ಕರ್ನಾಟಕ ರಾಜ್ಯದ ಯಶಸ್ವಿ ಕೃಷಿ ಸಚಿವರೆಂದರೆ ಅದು ಬಿ. ಸಿ. ಪಾಟೀಲ್ ಎಂದು ಕೇಂದ್ರ ಕೃಷಿ ಕಲ್ಯಾಣ ಸಚಿವರಾದ ನರೇಂದ್ರ ಸಿಂಗ್ ತೋಮರ್ ಶ್ಲಾಘಿಸಿದ್ದಾರೆ.
ಇಂದು ಕರ್ನಾಟಕ ರಾಜ್ಯಕ್ಕೆ ಮಹತ್ವಪೂರ್ಣ ಹಾಗೂ ಸಂತಸ ದಿನ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಲೆಲ್ಲಾ ಅಭಿವೃದ್ಧಿ ಹಾಗೂ ರೈತರ ಪ್ರಗತಿಗೆ ದುಡಿದಿದೆ. ಈಗ ಬಸವರಾಜ ಬೊಮ್ಮಾಯಿ ಸಹ ಮುಖ್ಯಮಂತ್ರಿಯಾಗಿ ರೈತ ಮಕ್ಕಳ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಿದ್ದಾರೆ .ರೈತ ಮಕ್ಕಳಿಗಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಉನ್ನತಶಿಕ್ಷಣಕ್ಕೆ ಇಂತಹ ಯೋಜನೆ ರೂಪಿಸಿರುವುದು ಶ್ಲಾಘನೀಯ. ಇದಕ್ಕಾಗಿ ನಾನು ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ರೈತ ಎಷ್ಟೇ ತೊಂದರೆಯಲ್ಲಿದ್ದರೂ ತನ್ನ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಉನ್ನತ ಹುದ್ದೆಗೇರಬೇಕೆಂಬ ಕನಸು ಇದ್ದೇ ಇರುತ್ತದೆ. ಇಂತಹ ಕನಸನ್ನು ಬೊಮ್ಮಾಯಿ ಈಡೇರಿಸುತ್ತಿದ್ದಾರೆ ಎಂದರು.
ಕೃಷಿ ದೇಶದ ಅತ್ಯಗತ್ಯವಾಗಿದೆ. ರೈತ ಸಾಕಷ್ಟು ಪರಿಶ್ರಮದ ನಡುವೆ ದೇಶದ ಜನರ ಹೊಟ್ಟೆತುಂಬಿಸುತ್ತಿದ್ದಾರೆ. ಹಸಿದವರ ಹೊಟ್ಟೆ ತುಂಬಿಸುವ ರೈತ ಹಣಕ್ಕಾಗಿ ಭೂಮಿಯನ್ನು ಮಾರದಿರಲು ಕೃಷಿಕ ಕೃಷಿಕನಾಗಿ ಲಾಭದಾಯಕವಾಗಲು ಕೃಷಿ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಕರ್ನಾಟಕ ಇಡೀ ದೇಶದ ಕೃಷಿ ಪ್ರಗತಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೃಷಿ ಸಂಜೀವಿನಿ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಸೇರಿದಂತೆ ಅನೇಕ ಪ್ರಗತಿಪರ ಯೋಜನೆಗಳು ದೇಶದಲ್ಲಿ ಕರ್ನಾಟಕದ ಹೆಸರನ್ನು ಮತ್ತೆ ಬೆಳಗಿಸಿದೆ. ಕರ್ನಾಟಕದ ಕೃಷಿ ಮಾದರಿಯನ್ನು ಪ್ರಗತಿಯನ್ನು ಇತರೆ ರಾಜ್ಯಗಳು ಸಹ ಅಳವಡಿಸಬೇಕೆಂದು ತೋಮರ್ ಕರೆ ನೀಡಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಜೈಜವಾನ್ ಜೈಕಿಸಾನ್ ಎಂದರು. ಇದರ ಜೊತೆಗೆ ವಾಜಪೇಯಿಯವರು ಜೈವಿಜ್ಞಾನ್ ಎಂದರು. ಈಗ ಪ್ರಧಾನಿ ಮೋದಿಯವರು ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಎಂದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆಲ್ಲ ಸೇರಿ 2023 ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದ್ದು ಇದನ್ನು ನಾವು ಮುಟ್ಟುತ್ತೇವೆಂಬ ವಿಶ್ವಾಸವಿರುವುದಾಗಿ ತೋಮರ್ ಅವರು ಸ್ಪಷ್ಟಪಡಿಸಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ