
ಬೆಂಗಳೂರು : ನೂತನ ಗೃಹಮಂತ್ರಿಯಾಗಿರುವ ಆರಗ ಜ್ಞಾನೇಂದ್ರ ಎಲ್ಲಾ ಸಮಯದಲ್ಲಿ ಝೀರೋ ಟ್ರಾಫಿಕ್ ಬೇಡ ಎಂದು ಹೇಳಿ ಸರಳತೆ ಮೆರೆದಿದ್ದಾರೆ.
ಮಂತ್ರಿಗಳು ಯಾವ ಕಡೆಗಾದರು ತೆರಳುತ್ತಿದ್ದಾರೆ ಎಂದರೆ ಸಾಕು ಹಲವಾರು ನಿಮಿಷಗಳ ತನಕ ಝೀರೋ ಟ್ರಾಫಿಕ್ ಏರ್ಪಡಿಸುವ ಸಲುವಾಗಿ ಕಿಲೋ ಮೀಟರ್ ಗಳವರೆಗೆ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸುತ್ತಾರೆ. ಹಲವಾರು ಬಾರಿ ಅಂಬ್ಯುಲೆನ್ಸ್ ಗಳಿಗೂ ಸಹ ಪೋಲಿಸರು ಹೋಗಲು ಬಿಡದೆ, ಮಂತ್ರಿಗಳು ಬರುತ್ತಿದ್ದಾರೆ ಎಂದು ಹೇಳಿದ್ದುಂಟು. ಯಾವ ವೇಳೆಯಾದರು ಸರಿ, ಎಂಥಹ ಕೆಲಸವಿದ್ದರು ಸಹ ಮಂತ್ರಿಗಳಿಗೆ ಝೀರೋ ಟ್ರಾಫಿಕ್, ನಾಲ್ಕು ಭದ್ರತಾ ವಾಹನಗಳು, ಸೈರನ್ ಇರುತ್ತದೆ.
ಇಂಥವರ ಮಧ್ಯ ಸರಳತೆ ಮೆರೆದಿರುವ ನೂತನ ಗೃಹ ಮಂತ್ರಿ ಅರಗ ಜ್ಞಾನೇಂದ್ರ ನನಗೆ ಎಲ್ಲಾ ಸಮಯದಲ್ಲೂ ಝೀರೋ ಟ್ರಾಫಿಕ್ ಬೇಡ. ನಾಲ್ಕು ಭದ್ರತಾ ವಾಹನಗಳೂ ಬೇಡ. ಅನಗತ್ಯವಾಗಿ ಸೈರನ್ ಬಳಸೋದು ಬೇಡ. ಅಗತ್ಯವಿದ್ದಾಗ ಮಾತ್ರ ತಿಳಿಸುವೆ, ಆಗ ಕಾನ್ವೇ ಗಾಡಿ ಇರಲಿ ಎಂದು ಪೊಲೀಸ್ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಗೃಹಸಚಿವರು ಸೂಚನೆ ನೀಡಿದ್ದಾರೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ