ಬೆಂಗಳೂರು: ದೇಶದ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು 20 ವರ್ಷಗಳ ಸೇವೆ ಮತ್ತು ಸಮರ್ಪಣೆಯ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7ರ ತನಕ ಮಾನ್ಯ ಪ್ರಧಾನಮಂತ್ರಿಗಳಿಗೆ ಶುಭಾಶಯ, ಅಭಿನಂದನಾ ಪತ್ರ ಬರೆಯುವ ಪೋಸ್ಟ್ ಕಾರ್ಡ್ ಮಹಾ ಅಭಿಯಾನ ನಡೆಯುತ್ತಿದೆ. ಇದರ ಅಂಗವಾಗಿ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಪ್ರಧಾನಿಯವರಿಗೆ ಶುಭಾಶಯ ಕೋರಿ ಅಂಚೆ ಕಾರ್ಡ್ ಬರೆದು ಕಾರ್ಯಕರ್ತರು, ಮುಖಂಡರಿಗೆ ಮಾದರಿ ಆಗಿದ್ದಾರೆ.
“ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಸಾದರ ವಂದನೆಗಳು ಮತ್ತು ಜನುಮದಿನದ ಹಾರ್ದಿಕ ಶುಭಾಶಯಗಳು. ತಮ್ಮ 20 ವರ್ಷದ ಅಧಿಕಾರಾವಧಿಯಲ್ಲಿ ಶೋಷಿತರ, ಹಿಂದುಳಿದ ವರ್ಗಗಳ, ಬಡವರ ಹಾಗೂ ಸರ್ವ ವರ್ಗದ ಪರ ಯೋಜನೆಗಳು- ಅಭಿವೃದ್ಧಿ ಪರವಾದ ಆಡಳಿತ, ಭ್ರಷ್ಟಾಚಾರರಹಿತ ಅಧಿಕಾರಾವಧಿ, ಅತ್ಯುತ್ತಮ ಆಡಳಿತ- ದಾಖಲೆಯ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡುತ್ತಿರುವುದು ಅಭಿನಂದನೀಯ” ಎಂದು ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
“ಭಾರತವನ್ನು ವಿಶ್ವಗುರುವನ್ನಾಗಿಸುವ ತಮ್ಮ ಮಹೋನ್ನತ ಸಂಕಲ್ಪ ಸಾಕಾರಗೊಳಿಸುವಂತಹ ಸೌಭಾಗ್ಯ- ಆಯುರಾರೋಗ್ಯವನ್ನು ತಾಯಿ ಭಾರತಾಂಬೆ ಕರುಣಿಸಲಿ” ಎಂದು ಅವರು ಹಾರೈಸಿದ್ದಾರೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ