ಬೆಂಗಳೂರು : ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಶಿವಾರಪಟ್ಟಣ ಗ್ರಾಮದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರವನ್ನು ಹತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಈಗಾಗಲೇ ಉದ್ದೇಶಕ್ಕಾಗಿ ನಾಲ್ಕು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನ ನಯನ ರಂಗಮಂದಿರದಲ್ಲಿ ವಿಶ್ವಕರ್ಮ ಜಯಂತಿ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಮಾಲೂರಿನ ಶಿವಾರಪಟ್ಟಣದಲ್ಲಿ ನಾಲ್ಕು ಎಕರೆ ಜಾಗದಲ್ಲಿ ಶಿಲ್ಪಕಲಾ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ, ಇದು ಕುಶಲಕರ್ಮಿಗಳಿಗೆ ನೆರವಾಗಲಿದೆ ಎಂದು ತಿಳಿಸಿದರು.
ಭಗವಾನ್ ವಿಶ್ವಕರ್ಮ ಈ ಜಗತ್ತಿನ ಮೊಟ್ಟಮೊದಲ ಇಂಜಿನಿಯರ್ ಎಂದು ಬಣ್ಣಿಸಿದ ಸಚಿವ ಸುನಿಲ್ ಕುಮಾರ್ ರಾಮಾಯಣ ಮತ್ತು ಮಹಾಭಾರತದಲ್ಲು ವಿಶ್ವಕರ್ಮರ ಉಲ್ಲೇಖವಿದೆ ಪಾಂಡವರಿಗಾಗಿ ಇಂದ್ರಪ್ರಸ್ಥ ವನ್ನು ನಿರ್ಮಾಣ ಮಾಡಿದ್ದು, ದ್ವಾರಕ್ಕೆ ನಗರ ನಿರ್ಮಾಣ ಮಾಡಿದ್ದು ಹಾಗೂ ಸ್ವರ್ಣವಲ್ಲಿ ಲಂಕೆಯ ನಿರ್ಮಾತೃ ಕೂಡ ವಿಶ್ವಕರ್ಮರ ಎಂದು ನಮ್ಮ ಪೌರಾಣಿಕ ಐತಿಹ್ಯ ತಿಳಿಸುತ್ತದೆ ಎಂದರು.
ಹಿಂದುಳಿದ ಅನೇಕ ಸಣ್ಣ ,ಸಣ್ಣ ಸಮುದಾಯಗಳು ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬೆಳೆಯಬೇಕು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಸಶಕ್ತ ವಾಗಬೇಕಾದರೆ ಎಲ್ಲ ಹಿಂದುಳಿದ ಸಣ್ಣ ಸಮುದಾಯಗಳು ಒಗ್ಗೂಡಿ ಕೆಲಸ ಮಾಡಬೇಕು. ಅದರಲ್ಲಿಯೂ ವಿಶೇಷವಾಗಿ ವಿಶ್ವಕರ್ಮ ಸಮುದಾಯ ತನ್ನ ವೃತ್ತಿಪರತೆ, ಸರಳತೆ ಮತ್ತು ಕರ್ತವ್ಯ ನಿಷ್ಠೆಗೆ ಹೆಸರಾಗಿದೆ ಈ ಸಮುದಾಯ ತನ್ನ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೂ ಸಾಗಿಸಬೇಕಾದ ಅವಶ್ಯಕತೆ ಇದೆ ಎಂದರು.
ಎಲ್ಲ ಮಹನೀಯರ ಜಯಂತಿಗಳ ಉದ್ದೇಶ ಆಯಾ ಮಹಾಪುರುಷರು ಪಾಲಿಸಿದ ಜೀವನಾದರ್ಶಗಳ ಜೀವನ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು ಮತ್ತು ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂಬುದೇ ಆಗಿದೆ ಹಾಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಜಯಂತಿಗಳನ್ನು ವಿಶೇಷ ಮುತುವರ್ಜಿಯಿಂದ ಮಾಡುತ್ತಿದೆ ಎಂದರು.
ಸಮಾರಂಭದಲ್ಲಿ ನಿಟ್ಟರಹಳ್ಳಿ ಪರಮಪೂಜ್ಯ ರಾಮಚಂದ್ರ ಸ್ವಾಮೀಜಿ, ಪರಮಪೂಜ್ಯ ನೀಲಕಂಠ ಚಾರ್ಯ ಮಹಾಸ್ವಾಮಿಗಳು, ನಿಟ್ಟರಹಳ್ಳಿ ಬೆಂಗಳೂರು, ಪರಮಪೂಜ್ಯ ಜಗನ್ನಾಥ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಮರಿ ರಾಜೇಂದ್ರ ಸ್ವಾಮಿ ಮಠ, ಉಪಸ್ಥಿತರಿದ್ದರು. ವಿಶ್ವಕರ್ಮ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಬಾಬು ಪತ್ತಾರ್, ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ, ವಿಶ್ವಕರ್ಮ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಸುಮಿತ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್ ರಂಗಪ್ಪ ಹಾಜರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ