ಬೆಂಗಳೂರು: ಕರ್ನಾಟಕವನ್ನು ದೇಶದ ನಂಬರ್ ವನ್ ರಾಜ್ಯವಾಗಿ ಮಾಡುವ ನೀಲನಕ್ಷೆಯನ್ನು ಬಿಜೆಪಿಯ ಪ್ರಣಾಳಿಕೆಯಲ್ಲಿ ನೀಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ಬಳ್ಳಾರಿಯಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ನಂಬರ್ ವನ್ ರಾಜ್ಯವಾಗಿ ಮಾಡಲು ಬಿಜೆಪಿಗೆ ಬಹುಮತ ಕೊಡಿ. ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷವನ್ನು ದೂರವಿಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳಿವೆ. ತುಷ್ಟೀಕರಣದ ನೀತಿಯನ್ನು ಅದು ಅನಾವರಣಗೊಳಿಸಿದೆ. ಬಿಜೆಪಿಯ ಎಲ್ಲ ಉತ್ತಮ ಕಾರ್ಯಕ್ರಮಗಳನ್ನು ಹಿಂದಕ್ಕೆ ಪಡೆಯುವ ಭರವಸೆ ಅಲ್ಲಿದೆ. ಕರ್ನಾಟಕದ ಜನರಿಗೆ ಬೋಗಸ್ ಭರವಸೆಗಳನ್ನು ಅದು ನೀಡಿದೆ ಎಂದು ಆಕ್ಷೇಪಿಸಿದರು.
ನಾನು ಜೈ ಬಜರಂಗಬಲಿ ಹೇಳುವುದಕ್ಕೂ ಕಾಂಗ್ರೆಸ್ಸಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಎಲ್ಲಿಯವರೆಗೆ ಹೋಗುತ್ತಿದೆ ಎಂದು ರಾಜ್ಯದ ಜನತೆ ನೋಡುತ್ತಿದ್ದಾರೆ. ಕಾಂಗ್ರೆಸ್ ಆತಂಕವಾದದ ವಿರುದ್ಧ ಒಂದು ಮಾತನ್ನಾಡಲೂ ಹಿಂಜರಿಯುತ್ತಿದೆ. ಮತಬ್ಯಾಂಕ್ ರಾಜಕೀಯದ ಕಾರಣಕ್ಕೆ ಭಯೋತ್ಪಾದನೆಯನ್ನು ಪಾಲಿಸಿ, ಪೋಷಿಸುತ್ತ ಬಂದಿದೆ ಎಂದು ತಿಳಿಸಿದರು.
ಸ್ಮಗ್ಲಿಂಗ್, ಮಾದಕವಸ್ತು ವ್ಯಾಪಾರ- ಇವೆಲ್ಲವೂ ಆತಂಕವಾದದ ಹಿಂದಿವೆ. ಬಾಂಬ್, ಪಿಸ್ತೂಲ್ ಬಳಸುವ ಜೊತೆ ಆಂತರಿಕವಾಗಿ ಆತಂಕವಾದವನ್ನು ಹರಡಲಾಗುತ್ತಿದೆ. ಕೇರಳ ಫೈಲ್ಸ್ ಸಿನಿಮಾವು ಒಂದು ರಾಜ್ಯದಲ್ಲಿ ಸಿದ್ಧವಾಗಿದೆ. ಪ್ರತಿಭಾವಂತರಿರುವ ಸುಂದರ ರಾಜ್ಯವೊಂದರ ವಿಷಯ ಇದಾಗಿದೆ ಎಂದು ವಿವರಿಸಿದರು. ಆತಂಕವಾದದ ಹಿಂದೆ ಕಾಂಗ್ರೆಸ್ ಇದೆ. ಅಂಥ ಭಯೋತ್ಪಾದಕರ ಜೊತೆ ಕಾಂಗ್ರೆಸ್ ಹಿಂಬಾಗಿಲ ರಾಜಕೀಯ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಬಗ್ಗೆ ಜನತೆ ಹೆಚ್ಚು ಜಾಗ್ರತೆಯಿಂದಿರಬೇಕು ಎಂದು ಎಚ್ಚರಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರವಿದ್ದಾಗ ಭ್ರಷ್ಟಾಚಾರಕ್ಕೆ ಆದ್ಯತೆ ಕೊಡಲಾಗಿತ್ತು. ಕಾಂಗ್ರೆಸ್ಸಿನ ಪ್ರಧಾನಿ ರಾಜೀವ್ ಗಾಂಧಿಯವರು 100 ಪೈಸೆ ಅಭಿವೃದ್ಧಿಗಾಗಿ ಕಳಿಸಿದರೆ ಕೇವಲ 15 ಪೈಸೆ ಮಾತ್ರ ಬಡವರನ್ನು ತಲುಪುತ್ತಿತ್ತು ಎಂದಿದ್ದರು. ಕಾಂಗ್ರೆಸ್ ಶೇ 85 ಕಮಿಷನ್ ಪಾರ್ಟಿ ಎಂದು ಅವರೇ ಒಪ್ಪಿಕೊಂಡಿದ್ದರು ಎಂದರು.
ನಮ್ಮ ಸರಕಾರ ತಾಂಡಾ ಮತ್ತು ಬಸ್ತಿಗಳಿಗೆ ಹಕ್ಕುಪತ್ರ ನೀಡಿ, ಕಂದಾಯ ಗ್ರಾಮವಾಗಿ ಮಾಡಿದೆ. ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ. ಅದನ್ನು ಕಾಂಗ್ರೆಸ್ ಅದನ್ನು ವಿರೋಧಿಸಿತ್ತು. ಅಂಥ ಕಾಂಗ್ರೆಸ್ಸನ್ನು ಕ್ಷಮಿಸಬೇಕೇ ಎಂದು ಪ್ರಶ್ನಿಸಿದರು. ಅಂಥ ಕಾಂಗ್ರೆಸ್ಸಿಗೆ ಪಾಠ ಕಲಿಸಿ ಎಂದರು.
ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ. ತುಷ್ಟೀಕರಣ ನೀತಿ, ಭ್ರಷ್ಟಾಚಾರಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಎಂದು ಮನವಿ ಮಾಡಿದರು. ರಾಜ್ಯದ ಸಚಿವ ಬಿ.ಶ್ರೀರಾಮುಲು, ಸ್ಥಳೀಯ ಮುಖಂಡರು ಇದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ