ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಭಾರತ ಹೊಸ ಸಂದೇಶದೊಂದಿಗೆ ಅಭಿವೃದ್ದಿ ಪಥದತ್ತ ಸಾಗುತ್ತಿದೆ
ಬೆಂಗಳೂರು : ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ರಂಗಮಂದಿರ ಅವರಣದಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರ ಅಭಿವೃದ್ಧಿ ಕೆಲಸಗಳನ್ನು ಹಾಗೂ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಮೆಚ್ಚಿ ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಹೇಮಲತಾ ಅವರು ಸೇರಿದಂತೆ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಬಿ.ಜೆ.ಪಿಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ವಿ.ಸೋಮಣ್ಣ, ದೇಶ ಅಭಿವೃದ್ದಿಯತ್ತ ಹೊಸ ಸಂದೇಶದೊಂದಿಗೆ ಭಾರತ ಭವಿಷ್ಯದತ್ತ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಯಶ್ವಸಿಯಾಗಿ ಸಾಗುತ್ತಿದೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ 9ವರ್ಷಗಳು ಅಭಿವೃದ್ದಿ ಕಾಣದೇ ಹೋಗಿತ್ತು . ಆದರೆ, ಕಳೆದ ನಾಲ್ಕು ಮುಕ್ಕಾಲು ವರ್ಷಗಳಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಅಲ್ಲದೇ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ಎಲ್ಲ ಧರ್ಮದವರು ಒಟ್ಟಾಗಿ ನಮ್ಮ ಕ್ಷೇತ್ರದಲ್ಲಿ ಬಾಳುತ್ತಿರುವುದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಇನ್ನು, ಜನರಿಗೆ ದ್ರೋಹ ಮಾಡುವ ಕೆಲಸ ಮಾಡಬಾರದು .ರಾಜಕೀಯ ನಿಂತ ನೀರಲ್ಲ . ಜನತೆ ಅಧಿಕಾರ ಕೊಟ್ಟಾಗ ಜನ ಸೇವೆ ಮಾಡುವ ಕೆಲಸ ಮಾಡಬೇಕು. ಈ ನಾಲ್ಕೂ ಮೂಕ್ಕಾಲು ವರ್ಷ ನಮ್ಮ ಕ್ಷೇತ್ರ ಸಾಧಿಸಿದ ಅಭಿವೃದ್ದಿ ಸಾಧನೆ ಬಗ್ಗೆ ಚರ್ಚಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ.
40ವರ್ಷ ರಾಜಕೀಯ ಜೀವನದಲ್ಲಿ ಬಡವರ,ಧ್ವನಿ ಇಲ್ಲದ ಜನರ ಸೇವೆ ಮಾಡಿದ್ದೇನೆ. ಶ್ರೀ ಶಿವಕುಮಾರ ಮಹಾಸ್ವಾಮೀಜಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಆಶೀರ್ವಾದದಿಂದ 305ಹಾಸಿಗೆಯ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ಪಂತರಪಾಳ್ಯದಲ್ಲಿ ಆಸ್ಪತ್ರೆ ನಿರ್ಮಾಣ, 8ಕಿಲೋ ಮೀಟರ್ ಹೈಟೆನ್ಷನ್ ವಿದ್ಯುತ್ ತಂತಿಯನ್ನ ಭೂಗತ ಕೇಬಲ್ ಆಗಿ ಆಳವಡಿಕೆ, 70ಕ್ಕೂ ಹೆಚ್ಚು ಕುಡಿಯುವ ನೀರಿನ ಘಟಕಗಳ ನಿರ್ಮಾಣ, 57ದೇವಸ್ಥಾನ ಮತ್ತು ಕ್ಷೇತ್ರದಾದ್ಯಂತ ಸಾಕಷ್ಟು ಉದ್ಯಾನವನಗಳನ್ನು ನಿರ್ಮಿಸಿ ನವೀಕರಣ ಮಾಡಲಾಗಿದೆ. ಇದು ನೀವು ನೀಡಿದ ಒಂದು ಮತದಿಂದ ಸಾಧ್ಯವಾಗಿದೆ.
ಚುನಾವಣೆ ಹತ್ತಿರ ಬರುತ್ತಿದೆ, ಹಣ ಹಂಚಿ ಸುಳ್ಳು ಹೇಳುವವರು ನಿಮ್ಮ ಮುಂದೆ ಬರುತ್ತಾರೆ. ಹಣದ ಆಮಿಷ ತೋರಿಸುವವರ ಸಾಧನೆಗಳನ್ನು ಪ್ರಬುದ್ಧ ಮತದಾರರು ಕೇಳಬೇಕು. ಬಸವೇಶ್ವರ ಆದರ್ಶ ಸಿದ್ದಾಂತವನ್ನು ಆಳವಡಿಕೊಂಡು ಎಲ್ಲ ವರ್ಗ, ಧರ್ಮದವರು ಜೊತೆ ನಾನು ಬಾಳುತ್ತಿದ್ದೇನೆ ಎಂದು ಹೇಳಿದರು.
ರಾಜ್ಯ ಬಿ.ಜೆ.ಪಿ.ಯುವ ನಾಯಕ ಡಾ.ಅರುಣ್ ಸೋಮಣ್ಣ, ಗೋವಿಂದರಾಜನಗರ ಮಂಡಲ ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಕಾರ್ಯಕರ್ತರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ