ಒಂದೂರಿಗೆ ಒಂದು ದೇವಸ್ಥಾನ ಹೇಗೋ ಈಗ ಪಾರ್ಕ್ ಕೂಡಾ ಅತ್ಯಗತ್ಯವಾಗಿದೆ, ದೈಹಿಕ ವ್ಯಾಯಾಮ ಮಾಡಲು, ಮಾನಸಿಕ ನೆಮ್ಮದಿಗೆ ಜನರು ಪಾರ್ಕ್ಗಳಿಗೆ ತೆರಳುತ್ತಾರೆ. ಪಾರ್ಕ್ಗಳಲ್ಲಿ ಗಿಡ, ಮರಗಳು, ಲಾನ್ ಸುಸಜ್ಜಿತ ಫುಟ್ ಪಾತ್ ಇವೆಲ್ಲ ಇರುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಪಾರ್ಕ್ ಮೂಲಕ ಸಂಸ್ಕೃತಿ ಪರಿಚಯ? ಎಂದರೆ ಸ್ವಲ್ಪ ಭಿನ್ನವಾಗಿ ಕಾಣುತ್ತಿದೆ.
ಹೌದು, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಎಸ್.ಎ.ರಾಮದಾಸ್ ಅವರು ಪಾರ್ಕ್ಗಳನ್ನು ವಿಶಿಷ್ಟ ರೀತಿಯಲ್ಲಿ ಅಭಿವೃದ್ಧಿ ಮಾಡಲು ತೆರಳುತ್ತಿದ್ದಾರೆ. ಕ್ಷೇತ್ರದ 114 ಪಾರ್ಕ್ಗಳಲ್ಲಿ ಮೊದಲ ಹಂತವಾಗಿ 16 ಪಾರ್ಕ್ಗಳನ್ನು ವಿಶೇಷವಾಗಿ ಥೀಮ್ ಅನ್ನು ನೀಡಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಪಾರ್ಕ್ಗೆ ಓರ್ವ ವ್ಯಕ್ತಿ ಬಂದರೆ ತನಗೆ ಮಾನಸಿಕ ನೆಮ್ಮದಿ ಜೊತೆಗೆ ವಿಚಾರಗಳೂ ತಿಳಿಯಬೇಕು ಎಂಬುದು ಮುಖ್ಯ ಆಶಯ. ಮಹಿಳಾ ಪಾರ್ಕ್, ರೇಡಿಯೋ ಪಾರ್ಕ್, ಕನಕದಾಸ ಪಾರ್ಕ್, ಪುರಂದರದಾಸ ಪಾರ್ಕ್, ಫಿಟ್ ಇಂಡಿಯಾ ಪಾರ್ಕ್, ಸಾಮರಸ್ಯ ಪಾರ್ಕ್, ಅಂಬೇಡ್ಕರ್ ಪಾರ್ಕ್ ಈ ರೀತಿಯಾಗಿ ಪಾರ್ಕ್ಗಳನ್ನು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
ಇದರ ವಿಶೇಷತೆ ಏನು?
ಈಗ ಪುರಂದರದಾಸ ಪಾರ್ಕ್ ತೆಗೆದುಕೊಂಡರೆ ಪಾರ್ಕ್ನಲ್ಲಿ ಪುರಂದರದಾಸರ ಬಗ್ಗೆ ಸಂಪೂರ್ಣ ಚಿತ್ರಣವಿರುತ್ತದೆ ಅವರ ವಿಶೇಷ ಕೃತಿಗಳು, ಅವರ ಸಾಧನೆಗಳು ಹೀಗೆ, ಮಹಿಳಾ ಪಾರ್ಕ್ ತೆಗೆದುಕೊಂಡರೆ ಮಹಿಳೆ ತಾನು ಅಬಲೆಯಲ್ಲ ಎಂಬ ಆಶಾಭಾವನೆ ಮೂಡಿಸಿ ದ್ರೌಪದಿ, ಸೀತಾಮಾತೆಯಿಂದ ಜಾನ್ಸಿ ರಾಣಿ ಲಕ್ಷ್ಮೀ ಬಾಯಿ ಕಲ್ಪನಾ ಚಾವ್ಲಾ ವರೆಗೂ ಕೂಡಾ ಅಸಾಧಾರಣ ಮಹಿಳೆಯರ ಬಗ್ಗೆ ಚಿತ್ರಣ ಹಾಗೆಯೇ ಕಾರ್ಯಕ್ರಮಗಳನ್ನು ಆಯೋಜಿಸಲು ಬಹುಪಯೋಗಿ ಯೋಗ ಮಂಟಪ ವನ್ನೂ ನಿರ್ಮಾಣ ಮಾಡಿ ಬಂದವರು ಸಂಪೂರ್ಣ ಮಾಹಿತಿ ತಿಳಿದುಕೊಂಡು ಹೋಗಬೇಕು ಅಲ್ಲದೇ ಅವರ ಮನಸ್ಸಿನಲ್ಲಿ ಒಂದೊಳ್ಳೆ ಭಾವನೆ ಮೂಡಬೇಕು ಈ ಮೂಲಕ ಸಮಾಜ ಪರಿವರ್ತನೆ ಆಗುತ್ತದೆ ಎಂಬುದು ಶಾಸಕರ ಆಶಯವಾಗಿದೆ.
ಪ್ರಧಾನಿ ನರೇಂದ್ರ ಮೋದಿಯವಾರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಕೂಡಾ ದೇಶದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದೆ ಅದೇ ಹಾದಿಯಲ್ಲಿ ಶಾಸಕರಾದ ರಾಮದಾಸ್ ಅವರೂ ಸಹ ನಡೆಯುತ್ತಿರುವುದು ವಿಶಿಷ್ಟವಾಗಿದೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ