ಬೆಂಗಳೂರು: ದೇಶದಲ್ಲಿ ಅಮೂಲ್‍ಗೆ ಸ್ಪರ್ಧೆ ಒಡ್ಡುವ ಮಾದರಿಯಲ್ಲಿ ಕೆಎಂಎಫ್ (ನಂದಿನಿ) ಸಂಸ್ಥೆಯನ್ನು ಬೆಳೆಸುತ್ತೇವೆ. ನಂದಿನಿ ವಿಚಾರದಲ್ಲಿ ಕಾಂಗ್ರೆಸ್ ಆರೋಪ ಆಧಾರರಹಿತ ಮತ್ತು ಅವರದು ರೋಗಿಷ್ಠ ಮನಸ್ಥಿತಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆ.ಶಿವಕುಮಾರ್, ಸಿದ್ದರಾಮಯ್ಯ ನಂದಿನಿ ಮುಳುಗಿಸುವ ಟೀಕೆಗೆ ಉತ್ತರಿಸಿದ ಅವರು, ನಂದಿನಿ ಮಾತ್ರವಲ್ಲದೆ ರಾಜ್ಯದ ಹಸುಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಅದಕ್ಕೇ ಗೋಹತ್ಯಾ ನಿಷೇಧ ಮಾಡಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರದು ದ್ವಿಮುಖ ನೀತಿ. ಗೋಹತ್ಯೆ ಆಗುತ್ತಿರಬೇಕು. ಆದರೆ, ನಂದಿನಿ ಉಳಿಯಬೇಕೆಂದರೆ ಅದು ಹೇಗೆ ಸಾಧ್ಯ ಎಂದು ಕೇಳಿದರು.
ಗೋಹತ್ಯೆ ನಿಷೇಧ ಕಾಯ್ದೆ ವಿರುದ್ಧ ಮತ ಹಾಕಿದವರು ನೀವು ಎಂದು ಟೀಕಿಸಿದರು. ನಂದಿನಿಯನ್ನು ದೇಶದ ದೊಡ್ಡ ಹೈನುಗಾರಿಕಾ ಸಂಸ್ಥೆಯಾಗಿ ಮಾಡುತ್ತೇವೆ ಎಂದು ಸವಾಲೆಸೆದರು.
ವಿಶ್ವದಲ್ಲಿ ಭಾರತ ಮೊದಲು ಎಂಬ ತತ್ವ ನಮ್ಮದು. ಭಾರತದಲ್ಲಿ ಕಾಂಗ್ರೆಸ್ ಮೊದಲು, ಕಾಂಗ್ರೆಸ್‍ನಲ್ಲಿ ಸೋನಿಯಾ- ರಾಹುಲ್ ಗಾಂಧಿ ಮೊದಲು ಎನ್ನುವ ಚಿಂತನೆ ಕಾಂಗ್ರೆಸ್ಸಿಗರು. ಜೆಡಿಎಸ್ ಕೂಡ ಕುಟುಂಬ ಮೊದಲು ಎಂಬ ನೀತಿ ಹೊಂದಿದೆ. ಭಯೋತ್ಪಾದನೆ, ನಕ್ಸಲಿಸಂ ನಿರ್ಮೂಲನೆ ಮಾಡಿದ್ದು ಮೋದಿಜಿ, ಬೊಮ್ಮಾಯಿ ಸರಕಾರ ಎಂದ ಅವರು, ಪಿಎಫ್‍ಐ ಬ್ಯಾನ್ ಮಾಡಿದವರು ನಾವು. ಅವರ ವಿರುದ್ಧ ಇದ್ದ ಪ್ರಕರಣಗಳನ್ನು ರದ್ದು ಮಾಡಿದ್ದು ನೀವು. 370 ನೇ ವಿಧಿ ರದ್ದು ಮಾಡಿದ್ದು ನಾವು; ಇದು ನಿಮಗೆ ಅರಿವಿಲ್ಲವೇ ಎಂದು ಕೇಳಿದರು.
ಕಾಂಗ್ರೆಸ್, ಜೆಡಿಎಸ್‍ನವರು ಬೋಧನೆ ನಿಲ್ಲಿಸಿ ಎಂದು ಆಗ್ರಹಿಸಿದರು. ಕಾಂಗ್ರೆಸ್ ಹುಲಿಗಳು ಗುಹೆ ಸೇರಿವೆ ಎಂದು ಟೀಕಿಸಿದರು. ಪ್ರಾಣಿಹತ್ಯೆ ಮಾಡುವವರು ನಾವಲ್ಲ. ಮನುಷ್ಯರು, ಪ್ರಾಣಿಗಳ ರಕ್ಷಣೆ ಜವಾಬ್ದಾರಿ ನಮ್ಮದು. ಇದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಲಿ ಎಂದು ಆಗ್ರಹಿಸಿದರು.
ನೆರೆ ಬಂದ ಸಂದರ್ಭದಲ್ಲಿ ನಮ್ಮ ಎಲ್ಲ ಸಚಿವಸಂಪುಟ, ಶಾಸಕರು ಮಾತ್ರವಲ್ಲದೆ ಪಕ್ಷದ ಪದಾಧಿಕಾರಿಗಳು ಸೇರಿ ನಾವೆಲ್ಲರೂ ಓಡಾಡಿದ್ದೇವೆ. ಜನತೆಗೆ ನಮ್ಮ ಸರಕಾರ ನೆರವಾಗಿದೆ. ಹಿಂದೆ ಮನೆ ಬಿದ್ದಾಗ 98 ಸಾವಿರ ಕೊಟ್ಟರೆ ನಾವು 5 ಲಕ್ಷ ಕೊಟ್ಟಿದ್ದೇವೆ. ಪ್ರವಾಹ ಬಂದಾಗ ಕೂಡಲೇ ದೋಣಿ, ಬೋಟ್ ಕಳುಹಿಸಿ ನೆರವಾಗಿದ್ದೇವೆ. ವಸತಿ, ಆಹಾರ ಸೌಕರ್ಯ ಕೊಟ್ಟಿದ್ದೇವೆ. ಮಾನವರ ಪ್ರಾಣ ಉಳಿಸಲು ಲಸಿಕೆ ಕೊಟ್ಟವರು ಯಾರು? ನಾವೇ ತಾನೇ ಫಸ್ಟ್ ನೊಣಗಳ ಥರ ಕೆಟ್ಟ ವಿಚಾರವನ್ನೇ ಚಿಂತಿಸದಿರಿ ಎಂದು ಕಿವಿಮಾತು ಹೇಳಿದರು.
ಪ್ರಧಾನಿಯವರಿಗೆ ಅಭಿನಂದನೆ
ಹುಲಿ ರಕ್ಷಣೆ, ಪೋಷಣೆ, ಗಣಕೀಕರಣಕ್ಕೆ ಸಂಬಂಧಿಸಿ ನಮ್ಮ ರಾಜ್ಯದ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿಜಿಯವರ ಭೇಟಿ ಸಂತೋಷಕರ. 1970-75ರ ದಶಕದಲ್ಲಿ ಹುಲಿಗಳ ಸಂಖ್ಯೆ ಕಡಿಮೆ ಆಗುತ್ತಿತ್ತು. ಹುಲಿ ರಕ್ಷಣೆ, ಪೋಷಣೆಗಾಗಿ ಬಂಡೀಪುರ, ಮಧ್ಯಪ್ರದೇಶದಲ್ಲಿ ಒಂದು ಯೋಜನೆ ಜಾರಿ ಮಾಡಲಾಗಿತ್ತು. ಹುಲಿ ರಕ್ಷಣೆ, ಸಂಖ್ಯೆ ವೃದ್ಧಿಯಲ್ಲಿ ಕರ್ನಾಟಕ ಈಗ ನಂಬರ್ 2ನೇ ಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇವತ್ತು 2 ಗಂಟೆ ಸಫಾರಿ, ಹುಲಿ, ಆನೆಗಳ ರಕ್ಷಣೆಗೆ ಮೆಚ್ಚುಗೆ, ಆನೆ ರಕ್ಷಣೆ ಮಾಡುವ ಕುಟುಂಬದ ಜೊತೆ ಮಾತುಕತೆ ಮಾಡಿದ ಪ್ರಧಾನಿಯವರು ಅಭಿನಂದನಾರ್ಹರು. ಪ್ರಧಾನಿಯವರ ಕಾಳಜಿಗೆ ಅಭಿನಂದನೆ ಮತ್ತು ಧನ್ಯವಾದಗಳು. ಕರ್ನಾಟಕ ಮತ್ತು ತಮಿಳುನಾಡಿಗೆ ಅವರ ಭೇಟಿ ಕೊಟ್ಟ ಅವರನ್ನು ಬಿಜೆಪಿ ಕರ್ನಾಟಕದ ವತಿಯಿಂದ ತುಂಬು ಹೃದಯದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರಧಾನಿಯವರ ಭೇಟಿ ಕೆಲವೇ ಕೆಲವು ನಾಯಕರಿಗೆ ದುಃಖ ತಂದಿದೆ. ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರು ಪ್ರಧಾನಿ ಭೇಟಿಯನ್ನು ಖಂಡಿಸಿದ್ದಾರೆ. ಇವರು ಸಣ್ಣ ಮನಸ್ಸು ಹೊಂದಿದ್ದಾರೆ. ಪ್ರವಾಹ, ಕೋವಿಡ್ ವೇಳೆ ಭೇಟಿ ಕೊಟ್ಟಿಲ್ಲ ಎಂದು ಕೇಳಿದ್ದಾರೆ. ಈ ಸಣ್ಣ ಮನಸ್ಸಿನ ವ್ಯಕ್ತಿಗಳು ದÉೂಡ್ಡ ನಾಯಕರು ಆಗಲು ಅಸಾಧ್ಯ ಎಂದು ಟೀಕಿಸಿದರು.
ಇವರ ನಡೆ ಖೇದಕರ ಎಂದು ಖಂಡಿಸಿದರು. ಬಿಜೆಪಿ ಕೋಟ್ಯಂತರ ಜನರನ್ನು ರಕ್ಷಿಸಲು ಧಾವಿಸಿತ್ತು. ಇಲ್ಲಿ ಕನಿಷ್ಠ ವೈದ್ಯರಿದ್ದರೂ ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಿಸಿದ್ದೇವೆ. ಆಗ ಲಸಿಕೆ ನೀಡಿ ಮನುಷ್ಯರನ್ನು ರಕ್ಷಿಸಿದವರು ಯಾರು ಎಂದು ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು. ನೀವೂ ಮೊದಲು ರಾಜಕೀಯ ಮಾಡಿದ್ದೀರಿ. ಆ ಮೇಲೆ ಲಸಿಕೆ ಪಡೆದಿರಲ್ಲವೇ ಎಂದು ಕೇಳಿದರು.
ಪ್ರಪಂಚದ ವಿವಿಧ ದೇಶಗಳಿಗೆ ಕೋವಿಡ್ ಲಸಿಕೆ ಕಳುಹಿಸಿದ್ದೇವೆ. ಇದನ್ನು ನೀವು ಅರ್ಥ ಮಾಡಿಕೊಳ್ಳಿ. ಪ್ರಧಾನಿಯವರು ಮನುಷ್ಯರ ರಕ್ಷಣೆ ಮಾಡಿದ್ದನ್ನು ಮತ್ತು ಆರ್ಥಿಕ ರಂಗ ಕುಸಿಯದೆ, ಆರ್ಥಿಕ ಚೇತರಿಕೆ ಕಂಡುಕೊಂಡಿದ್ದನ್ನು ಗಮನದಲ್ಲಿ ಇಡಿ ಎಂದು ತಿಳಿಸಿದರು.
ನರೇಂದ್ರ ಮೋದಿ, ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಆರ್ಥಿಕ ಚೇತರಿಕೆಗೆ ಕಾರಣ ಆಗಿವೆ ಎಂದು ನೆನಪಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ನೇಕಾರರ ಸಮಾಜದ ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ್ ಅವರು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ