ಬೆಂಗಳೂರು: ದೇಶದಲ್ಲಿ 10 ಸಾವಿರ ಕೃಷಿ ಉತ್ಪಾದಕರ ಘಟಕಗಳನ್ನು (ಎಫ್‍ಪಿಒ) ಆರಂಭಿಸುವ ಸಂಕಲ್ಪ ನಮ್ಮ ಜನಪರ ಪ್ರಧಾನಿ ಶ್ರೀ ನರೇಂದ್ರ ಮೋದಿಯವರದು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಇಂದು ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕ ರೈತರನ್ನು ಒಗ್ಗೂಡಿಸಿ ಅವರಿಗೆ ಕೃಷಿ ಸಲಕರಣೆಗಳನ್ನು ಒದಗಿಸುವ ಚಿಂತನೆ ಇದೆ. ಈಗಲೂ ಕಡಿಮೆ ಬಾಡಿಗೆಗೆ ಕೃಷಿ ಸಲಕರಣೆಗಳು ಲಭಿಸುತ್ತಿವೆ. ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ಖಾದ್ಯ ತೈಲದ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿ ಆಗುವ ನಿಟ್ಟಿನಲ್ಲಿ ಮುನ್ನಡೆದಿದೆ ಎಂದರು.
ರೈತರನ್ನು ದಲ್ಲಾಳಿಗಳ ಸಮಸ್ಯೆಯಿಂದ ಮುಕ್ತರನ್ನಾಗಿಸಿದ ಕೇಂದ್ರ ಸರಕಾರ ನಮ್ಮದು ಎಂದ ಅವರು, ಈಗ ಆಹಾರ ಪದಾರ್ಥ, ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಹಿಂದೆ ಆಹಾರಕ್ಕಾಗಿ ವಿದೇಶಗಳ ಎದುರು ಅಂಗಲಾಚುವ ಸ್ಥಿತಿ ಇತ್ತು ಎಂದು ತಿಳಿಸಿದರು.
2014ರಲ್ಲಿ ಯುಪಿಎ ಸರಕಾರ ಇದ್ದಾಗ ಬಜೆಟ್‍ನಡಿ ಕೇವಲ 21 ಸಾವಿರ ಕೋಟಿಯನ್ನು ಕೃಷಿ ಕ್ಷೇತ್ರಕ್ಕೆ ಬಳಸಲಾಗುತ್ತಿತ್ತು. ಕೇವಲ ಆರೇಳು ವರ್ಷಗಳಲ್ಲಿ 1,30,000 ಕೋಟಿ ರೂಪಾಯಿ ಕೃಷಿ ಅಭಿವೃದ್ಧಿಗೆ ಕೊಡಲಾಗಿದೆ. ಸುಮಾರು ಶೇ 460ರಷ್ಟು ಬಜೆಟ್‍ನಡಿ ಹೆಚ್ಚಳವನ್ನು ಇದೊಂದು ಕ್ಷೇತ್ರದಲ್ಲೇ ನಾವು ಕಾಣುತ್ತಿದ್ದೇವೆ ಎಂದು ವಿವರಿಸಿದರು.
ಇದಲ್ಲದೆ ಕೃಷಿ ಮೂಲಸೌಕರ್ಯ ಹೆಚ್ಚಳಕ್ಕೆ 1 ಲಕ್ಷ ಕೋಟಿಯ ಹೆಚ್ಚುವರಿ ಹಣವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನೀಡಿದ್ದಾರೆ. ಇದು ಬಿಜೆಪಿ ಸರಕಾರದ ಕೃಷಿಕರ ಅಭಿವೃದ್ಧಿ ಕುರಿತ ಬದ್ಧತೆಗೆ ಸ್ಪಷ್ಟ ನಿದರ್ಶನ ಎಂದು ತಿಳಿಸಿದರು. ಸಣ್ಣಪುಟ್ಟ ಸ್ವಸಹಾಯ ಸಂಘಗಳನ್ನು ರಚಿಸಿ ಈರುಳ್ಳಿ, ಆಲೂಗಡ್ಡೆ ಮತ್ತಿತರ ಉತ್ಪನ್ನಗಳ ಸಂಸ್ಕರಣೆ- ಮೌಲ್ಯವರ್ಧನೆ ನಡೆಸಲು ಅವಕಾಶವಿದೆ ಎಂದು ಕಿವಿಮಾತು ಹೇಳಿದರು.
ರಾಜ್ಯದಿಂದ ಕಾಫಿ ಮತ್ತು ಕರಿಮೆಣಸು ಮಾತ್ರ ರಫ್ತಾಗುತ್ತಿದೆ. ಕಾಫಿ ಬೆಳೆಗಾರರಿಗೂ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ. ತೆಂಗು ಮತ್ತು ತೆಂಗಿನ ಉತ್ಪನ್ನಗಳ ರಫ್ತು ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಬೆಳೆಗಾರರಿಗೆ ಹೆಚ್ಚು ದರ ಲಭಿಸಲಿದೆ ಎಂದು ತಿಳಿಸಿದರು.
ಕೋವಿಡ್ ಸಮಸ್ಯೆ ಇದ್ದರೂ ಕೃಷಿಕರ ಆದಾಯ ದ್ವಿಗುಣಗೊಳಿಸಲು ಹಲವಾರು ಯೋಜನೆಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಜಾರಿಗೊಳಿಸಿದ್ದಾರೆ. ಬಿತ್ತನೆ ಬೀಜ ಅಭಿವೃದ್ಧಿ, ಶೇ 80ರಷ್ಟು ಸಣ್ಣ ರೈತರ ಅಭಿವೃದ್ಧಿಗೂ ಕೇಂದ್ರದ ಬಿಜೆಪಿ ಸರಕಾರ ಅನೇಕ ಯೋಜನೆಗಳನ್ನು ಭ್ರಷ್ಟಾಚಾರವಿಲ್ಲದೆ ಅನುಷ್ಠಾನಕ್ಕೆ ತಂದಿದೆ ಎಂದು ತಿಳಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಇಲ್ಲಿನವರೆಗೆ 21 ಕೋಟಿ ರೈತರಿಗೆ 1,57,000 ಕೋಟಿ ರೂಪಾಯಿ ಬ್ಯಾಂಕ್ ಖಾತೆಗಳಿಗೆ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾವಣೆಗೊಂಡಿದೆ. ಫಸಲ್ ಬಿಮಾ ಯೋಜನೆಯನ್ನು ಸರಳಗೊಳಿಸಿದ್ದು, ರೈತರು ಉತ್ಪನ್ನ ನಷ್ಟವಾದ ಕುರಿತ ದಾಖಲೆಗಳನ್ನು ಯಾವುದೇ ಅಧಿಕಾರಿಗಳು, ಮಧ್ಯವರ್ತಿಗಳ ನೆರವಿಲ್ಲದೆ ತಮ್ಮ ಮೊಬೈಲ್ ಮೂಲಕ ಅಪ್‍ಲೋಡ್ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಒಗ್ಗೂಡಿ ರೈತರು ಸ್ವಾವಲಂಬಿ ಆಗುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ. ರೈತರ ಉತ್ಪನ್ನಕ್ಕೆ ಹೆಚ್ಚಿನ ದರ ಸಿಗುವ ನಿಟ್ಟಿನಲ್ಲಿ ಪ್ತಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಸಂಸತ್ತಿಗೆ ನೂತನ ಸಚಿವರ ಪರಿಚಯ ಮಾಡಲು ವಿರೋಧ ಪಕ್ಷಗಳು ಅವಕಾಶ ಕೊಡಲಿಲ್ಲ. ಇದೇ ಕಾರಣಕ್ಕೆ ಸುಮಾರು 500ರಷ್ಟು ಸಂಸದರ ಬದಲಾಗಿ 130 ಕೋಟಿ ಜನರ ಮುಂದೆ ಹೊಸ ಸಚಿವರನ್ನು ತೆಗೆದುಕೊಂಡು ಹೋಗಲು ಮತ್ತು ಜನರಿಗೆ ನೂತನ ಸಚಿವರನ್ನು ಪರಿಚಯಿಸಲು ನಿರ್ಧರಿಸಲಾಯಿತು. ಅದೇ ಕಾರಣಕ್ಕೆ ಈ ಯಾತ್ರೆ ನಡೆಯುತ್ತಿದೆ ಎಂದು ತಿಳಿಸಿದರು.
ಸ್ಥಳೀಯವಾಗಿ ಹೆಚ್ಚಿನ ಗುರುತೇ ಇಲ್ಲದ ನನ್ನನ್ನು ಗೆಲ್ಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುವ ನನಗೆ ಸಚಿವ ಸ್ಥಾನ ಅದರಲ್ಲೂ ಕೃಷಿ ಖಾತೆ ಸಿಕ್ಕಿದೆ. ಇದಕ್ಕಾಗಿ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳು ಎಂದರು. ಗರಿಷ್ಠ ಜಂಟಿ ಕಾರ್ಯದರ್ಶಿಗಳಿರುವ ಖಾತೆ ಇದು. ಹಲವಾರು ಯೋಜನೆಗಳನ್ನು ಈ ಖಾತೆಗೆ ಪ್ರಧಾನಿಯವರು ಕೊಟ್ಟಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಉಪಸಭಾಪತಿಗಳಾದ ಶ್ರೀ ಪ್ರಾಣೇಶ್, ಜಿಲ್ಲಾಧ್ಯಕ್ಷರಾದ ಶ್ರೀ ಕಲ್ಮರುಡಪ್ಪ, ಮಾಜಿ ಸಚಿವರಾದ ಶ್ರೀ ಜೀವರಾಜ್, ರಾಜ್ಯ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಶ್ರೀ ತುಳಸಿ ಮುನಿರಾಜು ಗೌಡ, ಶಾಸಕರಾದ ಶ್ರೀ ಎಂ.ಪಿ. ಕುಮಾರಸ್ವಾಮಿ, ಶ್ರೀ ಸುರೇಶ್, ಶ್ರೀ ಬೆಳ್ಳಿ ಪ್ರಕಾಶ್, ಕಾಫಿ ಮಂಡಳಿ ಅಧ್ಯಕ್ಷರಾದ ಶ್ರೀ ಎಮ್.ಎಸ್. ಬೋಜೆಗೌಡ, ವಿಭಾಗ ಪ್ರಭಾರಿಗಳಾದ ಶ್ರೀ ಗಿರೀಶ್ ಪಟೇಲ್, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ