ಬಿಜೆಪಿ ರಾಜ್ಯಧ್ಯಕ್ಷರಾಗಿ ಶ್ರೀ ನಳಿನ್ ಕುಮಾರ್ ಕಟೀಲ್ ಅವರು 2019 ರ ಆಗಸ್ಟ್‌ನಲ್ಲಿ ಅಧಿಕಾರ ಸ್ವೀಕರಿಸಿ 22 ತಿಂಗಳುಗಳಾಗಿದ್ದು, ಈ ಕ್ಷಿಪ್ರ ಸಮಯದಲ್ಲಿ ಬಹುಪಾಲು ಅಂದರೆ ಸುಮಾರು 16 ತಿಂಗಳುಗಳು ಕೋವಿಡ್‌ನ ಕರಿನೆರಳಿನ ಕಠಿಣ ಸಮಯವಾಗಿತ್ತು. ಕೋವಿಡ್‌ನ ಕಾರಣ ಈ ಹಿಂದೆ ಇತ್ತೀಚೆಗೆ ಎಂದೂ ಕಾಣದ ಪರಿಸ್ಥಿತಿ ಉಂಟಾಗಿದ್ದು, ಪಕ್ಷ ಸಂಘಟನೆ, ಕಾರ್ಯ ಚಟುವಟಿಕೆಗಳು, ಚುನಾವಣೆ ಮತ್ತು ಕೋವಿಡ್‌ನ ಸೇವಾ ಕಾರ್ಯಗಳು ಅತ್ಯಂತ ಸವಾಲನ್ನು ಒಡ್ಡಿದ್ದವು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ನೊಗ ಹೊತ್ತಿದ್ದ ಶ್ರೀ ನಳಿನ್ ಕುಮಾರ್ ಕಟೀಲ್‌ರವರು ಮಿಂಚಿನಂತೆ ರಾಜ್ಯಾದ್ಯಂತ ಸುಮಾರು 18 ಬಾರಿ ರಾಜ್ಯ ಪ್ರವಾಸವನ್ನು (11 ಬಾರಿ ರಾಜ್ಯ ಸಂಘಟನಾತ್ಮಕ ಪ್ರವಾಸ, 3 ಬಾರಿ ಚುನಾವಣಾ ಸಂಬಂಧ ರಾಜ್ಯ ಪ್ರವಾಸ, 3 ಬಾರಿ ಕೋವಿಡ್- 19 ಸೇವಾ ಕಾರ್ಯ ಪ್ರವಾಸ ಮತ್ತು ಜಿಲ್ಲಾ ಕಾರ್ಯಾಲಯ ಕಟ್ಟಡಗಳ ನಿರ್ಮಾಣ ಪರೀಶೀಲನಾ ರಾಜ್ಯ ಪ್ರವಾಸ) ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಈ ಪ್ರವಾಸ ಸಂದರ್ಭದಲ್ಲಿ ರಾಜ್ಯದ 311 ಮಂಡಲಗಳ ಪೈಕಿ ಸುಮಾರು 300 ರಷ್ಟು ಮಂಡಲಗಳನ್ನು ಈಗಾಗಲೇ ತಲುಪಿ ಸುಮಾರು 270 ದಿನಗಳ ನಿವಾಸಿ ಪ್ರವಾಸ ನಡೆದಿದೆ. ಪ್ರತಿ ತಿಂಗಳು ಸರಾಸರಿ 15 ದಿನಗಳ ರಾಜ್ಯ ಪ್ರವಾಸ ನಡೆಸಲಾಗಿದ್ದು, ದಿನಂಪ್ರತಿ ಸರಾಸರಿ 350 ಕಿ.ಮೀ ಅಂದಾಜಿನಂತೆ 1,40,000 ಕಿ.ಮೀ ಗಳಷ್ಟು ರಸ್ತೆ ಪ್ರಯಾಣ ನಡೆಸಲಾಗಿದೆ.
ಪರಿಚಯ ಪ್ರವಾಸ – ರಾಜ್ಯಧ್ಯಕ್ಷರಾಗಿ ನಿಯುಕ್ತಿಗೊಂಡು ಅಧಿಕಾರ ಸ್ವೀಕರಿಸಿದ ತಕ್ಷಣ ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದು ಮೈಸೂರು ಜಿಲ್ಲೆಯಿಂದ ಆರಂಭಿಸಿ ರಾಜ್ಯದ ಎಲ್ಲ ಸಂಘಟನಾತ್ಮಕ ಜಿಲ್ಲೆಗಳಿಗೆ ರಾಜ್ಯ ಅಧ್ಯಕ್ಷರ ಪರಿಚಯ ಪ್ರವಾಸ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಲಯ ಕಟ್ಟಡಗಳ ನಿವೇಶನ ಪರಿಶೀಲನೆ, ನಿರ್ಮಾಣ ಕುರಿತಾದ ಸಭೆಗಳನ್ನೂ ನಡೆಸಲಾಯಿತು.ಈ ಪ್ರವಾಸವು ನೂತನ ರಾಜ್ಯಧ್ಯಕ್ಷರು ರಾಜ್ಯದ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಶಾಸಕರು, ಪ್ರಮುಖರು ಮತ್ತು ಜಿಲ್ಲೆಯ ತಳಮಟ್ಟದ ಕಾರ್ಯಕರ್ತರ ಸಂಪರ್ಕ ಸಾಧಿಸುವ ಬಲಿಷ್ಟ ಕೊಂಡಿಯಾಯಿತು. ಇದೇ ಪ್ರವಾಸದಲ್ಲಿ ಪರಿವಾರ ಪ್ರಮುಖರ ಬೇಟಿ ಮತ್ತು ಸಭೆಗಳನ್ನೂ ನಡೆಸಲಾಗಿದೆ.ರಾಜ್ಯದ ಪ್ರಮುಖ ಮಠ ಮಾನ್ಯಗಳಿಗೆ ಭೇಟಿ ನೀಡಿ ಎಲ್ಲ ಸ್ವಾಮೀಜಿಗಳು ಮತ್ತು ಸಾದು-ಸಂತರ ಆಶೀರ್ವಾದ ಪಡೆಯಲಾಯಿತು.
ಜಿಲ್ಲಾ ಪ್ರಮುಖರ ಸಭೆ – ರಾಜ್ಯದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾ ಪ್ರಮುಖರ ಸಭೆ ಪ್ರವಾಸ ನಡೆಸಲಾಯಿತು. ಈ ಪ್ರವಾಸದಲ್ಲಿ ಪಕ್ಷದ ಅತ್ಯಂತ ತಳಮಟ್ಟದ ಸ್ತರವಾದ ಬೂತ್ ಅಧ್ಯಕ್ಷರುಗಳು ಮತ್ತು ಶಕ್ತಿಕೇಂದ್ರ ರಚನೆಯ ಬಗ್ಗೆ ತೀವ್ರ ಗಮನ ಹರಿಸಲಾಯಿತು.ರಾಜ್ಯದಲ್ಲೇ ಪ್ರಥಮ ಬಾರಿಗೆ ಒಂದು ರಾಷ್ಟ್ರೀಯ ಪಕ್ಷದ ರಾಜ್ಯಧ್ಯಕ್ಷರು ತಮ್ಮ ಪಕ್ಷದ ಬೂತ್ ಅಧ್ಯಕ್ಷರ ಮನೆಯಲ್ಲಿ ಪಕ್ಷದ ಧ್ವಜ ಅನಾವರಣಗೊಳಿಸಿ, ಬೂತ್ ಅಧ್ಯಕ್ಷರ ನಾಮಫಲಕವನ್ನು ಅಧೀಕೃತವಾಗಿ ಮನೆಗೆ ಆಳವಡಿಸಿ ಬೂತ್ ಮಟ್ಟದ ಕಾರ್ಯಕರ್ತರ ಮನೋಬಲ ಮುಮ್ಮಡಿಗೊಳಿಸುವಂತಹ ನಭೂತೋ ಎನ್ನುವಂತಹ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
3 ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಪ್ರಚಾರದಲ್ಲಿ ಎಲ್ಲ ಕ್ಷೇತ್ರಗಳ ಚುನಾವಣಾ ಪ್ರಚಾರ ಪ್ರವಾಸ ನಡೆಸಿ 12 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ. ಮಂಗಳೂರು ಮಹಾನಗರ ಪಾಲಿಕೆ ಚುನಾವಣಾ ಪ್ರಚಾರ ಯಶಸ್ವಿಗೊಳಿಸಿ ಪಾಲಿಕೆಯಲ್ಲಿ ಬಿಜೆಪಿಯ ದಿಗ್ವಿಜಯ.
ಜಿಲ್ಲಾ ವಿಶೇಷ ಸಭೆ ಪ್ರವಾಸ – ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಜಿಲ್ಲಾ ವಿಶೇಷ ಸಭೆ ಪ್ರವಾಸ ನಡೆಸಿ ಸಂಘಟನಾತ್ಮಕ ರಚನೆಯ ಅಧ್ಯಯನ ಪ್ರವಾಸ ನಡೆಸಲಾಗಿದೆ. ಸದಸ್ಯತಾ ಆಬಿಯಾನದ ಬಗ್ಗೆ ವಿಶೇಷ ಗಮನ ಹರಿಸಲಾಯಿತು.
ನೂತನ ಜಿಲ್ಲಾಧ್ಯಕ್ಷರುಗಳ ಪದಗ್ರಹಣ ಸಭೆ ಪ್ರವಾಸ – ಜನವರಿ 16, 2020 ರಂದು ರಾಜ್ಯಧ್ಯಕ್ಷರ ಅಧೀಕೃತ ಆಯ್ಕೆಯಾದ ತಕ್ಷಣ ರಾಜ್ಯ ಪ್ರವಾಸ ಆರಂಭಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ದಾಖಲೆಯೆಂಬಂತೆ ಎಲ್ಲಾ 37 ಸಂಘಟನಾತ್ಮಕ ಜಿಲ್ಲೆಗಳಿಗೆ ರಾಜ್ಯಧ್ಯಕ್ಷರು ತಮ್ಮ ಪ್ರವಾಸದಲ್ಲಿ ನೂತನ ಜಿಲ್ಲಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಬೃಹತ್ ಸಾರ್ವಜನಿಕ ಸಭೆಗಳ ಮೂಲಕ ನಡೆಸಿದರು. ಸಹಸ್ರಾರು ಜನರ ಸಮ್ಮುಖದಲ್ಲಿ ನಿಕಟಪೂರ್ವ ಜಿಲಾಧ್ಯಕ್ಷರು ನೂತನ ಜಿಲ್ಲಾಧ್ಯಕ್ಷರಿಗೆ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಪಕ್ಷದ ಧ್ವಜ ಹಸ್ತಾಂತರಿಸಿ ಅಧಿಕಾರ ಗ್ರಹಣ ನಡೆಸಿದಂತಹ ಕಾರ್ಯಕ್ರಮವು ಯಾವುದೇ ರಾಜ್ಯಾಧ್ಯಕ್ಷರ ಕಾರ್ಯಕಾಲದಲ್ಲಿ ಅವೀಸ್ಮರಣೀಯ ಮತ್ತು ಅದ್ವೀತಿಯ. ರಾಜ್ಯಾಧ್ಯಕ್ಷರ ಸೂಚನೆಯಂತೆ ಈ ಕಾರ್ಯಕ್ರಮವನ್ನು ಮುಂದುವರಸಿ ನೂತನ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ರಾಜ್ಯದ 311 ಮಂಡಲಗಳ ನೂತನ ಅಧ್ಯಕ್ಷರ ಪದಗ್ರಹಣ, ನೂತನ ಮಂಡಲ ಅಧ್ಯಕ್ಷರ ಸಮ್ಮುಖದಲ್ಲಿ ವಾರ್ಡ್ ಮತ್ತು ಬೂತ್ ಅಧ್ಯಕ್ಷರುಗಳ ಪದಗ್ರಹಣದಂತಹ ಅದ್ಬುತ ಸಂಘಟನಾತ್ಮಕ ಪರಿಯೋಜನೆ.
ದೇಶದಲ್ಲಿ ಬಂದೊದಗಿದ ಕೋವಿಡ್ 19 ರ ಸಂಕಷ್ಟ ಕಾಲದಲ್ಲಿ ರಾಜ್ಯಾದ್ಯಂತ ಬಿಜೆಪಿಯ ನಾಯಕರು ಮತ್ತು ಕಾರ್ಯಕರ್ತರ ಸಶಕ್ತ ಪಡೆಯು ರಾಷ್ಟ್ರೀಯ ಬಿಜೆಪಿಯ ಆಶಯದಂತೆ ರಾಜ್ಯಧ್ಯಕ್ಷರ ಸಮರ್ಥ ನೇತೃತ್ವದಲ್ಲಿ ಇಡಿ ರಾಜ್ಯದಲ್ಲಿ ಅದ್ಬುತ ಕೋವಿಡ್ 19 ಸಂಕಷ್ಟ ಸೇವಾ ಕಾರ್ಯ ನಡೆಸಲಾಯಿತು.ರಾಜ್ಯದಲ್ಲಿ ಅನ್‌ಲಾಕ್ ಘೊಷಣೆಯದ ತಕ್ಷಣದಲ್ಲಿ ರಾಜ್ಯಧ್ಯಕ್ಷರು ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ನಡೆಸಿದರು. ಈ ಪ್ರವಾಸದಲ್ಲಿ ಅಭೂತಪೂರ್ವವೆಂಬಂತೆ ರಾಜ್ಯದ ಎಲ್ಲ ೩೧೧ ಮಂಡಲಗಳ ಕೋವಿಡ್ 19 ಸಂಕಷ್ಟ ಸೇವಾ ಕಾರ್ಯದ ಮಂಡಲವಾರು ವರದಿಯನ್ನು ಖುದ್ದು ರಾಜ್ಯಾಧ್ಯಕ್ಷರೇ ಪ್ರತಿ ಮಂಡಲದ ಅಧ್ಯಕ್ಷರಿಂದ ಕೇಳಿಕೊಂಡರು. ಈ ಪ್ರವಾಸ ಕೋವಿಡ್‌ನ ಸೇವಾ ಕಾರ್ಯದಲ್ಲಿ ಭಾಗಿಯಾದ ಎಲ್ಲ ಕಾರ್ಯಕರ್ತರಿಗೆ ಹುರುಪು ಮತ್ತು ಹುಮ್ಮಸ್ಸು ತಂದಿತು.
ನೂತನ ಜಿಲ್ಲಾ ಪಧಾದಿಕಾರಿಗಳು ಮತ್ತು ನೂತನ ಜಿಲ್ಲಾ ಕೋರ್ ಸಮಿತಿಗಳನ್ನು ಯಶಸ್ವಿಯಾಗಿ ರಚಿಸಿದ ನಂತರದಲ್ಲಿ ರಾಜ್ಯಧ್ಯಕ್ಷರು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ನಡೆಸಿ ನೂತನ ಜಿಲ್ಲಾ ಪಧಾದಿಕಾರಿಗಳು ಮತ್ತು ನೂತನ ಜಿಲ್ಲಾ ಕೋರ್ ಸಮಿತಿಗಳ ಸಭೆಯನ್ನು ನಡೆಸಿ, ಮುಂದಿನ ದಿನಗಳ ಕಾರ್ಯಸೂಚಿ, ಕೋವಿಡ್ ಸೇವಾ ಕಾರ್ಯದ ಯೋಜನೆಗಳ ಬಗ್ಗೆ ನಿರ್ದೇಶನ ನೀಡಲಾಯಿತು.
ರಾಜ್ಯದ 4 ವಿಧಾನ ಪರಿಷತ್ ಮತ್ತು 2 ವಿಧಾನ ಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರದಲ್ಲಿ ರಾಜ್ಯಧ್ಯಕ್ಷರು ಭರ್ಜರಿ ಚುನಾವಣಾ ಪ್ರಚಾರ ನಡೆಸಿ ಎಲ್ಲ 6 ಕ್ಷೇತ್ರಗಳಲ್ಲಿ ಬಿಜೆಪಿಯ ಜಯಭೇರಿ. ಇದೇ ಪ್ರವಾಸದಲ್ಲಿ ಮುಂಬರಲಿರುವ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಮತ್ತು ಬೆಳಗಾವಿ ಲೋಕಸಭಾ ಉಪಚುನವಣಾ ಕುರಿತ ಪೂರ್ವಭಾವಿ ಸಭೆಗಳನ್ನು ನಡೆಸಿ ಚುನಾವಣೆಗೆ ಪಕ್ಷವನ್ನು ಸರ್ವ ಸನ್ನದ್ಧಗೊಳಿಸಲಾಗಿದೆ.
ರಾಜ್ಯದ ವಿಭಾಗ ಮಟ್ಟದಲ್ಲಿ ಜಿಲ್ಲಾ ವಿಷಯ ಪ್ರಮುಖರ ಸಭೆ ಈಗಾಗಲೇ ನಡೆಸಿದ್ದು, ಹಲವು ಜಿಲ್ಲೆಗಳ ಜಿಲ್ಲಾ ಪ್ರಶಿಕ್ಷಣ ವರ್ಗಗಳಿಗೆ ಪ್ರವಾಸ ಈಗಾಗಲೇ ನಡೆಯುತ್ತಿದೆ. ಈ ಕಳೆದ ಒಂದು ವರ್ಷದಲ್ಲಿ ರಾಜ್ಯ ಕಾರ್ಯಕಾರಿಣಿ. ರಾಜ್ಯ ಪಧಾಧಿಕಾರಿಗಳ ಸಭೆ, ರಾಜ್ಯ ಮೋರ್ಚಗಳ ಸಭೆ, ಪ್ರಕೋಷ್ಟ ಪ್ರಮುಖರ ಸಭೆಗಳನ್ನು ಸಹಾ ನಡೆಸಲಾಗಿದೆ.
ಜಿಲ್ಲಾ ಕೋರ್ ಸಮಿತಿ ಸಭೆ ಪ್ರವಾಸ (2ನೇ ಸುತ್ತು) – ರಾಜ್ಯದ 37 ಬಿಜೆಪಿ ಜಿಲ್ಲೆಗಳ ಕೋರ್ ಸಮಿತಿ ಸಭೆಗಳನ್ನು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ನಡೆಸಲಾಗಿದೆ.
ವಿವಿಧ ಮೋರ್ಚಾಗಳ ರಾಜ್ಯ ಕಾರ್ಯಕಾರಿಣಿ ಸಭೆಗಳ ಪ್ರವಾಸ – ರಾಜ್ಯದ ಮೋರ್ಚಾಗಳ ಕಾರ್ಯಕಾರಿಣಿ ಸಭೆಗಳನ್ನು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಏರ್ಪಡಿಸಿದ್ದು, ಈ ಸಭೆಗಳನ್ನು ಅತ್ಯಂತ ಯಶಸ್ವಿಯಾಗಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಸಲಾಯಿತು.
ಗ್ರಾಮ ಸೇವಕ್ ಸಮಾವೇಶ ಪ್ರವಾಸ – ರಾಜ್ಯದ ಅನೇಕ ಸ್ಥಳಗಳಲ್ಲಿ ಗ್ರಾಮ ಜನಪ್ರತಿನಿಧಿಗಳಿಗೆ ಗೌರವ ಸಲ್ಲಿಸುವ ಬಿಜೆಪಿಯ ರಾಷ್ಟ್ರಮಟ್ಟದ ಕಾರ್ಯಕ್ರಮವಾದ ಗ್ರಾಮ ಸೇವಕ್ ಸಮಾವೇಶಗಳನ್ನು ರಾಜ್ಯಾಧ್ಯಕ್ಷರ ರಾಜ್ಯ ಪ್ರವಾಸದಲ್ಲಿ ನಡೆಸಲಾಯಿತು. ಬೆಳಗಾವಿಯಲ್ಲಿ ಕೇಂದ್ರದ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಷಾರವರ ನೇತೃತ್ವದಲ್ಲಿ ಗ್ರಾಮ ಸೇವಕ್ ಸಮಾವೇಶದ ಸಮಾರೋಪ ಸಭೆಯನ್ನು ಅಭೂತಪೂರ್ವವಾಗಿ ನಡೆಸಲಾಯಿತು.
ವಿಭಾಗ ಮಟ್ಟದ ವಿಶೇಷ ಸಭೆಗಳ ಪ್ರವಾಸ – ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿಯ ಎಲ್ಲಾ ಹತ್ತೂ ವಿಭಾಗಗಳ ವಿಶೇಷ ಸಭೆಗಳನ್ನು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಸಿ ಪ್ರವಾಸ ಮಾಡಲಾಗಿದೆ.
ಪ್ರಕೋಷ್ಠಗಳ ರಾಜ್ಯ/ಜಿಲ್ಲಾ ಸಂಚಾಲಕರು, ಸಹ ಸಂಚಾಲಕರ ಸಭೆ ಪ್ರವಾಸ – ರಾಜ್ಯ ಮತ್ತು ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ, ಸಹ ಸಂಚಾಲಕರ ಸಭೆಗಳನ್ನು ನಿರಂತರವಾಗಿ ರಾಜ್ಯಾದಂತ ರಾಜ್ಯಾಧ್ಯಕ್ಷರ ಪ್ರವಾಸದಲ್ಲಿ ವಿವಿಧ ಕೇಂದ್ರಗಳಲ್ಲಿ ನಡೆಸಲಾಯಿತು.
ರಾಜ್ಯ ಪದಾಧಿಕಾರಿಗಳ ಸಭೆ – ರಾಜ್ಯ ಪದಾಧಿಕಾರಿಗಳ ಸಭೆಯನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
ಲೋಕಸಭಾ/ವಿಧಾನಸಭಾ ಉಪಚುನಾವಣೆ ತಯಾರಿ ಮತ್ತು ಪ್ರಚಾರ ಪ್ರವಾಸ – ಬೆಳಗಾವಿ ಲೋಕಸಭಾ, ಬಸವ ಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಘೋಷಣೆಗೂ ಮುನ್ನ ಎಲ್ಲ ಮೂರು ಕ್ಷೇತ್ರಗಳಲ್ಲಿ ವ್ಯಾಪಕ ಪ್ರವಾಸ ನಡೆಸಿ ಸಕಲ ಸಿದ್ಧತೆಯನ್ನು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು. ಉಪಚುನಾವಣೆಗಳಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಲಾಯಿತು. ಈ ಪರಿಣಾಮ ಬೆಳಗಾವಿ ಲೋಕಸಭೆ ಮತ್ತು ಬಸವ ಕಲ್ಯಾಣದಲ್ಲಿ ಅಭೂತಪೂರ್ವ ಜಯಗಳಿಸಲಾಯಿತು.
ಕೋವಿಡ್ ಎರಡನ ಅಲೆ ಕಾರ್ಯ ಚಟುವಟಿಕೆ ಮತ್ತು ಪರಿಹಾರ ಕಾರ್ಯ ಪ್ರವಾಸ – ಹೆಮ್ಮಾರಿ ಕೋವಿಡ್‌ನ ವಿರುದ್ಧ ಹೋರಾಟದ ಸಂದರ್ಭದಲ್ಲಿ ರಾಜ್ಯಾದ್ಯಂತ ಜನತೆಯ ನೋವಿಗೆ ಸ್ಪಂದಿಸುತ್ತಿರುವ ಏಕಮಾತ್ರ ಪಕ್ಷವಾದ ಬಿಜೆಪಿಯು ಮುಂಚೂಣಿಯಲ್ಲಿದೆ. ಪಕ್ಷದ ಎಲ್ಲ ಪ್ರಮುಖರು ಮತ್ತು ಕಾರ್ಯಕರ್ತರು ಅತ್ಯಂತ ಸಹೃದಯತೆಯಿಂದ ಸಕ್ರಿಯವಾಗಿ ಕೋವಿಡ್ ಬಾದಿತರಿಗೆ ಬೆಡ್, ಆಕ್ಸಿಜನ್, ಚುಚ್ಚುಮದ್ದು, ಐಸಿಯು ಮತ್ತು ವೆಂಟಿಲೇಟರ್‌ಗಳ ಸೌಕರ್ಯ ಕಲ್ಪಿಸುವುದು. ಬಡ ಮತ್ತು ದುರ್ಬಲ ವರ್ಗದವರಿಗೆ ಆಹಾರ ಕಿಟ್‌ಗಳ ವಿತರಣೆ, ಅನಾಥ ಶವಗಳ ಅತ್ಯಂತ ಗೌರವ ಪೂರ್ವಕ ಸಂಸ್ಕಾರ ಇತರೆ ಹತ್ತು ಹಲವು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ರಾಜ್ಯಾದ್ಯಂತ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪ್ರವಾಸ ನಡೆಸಿ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಹತ್ತು ಹಲವು ಕೋವಿಡ್ ಕೇರ್ ಸೆಂಟರ್‌ಗಳು, ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಯಂತ ಮಹತ್ವದ ಕಾರ್ಯಗಳನ್ನು ಮಾಡಲಾಯಿತು.
ಜಿಲ್ಲಾ ಕಾರ್ಯಾಲಯ ಕಟ್ಟಡ ನಿರ್ಮಾಣ ಪರಿಶೀಲನೆ ಪ್ರವಾಸ – ಯಾವುದೇ ರಾಜಕೀಯ ಪಕ್ಷದ ಆಧಾರವಾದ ಸ್ವಂತ ಕಾರ್ಯಾಲಯಗಳ ಕಟ್ಟಡ ನಿರ್ಮಾಣಕ್ಕೆ ಅತ್ಯಂತ ಹೆಚ್ಚಿನ ಮಹತ್ವ ನೀಡಲಾಗಿದ್ದು, ಈ ವರೆಗೆ ಹತ್ತು ಹಲವು ಜಿಲ್ಲೆಗಳ ಕಾರ್ಯಾಲಯ ಕಟ್ಟಡ ನಿರ್ಮಾಣದ ಪರಿಶೀಲನೆ ಮತ್ತು ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಈಗಾಗಲೇ ಎರಡು ಸುತ್ತುಗಳ ಜಿಲ್ಲಾ ಪ್ರವಾಸ ಮಾಡಲಾಗಿದೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ