ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ನರೇಂದ್ರಮೋದಿ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್ ಖಂಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿ, ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖರ್ಗೆಯವರು ಇಂದು ‘ನರೇಂದ್ರಮೋದಿ ವಿಷದ ಹಾವು. ಆ ಹಾವಿನ ವಿಷ ನೆಕ್ಕಿದರೆ ಸತ್ತಂತೆ. ಮಲಗಿಬಿಡ್ತೀರಾ.’ ಎಂದಿದ್ದಾರೆ. ರಾಜಕೀಯ ಜೀವನದಲ್ಲಿರುವವರು ಮರ್ಯಾದೆ ಕಾಪಾಡಿಕೊಳ್ಳಬೇಕು. ಅನುಭವಿ ವ್ಯಕ್ತಿಯೊಬ್ಬರು ಪ್ರಧಾನಿಯವರ ವಿರುದ್ಧ ರೀತಿಯ ನಿಂದನೆ ಮಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹುದಲ್ಲ ಎಂದು ಆಕ್ಷೇಪಿಸಿದರು.
ಪ್ರಧಾನಿಯವರು ಖರ್ಗೆಯವರನ್ನು ಎಲ್ಲ ರೀತಿಯಲ್ಲಿ ಗೌರವಿಸುತ್ತಾರೆ. ಆದರೆ, ಖರ್ಗೆಯವರು ತಮ್ಮ ರಾಜಕೀಯ ನಾಯಕರನ್ನು ಸಂತುಷ್ಟಗೊಳಿಸಲು ಇಂತಹ ಪದಗಳ ಬಳಕೆ ಮಾಡಿದ್ದಾರೆ. ಖರ್ಗೆಯವರ ಹೇಳಿಕೆ ಅಸಾಂಸದೀಯ, ಅನಾಗರಿಕ ಮತ್ತು ಅಸ್ವೀಕಾರ್ಹ ಎಂದು ಅವರು ಹೇಳಿದರು.
ಸುಸಂಸ್ಕøತ ಕರ್ನಾಟಕ, ಸಾಧು, ಸಂತರ, ಸಾಧಕರ ನಾಡಾಗಿದೆ. ನಾಡಿನ ಗಣ್ಯರು ಮೋದಿಯವರನ್ನು ಪ್ರಶಂಸಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ರಾಜಕೀಯಕ್ಕಾಗಿ ಪ್ರಧಾನಿಯವರನ್ನು ನಿಂದಿಸುವ ಹೇಳಿಕೆಗಳನ್ನು ನಿರಂತರ ನೀಡುತ್ತಿದ್ದಾರೆ. ಖರ್ಗೆಯವರು ನೀಡಿರುವ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ಧಮೇಂದ್ರ ಪ್ರಧಾನ್ ಹೇಳಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ