ಬೆಂಗಳೂರು: ‘ಸಿದ್ದರಾಮಯ್ಯನವರ ಶವ ಇಲ್ಲಿಗ್ಯಾಕೆ ಬರ್ತದೆ’ ಎಂದು ರಾಜ್ಯ ಬಿಜೆಪಿ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾ ಹೇಳಿಕೆ ನೀಡಿದ ಅವರು, ‘ಸಿದ್ದರಾಮಯ್ಯನವರ ಶವ ಹೋಗಬೇಕಿರುವುದು ಬೇರೆ ಜಾಗಕ್ಕೆ. ಸಿದ್ದರಾಮಯ್ಯನವರ ಶವ ಇಲ್ಲಿಗ್ಯಾಕೆ ಬರ್ತದೆ?. ನಮ್ಮ ಪಕ್ಷ ಶವಾಗಾರ ಅಲ್ಲ. ಅವರಿಗೆ ಬಹುಶಃ ಬುದ್ಧಿಭ್ರಮಣೆ ಆಗಿದೆ. ಅವರು ಶವದ ಬಗ್ಗೆ ಯಾಕೆ ಮಾತನಾಡುತ್ತಾರೋ ಗೊತ್ತಿಲ್ಲ’ ಎಂದು ಟೀಕಿಸಿದರು.
‘ಕೋಲಾರದಲ್ಲೂ ಕೂಡಿಯೇ ಅವರ ರಾಜಕೀಯ ಅಂತ್ಯಸಂಸ್ಕಾರ ಆರಂಭವಾಗಿದೆ. ಅದರಿಂದಾಗಿಯೇ ಅವರಿಗೆ ಶವದ ನೆನಪು ಬಂದಿರಬೇಕು. ಇದು ಕೊನೆಯ ಚುನಾವಣೆ ಎನ್ನುತ್ತಿದ್ದರು. ಆದರೆ, ಇದು ಸೋಲಿನ ಚುನಾವಣೆ ಆಗಿರಲಿದೆ ಎಂಬ ಅನಿಸಿಕೆ ನನ್ನದು’ ಎಂದು ಹೇಳಿದರು.
‘ಸೋಲಿನ ಭಯದಿಂದ ವಿಚಲಿತರಾಗಿ ಬಿಜೆಪಿ ಮತ್ತು ಬಿಜೆಪಿ ಮುಖಂಡರ ಬಗ್ಗೆ ಕೆಟ್ಟಕೆಟ್ಟದಾಗಿ ಬಿಂಬಿಸಿ ಮಾತನಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಅವರಲ್ಲಿ ಮನವಿ ಮಾಡುತ್ತೇನೆ. ನೀವೊಬ್ಬ ಮಾಜಿ ಮುಖ್ಯಮಂತ್ರಿಗಳು. ನಿಮ್ಮ ಬಗ್ಗೆ ನಮಗೆಲ್ಲರಿಗೂ ಗೌರವ ಇದೆ. ಆ ಗೌರವ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ನಿಮ್ಮನ್ನು ಕೆಟ್ಟದಾಗಿ ತೋರಿಸಲು ನಮಗೆ ಇಚ್ಛೆ ಇಲ್ಲ. ಆದರೆ, ಆ ಕೆಟ್ಟ ಸಂಸ್ಕೃತಿಯನ್ನು ನೀವ್ಯಾಕೆ ಮೇಲೆ ಹಾಕಿಕೊಳ್ಳುತ್ತೀರಿ’ ಎಂದು ಕೇಳಿದರು.
‘ಬಿಜೆಪಿ ನಿಮ್ಮಂಥವರಿಗಾಗಿ ಇರುವ ಪಕ್ಷ ಅಲ್ಲ. ನೀವು ಬಂದರೂ ನಿಮ್ಮನ್ನು ಈ ಪಕ್ಷದಲ್ಲಿ ಬಹುಶಃ ಸೇರಿಸಿಕೊಳ್ಳುವುದಿಲ್ಲ. ಮೋದಿಜಿ ಅವರು ಮಾಡುತ್ತಿರುವ ಕಾರ್ಯ, ಈ ದೇಶ ರಕ್ಷಣೆ, ಸಮಾಜದ ಉತ್ತಮ ವ್ಯವಸ್ಥೆ ಮಾಡುತ್ತಿರುವುದನ್ನು ನೋಡಿ ನಿಮ್ಮ ಮಕ್ಕಳು, ನಿಮ್ಮ ಮೊಮ್ಮಕ್ಕಳು ನಿಮ್ಮನ್ನೇ ತೊರೆದು ನಮ್ಮ ಪಕ್ಷ ಸೇರಲಿದ್ದಾರೆ ಎಂಬುದಾಗಿ ನಮ್ಮ ಅಧ್ಯಕ್ಷರು ಈಗಷ್ಟೇ ಹೇಳಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಿ’ ಎಂದು ಆಗ್ರಹಿಸಿದರು.
‘ಇವತ್ತು ಅನೇಕರು ನಮ್ಮ ಪಕ್ಷಕ್ಕೆ ಹೊಸದಾಗಿ ಸೇರಿದ್ದಾರೆ. ನನ್ನದೇ ಸ್ನೇಹಿತ- ಮೈಸೂರಿನ ಮಾಜಿ ಶಾಸಕ ವಾಸು ಅವರ ಮಗನೂ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ನಾನು ನನ್ನ ತಂದೆಯವರ ಜೊತೆ ಕೆಲಸ ಮಾಡಿದ್ದರೂ ಕೂಡ ಆ ಪಕ್ಷದ ಜೊತೆಯಲ್ಲಿದ್ದರೂ ಕೂಡ, ನಾನು ಬಿಜೆಪಿ ಸಿದ್ಧಾಂತಗಳನ್ನು ಒಪ್ಪಿ, ಮೋದಿಯವರ ನಡತೆ ಮತ್ತು ಅವರ ಕಾರ್ಯವೈಖರಿ ಮೆಚ್ಚಿ ಬಿಜೆಪಿಗೆ ಬರುತ್ತಿದ್ದೇನೆ’ ಎಂದಿದ್ದಾರೆ. ‘ಅಂದರೆ, ನಿಮ್ಮ ಮಕ್ಕಳು, ನಿಮ್ಮ ಮೊಮ್ಮಕ್ಕಳೂ ಕೂಡ ನಿಮ್ಮನ್ನೇ ತಿರಸ್ಕಾರ ಮಾಡಿ ನಮ್ಮ ಪಕ್ಷ ಸೇರುವ ಸ್ಥಿತಿ ಇವತ್ತು ದೇಶದಲ್ಲಿದೆ. ಆದ್ದರಿಂದ ನೀವೂ ಬೇಡ; ನಿಮ್ಮ ಹೆಣವೂ ಇಲ್ಲಿ ಬರುವುದು ಬೇಡ’ ಎಂದು ವ್ಯಂಗ್ಯವಾಗಿ ನುಡಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ