ಲೋಕಸಭಾ ಚುನಾವಣೆಯ ರಣರಂಗ ಕಾವೇರುತ್ತಿದೆ. ದೇಶ 2024 ರ ಲೋಕಸಭಾ ಚುನಾವಣೆಗೆ ಸಜ್ಜುಗೊಂಡಿದ್ದು ರಾಜ್ಯದಲ್ಲೂ ಎಲ್ಲಾ ರಾಜಕೀಯ ಪಕ್ಷಗಳ ಪಾಳಯಗಳಲ್ಲಿ ಚುನಾವಣೆಯ ಪೂರ್ವ ಯಾರಿ ನಡೆಯುತ್ತಿದೆ. ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವಂತಹ ಪಕ್ಷ ಬಿಜೆಪಿ ಎಂದರೆ ತಪ್ಪಾಗುವುದಿಲ್ಲ. ರಾಷ್ಟ್ರೀಯ ನಾಯಕರು ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಲೋಕಸಭಾ ಟಿಕೆಟ್ ನೀಡುವ ಸಂಭವವಿದೆ.
ರಾಜ್ಯದ 28 ಕ್ಷೇತ್ರಗಳಲ್ಲಿ ಹಾಲಿ 25 ಸದಸ್ಯರು ಬಿಜೆಪಿ ಪಕ್ಷದ ಸಂಸದರೇ ಇದ್ದಾರೆ. ಹೀಗಿರುವಾಗ ಈ ಬಾರಿ ಮೇಜರ್ ಸರ್ಜರಿ ನಡೆಯುವ ಮುನ್ನಸೂಚನೆ ಲಭಿಸಿದೆ. ವಯಸ್ಸು, ಕಾರ್ಯಕರ್ತರ ಕಡೆಗಣನೆ, ನಿರಾಸಕ್ತಿಯ ಕಾರಣಗಳಿಗಾಗಿ 10 ರಿಂದ 15 ಹಾಲಿ ಸಂಸದರಿಗೆ ಟಿಕೆಟ್ ತಪ್ಪಲಿದೆ ಎಂದೇ ಹೇಳಲಾಗುತ್ತಿದೆ. ಈ ಎಲ್ಲಾ ಟಿಕೆಟ್‌ಗಳು ಹೊಸಮುಖಗಳ ಪಾಲಾಗುವುದು ನಿಶ್ಚಿತವಾಗಿದೆ.
ರಾಜ್ಯಾದ್ಯಂತ ಕಾರ್ಯಕರ್ತರು ಕೂಡಾ 3 ಕ್ಕೂ ಹೆಚ್ಚು ಬಾರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆಲವೊಂದು ಸಂಸದರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಬಿಜೆಪಿ ಪಕ್ಷ ಮಣಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
You may also like
-
ಬಿಗ್ ಬ್ರೇಕಿಂಗ್ : ಬಿಜೆಪಿ ಆಂತರಿಕ ವರದಿ ಬಹಿರಂಗ, ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ಸಿಗೆ ಹೀನಾಯ ಸೋಲು
-
ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನ ; ಮಾಜಿ ಸಿಎಂ ಭವಿಷ್ಯ
-
ರಾಜ್ಯ ಸರ್ಕಾರಕ್ಕೆ ಸಂವಿಧಾನದ ಬಗ್ಗೆ ಗೌರವ ಇದೆಯೇ : ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಶ್ನೆ
-
ಕಟೀಲ್ಗೆ ಬಿಕ್ ಶಾಕ್, ಕ್ಯಾಪ್ಟನ್ಗೆ ಟಿಕೆಟ್ ಸಿಗತ್ತಾ !?
-
ಯಾರಿಗೊಲಿಯಲಿದೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರ, ಸಿಟಿ ರವಿ ಎಂಟ್ರಿ ಖಚಿತವೇ!?