ರಾಜಕೀಯ ಜಿದ್ದಾಜಿದ್ದಿಗೆ ಕರ್ನಾಟಕ ಸಾಕ್ಷಿಯಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ರಾಜಕೀಯ ಪ್ರಚಾರ ಅಬ್ಬರದಿಂದ ಸಾಗುತ್ತಿದೆ. ರಾಜ್ಯದೆಲ್ಲೆಡೆ ಮನೆಮನೆ ಪ್ರಚಾರ, ಬೃಹತ್ ಸಮಾವೇಶ, ಬಹಿರಂಗ ಸಭೆ, ರ್ಯಾಲಿ ಎಲ್ಲವೂ ನಡೆಯುತ್ತಿದೆ. ದಕ್ಷಿಣ ಕನ್ನಡದಲ್ಲಂತೂ ರಾಜಕೀಯ ವಾತಾವರಣ ಕಾದ ಕಾವಲಿಯಂತಾಗಿದೆ.
ಪ್ರಚಾರಕ್ಕೆ ಸಂಬಂಧಿಸಿದಂತೆ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹರಿದಾಡುತ್ತಿದ್ದು, ಮನೆಮನೆ ಪ್ರಚಾರಕ್ಕೆ ತೆರಳಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಮನೆಯ ಮಹಿಳಾ ಸದಸ್ಯರು ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ವರದಿಯಾಗಿದೆ. ಕಾಂಗ್ರೆಸ್ ಈ ಹಿಂದೆ ನೀಡಿದ್ದ ಗ್ಯಾರಂಟಿಗಳೇ ಈ ವಿವಾದಕ್ಕೆ ಕಾರಣ ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವ ವೇಳೆ ಈ ಬಾರಿ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳ ಬಗ್ಗೆ ಮನೆಮಂದಿಗೆ ವಿವರಿಸುತ್ತಿದ್ದರು. ಆಗ ಆ ಮನೆಯ ಮಹಿಳೆಯರು “ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಮ್ಮ ಮನೆಯ ಎಲ್ಲಾ ಮಹಿಳೆಯರ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ಸಂಖ್ಯೆ ಪಡೆದುಕೊಂಡು ಪ್ರತಿ ಮಹಿಳೆಯರಿಗೂ 2 ಸಾವಿರ ರೂಪಾಯಿ ನೀಡುತ್ತೇವೆ ಎಂದು ಹೇಳಿ ಗ್ಯಾರಂಟಿ ಕಾರ್ಡ್ ನೀಡಿದ್ದೀರಿ. ಆದರೆ ಚುನಾವಣೆ ಕಳೆದು ಕಾಂಗ್ರೆಸ್ ಗೆದ್ದ ಬಳಿಕ ಮನೆಯ ಯಜಮಾನ್ತಿಗೆ ಮಾತ್ರ 2000 ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದೀರಿ. ಎಲ್ಲಾ ಮಹಿಳೆಯರಿಗೆ ಎಂದು ಹೇಳಿ ಆಮೇಲೆ ಕಂಡಿಷನ್ ಹಾಕಿದ್ದು ಎಷ್ಟು ಸರಿ” ಎಂದು ಆಕ್ರೋಶ ವ್ಯಕ್ತಪಡಿಸಿದ ಬಗ್ಗೆ ಸುದ್ದಿಯಾಗಿದೆ.
ಗ್ಯಾರಂಟಿ ನೀಡಿ ನಮ್ಮ ಮತ ಪಡೆದು ಸರ್ಕಾರ ಬಂದ ಬಳಿಕ ಉಲ್ಟಾ ಹೊಡೆಯುವುದಾದರೆ ನಾವು ನಿಮಗೆ ಏಕೆ ಮತ ನೀಡಬೇಕು ಎಂದಾಗ ಕಾಂಗ್ರೆಸ್ ಕಾರ್ಯಕರ್ತರು ಅಸಹಾಯಕರಾಗಿ ನಿಂತಿದ್ದರು ಎನ್ನಲಾಗಿದೆ. ಈ ಬಾರಿಯೂ ನೀವು 1 ಲಕ್ಷ ನೀಡುತ್ತೇವೆ ಎಂದಿದ್ದೀರಿ. ಅದಕ್ಕೆ ನೀವು ಏನು ಗ್ಯಾರಂಟಿ ನೀಡುತ್ತೀರಿ ಎಂದೂ ಕಾಂಗ್ರೆಸ್ ಕಾರ್ಯಕರ್ತೆಯರನ್ನು ಪ್ರಶ್ನಿಸಿದ್ದಾರೆ. ಆಗ ಕಾಂಗ್ರೆಸ್ ಕಾರ್ಯಕರ್ತರು ಬಡ ಮಹಿಳೆಯರಿಗೆ ಎಂದಾಗ, ನಿಮ್ಮ ಅರ್ಥದಲ್ಲಿ ಬಡ ಮಹಿಳೆಯರು ಎಂದರೆ ಯಾರು ಎಂದು ಮಹಿಳೆಯರು ಪ್ರಶ್ನಿಸಿದಾಗ ಕಾಂಗ್ರೆಸ್ ಕಾರ್ಯಕರ್ತರು ನಿರುತ್ತರರಾಗಿದ್ದಾರೆ.
ಈ ವಿಚಾರ ವಾಟ್ಸಪ್ ಗ್ರೂಪ್ ಒಂದರಲ್ಲಿ ಚರ್ಚೆಯಾಗಿದ್ದು ಎಲ್ಲಿ ಯಾವ ಸ್ಥಳ ಎಂಬ ವಿಚಾರ ಬಹಿರಂಗವಾಗಿಲ್ಲ. ಆದರೆ ಚರ್ಚೆ ತುಳು ಭಾಷೆಯಲ್ಲಿ ನಡೆದಿರುವುದರಿಂದ ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ನಡೆದ ಘಟನೆ ಎನ್ನುವುದು ಪಕ್ಕಾ ಆಗಿದೆ
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ