ಬೆಂಗಳೂರು: ಬಿಜೆಪಿಯದು ಡಬಲ್ ಎಂಜಿನ್ ಅಭಿವೃದ್ಧಿಪರ ಸರಕಾರ. ಆದರೆ, ಕಾಂಗ್ರೆಸ್‍ನದು ಟ್ರಬಲ್ಡ್ ಎಂಜಿನ್ ಸರಕಾರ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯ ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಜನಹಿತ ಬಯಸುವ ಮತ್ತು ಕರ್ನಾಟಕದ ಜನತೆಯ ಆಶಯ ಈಡೇರಿಸುವ ಸರಕಾರ. ಆದರೆ, ಕಾಂಗ್ರೆಸ್ ಪಕ್ಷವು ಅಧಿಕಾರದಾಹದ ಹಿಂದಿದೆ. ಬಿಜೆಪಿಯ ಸರಕಾರ ಜನರ ಸರಕಾರ. ನಮ್ಮ ಸರಕಾರ ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸುತ್ತದೆ. ಆದರೆ, ಕಾಂಗ್ರೆಸ್‍ನದು ಪರಿವಾರವಾದದ (ಕುಟುಂಬ) ಸರಕಾರ ಎಂದು ಆರೋಪಿಸಿದರು.
ನರೇಂದ್ರ ಮೋದಿಜಿ ಅವರ ನೇತೃತ್ವದ ಕೇಂದ್ರ ಮತ್ತು ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರಕಾರ ಸೇರಿ ಡಬಲ್ ಎಂಜಿನ್ ಸರಕಾರಗಳು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರು ಗಮನಿಸಲಿದ್ದಾರೆ ಎಂದು ಅವರು ನುಡಿದರು. ಡಬಲ್ ಎಂಜಿನ್ ಸರಕಾರಗಳಿಂದಾಗಿ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲೂ ಅಭಿವೃದ್ಧಿ ಕಾರ್ಯಗಳು ಮುಂದುವರಿದವು. ಇನ್ನೊಂದೆಡೆ ಆರೋಗ್ಯ ಸುರಕ್ಷತೆಗೆ ಗರಿಷ್ಠ ಒತ್ತು ಕೊಡಲಾಯಿತು ಎಂದು ಅವರು ವಿವರಿಸಿದರು.
ಪ್ರತಿಯೊಬ್ಬ ನಾಗರಿಕನಿಗೂ ಕೋವಿಡ್ ಲಸಿಕೆ ನೀಡುವ ಸಂದರ್ಭ ಬಂದಾಗ ಕಾಂಗ್ರೆಸ್ಸಿಗರು ಅಪಸ್ವರ ಎತ್ತಿದ್ದರು. ಆದರೆ, ಸರಕಾರಗಳ ಬದ್ಧತೆಯಿಂದ 220 ಕೋಟಿ ಲಸಿಕೆಯನ್ನು ನೀಡಲಾಯಿತು. ರಾಜ್ಯದಲ್ಲಿ 12 ಕೋಟಿಗೂ ಹೆಚ್ಚು ಲಸಿಕೆ ಕೊಡಲಾಗಿದೆ ಎಂದು ತಿಳಿಸಿದರು. ಕೋವಿಡ್ ಲಸಿಕೆ ಸುರಕ್ಷಿತವಲ್ಲ ಎಂದು ಕಾಂಗ್ರೆಸ್ ಹೇಳಿತ್ತು ಎಂದು ಟೀಕಿಸಿದರು.
ಜನರನ್ನು ಹಸಿವಿನಿಂದ ರಕ್ಷಿಸಲು ಪಡಿತರ ಕೊಡಲಾಗಿದ್ದು, ಕರ್ನಾಟಕದ 4 ಕೋಟಿ ಜನರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಜನರು ಬಿಜೆಪಿ ಪರವಾಗಿದ್ದಾರೆ. ಕಮಲ ಚಿಹ್ನೆಯನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ ಎಂದ ಅವರು, ಡಬಲ್ ಎಂಜಿನ್ ಸರಕಾರ ಮತ್ತು ಬಿಜೆಪಿಯೇ ಭರವಸೆ ಎಂಬುದು ಜನರ ವಿಶ್ವಾಸದ ನುಡಿ ಎಂದು ತಿಳಿಸಿದರು.
ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ, ಎಸ್.ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ