ಬೆಂಗಳೂರು: ಮಾಧ್ಯಮಗಳಲ್ಲಿ ಬಿತ್ತರಿಸಿದ ಇತ್ತೀಚಿನ ಸ್ಟಿಂಗ್ ಆಪರೇಷನ್‍ನಲ್ಲಿ ಗೌರಿಬಿದನೂರಿನ ಶಾಸಕ ಶಿವಶಂಕರ್ ರೆಡ್ಡಿ ಅವರು ಬಹುರಾಷ್ಟ್ರೀಯ ಕೇಬಲ್ ಕಂಪೆನಿಯ ಪ್ರತಿನಿಧಿಗಳಿಗೆ ಒಎಫ್‍ಸಿ ಕೇಬಲ್ ಹಾಕಲು ಒಂದು ಕಿಮೀಗೆ 2 ಲಕ್ಷ ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮತ್ತು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಆರೋಪಿಸಿದರು. ಈ ಕುರಿತು ಲೋಕಾಯುಕ್ತಕ್ಕೆ ದೂರು ಕೊಡಲಾಗಿದೆ ಎಂದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಮ್ಮ ಸಹಾಯಕ ಈರಣ್ಣನಿಗೆ ಹಣ ಕೊಡಲು ಹೇಳಿದ್ದು, ಅದೇ ಕೊಠಡಿಯಲ್ಲಿ ಹಣ ಪಡೆದುಕೊಂಡಿರುವುದು ಪ್ರಸಾರವಾಗಿದೆ. ಸ್ಟಿಂಗ್ ಆಪರೇಷನ್‍ನಲ್ಲಿ ಕಾಂಗ್ರೆಸ್‍ನ ಹಲವಾರು ಎಂಎಲ್‍ಎಗಳ ಭ್ರಷ್ಟಾಚಾರ ಪ್ರಕರಣಗಳು ಪತ್ತೆಯಾಗಿವೆ. ಸ್ಟಿಂಗ್ ಆಪರೇಷನ್ ಕುರಿತು ತನಿಖೆ ಆಗಬೇಕು; ಎಫ್‍ಐಆರ್ ದಾಖಲಿಸಿ ಆಪಾದಿತನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಲೋಕಾಯುಕ್ತರನ್ನು ಇವತ್ತು ಭೇಟಿ ಮಾಡಿದ್ದು, ದೂರನ್ನು ಎಸ್ಪಿಗೆ ನೀಡಲು ತಿಳಿಸಿದ್ದಾರೆ. ಇದರ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಎಸ್ಪಿಗೆ ದೂರು ನೀಡಿದ್ದೇವೆ ಎಂದ ಅವರು, ಬೆಂಗಳೂರು ಮತ್ತು ಕರ್ನಾಟಕವು ಬಹುದೊಡ್ಡ ಹೆಮ್ಮೆಯ ತಾಣ, ಇಲ್ಲಿ ಸುಲಭವಾಗಿ ವ್ಯಾಪಾರ ವಹಿವಾಟು ಮಾಡಬಹುದೆಂದು ನಾವು ಹೇಳುತ್ತೇವೆ. ಆದರೆ, ಹೀಗಾಗುತ್ತಿರುವುದು ದುರದೃಷ್ಟಕರ ಸಂಗತಿ. ಅಂತರರಾಷ್ಟ್ರೀಯ ಕಂಪೆನಿಗೆ ಇಲ್ಲಿ ಬರಲು ತಿಳಿಸಿ ಈ ರೀತಿ ಹಣ ಕೇಳುತ್ತಿರುವುದು ಬೇಸರ ತಂದಿದೆ ಎಂದರು.
ಶಾಸಕರ ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದರು. ಹಣಕ್ಕೆ ಬೇಡಿಕೆ, ಕೊಡಲು ಒಪ್ಪಿದ್ದು ಮತ್ತು ಹಣ ನೀಡುವ ಕಾರ್ಯ ಒಂದೇ ಕೊಠಡಿಯಲ್ಲಿ ನಡೆದಿದೆ. ಆದ್ದರಿಂದ ಇದು ಸ್ಪಷ್ಟವಾಗಿ ಸಾಕ್ಷ್ಯಾಧಾರಗಳ ಜೊತೆ ಗೋಚರವಾಗುವ ಪ್ರಕರಣ. ಮಾಡಾಳ್ ವಿರೂಪಾಕ್ಷ ಅವರಿಗೆ ಅನ್ವಯವಾಗುವ ಕಾನೂನು ಇವರಿಗೂ ಅನ್ವಯ ಆಗಲಿ ಎಂದು ತಿಳಿಸಿದರು.
ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಾಘಟ್ಟ, ರಾಜ್ಯ ಪ್ಯಾನಲಿಸ್ಟ್ ಮಧು ಎನ್ ರಾವ್, ಜಿಲ್ಲಾ ವಕ್ತಾರ ಡಾ|| ರಾಘವೇಂದ್ರ ರಾವ್ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ