ಬೆಂಗಳೂರು: ಕಳೆದ ಸುಮಾರು ಒಂದು ದಶಕದಲ್ಲಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಭಾರತವು ಗಮನಾರ್ಹ ಅಭಿವೃದ್ಧಿ ಸಾಧಿಸಿದೆ. ಅದೇ ಹಾದಿಯಲ್ಲಿ ಭಾರತ ಮುನ್ನಡೆಯಬೇಕಾದ ಅಗತ್ಯವಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತಿಳಿಸಿದರು.
ನಗರದಲ್ಲಿ ಇಂದು ಬಿಜೆಪಿ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಜಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತವು ಸಮಗ್ರ ಬದಲಾವಣೆಯ ಹಾದಿಯಲ್ಲಿದೆ. ನೀವು ಇದರ ಭಾಗವಾಗಿದ್ದೀರಿ. ಜಗತ್ತು ಅತ್ಯಂತ ಆಸಕ್ತಿಯಿಂದ ನಮ್ಮತ್ತ ನೋಡುತ್ತಿದೆ. ಭಾರತ ಒಂದೆರಡು ದಶಕಗಳ ಹಿಂದೆ ಹೀಗಿರಲಿಲ್ಲ ಎಂಬ ಅಭಿಪ್ರಾಯವೂ ಅವರಲ್ಲಿದೆ ಎಂದು ತಿಳಿಸಿದರು.
ಸ್ಪರ್ಧಾತ್ಮಕತೆ ಹೆಚ್ಚಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಮಗ್ರಿಗಳ ಸಮರ್ಥ ಸರಬರಾಜು ವ್ಯವಸ್ಥೆಗಾಗಿ ಹುಡುಕಾಟದಿಂದ ನಮ್ಮ ಅವಕಾಶ ಹೆಚ್ಚಾಗಿದೆ. ರಷ್ಯಾ- ಉಕ್ರೇನ್ ಯುದ್ಧ, ಸುದೀರ್ಘ ಅವಧಿಯ ಕೋವಿಡ್ ಬಾಧೆ ಮತ್ತು ಆರೋಗ್ಯದ ಮೇಲಿನ ಪರಿಣಾಮ, ಅಂತರರಾಷ್ಟ್ರೀಯ ಸಂಬಂಧದಲ್ಲಿ ಬದಲಾವಣೆಗಳನ್ನು ತಂದಿದೆ ಎಂದು ಅವರು ವಿಶ್ಲೇಷಿಸಿದರು.
ಡಿಜಿಟಲ್ ಮತ್ತು ನಂಬಿಕೆ ಜೊತೆಜೊತೆಯಾಗಿ ಹೋಗಬೇಕಿದೆ. ಜರ್ಮನಿ, ಜಪಾನ್‍ನಂಥ ದೇಶಗಳು ನಮ್ಮ ದೇಶದ ಜೊತೆ ಹಿಂದೆ ಆತ್ಮೀಯ ಸಂಬಂಧ ಹೊಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಈಗ ಅವುಗಳು ನಮ್ಮೊಡನೆ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗುತ್ತಿವೆ ಎಂದು ತಿಳಿಸಿದರು.
ಸೆಮಿ ಕಂಡಕ್ಟರ್ ಚಿಪ್ ವಿನ್ಯಾಸ, ಎಂಜಿನಿಯರಿಂಗ್ ಕಡೆ ಗಮನ ನೀಡಬೇಕು. ಆ ವಿಚಾರದಲ್ಲಿ ಬೆಂಗಳೂರು ಮುಂದಿದೆ. ಭಾರತದಲ್ಲಿ ಕಳೆದೊಂದು ದಶಕದಲ್ಲಿ ದೂರದೃಷ್ಟಿಯ ಮಹತ್ತರ ಬದಲಾವಣೆಗಳು ಆಗಿವೆ. ಭಾರತ ಮುನ್ನಡೆಯಬೇಕಾದ ದಿಕ್ಕಿನ ಕುರಿತು ಸ್ಪಷ್ಟತೆ ಲಭಿಸಿದೆ. ಇದು ಅಮೃತ ಕಾಲದಲ್ಲಿ ನಾವು ನಮ್ಮ ಜನರನ್ನು ಆತ್ಮವಿಶ್ವಾಸದಿಂದ ಮುಂದೆ ಒಯ್ಯಲು ಪೂರಕ ಆಗಬೇಕು ಎಂದು ನುಡಿದರು.
ನಾರಿ ಶಕ್ತಿಯ ಸಶಕ್ತೀಕರಣ, ಮುದ್ರಾ ಯೋಜನೆಯಿಂದ ಮಹಿಳೆಯರಿಗೆ ಆದ ಲಾಭಗಳ ಕುರಿತು ಅವರು ಮಾಹಿತಿ ನೀಡಿದರು. ಬೇಟಿ ಪಡಾವೊ- ಬೇಟಿ ಬಚಾವೊ ಮೂಲಕ ಆಗಿರುವ ಪ್ರಯೋಜನ ಗಮನಾರ್ಹ ಎಂದು ಅವರು ವಿವರಿಸಿದರು. ಆತ್ಮವಿಶ್ವಾಸ ಮತ್ತು ಪ್ರಯತ್ನ ಇದ್ದಲ್ಲಿ ಜಗತ್ತು ನಮ್ಮ ಉತ್ಪನ್ನಗಳನ್ನು ಎದುರು ನೋಡುತ್ತಿದೆ ಎಂಬ ಸ್ಥಿತಿ ಈಗ ಬಂದಿದೆ ಎಂದು ತಿಳಿಸಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ