ಬಾಗಲಕೋಟೆ : 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ತಾಂಡಾದ ಶ್ರೀ ದುರ್ಗಾದೇವಿ ಹೈಸ್ಕೂಲಿನ ವಿದ್ಯಾರ್ಥಿನಿ ಗಂಗಮ್ಮ ಬಸಪ್ಪ ಹುಡೇದ 625ಕ್ಕೆ 625 ಅಂಕ ಪಡೆದುಕೊಂಡಿದ್ದಕ್ಕೆ ಸಂತಸಗೊಂಡ ಅಭಿನಂದಿಸಿದ ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ ಕಾರಜೋಳ ಅವರು, ಆ ಬಾಲಕಿಗೆ ಹೃದಯ ಸಂಬಂಧಿ ರೋಗವಿರುವುದು ಮಾಧ್ಯಮ ಪ್ರತಿನಿಧಿಯವರ ಮೂಲಕ ತಿಳಿದು ದಿಗ್ಭ್ರಾಂತರಾಗಿ, ಕೂಡಲೇ ಬಾಲಕಿ ಹಾಗೂ ಅವರ ಪೋಷಕರೊಂದಿಗೆ ಮಾತನಾಡಿ, ಬಾಲಕಿಗೆ ಹೃದಯ ಸಂಬಂಧಿ ರೋಗ, ಉಸಿರಾಟದ ತೊಂದರೆ ಇರುವುದನ್ನು ದೃಢಪಡಿಸಿಕೊಂಡು, ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಕರೆಮಾಡಿ, ಬಾಲಕಿಗೆ ತಪಾಸಣೆಗೊಳಪಡಿಸಿ ಚಿಕಿತ್ಸೆ ನೀಡಿ, ಹೆಚ್ವಿನ ಚಿಕಿತ್ಸೆಯ ಅಗತ್ಯವಿದ್ದರೆ ಜಯದೇವ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಹೊಳ್ಳಬೇಕು ಹಾಗು ಜಯದೇವ ಆಸ್ಪತ್ರೆಯ ನಿರ್ದೇಶಕರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಕೋರುವುದಾಗಿ ತಿಳಿಸಿ, ಮಾನವೀಯತೆ ಮೆರೆದರು.
You may also like
-
ಬಿಗ್ ಬ್ರೇಕಿಂಗ್ : ಬಿಜೆಪಿ ಆಂತರಿಕ ವರದಿ ಬಹಿರಂಗ, ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ಸಿಗೆ ಹೀನಾಯ ಸೋಲು
-
ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನ ; ಮಾಜಿ ಸಿಎಂ ಭವಿಷ್ಯ
-
ರಾಜ್ಯ ಸರ್ಕಾರಕ್ಕೆ ಸಂವಿಧಾನದ ಬಗ್ಗೆ ಗೌರವ ಇದೆಯೇ : ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಶ್ನೆ
-
ಕಟೀಲ್ಗೆ ಬಿಕ್ ಶಾಕ್, ಕ್ಯಾಪ್ಟನ್ಗೆ ಟಿಕೆಟ್ ಸಿಗತ್ತಾ !?
-
ಯಾರಿಗೊಲಿಯಲಿದೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರ, ಸಿಟಿ ರವಿ ಎಂಟ್ರಿ ಖಚಿತವೇ!?