ಬೆಂಗಳೂರು: ನಮ್ಮ ಮಾತಿಗಿಂತ ನಮ್ಮ ಸರಕಾರಗಳು ಮಾಡಿದ ಅಭಿವೃದ್ಧಿ ಕಾರ್ಯಗಳೆ ಜನಮಾನಸದಲ್ಲಿ ಮಾತನಾಡುವಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ನವಲಗುಂದ ಮತಕ್ಷೇತ್ರದ ನರಗುಂದದಲ್ಲಿ ಇಂದು ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ರೈತರ ಮಕ್ಕಳಿಗಷ್ಟೇ ಅಲ್ಲ; ಕೂಲಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ನೀಡಲಾಗುತ್ತಿದೆ. ರೈತರಿಗೆ ಕೇಂದ್ರ ಸರ್ಕಾರದ ಕೃಷಿ ಸಮ್ಮಾನದಲ್ಲಿ ನಾಲ್ಕು ಸಾವಿರ ಸೇರಿಸಿ ಕೊಡುತ್ತಿದ್ದೇವೆ. ಈ ಮೂಲಕ ಬಡವನಾಗಿ ಹುಟ್ಟಿದರೂ ಸಾವಿನಲ್ಲಿ ಬಡವನಾಗಬಾರದೆನ್ನುವುದೇ ಬಿಜೆಪಿ ಸರ್ಕಾರದ ಗುರಿ ಎಂದು ಹೇಳಿದರು.
180 ಕೋಟಿ ಹಣ ಒದಗಿಸಿ ರೈತರಿಗೆ ವಿಮೆ, ಲಕ್ಷಾಂತರ ವಿದ್ಯಾರ್ಥಿನಿಯರಿಗೆ, ದುಡಿಯುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಒದಗಿಸಲಾಗುವುದು. ರಾಜ್ಯದಲ್ಲಿ ಈಗಾಗಲೆ ಸೌಲಭ್ಯ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಸಿರಿ ಹಣವನ್ನು ಇನ್ನೊಬ್ಬರಿಗೆ ಸಹಾಯ ಮಾಡಲು ನನಗೆ ಸಲಹೆ ನೀಡುತ್ತಿರುವುದು ರಾಜ್ಯದ ಅಭಿವೃದ್ಧಿಗೆ ಕೈಗನ್ನಡಿ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ಸಿಗರಲ್ಲಿ ಧಮ್ಮಿದೆಯೇ- ಬೊಮ್ಮಾಯಿಯವರ ಪ್ರಶ್ನೆ
ಸಿದ್ದರಾಮಯ್ಯನವರೇ, ಎಸ್ಸಿ.ಎಸ್ಟಿ ಮೀಸಲಾತಿ ಹೆಚ್ಚಿಸಲು ಸಾಧ್ಯವೇ ಇಲ್ಲಾ ಅಂತ ಹೇಳಿದ್ದೀರಿ. ನಿಮ್ಮಿಂದಾಗದ ಕೆಲಸವನ್ನು ನಾವು ಮಾಡಿ ತೋರಿಸಿದ್ದೇವೆ ಎಂದರು. ಕಳಸಾ ಬಂಡೂರಿ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಹೋರಾಟಗಾರ ಹೆಣ್ಣು ಮಕ್ಕಳ ಮನೆ ಹೊಕ್ಕು ಪೊಲೀಸರ ಲಾಠಿ ಏಟು ಕೊಟ್ಟರಿ, ಪೊಲೀಸ್ ವಾಹನದ ನಡುವೆ ದನಗಳನ್ನು ಹೊಡೆಯುವ ಮಟ್ಟದಲ್ಲಿ ರೈತರನ್ನ ಹೊಡೆಯಿಸಿ ಇಂದು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಬಸವರಾಜ ಬೊಮ್ಮಾಯಿಯವರು ಪ್ರಶ್ನಿಸಿದರು.
ಯಾವುದನ್ನು ಆಗುವುದಿಲ್ಲ ಅಂತ ಕಾಂಗ್ರೆಸ್ ಹೇಳಿತ್ತೋ ಅದೆಲ್ಲವನ್ನೂ ಮಾಡಿ ತೋರಿಸಿದ್ದೇವೆ. ಅದನ್ನು ಮಾಡಲು ಧಮ್ ಬೇಕು. ಅದು ನಿಮ್ಮಲ್ಲಿದೆಯೇ ಎಂದು ಎಂದು ಕಾಂಗ್ರೆಸ್ ಮುಖಂಡರಿಗೆ ಸವಾಲೆಸೆದರು.
ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ದಲಿತರಿಗೆ ಅನ್ಯಾಯ ಮಾಡಿದವರು ಕಾಂಗ್ರೆಸ್ ಪಕ್ಷದವರು. 40ಸಾವಿರ ಪೌರ ಕಾರ್ಮಿಕರ ಗೋಳು ಅರಿಯದವರು, ಡಾ.ಬಿ.ಆರ್ ಅಂಬೇಡ್ಕರ್ ಅವರನ್ನ ಸೋಲಿಸಿ ಅಪಮಾನ ಮಾಡಿ ಅವರು. ಬಾಬಾ ಸಾಹೇಬರ ಜನ್ಮಭೂಮಿಯಿಂದ ಸಮಾಧಿ ಸ್ಥಳದ ವರೆಗೆ ಅಭಿವೃದ್ಧಿ ಪಡಿಸಲು ಬಿಜೆಪಿ ಬರಬೇಕಾಯಿತು ಎಂದರು.
12 ಶತಮಾನದ ಬಸವಣ್ಣನವರ ವಿಚಾರಧಾರೆಯಂತೆ ಎಲ್ಲ ಸಮಾಜಕ್ಕೆ ನ್ಯಾಯ ಒದಗಿಸಿ ಸರ್ವರಿಗೂ ಸಮಬಾಳು ಸಮಪಾಲು ಎಂಬುವದನ್ನು ತೋರಿಸಿಕೊಟ್ಟ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯ ರಾಜ್ಯದ ಎಲ್ಲ ಸಮುದಾಯದಲ್ಲಿ ಅಚ್ಚುಳಿಯುವಂತೆ ಉಳಿದಿದೆ.
ಸಿದ್ದರಾಮಯ್ಯನವರೇ ಭ್ರಷ್ಟಾಚಾರದ ಬಗ್ಗೆ ಸದನದ ಒಳಗೆ ಚರ್ಚೆ ಮಾಡದೆ ಸುಳ್ಳನ್ನು ಸೃಷ್ಟಿಸಿ ಜನರ ಮುಂದೆ ಹೇಳುವುದು ನಿಮಗೆ ಶೋಭೆ ತರುವಂತದ್ದಲ್ಲ, ಕ್ಷೇತ್ರದಲ್ಲಿ 2ಸಾವಿರ ಕೋಟಿ ರೂಪಾಯಿ ಅನುದಾನದಲ್ಲಿ ಸಂಪೂರ್ಣ ಅಭಿವೃದ್ಧಿ ಹೊಂದಿದ ನವಲಗುಂದ ಕ್ಷೇತ್ರದ ಬಗ್ಗೆ ಏನೂ ಮಾಡಿಲ್ಲ ಎನ್ನುವ ನಿಮ್ಮ ವಿರೋಧ ಪಕ್ಷದ ಮನೋÀಭಾವವನನ್ನು ದೂರವಿಡಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.
ಸಚಿವ ಮುರಗೇಶ ನಿರಾಣಿ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಮಹೇಶ ಕುಮಟಳ್ಳಿ, ಎಸ್.ವಿ.ಸಂಕನೂರು, ಅರುಣ ಶಾಹಪೂರ, ವಿವೇಕಾನಂದ ಡಬ್ಬಿ, ಮಂಡಲ ಅಧ್ಯಕ್ಷ ಅಜ್ಜು ಪಾಟೀಲ ಇತರರು ಇದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ