ಕಾಂಗ್ರೆಸ್ನ ಹೀನ ಸಂಸ್ಕೃತಿ ಅನಾವರಣ : ಆರ್ ಅಶೋಕ್
“ದೇಶದ ಇತಿಹಾಸಲ್ಲಿ ಸದನದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದು ಇದೇ ಮೊದಲು. ಕಾಂಗ್ರೆಸ್ ಸದನದಲ್ಲಿ ರಾಷ್ಟ್ರಧ್ವಜವನ್ನು ಬೇಕಾಬಿಟ್ಟಿಯಾಗಿ ಬಳಸಿದ್ದು ಅಪರಾಧ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನದಲ್ಲೂ ಕೂಡ ಒಂದು ನಿಯಮದಂತೆ ರಾಷ್ಟ್ರಧ್ವಜ ಹಾಯಿಸಲಾಗುತ್ತದೆ. ಅದಕ್ಕೆ ಅದರದ್ದೇ ಆದ ಘನತೆ ಇದೆ. ನಿಜಕ್ಕೂ ನಾವು ಜನರಿಗೆ, ಮಕ್ಕಳಿಗೆ ಮಾದರಿಯಾಗಬೇಕು.ಮಕ್ಕಳೂ ಕೂಡ ಎದ್ದು ನಿಂತು ಧ್ವಜಕ್ಕೆ ಗೌರವ ಕೊಡ್ತಾರೆ. ನಾವೇ ಈ ರೀತಿ ವರ್ತಿಸಿದರೆ ಹೇಗೆ? ಇದು ಕಾಂಗ್ರೆಸ್ನ ಹೀನ ಸಂಸ್ಕೃತಿಯ ಅನಾವರಣ” ಎಂದು ಕಾಂಗ್ರೆಸ್ ವರ್ತನೆ ಕುರಿತು ಕಂದಾಯ ಸಚಿವ ಆರ್. ಅಶೋಕ್ ಕಿಡಿಕಾರಿದರು.
“ಇಂದು ಕಾಂಗ್ರೆಸ್ನವರು ಸದನದ ಬಾವಿಗಿಳಿದು ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ನವರಿಗೆ ನಾನು ಕೇಳುತ್ತೇನೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಇವರ್ಯಾರು ಬರಲೇ ಇಲ್ಲ. ನಾನು ಸಹ ಆ ಸಂದರ್ಭದಲ್ಲಿ ಪ್ರತ್ಯಕ್ಷ ಸಾಕ್ಷಿ. ಪೋಲೀಸರಿಂದ ಬಂಧನಕ್ಕೊಳಗಾಗಿ, ಪೆಟ್ಟು ತಿಂದವರಲ್ಲಿ ನಾನೂ ಒಬ್ಬ.
ಕಾಶ್ಮೀರದಲ್ಲಿ ಧ್ವಜ ಹಾರಿಸಿ ಅಂತ ಭಯೋತ್ಪಾದಕರು ಕರೆ ನೀಡಿದಾಗಲೂ ಕಾಂಗ್ರೆಸ್ ನವರು ಹೆದರಿ ಇಲಿಯಂತೆ ಬಿಲ ಸೇರಿದ್ದರು. ಆಗ ಕಾಶ್ಮೀರದಲ್ಲಿ ಧ್ವಜ ಹಾರಿಸಿದ್ದು ಬಿಜೆಪಿ. ಈ ಸಂದರ್ಭದಲ್ಲಿ ಈಶ್ವರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾಕೆಂದರೆ ಎಂದೂ ‘ಭಾರತ್ ಮಾತಾಕೀ ಜೈ’ ಹೇಳದ ಕಾಂಗ್ರೆಸ್, ಈ ನಿಟ್ಟಿನಲ್ಲಾದ್ರೂ ಜೈಕಾರ ಹಾಕಿದ್ದಾರೆ.
ಕಾಂಗ್ರೆಸ್ನ ಈ ವರ್ತನೆಗೆ, ಸದನದಲ್ಲಿ ಧ್ವಜಕ್ಕೆ ಮಾಡಿದ ಅಪಮಾನಕ್ಕೆ ಸಮಾಜ ತಕ್ಕ ಪಾಠ ಕಲಿಸುವ ದಿನ ದೂರ ಇಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ