og
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121wp-post-author
domain was triggered too early. This is usually an indicator for some code in the plugin or theme running too early. Translations should be loaded at the init
action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121ವಿಶೇಷವಾಗಿ ಹೆಣ್ಣುಮಕ್ಕಳು ಈ ವೃತ್ತಿಗೆ ಇಳಿಯಲಿಕ್ಕೆ ಆರೋಗ್ಯದ ದೃಷ್ಟಿಯಿಂದ ಜಾಗೃತಿ ಕೊಡುವಂತದ್ದು ಎರಡನೆಯದಾಗಿ msm ನ ಸಂಖ್ಯೆ ಹೆಚ್ಚಾಗುತ್ತಿದೆ. ಪುಟ್ಟ ಪುಟ್ಟ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಈ ಸಮಸ್ಯೆ ಹೆಚ್ಚಾಗುತ್ತಿದೆ ಈ ಸಮಸ್ಯೆಯಿಂದ ಹೊರಬರಲು ವಿಶೇಷವಾಗಿ ಜಾಗೃತಿ ನಿರ್ಮಾಣ ಮಾಡುವುದು ಹಾಗೂ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು, ಮತ್ತೆ ಮುಂದೆ ಮಕ್ಕಳುಗಳು ಈ ರೀತಿ ಚಟಕ್ಕೆ ಬಲಿಯಾಗದೆ ಇರುವ ರೀತಿಯಲ್ಲಿ ಶಾಲಾ ಮಟ್ಟದಲ್ಲಿಯೇ ಒಂದು ಕೌನ್ಸೆಲಿಂಗ್ ಅನ್ನು ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು.
ಈಗ ಮಕ್ಕಳುಗಳಲ್ಲಿ HIV ನಿಯಂತ್ರಣ ಮಾಡುವ ವಿಧಾನ ಇದ್ದರೂ ಕೂಡಾ ಮಕ್ಕಳಲ್ಲಿ 0.27 ಇದೆ ಅದನ್ನು ಶೂನ್ಯಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಚರ್ಚಿಸಲಾಯಿತು. ಸರಿಯಾದ ಉದ್ಯೋಗ ಅವಕಾಶಗಳು ಇಲ್ಲದ ಕಾರಣ HIV ಸೋಂಕು ಇದ್ದರೂ ಕೂಡಾ ಅವರು ಸೆಕ್ಸ್ ವರ್ಕರ್ಸ್ ಆಗಿ ಭಾಗಿಯಾಗುತ್ತಾರೆ ಇವರಿಗೂ ಕೂಡಾ ಒಂದು ಪಿಂಚಣಿ ಸೌಲಭವನ್ನು ಜಾರಿ ತರಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಬೇಕೆಂದು ನಿರ್ಧರಿಸಲಾಯಿತು.
ಮಕ್ಕಳಲ್ಲಿ ಸ್ಯಾಮ್, ಮ್ಯಾಮ್ ಇರುವ ಕಾರಣ ಅಂತಹ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮವನ್ನು ಸರ್ಕಾರದಿಂದಲೇ ಜಾರಿ ಮಾಡಬೇಕು ಹಾಗೂ ಅಂತಹ ಮಕ್ಕಳನ್ನು ಉಳಿಸಿಕೊಳ್ಳುವ ಯೋಜನೆಯನ್ನು ಸರ್ಕಾರ ಮಾಡಬೇಕಾಗಿದೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಈ ರೀತಿಯಾದಂತಹ ಕೆಟ್ಟ ಪದ್ಧತಿ ಮೂಲಕ ಸಣ್ಣ ವಯಸ್ಸಿನ ಮಕ್ಕಳು ಅಡ್ಡ ದಾರಿ ಹಿಡಿಯುತ್ತಿರುವುದು ಶೋಚನೀಯ, ಇದನ್ನು ತಡೆಯಲು ಸರ್ಕಾರದೊಂದಿಗೆ NGO ಹಾಗೂ ಸಮಾಜದ ಜವಾಬ್ದಾರಿ ಇದೆ. MSM ಜೊತೆಯಲ್ಲೇ ಯುವ ಜನಾಂಗ ಡ್ರಗ್, ಮಧ್ಯಪಾನದಿಂದ ದೂರವಿಡಲು ಒಂದು ನಿಯಮ ತರುವ ಅವಶ್ಯಕತೆ ಇದೆ, ಗೊತ್ತೋ ಗೊತ್ತಿಲ್ಲದೆಯೂ ಅಡಲ್ಟ್ ಆಗಿರುವ MSM ಗಳನ್ನು ದಾರಿ ತಪ್ಪಿಸುತ್ತಿರುವುದು ಕಂಡು ಬಂದಿದೆ, ಈಗಾಗಲೇ 40 ಶಾಲೆಗಳಲ್ಲಿ ನಡೆಸಿರುವ ಸರ್ವೇಯ ಪ್ರಕಾರ ಇದರ ಸಂಖ್ಯೆ ಹೆಚ್ಚುತ್ತಿರುವುದು ಕಂಡು ಬಂದಿದೆ.
ಹೆಚ್ ಐ ವಿ ಇರುವ ಮಕ್ಕಳಿಗೆ ಮಹಾರಾಷ್ಟ್ರ ಸರ್ಕಾರದಂತೆ ಒಂದು ಪ್ರೋತ್ಸಾಹ ಧನದ ರೀತಿಯಲ್ಲಿ ನೀಡಿದರೆ ಬದುಕಲು ಸಹಾಯವಾಗುತ್ತದೆ, ಅಲ್ಲದೇ ಅವರಿಗೆ ಒಂದು ಮಟ್ಟದ ಶಿಕ್ಷಣ ದೊರಕುತ್ತಿದ್ದು ಹೆಚ್ಚಿನ ಶಿಕ್ಷಣಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸುವುದರ ಜೊತೆಯಲ್ಲಿ ಕೌಶಲ್ಯವನ್ನೂ ನೀಡುವ ಮೂಲಕ ಸರ್ಕಾರದ ಮುಖ್ಯವಾಹಿನಿಗೆ ತರುವ ದೊಡ್ಡ ಜವಾಬ್ದಾರಿ ನಮ್ಮದಿದೆ. ಇವೆಲ್ಲಾ ಮುಖ್ಯವಾದ ಕ್ರಮಗಳನ್ನು ತೆಗೆದುಕೊಂಡು 10 ವರ್ಷಗಳ ಗುರಿಯೊಂದಿಗೆ 2030 ರ ಒಳಗೆ ಹೆಚ್ ಐ ವಿ ಸೋಂಕು ಮಕ್ಕಳಿಗೆ ತಗುಲದಂತೆ ನೋಡಿಕೊಳ್ಳಬೇಕು.
ಸದರಿ ವಿಷಯವನ್ನು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇವೆಲ್ಲರ ಜೊತೆಯಲ್ಲಿ ಒಂದು ಸಂಯುಕ್ತವಾಗಿ ಸಮಾಲೋಚನೆ ಮಾಡಿ ವರದಿಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವ ಅಗತ್ಯವಿದೆ ಅಲ್ಲದೇ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಗೆ ವರದಿಯನ್ನು ಸಲ್ಲಿಸಲಿದ್ದೇವೆ.
ಈ ಸಮಯದಲ್ಲಿ ಜಿಲ್ಲಾ ಸರ್ಜನ್ ಡಾ.ಸುಧಾಕರ್, ಆರ್.ಎಂ.ಓ ಡಾ.ಕೇಶವ್, ಮೆಡಿಕಲ್ ಆಫೀಸರ್, ಹೆಚ್ ಐ ವಿ ಸೋಂಕಿತರ ಕೌನ್ಸಿಲರ್ ರತ್ನ , ಡಾ.ವೀರೇಶ್, MSM ಪ್ರತಿನಿಧಿ ಗಣೇಶ್, ಸ್ಪಂದನಾ ನೆಟ್ವರ್ಕ್ ನ ಕಸ್ತೂರಿ, ಹಾಗೂ ಎ.ಆರ್.ಟಿ ಸೆಂಟರ್ ನ ಕಚೇರಿ ಸಿಬ್ಬಂದಿ ಹಾಜರಿದ್ದರು.
]]>ವಿಶೇಷವಾಗಿ ಶಾಸಕ ರಾಮದಾಸ್ ತನ್ನ ಕ್ಷೇತ್ರದ ಕಾರ್ಯಕರ್ತರನ್ನು ಹಾಗೂ ಪದಾಧಿಕಾರಿಗಳನ್ನ ಹಾಗೂ ಅವರ ಸಾಧನೆಗಳನ್ನು ಅರುಣ್ ಸಿಂಗ್ ಜಿ ಗೆ ವಿವರಿಸಿದರು, ಇದಕ್ಕೆ ಅರುಣ್ ಸಿಂಗ್ ಜಿ ಹರ್ಷ ವ್ಯಕ್ತಪಡಿಸಿದ್ದಾರೆ ಅಲ್ಲದೇ ಕ್ಷೇತ್ರದಲ್ಲಿ 11 ಸಾವಿರ ಪೇಜ್ ಪ್ರಮುಖರನ್ನು ಗುರುತಿಸಿದ ವಿಷಯವನ್ನು ರಾಮದಾಸ್ ಅವರು ಹೇಳಿದ್ದಕ್ಕೆ ಅರುಣ್ ಸಿಂಗ್ ಜಿ ಅವರು ಬಹಳ ಹರ್ಷ ವ್ಯಕ್ತಪಡಿಸಿದರು.
]]>ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಕಾರ್ಯಕ್ರಮವನ್ನು ಆಯೊಜಿಸಿದ ಮಹಿಳಾಮೋರ್ಚಾದವರಿಗೆ ಮತ್ತು ನೆರೆದಿದ್ದ ವಿದ್ಯಾರ್ಥಿನಿಯರಿಗೆ ಅಭಿನಂದನೆ ತಿಳಿಸುತ್ತಾ ಇಂದಿನ ಕಾರ್ಯಕ್ರಮ ಬಹಳ ವಿಶೇಷವಾದದ್ದು ಕಾರಣ ಇದೆ ಅದರ ಬಗ್ಗೆ ನೆರೆದಿದ್ದವರಿಗೆ ಶಾಸಕರು ಪ್ರಶ್ನಿಸಿದರು ಇಂದು ವ್ಯಾಸ ಪೂರ್ಣಿಮೆ ಇಂದು ಸಹೋದರ ಸಹೋದರಿಯರಿಗೆ ಬಹಳಾ ವಿಶೇಷ ಅಂದು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುತ್ತಾ ನಾವು ಪೂರ್ಣಪ್ರಮಾಣದಲ್ಲಿ ನಿನ್ನ ರಕ್ಷಣೆಯಲ್ಲಿ ಇರುತ್ತೇವೆ ಎಂದು ಸಂಕಲ್ಪ ಮಾಡೋಣ, ಈ ಭಾರತದ ಭವಿಷ್ಯ ರೂಪಿಸುವ ನೀವಲ್ಲರು ತಾಯಿ ಭಾರತೀಯ ರಕ್ಷಣೆ ಮಾಡಲು ನಿಲ್ಲಬೇಕಿದ್ದು ನಿಮ್ಮೆಲ್ಲರ ರಕ್ಷಣೆಯ ಜವಾಬ್ದಾರಿ ನನ್ನದಾಗಿರುತ್ತದೆ.
ನಾವೆಲ್ಲಾ ಕಳೆದ 3 ದಶಕಗಳಿಂದ ಸಮಾಜ ಸೇವೆಯಲ್ಲಿ ನಿರಂತರವಾಗಿದ್ದೇವೆ ಮುಂದಿನ ಪೀಳಿಗೆಯಲ್ಲಿ ಸಮಾಜ ಸೇವೆ ಮಾಡುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕಿರುತ್ತದೆ. ಕಷ್ಟದಲ್ಲಿ ಇರುವವರಿಗೆ ನಮ್ಮ ಕೈಯಲ್ಲಿ ಆಗುವಂತಹ ಸೇವೆಯನ್ನು ಸಲ್ಲಿಸಬೇಕಿರುತ್ತದೆ. ಕೇಂದ್ರ ಸರ್ಕಾರದ , ರಾಜ್ಯ ಸರ್ಕಾರದ ಹಲವಾರು ಜನಪರ ಯೋಜನೆಗಳಿದ್ದು ಇಂತಹ ಯೋಜನೆಗಳನ್ನು ಅರ್ಹ ಸಾರ್ವಜನಿಕರಿಗೆ ತಲುಪಿಸುವ ಮೂಲಕ ಸೇವೆ ಸಲ್ಲಿಸಬಹುದು.
ನಾವು ಸ್ವತಂತ್ರ ಪಡೆಯುವುದರ ಹಿಂದೆ ಹಲವಾರು ತ್ಯಾಗಗಳಿದೆ ಲಕ್ಷಾಂತರ ಜನ ತ್ಯಾಗ ಮಾಡಿರುತ್ತಾರೆ. ರಾಜಕಾರಣ ಹಾಳಾದ್ದಲ್ಲಿ ದೇಶ ಹಾಳಾಗುವುದು, ದೇಶವೇ ಹಾಳಾದರೆ ಇನ್ನು ನಾವು ನೀವು ಇರಲು ಹೇಗೆ ಸಾದ್ಯ. ಇತ್ತಿಚಿನ ದಿನಗಳಲ್ಲಿ ಆಫ್ಘಾನ್ ದೇಶದಲ್ಲಿ ತಾಲಿಬಾನಿಗಳು ನಡೆಸುತ್ತಿರುವ ಅಟ್ಟಹಾಸವನ್ನು ಇಡೀ ಪ್ರಪಂಚವೇ ನೋಡುತ್ತಿದೆ ಅಲ್ಲಿಯ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ಪ್ರಪಂಚಾಧ್ಯಂತ ವಿರೋಧ ವ್ಯಕ್ತವಾಗಿದೆ. ನಾವು ಯಾವುದೇ ಸಂದರ್ಭ ಬಂದರೂ ಅನ್ಯಾಯದ ವಿರುದ್ದ ನಿಂತುಕೊಳ್ಳಬೇಕು ಎಂದು ತಿಳಿಸಿದರು.
ನೆರೆದಿದ್ದವರೆಲ್ಲರು ಭಾರತ್ ಮಾತಾ ಕಿ ಜೈ. ಎಂದು ಘೋಷಣೆ ಕೂಗಿ ತಮ್ಮ ತಮ್ಮ ಹೆಸರುಗಳನ್ನು ಹೇಳುತ್ತಾ …………….ಎಂಬ ಹೆಸರಿನವಳಾದ ನಾನು ಯುವ ಭಾರತೀಯಳಾಗಿ ದೇಶಪ್ರೇಮಿಯಾಗಿ, ದೇಶ ನಿರ್ಮಾಣಕ್ಕಾಗಿ ನನ್ನ ದಿನದ ಕೆಲವು ಸಮಯವನ್ನು ಮುಡಿಪಾಗಿಟ್ಟು ಕನಿಷ್ಟ 25 ಜನ ಯುವತಿಯರನ್ನು ದೇಶದ ಕಾರ್ಯಕ್ಕಾಗಿ ಜೋಡಿಸಿ ಭಾರತದ ರಕ್ಷಣೆಯನ್ನು ಮಾಡುತ್ತೇನೆಂದು ಪ್ರಮಾಣ ಮಾಡುತ್ತೇನೆ. ಎಂದು ಸಂಕಲ್ಪ ಮಾಡಿದರು.
]]>ಕೆ.ಆರ್.ಕ್ಷೇತ್ರದಲ್ಲಿ ಬೂತ್ ಅಧ್ಯಕ್ಷರ ಮನೆ ಮುಂದೆ ಬಂದು ಪೇಜ್ ಪ್ರಮುಖರನ್ನು ಆಯ್ಕೆ ಮಾಡುವ ಪ್ರಕ್ರಿಯೆ ರಾಜ್ಯದಲ್ಲಿ ಸಂಘಟನೆ ದೃಷ್ಟಿಯಿಂದ ಬಹು ವಿಶೇಷವಾಗಿದೆ. ಪೇಜ್ ಪ್ರಮುಖರ ಕಾರ್ಯ ಬರಿಯ ಚುನಾವಣಾ ದೃಷ್ಠಿಯಿಂದ ಮಾತ್ರ ಅಲ್ಲ ತಮ್ಮ ಪೇಜ್ ನಲ್ಲಿ ಬರುವ 8,10 ಮನೆಗಳ ಯೋಗಕ್ಷೇಮ ವಿಚಾರಿಸುವ ಕಾರ್ಯವೂ ಅವರದ್ದಾಗಿರುತ್ತದೆ. ನೀವು ಮಾಡುವಂತಹ ಈ ಪುಣ್ಯ ಕಾರ್ಯ ನಿಮ್ಮ ಕುಟುಂಬವನ್ನು ಕಾಯುತ್ತದೆ. ಪ್ರಧಾನಿ ಮೋದಿಜಿ ಅವರು ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ, ಅದನ್ನು ಅನುಷ್ಠಾನ ಮಾಡುವ ಜವಾಬ್ದಾರಿ ಪೇಜ್ ಪ್ರಮುಖರದಾಗಿರುತ್ತದೆ. ಇಂತಹ ಯೋಜನೆಗಳನ್ನು ನಾವು ಜನಕ್ಕೆ ತಲುಪಿಸಿದಾಗ ಅವರಿಗಾದ ಆನಂದ ಹೇಳತೀರದು. ಮುಂದಿನ ದಿನಗಳಲ್ಲಿ ಪೇಜ್ ಪ್ರಮುಖರಿಗೆ ಸರ್ಕಾರಿ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರತಿ ವಾರ್ಡ್ ನಲ್ಲೂ ಟ್ರೈನಿಂಗ್ ನೀಡುವ ಕೆಲಸ ಮಾಡುತ್ತೇವೆ, 15 ನೆ ತಾರೀಖು ಸ್ವಾತಂತ್ರ್ಯ ದಿನ, ಅಂದಿನ ದಿನದಂದು ಬೂತ್ ಅಧ್ಯಕ್ಷರು ತಮ್ಮ ಮನೆಯ ಮುಂದೆ ಧ್ವಜಾರೋಹಣ ಮಾಡಿ ಹಬ್ಬದ ರೀತಿ ಆಚರಿಸಬೇಕು. ಇದು ಎಲ್ಲರೂ ಸೇರಿ ಮಾಡುವಂಥಹ ಸಮಾಜದ ಕೆಲಸವಾಗಿದೆ ಎಂದರು.
ವಿಶೇಷವಾಗಿ ಹೋದ ಬೂತ್ ನಲ್ಲಿ ಸ್ಥಳೀಯ ನಾಗರೀಕರೂ ಈ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದರು ಅಲ್ಲದೇ ನಾವೂ ನಿಮ್ಮೊಂದಿಗೆ ಇದ್ದೇವೆ ಎನ್ನುವ ಸಂದೇಶವನ್ನು ಕೊಟ್ಟರು. ಹಲವಾರು ಹಿರಿಯ ನಾಗರೀಕರು ಮಂತ್ರಿ ಸ್ಥಾನ ಸಿಗದೇ ಇದ್ದದ್ದು ಬೇಜಾರಾಗಿದೆ, ಮುಂದೆ ಆ ದೇವರು ಒಳ್ಳೆ ರೀತಿಯ ಆಶೀರ್ವಾದ ಮಾಡುತ್ತಾನೆ ಎಂದು ಶುಭ ಹಾರೈಕೆಗಳ ಸುರಿಮಳೆಯನ್ನೇ ಸುರಿಸಿದರು.
]]>ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪ್ರಧಾನಿ ನರೇಂದ್ರ ಮೋದಿಜಿ ಸರ್ಕಾರದ ಯೋಜನೆಗಳನ್ನು ಹಾಗೂ ರಾಜ್ಯ ಸರ್ಕಾರದ ಯೋಜನಲೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಹಾಗೂ ಜವಾಬ್ದಾರಿ ಬೂತ್ ಅಧ್ಯಕ್ಷ ಹಾಗೂ ಪೇಜ್ ಪ್ರಮುಖರದ್ದು. ಬರೀ ಚುನಾವಣಾ ದೃಷ್ಠಿಯಿಂದ ಮಾತ್ರ ಬಿಜೆಪಿ ಕಾರ್ಯಕರ್ತರಾದ ನಾವು ಕೆಲಸ ಮಾಡಬಾರದು, ನಮ್ಮ ಕೆಲಸ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವಂತಿರಬೇಕು.
ಬಿಜೆಪಿಯಲ್ಲಿ ಬೂತ್ ಅಧ್ಯಕ್ಷರ ಜವಾಬ್ದಾರಿ ಅತೀ ಮುಖ್ಯವಾದದ್ದು. ಮನೆಯ ಜವಾಬ್ದಾರಿ ಇದ್ದರೂ ಸಹ ಸಮಾಜದ ಕೆಲಸ ಮಾಡಬೇಕು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಬೂತ್ ಅಧ್ಯಕ್ಷರು ಭಾಗಿಯಾಗುತ್ತಾರೆ ಇದು ಭಾಜಪಾದ ವಿಶೇಷತೆ. ಜನರ ಕಣ್ಣೀರನ್ನು ಒರೆಸುವ ಕಾರ್ಯ ಬೂತ್ ಅಧ್ಯಕ್ಷರದ್ದು. ಇವತ್ತು ದೇಶದಲ್ಲಿ ಮೋದಿಜಿ ಒಂದು ವಿಷಯವನ್ನು ಕೊಟ್ಟಿದ್ದಾರೆ, ಭ್ರಷ್ಟಾಚಾರ ಮುಕ್ತವಾಗಬೇಕು ಎಲ್ಲೆಡೆಯಲ್ಲಿ ಪಾರದರ್ಶಕ ಆಡಳಿತ ತರಬೇಕು ಎಂದು, ಅದೇ ನಿಟ್ಟಿನಲ್ಲಿ ಕೆ.ಆರ್ ಕ್ಷೇತ್ರವನ್ನೂ ಸಹ ಭ್ರಷ್ಟಾಚಾರ ಮುಕ್ತವಾಗಿಸಬೇಕು. ನೂರೊಂದು ಗಣಪತಿ ದೇವಸ್ಥಾನದಿಂದ ನಂಜುಮಳಿಗೆ ವರೆಗೆ ರಸ್ತೆ ಅಭಿವೃದ್ಧಿ ಗೆ 10 ಕೋಟಿ ರೂ ಗಳನ್ನು ಬಿಡುಗಡೆ ಮಾಡಿದ್ದೇವೆ.
ಕೃಷ್ಣರಾಜ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಸಂಕಲ್ಪಿಸೋಣ, ಬ್ರಷ್ಟಾಚಾರ ರಹಿತ ಕ್ಷೇತ್ರವನ್ನಾಗಿಸೋಣ. ನಮ್ಮ ಮನೆಯಲ್ಲಿರುವ ಮಕ್ಕಳಲ್ಲಿ ಸಮಾಜ ಸೇವೆಗೆ ಜೋಡಿಸುವ ಜವಬ್ದಾರಿ ನಮ್ಮೆಲರ ಮೇಲೆ ಇದೆ ಎಂದು ತಿಳಿಸಿದರು. ಬರುವ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಕ್ಷೇತ್ರ ರಾಜ್ಯ ಮತ್ತು ಕೇಂದ್ರ ಯೋಜನೆಗಳ ಅನುಷ್ಠಾನ ಮಾಡಿಸುವಲ್ಲಿ ಮತ್ತು ಪಕ್ಷದ ಸಂಘಟನಾತ್ಮಕವಾಗಿ ಪ್ರಥಮವಾಗಿಸಲು ಶ್ರಮಿಸೋಣ ಎಂದರು.
]]>