಲೆಸ್ ಎಂದು ತಿಳಿಸಿದರು.

ಬಂಗಾರಪ್ಪ ಅವರು ಪೊಲಿಟಿಕಲ್ ಸ್ಕಾರ್ಪಿಯನ್ (ರಾಜಕೀಯದ ಚೇಳು) ಎಂಬ ಮಾತು ಹೇಳುತ್ತಿದ್ದರು. ಈ ಮಾತು ಸಿದ್ದರಾಮಯ್ಯ ಅವರಿಗೆ ಅನ್ವಯಿಸುತ್ತದೆ. ದೇವೇಗೌಡರಿಗೆ, ತಮ್ಮನ್ನು ಗೆಲ್ಲಿಸಿದ ಖರ್ಗೆಯವರಿಗೆ, ಪಕ್ಷಕ್ಕೆ ಕರೆತಂದ ವಿಶ್ವನಾಥ್, ರೇವಣ್ಣನ ಪರಿಸ್ಥಿತಿ ಏನಾಗಿದೆ, ಅವರ ಸಮುದಾಯದವರನ್ನೇ ಸಿದ್ದರಾಮಯ್ಯ ಬಿಟ್ಟಿಲ್ಲ, ವಿಶ್ವನಾಥರನ್ನೇ ನೀವು ಬಿಟ್ಟಿಲ್ಲ; ಅವರು ತಪ್ಪಿಸಿಕೊಳ್ಳಲು ಬಿಜೆಪಿಗೆ ಬಂದಿದ್ದಾರೆ ಎಂದು ಗಮನ ಸೆಳೆದರು. ವಿಶ್ವನಾಥರನ್ನು ನಾವು ಬಿಟ್ಟುಕೊಟ್ಟಿಲ್ಲ; ಎಂಎಲ್‍ಸಿ ಮಾಡಿದ್ದೇವೆ ಎಂದು ವಿವರಿಸಿದರು.

ಎಂ.ಟಿ.ಬಿ ನಾಗರಾಜ್, ಬಸವರಾಜ್ ವಿಚಾರದಲ್ಲೂ ಹೀಗೇ ಆಗಿದೆ. ಸಿದ್ದರಾಮಯ್ಯ ಕೂಡ ಒಬ್ಬ ಅಡ್ಜಸ್ಟ್‍ಮೆಂಟ್ ಗಿರಾಕಿ ಎಂದು ತಿಳಿಸಿದರು. ಪರಮೇಶ್ವರ್ ಕಣ್ಣೀರು ಹಾಕಿ ತಮ್ಮನ್ನು ಉಪ ಮುಖ್ಯಮಂತ್ರಿ ಮಾಡಲು ಕೇಳಿಕೊಂಡರೂ ಅದನ್ನಾದರೂ ಮಾಡಿದ್ದೀರಾ ಎಂದು ಕೇಳಿದರು. ನಿಮ್ಮ ಕುರ್ಚಿಗೆ ಇನ್ನೊಬ್ಬರ ನೆರಳು ಕೂಡ ಬೀಳದಂತೆ ನೋಡಿಕೊಂಡಿರಿ ಎಂದು ತಿಳಿಸಿದರು.

ದಲಿತರು ಆಗಬೇಕೆಂಬ ದೊಡ್ಡ ಕೂಗೆದ್ದಾಗ ನಾನೇ ದಲಿತ; ನನಗಿಂತ ದೊಡ್ಡ ದಲಿತ ಬೇಕಾ ಎಂಬ ಪ್ರಶ್ನೆ ಹಾಕಿದ ನಿಮ್ಮ ಅಹಿಂದಕ್ಕೆ ಏನು ಅರ್ಥವಿದೆ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ನಿನ್ನ ಹೃದಯದಲ್ಲಿ ಕಪಟತನ ಎಷ್ಟಿದೆ ಎಂಬುದರ ಪ್ರದರ್ಶನ ಆಗುತ್ತಿದೆ ಎಂದೂ ನುಡಿದರು. ಮಗನ ಭವಿಷ್ಯಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ನೀವು ಕಾಂಗ್ರೆಸ್‍ನಲ್ಲಿದ್ದೀರಿ ಎಂದು ತಿಳಿಸಿದರು.

ಸಿದ್ದರಾಮಯ್ಯರನ್ನು ಕಂಡೊಡನೆ ಕಾಂಗ್ರೆಸ್ ಮುಖಂಡರು ಬಟ್ಟೆ ಒದ್ದೆ ಮಾಡಿಕೊಂಡು ಕುಳಿತಿರುತ್ತಾರೆ. ಕಾಂಗ್ರೆಸ್‍ನವರನ್ನು ಇಂಥ ಪರಿಸ್ಥಿತಿಗೆ ಸಿದ್ದರಾಮಯ್ಯ ದೂಡಿದ್ದಾರೆ ಎಂದರು. ಆದ್ದರಿಂದ ದಲಿತರ ಕುರಿತು ಮಾತನಾಡಲು ಆತನಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ತಿಳಿಸಿದರು.

ಇವತ್ತು ದಲಿತರ ನಡೆ ಬಿಜೆಪಿಯ ಕಡೆ ಆಗಿದೆ. ದಲಿತರು ಸ್ವಾಭಿಮಾನಿಗಳು. ನೀವು ಅನ್ಯಾಯ, ಮೋಸ, ವಂಚನೆ ಮಾಡುತ್ತಿದ್ದರೆ, ತುಳಿಯುತ್ತಿದ್ದರೆ, ಗೌರವ ಕೊಡದಿದ್ದರೆ ದಲಿತರಾದರೂ ಏನು ಮಾಡುತ್ತಾರೆ. ಅವರೂ ಸ್ವಾಭಿಮಾನಿಗಳಲ್ಲವೇ ಎಂದು ಪ್ರಶ್ನಿಸಿದರು. ದಲಿತರೇನೂ ಸನ್ಯಾಸಿಗಳಲ್ಲ; ಗೌರವ, ನ್ಯಾಯ ಇರುವಲ್ಲಿಗೆ ದಲಿತರು ಹೋಗುವುದು ಸಹಜ ಎಂದರು.

ಇಬ್ಬರು ಲೀಡರ್‌ಗಳನ್ನು ತೋರಿಸಿ ದಲಿತರನ್ನು ಮತಬ್ಯಾಂಕಾಗಿ ಕಾಂಗ್ರೆಸ್ಸಿಗರು ಪರಿವರ್ತಿಸಿದ್ದರು. ಇವತ್ತು ನಮ್ಮ ಜನರಿಗೆ ಅದು ಅರ್ಥ ಆಗಿದೆ. ಎಲ್ಲ ದಲಿತರ ನಡಿಗೆ ಬಿಜೆಪಿ ಕಡೆಗೆ ಎಂಬ ದಿನಗಳು ಬಂದಿವೆ ಎಂದರು. ಅದರಿಂದ ಅವರು ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಬಿಜೆಪಿ ಸದಾಕಾಲ ಅಧಿಕಾರದಲ್ಲಿ ಉಳಿಯಲಿದೆ ಎಂದು ವಿಶ್ಲೇಷಿಸಿದರು.

ಖಾದಿ ಬಟ್ಟೆ ತೊಡಬೇಕು, ಮದ್ಯಪಾನ ಮಾಡಬಾರದು, ಸಾಮಾಜಿಕ ಅಸಮಾನತೆ ಆಚರಿಸಬಾರದು- ಹೀಗೆ ಹಲವು ವಿಚಾರಗಳನ್ನು ಕಾಂಗ್ರೆಸ್ ಸದಸ್ಯರಾಗುವವರಿಗೆ ಹೊಸದಾಗಿ ಹೇಳುತ್ತಿದ್ದಾರಂತೆ. ಇದು ಕಾಂಗ್ರೆಸ್ ಸಂವಿಧಾನ. ಇದು 2007ರಲ್ಲಿ ತಿದ್ದುಪಡಿಯೂ ಆಗಿದೆ ಎಂದ ಅವರು, ರಾಹುಲ್ ಗಾಂಧಿ ಖಾದಿಧಾರಿಯೇ, ಯಾವಾಗ ನೋಡಿದರೂ ಜೀನ್ಸ್- ಟೀಶರ್ಟ್‍ನಲ್ಲೇ ಇರುತ್ತಾರೆ ಎಂದು ಪ್ರಶ್ನೆ ಮುಂದಿಟ್ಟರು. ಅಧ್ಯಕ್ಷರಾಗಿದ್ದವರೇ ಅದನ್ನು ಪಾಲಿಸುವುದಿಲ್ಲ ಎಂದರು.

ಕಾಂಗ್ರೆಸ್‍ನಲ್ಲಿ ಮದ್ಯಪಾನ ಮಾಡದವರು ಯಾರು ಇದ್ದಾರೆ? ಮದ್ಯಪಾನ ಮಾಡದಿದ್ದರೆ ಕಾಂಗ್ರೆಸ್‍ನವರಿಗೆ ರಾತ್ರಿ ನಿದ್ರೆಯೇ ಬರುವುದಿಲ್ಲ. ಕಾಂಗ್ರೆಸ್‍ನವರು ಹುಟ್ಟುಕುಡುಕರು ಎಂದು ತಿಳಿಸಿದರು. ನಾನು ಇದನ್ನೆಲ್ಲ ನೋಡಿಬಂದಿದ್ದೇನೆ ಎಂದು ವಿವರಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರು 20ರಿಂದ 25 ಕೋಟಿ ಖರ್ಚು ಮಾಡುತ್ತಾರೆ. ಅವರಿಗೆ ಎಲ್ಲಿಂದ ದುಡ್ಡು ಬರುತ್ತದೆ? ಶ್ರೀಮಂತರು ಮಾತ್ರ ಚುನಾವಣೆಗೆ ನಿಲ್ಲಬಹುದು ಎಂದು ನೀವೇ ಪ್ರೂವ್ ಮಾಡಿದ್ದೀರಿ ಎಂದರು. ಯುವಮೋರ್ಚಾಗೆ ನಾವು ದಲಿತರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ನಿಮ್ಮಂತೆ ತೋರಿಕೆಗಾಗಿ ನಾವು ಕೆಲಸ ಮಾಡುವುದಿಲ್ಲ ಎಂದರು.

ಮುಸ್ಲಿಮರನ್ನು ಬೆದರಿಸಿ, ಬಿಜೆಪಿ ಗುಮ್ಮದ ಭಯ ಹುಟ್ಟಿಸಿ ಮತಬ್ಯಾಂಕ್ ಆಗಿ ಕಾಂಗ್ರೆಸ್ ಮಾಡಿಕೊಂಡಿತ್ತು. ಈಗ ಆ ವಿಚಾರ ಮುಸ್ಲಿಮರಿಗೂ ಅರಿವಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದರೆ ಸಂತುಷ್ಟರಾಗಿ ಇರಬಹುದೆಂದು ಅವರಿಗೂ ಗೊತ್ತಾಗಿದೆ ಎಂದು ವಿವರಿಸಿದರು. ಬಿಜೆಪಿ ಸರ್ವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತದೆ. ಶೇಕಡಾ 15ರಿಂದ 20 ಮುಸ್ಲಿಮರು ನಮ್ಮ ಮತದಾರರಿದ್ದಾರೆ. ಆದರೆ ಸರಿಯಾದ ನಾಯಕರಿಲ್ಲ ಎಂದು ವಿಶ್ಲೇಷಿಸಿದರು.

ರಾಜ್ಯ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

]]>
https://iambjp.in/archives/665/feed 0
ಕಾಂಗ್ರೆಸ್ ಪಕ್ಷದ ಗೋಸುಂಬೆ ರಾಜಕೀಯ – ಛಲವಾದಿ ನಾರಾಯಣಸ್ವಾಮಿ https://iambjp.in/archives/649 https://iambjp.in/archives/649#respond Tue, 12 Oct 2021 12:52:45 +0000 https://iambjp.in/?p=649 ಬೆಂಗಳೂರು: ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಗೋಸುಂಬೆ ರಾಜಕೀಯ ಮಾಡುತ್ತಿದ್ದು, ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರರು ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಲಾಭ ಇದ್ದರೆ ಮಾತ್ರ ದಲಿತರು, ರೈತರ ಬಗ್ಗೆ ಪ್ರೀತಿ ತೋರಿಸುತ್ತದೆ. ತಮ್ಮ ಆಡಳಿತ ಇರುವ ಕಡೆ ಅದು ದೌರ್ಜನ್ಯಗಳ ವಿರುದ್ಧ ಮಾತನ್ನೇ ಆಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ ಎಂದು ವಿವರಿಸಿದರು.

ದಲಿತರು, ರೈತರ ಬಗ್ಗೆ ನಕಲಿ ಪ್ರೀತಿ ತೋರಿಸುವ ಕಾಂಗ್ರೆಸ್ಸಿಗರು ತಮ್ಮ ಪಕ್ಷ ಆಡಳಿತ ಇರುವ ರಾಜ್ಯದಲ್ಲಿ ಬಾಯಿ ಮುಚ್ಚಿ ಕುಳಿತಿರುತ್ತಾರೆ. ಸುಮಾರು 7 ದಶಕಗಳ ಕಾಲ ದಲಿತರನ್ನು ಮತಬ್ಯಾಂಕ್ ಮಾಡಿಕೊಂಡಿದ್ದ ಕಾಂಗ್ರೆಸ್, ದಲಿತರ ಸಬಲೀಕರಣಕ್ಕೆ ಪ್ರಯತ್ನ ಮಾಡಲೇ ಇಲ್ಲ ಎಂದರು.

ರಾಜಸ್ಥಾನದಲ್ಲಿ ಒಂದು ವರ್ಷದಲ್ಲಿ 80 ಸಾವಿರ ಮಹಿಳೆಯರು ಮತ್ತು ದಲಿತರ ವಿರುದ್ಧ 12 ಸಾವಿರ ಅತ್ಯಾಚಾರದ ಕೇಸ್‍ಗಳು ದಾಖಲಾಗಿವೆ. ಹೀಗಿದ್ದರೂ ಉತ್ತರ ಪ್ರದೇಶದಲ್ಲಿ ಹೋರಾಟ ಮಾಡುವ ಕಾಂಗ್ರೆಸ್ಸಿಗರು ರಾಜಸ್ಥಾನದಲ್ಲಿ ತಮ್ಮ ಪಕ್ಷ ಆಡಳಿತ ಮಾಡುವ ಕಾರಣ ಅಲ್ಲಿಗೆ ತೆರಳಿ ಪ್ರತಿಭಟನೆ ಮಾಡುತ್ತಿಲ್ಲ ಎಂದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬೆಂಬಲಿಸಿದ ಕಾರಣಕ್ಕಾಗಿ ದಲಿತರು, ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಆದರೆ, ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷದ ಮುಖಂಡರು ಆಕೆಯ ಕಾರ್ಯಕರ್ತರ ದೌರ್ಜನ್ಯವನ್ನು ಖಂಡಿಸಿಲ್ಲ. ಪಶ್ಚಿಮ ಬಂಗಾಲದಲ್ಲಿ ದಲಿತರಿಗೆ ಆದ ಅನ್ಯಾಯದ ಬಗ್ಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಅವರು ಟ್ವೀಟ್ ಮಾಡಿಲ್ಲ ಎಂದು ಅವರು ವಿವರಿಸಿದರು.

ದೆಹಲಿ ರೈತರ ಹೋರಾಟಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಮಾತುಕತೆ ನಡೆಸುತ್ತಿದೆ ಉತ್ತರ ಪ್ರದೇಶದಲ್ಲಿ ಆದ ದುರ್ಘಟನೆ ಕುರಿತು ಕ್ರಮ ಕೈಗೊಳ್ಳುವುದಾಗಿ ಪಕ್ಷದ ರಾಷ್ಟ್ರಾಧ್ಯಕ್ಷರಾದ ಜೆ.ಪಿ.ನಡ್ಡಾ ಅವರೇ ಹೇಳಿದ್ದಾರೆ. ಆದರೆ, ರಾಜಸ್ಥಾನ ಮತ್ತಿತರ ಕಡೆಗಳಲ್ಲಿ ಆದ ಅತ್ಯಾಚಾರ, ದಲಿತರ ಮೇಲಿನ ದೌರ್ಜನ್ಯದ ಕುರಿತು ಕಾಂಗ್ರೆಸ್ ಮುಖಂಡರು ಮೌನವಾಗಿಯೇ ಇದ್ದಾರೆ ಎಂದು ತಿಳಿಸಿದರು.

ರಾಜಸ್ಥಾನದ ದುರ್ಘಟನೆಗಳ ಸಂಬಂಧ ಕ್ರಮಕ್ಕೆ ಸೂಚಿಸಿ ಮಾನವ ಹಕ್ಕುಗಳ ಆಯೋಗವು ಸರಕಾರ, ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ಕೊಟ್ಟಿದೆ. ಮಹಾರಾಷ್ಟ್ರದಲ್ಲಿ ದಲಿತರ ಮೇಲೆ ದೌರ್ಜನ್ಯ, ಕೊಲೆ ಆದರೆ ಅದರ ಬಗ್ಗೆ ಕಾಂಗ್ರೆಸ್ ಉಸಿರೆತ್ತುವುದಿಲ್ಲ. ರಾಜ್ಯದಲ್ಲೂ ಮುಸ್ಲಿಮರಿಂದ ಅತ್ಯಾಚಾರ ನಡೆದರೆ ಕಾಂಗ್ರೆಸ್ ನಾಯಕರು ಆ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ಒಬ್ಬರಿಗೊಂದು ಇನ್ನೊಬ್ಬರಿಗೆ ಮತ್ತೊಂದು ಎಂಬ ಜಾಯಮಾನ ಹೊಂದಿಲ್ಲ. ರಾಜಕೀಯ ಲಾಭ ಇದ್ದರೆ ಮಾತ್ರ ಕಾಂಗ್ರೆಸ್ ಪ್ರತಿಭಟನೆಗೆ ಇಳಿಯುತ್ತದೆ. ದ್ವಂದ್ವ ನೀತಿಯಿಂದಲೇ ಕಾಂಗ್ರೆಸ್ ಪಕ್ಷ ಈ ದುಸ್ಥಿತಿಗೆ ಇಳಿದಿದೆ. ಖಾಯಂ ಅಧ್ಯಕ್ಷರೇ ಇಲ್ಲದ ಪಕ್ಷವದು ಎಂದು ವಿವರಿಸಿದರು.

ಕಾಂಗ್ರೆಸ್ಸಿಗರು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಿ ಮುಸ್ಲಿಮರು ಮತ್ತು ದಲಿತರನ್ನು ಭಯಭೀತರನ್ನಾಗಿ ಮಾಡಿದ್ದರು. ಬಿಜೆಪಿಯಿಂದ ದೂರವಿದ್ದ ದಲಿತರು ಈಗ ಬಿಜೆಪಿ ಪರವಾಗಿ ನಿಂತಿದ್ದಾರೆ ಎಂದು ತಿಳಿಸಿದರು.

ಶಾಸಕರಾದ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಮಾತನಾಡಿ, ಬೌದ್ಧಿಕ ದಿವಾಳಿತನ ಹೊಂದಿದ ಕಾಂಗ್ರೆಸ್. ಡೋಂಗಿ ಜಾತ್ಯತೀತವಾದ, ದಲಿತರ ಬಗ್ಗೆ ಕಾಂಗ್ರೆಸ್‍ನ ಡೋಂಗಿ ಪ್ರೇಮವನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ಡಾ. ಅಂಬೇಡ್ಕರರನ್ನು ನಿರಂತರ ಅವಮಾನ ಮಾಡಿದ್ದ ಪಕ್ಷ ಕಾಂಗ್ರೆಸ್. ದಲಿತರ ಕುರಿತು ಕಾಂಗ್ರೆಸ್ ಪಕ್ಷದವರಿಗೆ ನೈಜ ಪ್ರೇಮ ಮತ್ತು ಕಳಕಳಿ ಇಲ್ಲ. ದೆಹಲಿಯಲ್ಲಿ ಡಾ, ಅಂಬೇಡ್ಕರ್ ಅವರಿಗೆ ಶವಸಂಸ್ಕಾರ ಮಾಡಲು ಸ್ಥಳ ನೀಡದ ಕಾಂಗ್ರೆಸ್ ಪಕ್ಷಕ್ಕೆ ದಲಿತರ ಬಗ್ಗೆ ಮಾತನಾಡಲು ಏನು ಹಕ್ಕಿದೆ ಎಂದು ಪ್ರಶ್ನಿಸಿದರು.

ಬಾಬು ಜಗಜೀವನರಾಂ ಸೇರಿದಂತೆ ಅನೇಕ ದಲಿತ ನಾಯಕರಿಗೆ ಮೋಸ ಮಾಡಿದ ಪಕ್ಷವದು. ಕಾಶ್ಮೀರದ ಪಂಡಿತರು, ಶಿಕ್ಷಕರ ಹತ್ಯೆಗಳ ಕುರಿತು ಕಾಂಗ್ರೆಸ್ ಚಕಾರ ಎತ್ತುವುದಿಲ್ಲ. ಆದರೆ, ನಮ್ಮ ಸರಕಾರ 370ನೇ ವಿಧಿಯನ್ನು ರದ್ದು ಮಾಡಿದೆ. ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲರಿಗೂ ನ್ಯಾಯ ದೊರಕಿಸಿ ಕೊಟ್ಟಿದೆ ಎಂದರು.

ಸಂಸತ್ತಿನ ಕಲಾಪ ಬಹಿಷ್ಕರಿಸಿದ ಕಾಂಗ್ರೆಸ್ ಪಕ್ಷ ತನ್ನ ಗೋಸುಂಬೆ ನೀತಿಯನ್ನು ಪ್ರದರ್ಶಿಸಿದೆ. ಆದರೆ ನಮ್ಮ ಸರಕಾರ ದೇಶದ ಸರ್ವರ ಅಭ್ಯುದಯಕ್ಕೆ ಮುಂದಾಗಿದೆ ಎಂದು ತಿಳಿಸಿದರು.

ಕೇಂದ್ರದ ವಿಜ್ಞಾನಿಗಳ ತಂಡ ಕಲಬುರ್ಗಿ ಮತ್ತು ಸಮೀಪದ ಜಿಲ್ಲೆಗಳಲ್ಲಿ ಭೂಕಂಪನದ ಕುರಿತು ಶೀಘ್ರವೇ ಅಧ್ಯಯನ ಕೈಗೊಳ್ಳಲಿದೆ. ಭೂಕಂಪನ ಆಗುವ ಚಿಂಚೋಳಿ ತಾಲ್ಲೂಕಿನ ಗಡಿಕೇರ ಗ್ರಾಮಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿ ವಾಸ್ತವ್ಯ ಇರಲಿದ್ದಾರೆ ಹಾಗೂ ಜನರಲ್ಲಿ ಭಯವನ್ನು ದೂರ ಮಾಡಲಿದ್ದಾರೆ ಎಂದರು.

ವಿಜ್ಞಾನಿಗಳ ತಂಡದಿಂದ ಒಂದು ತಿಂಗಳೊಳಗೆ ವಿಸ್ತøತ ವರದಿ ಸಿಗಲಿದೆ. ಜನರನ್ನು ಭಯಮುಕ್ತರನ್ನಾಗಿ ಮಾಡಲಾಗುವುದು. ಅಗತ್ಯ ಸೌಕರ್ಯವನ್ನೂ ಕಲ್ಪಸಲು ಸರಕಾರ ಬದ್ಧವಿದೆ ಎಂದು ತಿಳಿಸಿದರು. ವಾಸಯೋಗ್ಯವಲ್ಲದ ಮನೆಗಳನ್ನು ಕೆಡವಿ ಬೇರೆ ಮನೆ ನಿರ್ಮಿಸಿಕೊಡಲು ಸರಕಾರ ಮುಂದಾಗಲಿದೆ ಎಂದು ತಿಳಿಸಿದರು.

ಸಂಸದರಾದ ಉಮೇಶ್ ಜಾಧವ್ ಅವರು ಮಾತನಾಡಿ, ನಾನು ಶಾಸÀಕನಾಗಿದ್ದಾಗ ಭೂಕಂಪನ ಆಗುವ ಪ್ರದೇಶಕ್ಕೆ ಹೋಗಿ ವಾಸ್ತವ್ಯ ಮಾಡಿದ್ದೆ. ನಿನ್ನೆ ಕೂಡ ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿ ಮತ್ತಿತರ ಅಧಿಕಾರಿಗಳು ಅಲ್ಲಿಗೆ ತೆರಳಿದ್ದಾರೆ ಎಂದರು. ದೆಹಲಿಯ ವಿಜ್ಞಾನಿಗಳ ತಂಡ ಅಧ್ಯಯನ ಮಾಡಿ ವರದಿ ಕೊಡಲಿದೆ ಎಂದು ತಿಳಿಸಿದರು.

ರಾಜ್ಯ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

]]>
https://iambjp.in/archives/649/feed 0
ಯೂರಿಯಾ ಉತ್ಪಾದನೆಯಲ್ಲಿ ಭಾರತ ಶೀಘ್ರವೇ ಸ್ವಾವಲಂಬಿ ಆಗಲಿದೆ – ಸಚಿವ ಭಗವಂತ್ ಖೂಬಾ https://iambjp.in/archives/281 https://iambjp.in/archives/281#respond Fri, 13 Aug 2021 11:16:01 +0000 https://iambjp.in/?p=281 ಬೆಂಗಳೂರು: ನನ್ನ ಎರಡೂ ಖಾತೆಗಳ ವಿಚಾರದಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದೇನೆ. ವಿದ್ಯುತ್ ಕ್ಷೇತ್ರದಲ್ಲಿ ದೇಶವು ಸ್ವಾವಲಂಬಿ ಆಗಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ನಾಲ್ಕು ಹೊಸ ರಸಗೊಬ್ಬರ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿದ್ದು, ಯೂರಿಯಾ ಉತ್ಪಾದನೆಯಲ್ಲಿ ದೇಶವು ಶೀಘ್ರವೇ ಸ್ವಾವಲಂಬಿ ಆಗಲಿದೆ ಎಂದು ಕೇಂದ್ರ ಸರಕಾರದ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ್ ಖೂಬಾ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಫ್ಕೋ ಕಂಪೆನಿಯು ಕರ್ನಾಟಕದಲ್ಲಿ ನ್ಯಾನೊ ಯೂರಿಯಾ ಉತ್ಪಾದನಾ ಘಟಕ ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ರಾಜ್ಯ ಸರಕಾರವು ಮೂಲಸೌಕರ್ಯ ನೀಡಿದ ಬಳಿಕ ಅದು ರಾಜ್ಯದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

ಜುಲೈ 7ರಂದು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವನಾಗಲು ಅವಕಾಶ ನೀಡಿದ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷಕ್ಕೆ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು. ಕಳೆದ 22 ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದೇನೆ. ಅದಕ್ಕಿಂತ ಮೊದಲು ಸಂಘ ಪರಿವಾರದಲ್ಲಿ ಕೆಲಸ ಮಾಡಿದ್ದೇನೆ. ಪಕ್ಷದಲ್ಲೂ ವಿವಿಧ ಜವಾಬ್ದಾರಿ ನಿರ್ವಹಿಸಿದ್ದೇನೆ. ಈಗ ಹೊಸ ಜವಾಬ್ದಾರಿ ಸಿಕ್ಕಿದ್ದು, ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ತಿಳಿಸಿದರು.

ಕೇಂದ್ರ ಸರಕಾರವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 7 ವರ್ಷಗಳ ಅಧಿಕಾರಾವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಮಾಡಿದೆ. ಭಾರತದ ಹೆಮ್ಮೆ, ಗರಿಮೆ ವಿಶ್ವಮಾನ್ಯವಾಗಿ ಹೊರಹೊಮ್ಮುತ್ತಿದೆ ಎಂದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನೇತೃತ್ವವನ್ನು ನಮ್ಮ ನೆಚ್ಚಿನ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು ವಹಿಸುತ್ತಿದ್ದಾರೆ. ಇದು ಅತ್ಯಂತ ಹೆಮ್ಮೆಯ ವಿಚಾರ ಎಂದರು. ಹಿಂದುಳಿದ ಜಾತಿಗಳನ್ನು ಗುರುತಿಸುವ ರಾಜ್ಯಗಳ ಅಧಿಕಾರವನ್ನು ಮರು ಸ್ಥಾಪಿಸುವ ಮಸೂದೆಗೆ ರಾಜ್ಯಸಭೆಯು ಒಪ್ಪಿಗೆ ನೀಡಿದ್ದು, ಇದೊಂದು ಮಹತ್ವದ ಕ್ರಮ ಎಂದು ಅವರು ಶ್ಲಾಘಿಸಿದರು.

ರಸ್ತೆ, ರೈಲ್ವೆ, ವಿಮಾನಿಲ್ದಾಣ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಅಭೂತಪೂರ್ವ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಮಾಡಿದೆ. ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಿದ್ದರಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದರು. ಪಕ್ಷ ಮತ್ತು ಪ್ರಧಾನಿ ಮೋದಿ ಅವರ ಕೀರ್ತಿ ಹೆಚ್ಚಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.

ಮೈಸೂರು ಸಂಸದರಾದ ಪ್ರತಾಪ ಸಿಂಹ, ಕೋಲಾರ ಸಂಸದರಾದ ಎಸ್. ಮುನಿಸ್ವಾಮಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ರಾಜ್ಯ ಕಾರ್ಯದರ್ಶಿಗಳಾದ ಜಗದೀಶ್ ಹಿರೇಮನಿ, ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಡಾ. ಸಂದೀಪ್ ಮತ್ತಿತರ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

]]>
https://iambjp.in/archives/281/feed 0