ಬೆಂಗಳೂರು : ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿಗೆ ಯಾವುದೇ ವ್ಯಕ್ತಿತ್ವ ಇಲ್ಲ. ಬಿ.ಎಲ್.ಸಂತೋಷ್ ಅವರ ಬಗ್ಗೆ ಮಾತನಾಡುವ ನಡತೆಯನ್ನೂ ಹೊಂದಿಲ್ಲ. ಕುಮಾರಸ್ವಾಮಿ ವ್ಯಕ್ತಿತ್ವಹೀನ ಮನುಷ್ಯ. ರಾಷ್ಟ್ರಕ್ಕೋಸ್ಕರ ತನ್ನನ್ನು ತೊಡಗಿಸಿಕೊಂಡ ಒಬ್ಬ ವ್ಯಕ್ತಿಯ ಕುರಿತು ಮಾತನಾಡುವಂಥ ಯಾವ ನೈತಿಕತೆಯೂ ಕುಮಾರಸ್ವಾಮಿ ಬಳಿ ಇಲ್ಲ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಅವರು ಟೀಕಿಸಿದ್ದಾರೆ.
ಕುಮಾರಸ್ವಾಮಿ ಒಂದು ಪ್ರಾದೇಶಿಕ ಪಕ್ಷದ ಮೂಲಕ ಕುಟುಂಬ ಪೋಷಣೆ ಮಾಡುವ ಮತ್ತು ಅವಕಾಶಗಳಿಗಾಗಿ ಕಾಯುತ್ತಿರುವ ರಾಜಕೀಯ ಪಕ್ಷದವರು. ಯಾವುದೇ ಉದ್ದೇಶ, ಯಾವುದೇ ಗುರಿ ಇಲ್ಲದೆ ಇರತಕ್ಕ ರಾಜಕೀಯ ಪಕ್ಷದ ನೇತಾರರು. ಸದಾ ಕುಟುಂಬವನ್ನು ಪೋಷಣೆ ಮಾಡುವ ಅನೀತಿ ರಾಜಕಾರಣದ ಮೂರ್ತ ರೂಪವೇ ಕುಮಾರಸ್ವಾಮಿ ಮತ್ತು ಅವರ ಕುಟುಂಬ ಎಂದು ಅವರು ಆರೋಪಿಸಿದ್ದಾರೆ.
ಸೂರ್ಯನಿಗೆ ಟಾರ್ಚ್ ಬಿಟ್ಟಂತೆ ಸಂತೋಷ್ ಅವರಂಥ ಅಪ್ರತಿಮ ರಾಷ್ಟ್ರಭಕ್ತರ ಬಗ್ಗೆ ಮಾತನಾಡುವಂಥ ಒಂದು ದುಸ್ಸಾಹಸವನ್ನು ಮಾಡಿದ್ದಾರೆ. ಅವರ ದುಸ್ಸಾಹಸಕ್ಕೆ ತಕ್ಕದಾದ ಬೆಲೆಯನ್ನು ಕರ್ನಾಟಕದ ಜನತೆ ಕೊಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ