ಚಾಮರಾಜನಗರ: ಮೈಸೂರು- ಚಾಮರಾಜನಗರ ಜಿಲ್ಲಾ ವೀರಶೈವ- ಲಿಂಗಾಯತ ಮಠಾಧಿಪತಿಗಳ ಗೋಷ್ಠಿ(ರಿ) ವತಿಯಿಂದ ಯಳಂದೂರಿನ ಜೆ.ಎಸ್,ಎಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಆಯೋಜಿಸಲಾಗಿದ್ದ ಪರಮಪೂಜ್ಯ, ರಾಜಗುರು ತಿಲಕ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 107ನೇ ಜಯಂತಿ, ವಿದ್ಯಾಥಿ೯ಗಳ ಪ್ರತಿಭಾ ಪುರಸ್ಕಾರ ಮತ್ತು ಶಿವದೀಕ್ಷೆ- ಲಿಂಗದೀಕ್ಷ ಕಾರ್ಯಕ್ರಮವನ್ನು ಮಾನ್ಯ ವಸತಿ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿ.ಸೋಮಣ್ಣ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಕರ್ನಾಟಕದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಲ್ಲಿ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ.
ಸುಮಾರು ಒಂದು ಸಾವಿರ ವರ್ಷಗಳಿಗೂ ಮಿಗಿಲಾಗಿದ ಇತಿಹಾಸವನ್ನು ಶ್ರೀಮಠ ಹೊಂದಿದೆ.
ಶ್ರೀ ಶಿವರಾತ್ರೀಶ್ವರ ಭಗವತ್ಪಾದರಿಂದ ಸಂಸ್ಥಾಪನೆಗೊಂಡ ಶ್ರೀಮಠ ಹತ್ತು ಹಲವಾರು ಸೇವಾ ಕಾಯ೯ಗಳ ಮೂಲಕ ಈ ನಾಡಿನ ಸರ್ವಜನಾಂಗದ ಜನತೆಗೆ ತುಂಬಾ ಹತ್ತಿರವಾಗಿದೆ.
12ನೇ ವಯಸ್ಸಿನಲ್ಲಿಯೇ ಮಠದ ಹೊಣೆಗಾರಿಕೆ ಹೊತ್ತ ರಾಜೇಂದ್ರ ಶ್ರೀಗಳು, ಮೊದಲಿಗೆ ಗ್ರಾಮೀಣ ಭಾಗದ ದೀನ ದಲಿತರು ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಕೈಂಕಯ೯ದಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಾಗೂ ಬಡ ವಿದ್ಯಾಥಿ೯ಗಳಿಗೆ ಪ್ರಸಾದ ನಿಲಯಗಳನ್ನು ಪ್ರಾರಂಭಿಸಿ ಶಿಕ್ಷಣವನ್ನು ಬಡವರ ಮನೆಬಾಗಿಲಿಗೆ ಕೊಂಡೊಯ್ದ ಕೀರ್ತಿ ಪೂಜ್ಯ ರಾಜೇಂದ್ರ ಮಹಾಸ್ವಾಮಿಗಳಿಗೆ ಸಲ್ಲಬೇಕೆಂದರು ಜೊತೆಗೆ ಸಿದ್ದಗಂಗೆ ಮತ್ತು ಸುತ್ತೂರು ಮಠದ ಕಾಯ೯ ವೈಖರಿ ಹಾಗೂ ಅವುಗಳ ನಡುವಿನ ಒಡನಾಟದ ಬಗ್ಗೆ ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಹೊಸಮಠದ ಶ್ರೀ ಚಿದಾನಂದ ಸ್ವಾಮಿಗಳು, ಕುಂದೂರು ಮಠದ ಶ್ರೀ ಶರತ್ಚಂದ್ರ ಸ್ವಾಮಿಗಳು, ಹರವೆ ಶ್ರೀಗಳು, ಮುಡಿಗುಂಡ ಶ್ರೀಗಳು ಹಾಗೂ ಮೈಸೂರು – ಚಾಮರಾಜನಗರ ಜಿಲ್ಲೆಯ ಹರ ಗುರುಚರಮೂರ್ತಿಗಳು, ಜಿಲ್ಲಾಧಿಕಾರಿ ಶ್ರೀ ರಮೇಶ್, ಅಪರ ಜಿಲ್ಲಾಧಿಕಾರಿ, ಅಪರ ಪೋಲೀಸ್ ವರಿಷ್ಠಾಧಿಕಾರಿ ಮತ್ತು ಅಪಾರ ಸಂಖ್ಯೆಯ ಮಠದ ಭಕ್ತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ