ಕೇಂದ್ರ ಸರ್ಕಾರ PFI ಸೇರಿ 8 ಸಂಘಟನೆಗಳನ್ನು ಬ್ಯಾನ್ ಮಾಡಿದೆ ಇದು ಸ್ವಾಗತಾರ್ಹವಾಗಿದೆ. ಹಿಂದೆ ನಾನು ಗೃಹ ಸಚಿವನಾಗಿದ್ದಾಗ PFI ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದೆ. ಮೈಸೂರಿನಲ್ಲಿ PFI ನವರು ಹಲವು ವಿದ್ಯಾರ್ಥಿಗಳನ್ನು ಕೊಲೆ ಮಾಡಿ ಶಾಂತಿ ಸೌಹಾರ್ದತೆ ಯನ್ನು ಹಾಳುಮಾಡಿದ್ದರು. ಬಹಳಷ್ಟು ಜನರನ್ನ ಅಂದು ಅರೆಸ್ಟ್ ಮಾಡಲಾಗಿತ್ತು. ಸಮಾಜದ ಶಾಂತಿ ಕದಡುವವರನ್ನು ಸುಮ್ಮನೆ ಬಿಡಬಾರದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಹಿಂದೆ ಇದ್ದ ಸಿದ್ದರಾಮಯ್ಯ ಸರ್ಕಾರ PFI ಸಂಘಟನೆಯವರನ್ನು ಬಿಡುಗಡೆ ಮಾಡಿ, ಅವರ ಮೇಲಿದ್ದ ಕೇಸ್ ಖುಲಾಸೆಗೊಳಿಸಿತ್ತು. ಅವರಿಗೆ PFI ಮೇಲೆ ಪ್ರೀತಿ ಜಾಸ್ತಿ ಇತ್ತು. ಕಾಂಗ್ರೆಸ್ ಇವರಿಗೆ ಬೆಂಬಲ ನೀಡಿತ್ತು. ಅವರಿಗೆ ಹಣಕಾಸಿನ ಸಹಾಯ ಕೂಡ ಮಾಡಿತ್ತು.
ಇವರಿಗೆ ವಿದೇಶದಿಂದ ಹಣ ಬರ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇವರು ಪಾಕಿಸ್ತಾನದ ಏಜೆಂಟ್ ಆಗಿ ಭಾರತದಲ್ಲಿ ಕೆಲಸ ಮಾಡ್ತಿದ್ದಾರೆ, ವಿದ್ವಂಸಕ ಕೃತ್ಯ ಮಾಡುತ್ತಿದ್ಧಾರೆ. ಕಾಂಗ್ರೆಸ್ ಡಬಲ್ ಸ್ಟಾಂಡರ್ಡ್ ನೀತಿಗೆ ಹೆಸರುವಾಸಿಯಾಗಿದೆ. ಕೇಂದ್ರ ಸರ್ಕಾರ ಸರಿಯಾದ ಕ್ರಮ ಕೈಗೊಂಡಿದೆ ಎಂದು ಹೇಳಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ