ಬೆಂಗಳೂರು: ಪಿಎಫ್‍ಐ, ಎಸ್‍ಡಿಪಿಐ ಜೊತೆ ಕಾಂಗ್ರೆಸ್ ಬಾಂಧವ್ಯ ಆತಂಕಕಾರಿ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ತಾಯಿ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯ ಅವರು ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಮಲ್ಲೇಶ್ವರದ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ, ರಾಹುಲ್ ಮತ್ತು ರಾಬರ್ಟ್ ವಾಧ್ರಾ ಅವರು ಜಾಮೀನಿನಡಿ ಹೊರಗಿದ್ದಾರೆ ಎಂದು ನೆನಪಿಸಿದರು. ಕೇರಳದಲ್ಲಿ ಬಂಧಿತ ಸಿದ್ದಿಕಿ ಕಪ್ಪನ್ ಮನೆಯವರನ್ನು ರಾಹುಲ್ ಗಾಂಧಿ ಭೇಟಿ ಮಾಡಿದ್ದರು. ಗಾಂಧಿ ಪರಿವಾರ ಇಂಥ ತಪ್ಪುಗಳನ್ನು ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದರು.
ಬಿಜೆಪಿ ಜನಹಿತವನ್ನು ಕಾಪಾಡುವ ಪಕ್ಷ. ಕರ್ನಾಟಕ, ತೆಲಂಗಾಣ ಸೇರಿ ದೇಶದೆಲ್ಲೆಡೆ ಬಿಜೆಪಿ ಪರ ಅಲೆ ಇದೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರವರು ಪಿಎಫ್‍ಐ, ಎಸ್‍ಡಿಪಿಐ ಜೊತೆ ಈ ಬಾರಿಯೂ ಮೈತ್ರಿ- ಬಾಂಧವ್ಯ ಮುಂದುವರಿಸುತ್ತಾರಾ ಎಂದು ಅವರು ಸವಾಲೆಸೆದರು.
ಗೊಂದಲ, ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಹೆಸರುವಾಸಿ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡಿನಲ್ಲಿ ಜನರಿಗೆ ಭರವಸೆ ಉಳಿದಿಲ್ಲ. ಕುಟುಂಬವಾದ, ಕುಟುಂಬದ ಪೋಷಣೆ, ತುಷ್ಟೀಕರಣ, ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕೊಡಬಲ್ಲದು. ಪ್ರಜಾಪ್ರಭುತ್ವ ಬಲಯುತವಾಗುತ್ತಿದೆ. ರಾಹುಲ್ ಗಾಂಧಿ ಜನರ ಬೆಂಬಲ ಪಡೆಯಲು ವಿಫಲವಾದರೆ ಅದು ಪ್ರಜಾಪ್ರಭುತ್ವದ ವೈಫಲ್ಯ ಎಂದು ಸೋನಿಯಾ ಗಾಂಧಿ ಭಾವಿಸುತ್ತಾರೆ. ಆದರೆ, ಅವರ ಯೋಚನೆ ಸರಿಯಲ್ಲ. ದೇಶದ ಪ್ರಜಾಪ್ರಭುತ್ವವು ಮೋದಿಜಿ ಅವರ ನೇತೃತ್ವದಲ್ಲಿ ಪ್ರಬಲವಾಗುತ್ತಲೇ ಸಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಮತ್ತು ಭಯೋತ್ಪಾದನೆ ಸಂಘಟನೆಗಳ ಜೊತೆ ಸೇರಿ ಚುನಾವಣೆ ಎದುರಿಸುತ್ತಿದೆ. ಪಿಎಫ್‍ಐ, ಎಸ್‍ಡಿಪಿಐ ಜೊತೆಗೂಡಿ ಆರೆಸ್ಸೆಸ್, ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿದರು. ರುದ್ರೇಶ್, ಕುಟ್ಟಪ್ಪ, 28 ವರ್ಷದ ಪ್ರಶಾಂತ್ ಪೂಜಾರಿ ಮತ್ತಿತರ ನಾಯಕರ ಹತ್ಯೆ ಕುರಿತು ಗಮನ ಸೆಳೆದರು.
1700 ಕೇಸುಗ¼ನ್ನು ವಾಪಸ್ ಪಡೆದರು. ಹತ್ಯೆ ಆದ ಹಿಂದೂ ಕುಟುಂಬದವರಿಗೆ ನ್ಯಾಯ ಕೊಡಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರಾಷ್ಟ್ರ ಹಿತಾಸಕ್ತಿಯ ಕಡೆಗಣನೆ ಸಲ್ಲದು. ಅದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಅವರು ತಿಳಿಸಿದರು.
ರೈತರ ಸಾಲ ಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ಅವರು ಹಿಮಾಚಲ ಪ್ರದೇಶದಲ್ಲಿ ಭರವಸೆ ನೀಡಿದ್ದರು. ಸಾಲ ಮನ್ನಾ ಮಾಡದೆ ಇರುವುದರ ವಿರುದ್ಧ ಅವರದೇ ಪಕ್ಷದ ಸಚಿನ್ ಪೈಲಟ್ ಧರಣಿ ನಡೆಸುತ್ತಿದ್ದಾರೆ. ಇದನ್ನು ಗಮನಿಸಿ ಪ್ರಜ್ಞಾವಂತ ಜನತೆ ಬಿಜೆಪಿಯನ್ನೇ ಮತ್ತೆ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‍ನ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಈ ವಿಚಾರದ ಕುರಿತು ಜನತೆಗೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.
ಛತ್ತೀಸ್‍ಗಡ, ರಾಜಸ್ಥಾನದ ಗ್ಯಾರಂಟಿ ಕಾರ್ಡ್ ಏನಾಗಿದೆ? ಹಿಮಾಚಲದಲ್ಲೂ ಹಣದುಬ್ಬರದ ಕುರಿತು ಮಾತನಾಡಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಡೀಸೆಲ್ ಮೇಲೆ ವ್ಯಾಟ್ ಹೆಚ್ಚಿಸಿದೆ ಎಂದು ಆರೋಪಿಸಿದರು. ಮೋಸದಿಂದ, ಸುಳ್ಳು ಆಶ್ವಾಸನೆ ನೀಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಲು ಮುಂದಾಗಿದೆ. ಇದು ಪ್ರಯೋಜನ ಕೊಡಲಾರದು. ಜನತೆ ಹೇಳಿದ್ದನ್ನು ಮಾಡಿ ಜನಹಿತ ಬಯಸುವ ಬಿಜೆಪಿಯನ್ನೇ ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.
ನರೇಂದ್ರ ಮೋದಿಜಿ ಅವರ ದೂರದೃಷ್ಟಿ ಮತ್ತು ಸಾಧನೆಗಳು ಬಿಜೆಪಿಯನ್ನು ಗೆಲುವಿನ ಕಡೆ ಒಯ್ಯಲಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ರಾಜ್ಯಗಳೇ ಇದಕ್ಕೆ ಉದಾಹರಣೆ. ತುಷ್ಟೀಕರಣ ಇಲ್ಲದೆ ಎಲ್ಲರ ಒಳಿತಿಗಾಗಿ ಶ್ರಮಿಸಿದ್ದೇವೆ. ಕಿಸಾನ್ ಸಮ್ಮಾನ್ ನಿಧಿಯಡಿ ರಾಜ್ಯದಲ್ಲಿ ರೈತರಿಗೆ ಒಟ್ಟು 10 ಸಾವಿರ ಸಿಗುತ್ತಿದೆ. ಇದು ಡಬಲ್ ಎಂಜಿನ್ ಸರಕಾರಗಳ ಸಾಧನೆಗೆ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಎಸ್.ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ