ಬೆಂಗಳೂರು: ಪತ್ರಕರ್ತರ ಸಂಬಂಧ ಗೂಂಡಾಗಿರಿಯ ವರ್ತನೆ ತೋರಿದ ಕಾಂಗ್ರೆಸ್‍ನ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮನವಿ ಮಾಡಿದ್ದಾರೆ.
ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಅವರು ಈ ಸಂಬಂಧ ಮನವಿಯೊಂದನ್ನು ಇಂದು ನೀಡಿದರು. ಡಿಕೆಶಿವಕುಮಾರ್ ಅವರು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಅದೇ ದಿನ ದೇಶದ ಗೃಹಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಇದ್ದರು. ಕೆಲ ಪತ್ರಕರ್ತರು ಡಿಕೆಶಿ ಸುದ್ದಿಗೋಷ್ಠಿಗೆ ಬಂದಿಲ್ಲ, ‘ಬಾರದವರ ಹೆಸರು ಬರೆದುಕೊಳ್ಳಿ. ಅವರ ಮ್ಯಾನೇಜ್ಮೆಂಟ್ ಜೊತೆ ಮಾತಾಡ್ತೀನಿ ಎಂದು ತಿಳಿಸಿದ ಶಿವಕುಮಾರ್, ಪತ್ರಕರ್ತರು ಚುನಾವಣಾ ಸಂದರ್ಭದಲ್ಲಿ ಒತ್ತಡದಲ್ಲಿ ಕೆಲಸ ಮಾಡುವುದನ್ನು ಮರೆತು ನಾನು ಪತ್ರಕರ್ತರನ್ನ ಕೊಂಡುಕೊಳ್ಳಬಲ್ಲೆ ಎಂದಿದ್ದಾರೆ. ಅವರ ಮ್ಯಾನೇಜ್ಮೆಂಟ್ ಹೇಳಿ ಕೆಲಸದಿಂದ ತೆಗೆಸುತ್ತೀನಿ ಅಂತ ಹೇಳಿದ್ದಾರೆ. ಅಲ್ಲದೆ ಗೂಂಡಾಗಿರಿ ವರ್ತನೆ ತೋರಿದ್ದಾರೆ ಎಂದು ತಿಳಿಸಲಾಗಿದೆ.
ಪತ್ರಕರ್ತರ ಜೊತೆ ನಾವಿದ್ದೇವೆ. ಪತ್ರಕರ್ತರನ್ನು ಹೆದರಿಸಿದ ಡಿಕೆಶಿ ವಿರುದ್ಧ ಕ್ರಮಕೈಗೊಳ್ಳಬೇಕು. ಕೂಡಲೇ ಡಿಕೆಶಿಗೆ ನೋಟೀಸ್ ಹೊರಡಿಸಬೇಕು ಅಂತ ಮನವಿ ಮಾಡಿದ್ದೇವೆ ಎಂದು ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ಎರಡನೇ ದೂರು: ಕಾಂಗ್ರೆಸ್ ಸೋಶಿಯಲ್ ಮೀಡಿಯಾ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲಲು ಹೊರಟಿದೆ. ಸೋಶಿಯಲ್ ಮೀಡಿಯಾ ಕೆಟ್ಟದಾಗಿ ಬಳಸಿಕೊಂಡಿದ್ದಾರೆ. ತೆಲಂಗಾಣದ ವೀಡಿಯೋ ಬಳಸಿ, ಬಿಜೆಪಿಯ ಮೀಡಿಯಾ ವ್ಯಾನ್‍ಗೆ ಕಲ್ಲು ಹೊಡೆದಿದ್ದಾರೆ ಅಂತ ಬಿಂಬಿಸಿದ್ದಾರೆ ಎಂದು ಇನ್ನೊಂದು ದೂರಿನಲ್ಲಿ ತಿಳಿಸಲಾಗಿದೆ.
ಸೋಶಿಯಲ್ ಮೀಡಿಯಾ ಟೀಮ್ ಫೋರ್ಜರಿ ಮಾಡಿದ್ದಲ್ಲದೆ, ಸಮಾಜಕ್ಕೆ ತಪ್ಪು ಸಂದೇಶ ನೀಡುವ ಕೆಲಸ ಮಾಡಿದೆ. ಕಾಂಗ್ರೆಸ್ ಸೋಶಿಯಲ್ ಮೀಡಿಯಾವನ್ನು ಬ್ಯಾನ್ ಮಾಡಬೇಕು ಎಂದು ಮನವಿ ಮಾಡಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ