ಬೆಂಗಳೂರು: ಆತ್ಮನಿರ್ಭರ ಭಾರತ ಮತ್ತು ಅಂತ್ಯೋದಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಜಿ ಅವರ ದೃಷ್ಟಿ ಭಾರತವನ್ನು ವಿಶ್ವದ ನಂಬರ್ 1 ದೇಶವಾಗಲು ಸಿದ್ಧಗೊಳಿಸಲಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಮತ್ತು ಆಯುμï ಸಚಿವ ಸರ್ಬಾನಂದ ಸೋನೋವಾಲ್ ಅವರು ತಿಳಿಸಿದರು.
ದಾವಣಗೆರೆಯಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬಿ.ಜಿ ಅಜಯ್‍ಕುಮಾರ್ ಪರ ಬಿಜೆಪಿ ಹಿರಿಯ ಮುಖಂಡ ಸರ್ಬಾನಂದ ಸೋನೋವಾಲ್ ಅವರು ಸ್ಥಳೀಯವಾಗಿ ಪ್ರಚಾರ ನಡೆಸಿದರು.
ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಬಿ.ಜಿ.ಅಜಯ್ ಕುಮಾರ್ ಮತ್ತು ದಾವಣಗೆರೆ ಉತ್ತರದಿಂದ ಸ್ಪರ್ಧಿಸಿರುವ ಎಸ್.ಎ.ರವೀಂದ್ರನಾಥ್ ಅವರಿಗೆ ಬೆಂಬಲ ನೀಡಲು ಅವರು ಮನವಿ ಮಾಡಿದರು.
“ಭಾರತವನ್ನು ಅತ್ಯಂತ ಕ್ರಿಯಾಶೀಲ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿಯವರು ಮುನ್ನಡೆಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ನವ ಭಾರತ ನಿರ್ಮಾಣದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರ ಭಾಗವಾಗಲು ಅವರ ಅಮೂಲ್ಯ ಕೊಡುಗೆಯಿಂದಾಗಿ, ನಾವು ಸ್ಪಷ್ಟ ದೃಷ್ಟಿ ಮತ್ತು ಚಿಂತನೆಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ರಾಷ್ಟ್ರ ನಿರ್ಮಾಣಕ್ಕೆ ಇದು ಬಹುಮುಖ್ಯ. ಮೋದಿ ಜಿ ನಾಯಕತ್ವದಲ್ಲಿ, ಭಾರತದ ಹಲವು ರಾಜ್ಯಗಳಲ್ಲಿ ಬಿಜೆಪಿಯ ‘ಡಬಲ್ ಇಂಜಿನ್ ಸರ್ಕಾರ್’ ಯಶಸ್ಸು ಐತಿಹಾಸಿಕವಾಗಿದೆ. ಅದರಲ್ಲಿ ಕರ್ನಾಟಕವೂ ಒಂದು ಎಂದು ಸರ್ಬಾನಂದ ಸೋನೋವಾಲ್ ವಿಶ್ಲೇಷಿಸಿದರು.
ಇಂದು ಕರ್ನಾಟಕದ ಜನತೆಗೆ ಸಮಾಜದ ಸಮಗ್ರ ಅಭಿವೃದ್ಧಿಗೆ ಮಾರ್ಗೋಪಾಯಗಳನ್ನು ಒದಗಿಸಲಾಗಿದೆ. ಸಮಾಜದ ಕಟ್ಟಕಡೆಯ ವರ್ಗಗಳನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಕ್ರಿಯಗೊಳಿಸಲಾಗುತ್ತಿದೆ ಮತ್ತು ಸಬಲೀಕರಣಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳನ್ನು ಸಬಲೀಕರಣಗೊಳಿಸಲು ಬಿಜೆಪಿಯ ರಾಜ್ಯ ಸರ್ಕಾರ ಎರಡು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಸಂತಸದ ವಿಷಯವಾಗಿದೆ. ಎಸ್‍ಸಿ ಸಮುದಾಯಕ್ಕೆ ಶೇ.2ರಷ್ಟು ಮತ್ತು ಎಸ್‍ಟಿ ಸಮುದಾಯಕ್ಕೆ ಶೇ.4ರಷ್ಟು ಮೀಸಲಾತಿ ಹೆಚ್ಚಿಸಿ, ಎಸ್‍ಸಿಗೆ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಈ ಸಮುದಾಯಗಳ ಬಹುಕಾಲದ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆತ್ಮನಿರ್ಭರ ಭಾರತ್ ಮಾಡುವ ನಮ್ಮ ಗುರಿಯತ್ತ ಮುನ್ನಡೆಯುವ ನಿಟ್ಟಿನಲ್ಲಿ ಮೋದಿಜಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಯಾಸ್’ಗಳ ದೃಷ್ಟಿ ಹೇಗೆ ಸಾಕಾರಗೊಳ್ಳುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಎಸ್‍ಸಿ ಲಂಬಾಣಿ ಮತ್ತು ಬಂಜಾರ ಸಮುದಾಯಗಳಿಗೆ ಸೇರಿದ 1.75 ಲಕ್ಷ ಭೂ ಹಕ್ಕುಪತ್ರಗಳನ್ನು ಸಕ್ರಮಗೊಳಿಸಿದ ಬಗ್ಗೆ ನಿಮ್ಮೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇದು ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಗಮನಾರ್ಹ ಸಾಧನೆಯಾಗಿದೆ ಎಂದರು.
ಏಕಲವ್ಯ ಮಾದರಿ ವಸತಿ ಶಾಲೆಗಳ ಅಭಿವೃದ್ಧಿ, 100 ಡಾ ಬಿಆರ್ ಅಂಬೇಡ್ಕರ್ ಹಾಸ್ಟೆಲ್‍ಗಳು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗಾಗಿ 10 ಕೆಆರ್‍ಇಐಎಸ್ ವಸತಿ ಶಾಲೆಗಳ ಘೋಷಣೆ ಕುರಿತು ಅವರು ತಿಳಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಸುದೀರ್ಘ ಕಾಲದಿಂದ ಕಾಂಗ್ರೆಸ್ ಸರ್ಕಾರಗಳ ದುರಾಡಳಿತಕ್ಕೆ ದೇಶವು ಭಾರಿ ಬೆಲೆ ತೆತ್ತಿದೆ. ಕರ್ನಾಟಕದ ಅಂಚಿನಲ್ಲಿರುವ ಸಮುದಾಯಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಕಾಂಗ್ರೆಸ್ ದೀರ್ಘಕಾಲದಿಂದ ನಿರಾಕರಿಸಿದೆ. ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳನ್ನು ಸಬಲೀಕರಣಗೊಳಿಸುವ ಬಿಜೆಪಿ ಸರ್ಕಾರದ ಐತಿಹಾಸಿಕ ಕ್ರಮವನ್ನು ಕಾಂಗ್ರೆಸ್ ಇಂದಿಗೂ ವಿರೋಧಿಸುತ್ತಲೇ ಇದೆ ಎಂದು ಟೀಕಿಸಿದರು.
ಇದು ಅಹಿಂದ ಕಲ್ಯಾಣಕ್ಕಾಗಿ ಕೆಲಸ ಮಾಡಿದೆ ಎಂದು ಹೇಳಿಕೊಂಡು ಎಸ್‍ಸಿ ಸಮುದಾಯವನ್ನು ಮತಬ್ಯಾಂಕ್ ಮಾಡಿಕೊಂಡಿತ್ತು ಎಂದು ಆರೋಪಿಸಿದ ಅವರು, ಮೋದಿಜಿ ಅವರ ನೇತೃತ್ವವನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟು ಕರ್ನಾಟಕದ ಜನತೆ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ನುಡಿದರು.
ಇದಕ್ಕೂ ಮುನ್ನ ಸರ್ಬಾನಂದ ಸೋನೋವಾಲ್ ಅವರು ಭಾರತ ಮಾತೆ, ವೀರ ಮದಕರಿ ನಾಯಕ, ಛತ್ರಪತಿ ಶಿವಾಜಿ ಮಹಾರಾಜರು, ಜಗದ್ಗುರು ಬಸವ, ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ರೋಡ್ ಷೋದಲ್ಲೂ ಭಾಗವಹಿಸಿದ್ದರು.
ಸೋನೋವಾಲ್ ಅವರು ದಾವಣಗೆರೆಯ ದೊಡ್ಡಪೇಟೆಯ ವಿರಕ್ತ ಮಠಕ್ಕೆ ಭೇಟಿ ನೀಡಿದರು. ಇಂದು ಇಲ್ಲಿನ ಕೆಬಿ ಎಕ್ಸ್‍ಟೆನ್ಶನ್‍ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಕಾರ್ಯಕಾರಿ ಸಮಿತಿಯೊಂದಿಗೆ ನಡೆದ ಸಭೆಯಲ್ಲಿ ಸೋನೋವಾಲ್ ಅವರು ಪಕ್ಷದ ಪ್ರಚಾರವನ್ನು ಪರಿಶೀಲಿಸಿದರು. ಸಂಸದ ಜಿ.ಎಂ ಸಿದ್ದೇಶ್ವರ (ಲೋಕಸಭೆ); ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್, ಬಿಜೆಪಿ ಅಭ್ಯರ್ಥಿಗಳು, ಸ್ಥಳೀಯ ಮುಖಂಡರು ಇದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ