ಬೆಂಗಳೂರು: ಕಾಂಗ್ರೆಸ್ಸಿಗರು ಭಯೋತ್ಪಾದಕರು ಮತ್ತು ಉಗ್ರರನ್ನು ಬೆಂಬಲಿಸುವ ತಮ್ಮ ಹಳೆ ಚಾಳಿ ಬಿಟ್ಟಿಲ್ಲ. ಇದರ ವಿರುದ್ಧ 19ರಿಂದ 21ರವರೆಗೆ 3 ದಿನ ಭಯೋತ್ಪಾದಕರ ಪರ ಇರುವ ಹಾಗೂ ಉಗ್ರರ ರಕ್ಷಣೆ ಮಾಡುವ ಕಾಂಗ್ರೆಸ್ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಪ್ರಕಟಿಸಿದರು.
ನಗರದಲ್ಲಿ ಇಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, ಭಯೋತ್ಪಾದಕರನ್ನು ರಕ್ಷಿಸುವ ಹಾಗೂ ಅವರಿಗೆ ಏನೆಲ್ಲ ರಕ್ಷಣೆ ಬೇಕೋ ಅದನ್ನು ನೀಡುವ ವಿರೋಧ ಪಕ್ಷ ನಮ್ಮ ರಾಜ್ಯದಲ್ಲಿದೆ. ಈ ಹಿಂದೆ ಅವರು ಆಡಳಿತ ಪಕ್ಷದಲ್ಲಿದ್ದಾಗ ಭಯೋತ್ಪಾದಕರನ್ನು ಸಾಕುವ, ಅವರ ಕೇಸುಗಳನ್ನು ರದ್ದು ಮಾಡುವ ಹಾಗೂ ಬೆಳೆಸುವ ಉಗ್ರ ಭಾಗ್ಯ, ಪಿಎಫ್‍ಐ ಭಾಗ್ಯ, ಟಿಪ್ಪು ಜಯಂತಿ ಭಾಗ್ಯದಂಥ ಎಲ್ಲ ನೆರವನ್ನು ನೀಡುವ ಕೆಲಸವನ್ನು ನಮ್ಮ ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಿರಂತರವಾಗಿ ಮಾಡುತ್ತ ಬಂದಿದ್ದಾರೆ ಆಕ್ಷೇಪಿಸಿದರು.
ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರದಲ್ಲಿ ಮಾತನಾಡಿದ ಸಿದ್ದರಾಮಯ್ಯನವರು ಅದರಲ್ಲಿ ಬಾಂಬ್ ಇತ್ತೇ ಎಂದು ಕೇಳಿದ್ದಾರೆ. ಹಾಗಿದ್ದರೆ ಆತ ಟಿಫಿನ್ ಕ್ಯಾರಿಯರ್ ಒಯ್ಯುತ್ತಿದ್ದನೇ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಉತ್ತರಿಸಬೇಕು ಎಂದು ತಿಳಿಸಿದರು.
ಕುಕ್ಕರ್ ಬಾಂಬ್ ಬ್ಲಾಸ್ಟ್ ಎಂಬುದು ವಿಶ್ವ ಪ್ರಸಿದ್ಧ. ಕುಕ್ಕರ್‍ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದರೆ ಅದರಿಂದ ನೂರಾರು ಜನರನ್ನು ಹತ್ಯೆ ಮಾಡಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ವಿಜ್ಞಾನವನ್ನು ಅಧ್ಯಯನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಆ ಕುಕ್ಕರ್ ಜನನಿಬಿಡ ಸ್ಥಳದಲ್ಲಿ ಸ್ಫೋಟಗೊಂಡಿದ್ದರೆ ಬಹಳ ದೊಡ್ಡ ಜೀವ ಮತ್ತು ಸ್ವತ್ತು ಹಾನಿ ಆಗುತ್ತಿತ್ತು ಎಂದು ಪೊಲೀಸ್ ವರದಿ ಇದೆ. ಆರೋಪಿ ಬಂಧನದಿಂದ ಆತನ ವಿಸ್ತøತ ಜಾಲ ಸಿಕ್ಕಿದೆ. ಈ ಜಾಲದಲ್ಲಿ ಕಾಂಗ್ರೆಸ್‍ನವರು ಯಾರಾದರೂ ಇದ್ದಾರೇನೋ ಎಂಬುದು ಡಿಕೆಶಿ ಅವರಿಗೆ ಗಾಬರಿ ಉಂಟು ಮಾಡಿರಬಹುದು. ಆದ್ದರಿಂದ ಡಿ.ಕೆ.ಶಿವಕುಮಾರ್ ಅವರು ಸ್ವಲ್ಪ ದಿನ ತೆಪ್ಪಗಿರಬೇಕು. ಎನ್‍ಐಎ ತನಿಖೆ ನಡೆದಿದೆ. ಆ ವರದಿ ಬರುವವರೆಗೆ ತೆಪ್ಪಗಿರಿ ಎಂದು ಸಲಹೆ ನೀಡಿದರು.
ಭಯೋತ್ಪಾದಕನ ದೆಹಲಿ, ಜಮ್ಮು ಕಾಶ್ಮೀರ, ಉಗ್ರವಾದಿ ಸಂಘಟನೆ ಜೊತೆಗಿನ ಜಾಲ ಇರಬಹುದು. ಮೈಸೂರಿನಲ್ಲಿ ಬಾಂಬ್ ತಯಾರಿಕೆ ಸಂಬಂಧ ಆತನ ಮೇಲೆ ಕೇಸು ಇದೆ. ಮತದ ಗಂಟಿನ ಮೇಲೆ ಆಸೆಯಿಂದ ಡಿಕೆಶಿ ಮತ್ತು ಸಿದ್ದರಾಮಯ್ಯರವರು ಬಿಜೆಪಿ ಮೇಲೆ ಮುಗಿಬೀಳುತ್ತಿದ್ದಾರೆ. ಮತದ ಗಂಟಿನ ಆಸೆ ತೊರೆದು ಭಯೋತ್ಪಾದಕರನ್ನು ಭಯೋತ್ಪಾದಕರೆಂದು ಕರೆಯುವ ಧಮ್ ತೋರಿಸಿ ಎಂದು ರವಿಕುಮಾರ್ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಸವಾಲೆಸೆದರು. ಇಲ್ಲವಾದರೆ ತೆಪ್ಪಗಿರಿ ಎಂದು ತಿಳಿಸಿದರು.
ಪಾಟ್ಲಾ ಹೌಸ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಕಣ್ಣೀರು ಸುರಿಸಿದ್ದು, ಸಿದ್ದರಾಮಯ್ಯರವರು ಪಿಎಫ್‍ಐನ 1600 ಟೆರರಿಸ್ಟ್‍ಗಳ ಮೇಲಿದ್ದ 175 ಕೇಸ್ ರದ್ದು ಮಾಡಿ ಬಿಡುಗಡೆ ಮಾಡಿದ್ದು ಜನರಿಗೆ ಗೊತ್ತಿದೆ. ಈ ಮೂಲಕ ಉಗ್ರರಿಗೆ ಸೌಲಭ್ಯ ನೀಡಿ ಅವರ ಜಾಲ ವಿಸ್ತರಣೆಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೆರವಾಗಿದ್ದಾರೆ ಎಂದು ವಿವರಿಸಿದರು.
ರಾಜ್ಯದ ತೋಟಗಾರಿಕಾ ಸಚಿವ ಎನ್. ಮುನಿರತ್ನ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಂ.ಬಿ. ಭಾನುಪ್ರಕಾಶ್, ಸಹ ಸಂಯೋಜಕರಾದ ಜಯತೀರ್ಥ ಕಟ್ಟಿ, ಡಾ. ಎ.ಹೆಚ್. ಶಿವಯೋಗಿಸ್ವಾಮಿ, ವಿಧಾನಪರಿಷತ್ ಸದಸ್ಯ ಮತ್ತು ಬೆಂಗಳೂರು ವಿಭಾಗ ಪ್ರಭಾರಿ ಹೆಚ್.ಎಸ್. ಗೋಪಿನಾಥ್ ರೆಡ್ಡಿ ಮತ್ತು ಬೆಂಗಳೂರು ಕೇಂದ್ರ ಜಿಲ್ಲೆ ಅಧ್ಯಕ್ಷ ಜಿ. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ