ಬೆಂಗಳೂರು: ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ನಾಶ ಆಗಲಿದೆ. ಹಿಂದೂ ಧರ್ಮದ ಪುನಶ್ಚೇತನ ಅಗತ್ಯ. ಇವೆರಡೂ ಜಿಲ್ಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ನರೇಂದ್ರ ಮೋದಿಯವರು ಅನನ್ಯ ಕೊಡುಗೆ ನೀಡಿದ್ದಾರೆ. 38 ಸಾವಿರ ಕೋಟಿ ಅನುದಾನವನ್ನು ಈ ಜಿಲ್ಲೆಗೆ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಇಂದು ನಡೆದ ಬಿಜೆಪಿಯ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ನುಡಿದಂತೆ ನಡೆದವನ ಅಡಿಗೆನ್ನ ನಮನ ಎಂದು ನುಡಿದರಲ್ಲದೆ, ಅಯೋಧ್ಯಾ ಮಂದಿರ ಶಿಲಾನ್ಯಾಸ ಸೇರಿದಂತೆ ಅನೇಕ ಮಂದಿರಗಳ ಅಭಿವೃದ್ಧಿ ಕಾರ್ಯ ಕೇಂದ್ರದ ಬಿಜೆಪಿಯಿಂದ ನಡೆದಿದೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲಿದೆ. ಕರಾವಳಿ ಜಿಲ್ಲೆಗಳ 13ಕ್ಕೆ 13 ಕ್ಷೇತ್ರಗಳನ್ನು ನಾವು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಕೊಲೆಗಡುಕ ಸಂಸ್ಕøತಿ ಇರುವ ಪಿಎಫ್‍ಐ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ ಕಾಂಗ್ರೆಸ್ಸಿಗೆ ಪಾಠ ಕಲಿಸಿ ಎಂದು ತಿಳಿಸಿದರು.
ಗೋಹತ್ಯಾ ನಿಷೇಧ ಕಾಯ್ದೆ ವಾಪಸ್, ಮತಾಂತರ ಕಾಯ್ದೆ ವಾಪಸ್, ಟಿಪ್ಪು ಜಯಂತಿ ಮರಳಿ ಆಚರಣೆ- ಹೀಗೆ ಮುಸಲ್ಮಾನರ ಓಟ್‍ಬ್ಯಾಂಕ್, ತುಷ್ಟೀಕರಣದ ರಾಜಕೀಯ, ಬಜರಂಗದಳದ ನಿಷೇಧಕ್ಕೆ ಮುಂದಾದ ಕಾಂಗ್ರೆಸ್ ನಿರ್ಮೂಲನ ಮಾಡಲು ಜನರು ಸಜ್ಜಾಗಿದ್ದಾರೆ ಎಂದು ನುಡಿದರು.
ಬಿಜೆಪಿಗೆ ಪೂರ್ಣ ಬಹುಮತ ಕೊಡಿ. ಕಾಂಗ್ರೆಸ್ ಮಾನಸಿಕತೆಗಳು ದಿನೇದಿನೇ ಪ್ರಕಟವಾಗುತ್ತಿವೆ. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರಕಾರ ನಿರ್ಮಿಸಲು ಕರಾವಳಿಯಲ್ಲಿ 13 ಜನ ಶಾಸಕರನ್ನು ಆಯ್ಕೆ ಮಾಡಿ ಎಂದು ಎರಡೂ ಜಿಲ್ಲೆಗಳ ಜನರಿಗೆ ಸಚಿವ ಸುನಿಲ್‍ಕುಮಾರ್ ವಿನಂತಿಸಿದರು.
ದೇಶಭಕ್ತ ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆಯನ್ನು ವಿರೋಧಿಸಿ. ಹಿಂದೂಗಳ ಸ್ವಾಭಿಮಾನದ ಪ್ರಶ್ನೆ ಇದು. ಮತದಾನದ ಮೂಲಕ ಕಾಂಗ್ರೆಸ್ಸನ್ನು ನಿಷೇಧಿಸಿ ಎಂದು ಮನವಿ ಮಾಡಿದರು. ಪ್ರಧಾನ ನರೇಂದ್ರ ಮೋದಿಯವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಪಕ್ಷದ ಎರಡೂ ಜಿಲ್ಲೆಗಳ ಅಧ್ಯಕ್ಷರು, ಶಾಸಕ ಅಭ್ಯರ್ಥಿಗಳು, ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ