ಮಾಜಿ ಮುಖ್ಯಮಂತ್ರಿ, ರಾಜಾ ಹುಲಿ ಎಂದೇ ಕರೆಸಿಕೊಳ್ಳುವ ಕರ್ನಾಟಕದ ರಾಜಕೀಯ ಮುತ್ಸದ್ದಿ ಬಿ. ಎಸ್. ಯಡಿಯೂರಪ್ಪ ಅವರು ಟ್ವಿಟ್ಟರ್‌ನಲ್ಲಿ 1 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿ ಹೊಸ ದಾಖಲೆ ಬರೆದಿದ್ದಾರೆ. ದಶಲಕ್ಷ ಅನುಯಾಯಿಗಳನ್ನು ಹೊಂದಿರುವ ರಾಜ್ಯದ ಏಕ ಮಾತ್ರ ರಾಜಕಾರಣಿ ಎನಿಸಿಕೊಂಡಿದ್ದಾರೆ.
ಈ ಸಾಧನೆ ಮಾಡಿರುವುದಕ್ಕೆ ಟ್ವಿಟ್ಟರ್‌ನಲ್ಲಿ ಹರ್ಷ ವ್ಯಕ್ತ ಪಡಿಸಿರುವ ಬಿಎಸ್‌ವೈ “ಟ್ವಿಟರ್ ನಲ್ಲಿ ನಮ್ಮ ಬಳಗ ದಶಲಕ್ಷದ ಮೈಲಿಗಲ್ಲನ್ನು ದಾಟಿರುವುದು ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳ ಸಂಕೇತ ಎಂದು ಭಾವಿಸುತ್ತೇನೆ. ತಮ್ಮ ಬೆಂಬಲ, ಅಭಿಮಾನದಿಂದ ಸದಾ ನನ್ನನ್ನು ಹಾರೈಸುತ್ತಿರುವ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ”
ಮುಖ್ಯಮಂತ್ರಿ ಸ್ಥಾನದಿಂದ ಇಳಿದರೂ ತಮ್ಮ ಜನಪ್ರಿಯತೆಯನ್ನು ಹಾಗೇ ಉಳಿಸಿಕೊಂಡಿರುವುದು ನಿಜಕ್ಕೂ ಬಿಎಸ್‌ವೈ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಟ್ವಿಟರ್ ನಲ್ಲಿ ನಮ್ಮ ಬಳಗ ದಶಲಕ್ಷದ ಮೈಲಿಗಲ್ಲನ್ನು ದಾಟಿರುವುದು ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳ ಸಂಕೇತ ಎಂದು ಭಾವಿಸುತ್ತೇನೆ.
ತಮ್ಮ ಬೆಂಬಲ, ಅಭಿಮಾನದಿಂದ ಸದಾ ನನ್ನನ್ನು ಹಾರೈಸುತ್ತಿರುವ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು! pic.twitter.com/Ey1M5UzEUN
— B.S.Yediyurappa (Modi Ka Parivar) (@BSYBJP) August 11, 2021
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ