ಬೆಂಗಳೂರು: ಕರ್ನಾಟಕ ವೀರ ಯೋಧರಿಗೆ ಜನ್ಮ ನೀಡಿದ ಪುಣ್ಯ ಭೂಮಿ. ಬ್ರಿಟಿಷರ ವಿರುದ್ದ ಪ್ರಥಮ ಸ್ವಾತಂತ್ರದ ಕಹಳೆಯನ್ನು ಮೊಳಗಿಸಿ ಅವರೊಂದಿಗೆ ಯುದ್ದ ಮಾಡಿದ ವೀರರಾಣಿ ಕಿತ್ತೂರ ಚನ್ನಮ್ಮ, ರಾಣಿ ಅಬ್ಬಕ್ಕ, ಕೆಳದಿಯ ರಾಣಿ ಚನ್ನಮ್ಮ, ಹೈದರಾಲಿಯ ಸೈನಿಕರನ್ನು ತನ್ನ ಕೈಯಲ್ಲಿರುವ ಒನಕೆಯಿಂದಲೇ ಹೊಡೆದುರುಳಿಸಿ ಸಾಹಸಗೈದ ಚಿತ್ರದುರ್ಗದ ಒನಕೆ ಓಬ್ಬವ್ವ, ಆವತ್ತಿನ ಕಾಲದಲ್ಲಿಯೇ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಮಹಿಳೆಯರನ್ನು ಸಂಘಟನೆ ಮಾಡಿ ಮಹಿಳಾ ಸೈನ್ಯವನ್ನು ಕಟ್ಟಿ ಹೋರಾಡಿದ ಬೆಳವಡಿ ಮಲ್ಲಮ್ಮ ಈ ರೀತಿ ತನ್ನ ಶೌರ್ಯ ಪರಾಕ್ರಮಗಳಿಂದ ದೇಶದ ಗಮನ ಸೆಳೆದ ರಾಜ್ಯ ಕರ್ನಾಟಕ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಮಂಗಳವಾರ (ಡಿ-13) ರಂದು ರಾಜ್ಯಸಭಾ ಸಂಸತ್ತಿನ ಚಳಿಗಾಲ ಅಧೀವೇಶನದ ಶೂನ್ಯ ವೇಳೆಯಲ್ಲಿ ಸೇನೆಯಲ್ಲಿ ಕರ್ನಾಟಕ ಹೆಸರಿನ ರೆಜಿಮೆಂಟ್‍ನ್ನು ಸ್ಥಾಪಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿ ಕನ್ನಡದಲ್ಲಿಯೇ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಸ್ವಾತಂತ್ರ ನಂತರ ದೇಶದ ಮೊದಲನೆಯ ಪೀಲ್ಡ್ ಮಾರ್ಷಲ್ ಜನರಲ್ ಕೆ. ಎಂ. ಕರಿಯಪ್ಪ ಮತ್ತು ಮೂರನೆಯ ಭೂಸೇನಾದ ಜನರಲ್ ಕೆ.ಎಸ್. ತಿಮ್ಮಯ್ಯ ಇವರು ಸೇನೆಯಲ್ಲಿ ಸೇವೆ ಸಲ್ಲಿಸಿದ ಅಪ್ರತಿಮ ಸಾಹಸಿ ಕನ್ನಡಿಗರಾಗಿದ್ದಾರೆ ಇಂದಿಗೂ ಕೂಡ ಈ ವೀರಪರಂಪರೆ ಮುಂದುವರಿದಿದ್ದು ಎಂದರು.
ಸೇನಾ ಭರ್ತಿಯಲ್ಲಿ ಕರ್ನಾಟಕದಿಂದ ಕೂಡ ಸಹಸ್ರಾರು ಯುವಕರು ಆಯ್ಕೆಯಾಗುವ ಮೂಲಕ ದೇಶದ ರಕ್ಷಣಾ ಕಾರ್ಯದಲ್ಲಿ ತಮ್ಮ ಯೋಗದಾನ ನೀಡುತ್ತಿದ್ದಾರೆ ಹಾಗೂ ಪ್ರಸ್ತುತ ಕರ್ನಾಟಕದ 32 ಸಾವಿರ ಯುವಕರು ಜೆಒಸಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಸೇನೆಯಲ್ಲಿ 28 ರೆಜಿಮೆಂಟ್‍ಗಳಿದ್ದು, ಇವುಗಳಿಗೆ ಪಂಜಾಬ್, ಬಿಹಾರ, ಆಸ್ಸಾಂ, ಮದ್ರಾಸ್, ಮರಾಠಾ, ಜಮ್ಮು ಕಾಶ್ಮೀರ, ಗಡ್ವಾಲ, ಕುಮಾವೊ ಹೀಗೆ ಅನೇಕ ಪ್ರದೇಶಗಳ ಹೆಸರಿನ ಮೇಲೆ ಕಾರ್ಯನಿರ್ವಹಿಸುತ್ತಿವೆ. ಆದರೆ ಕರ್ನಾಟಕಕ್ಕೆ ಸಮರ್ಪಿತವಾದಂತಹ ಹೆಸರಿನ ಯಾವುದೇ ರೆಜಿಮೆಂಟ್ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು.
ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಗತಿಸಿವೆ. ದೇಶದ ಜನ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ವೀರ ಯೋಧರ ತ್ಯಾಗ, ಬಲಿದಾನಗಳ ಸ್ಮರಣೆಗಾಗಿ ಹಾಗೂ ಪ್ರಸ್ತುತ ಸೇನೆಯಲ್ಲಿ ಯೋಗದಾನ ನೀಡುತ್ತಿರುವ ನಮ್ಮೆಲ್ಲ ಸೈನಿಕರ ಗೌರವಾರ್ಥವಾಗಿ ಸೇನೆಯಲ್ಲಿ ಕರ್ನಾಟಕ ಹೆಸರಿನ ರೆಜಿಮೆಂಟ್‍ನ್ನು ಸ್ಥಾಪಿಸಲು ನಾನು ಆಗ್ರಹಿಸುತ್ತೇನೆ ಎಂದ ಸಂಸದ ಕಡಾಡಿ ಅವರು ಇದು ಕರ್ನಾಟಕದಿಂದ ಆಯ್ಕೆಯಾಗಿ ತಾಯಿ ಭಾರತ ಮಾತೆಯ ಸೇವೆಯಲ್ಲಿ ತಮ್ಮ ತ್ಯಾಗ, ಬಲಿದಾನಗಳಿಂದ ಸಮರ್ಪಿತವಾದ ಸೈನಿಕರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಮತ್ತು ಪ್ರಸ್ತುತ ಸೈನ್ಯದಲ್ಲಿಯೇ ಸೇವೆ ಸಲ್ಲಿಸುವ ಮೂಲಕ ತಮ್ಮ ಯೋಗದಾನ ನೀಡುತ್ತಿರುವ ಕರ್ನಾಟಕದ ಯೋಧರಿಗೆ ಗೌರವದ ಸನ್ಮಾನ್ ನೀಡಿದಂತಾಗುತ್ತದೆ ಹಾಗೂ ಕರ್ನಾಟಕದ ಇನ್ನೂ ಲಕ್ಷಾಂತರ ಯುವಕರು ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ