ಬೆಂಗಳೂರು: ಬಾಬಾಸಾಹೇಬ ಅಂಬೇಡ್ಕರ್ ಜಯಂತಿಗೆ ಸಿದ್ಧತೆ ನಡೆದಿದೆ. ಅವರು ಹುಟ್ಟಿದ ಸ್ಥಳ, ಅಂತ್ಯದ ವರೆಗಿನ ಪಂಚಕ್ಷೇತ್ರಗಳ ಅಭಿವೃದ್ಧಿ ಮಾಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಗೌರವ ಲಭಿಸುವಂತಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಂಬೇಡ್ಕರರು ಪಾದಸ್ಪರ್ಶ ಮಾಡಿದ 10 ಸ್ಥಳಗಳ ಅಭಿವೃದ್ಧಿ ಮಾಡುತ್ತಿರುವುದನ್ನು ವಿವರಿಸಿದರು.
ಸಂವಿಧಾನ ರಕ್ಷಣೆ ಮಾಡುವವರು ಎಂದು ಹೇಳುತ್ತಿದ್ದ ಕಾಂಗ್ರೆಸ್ಸಗರು ಅವರ ಶ್ರೇಯೋಭಿವೃದ್ಧಿ ಮಾಡಲಿಲ್ಲ. ಗರೀಬಿ ಹಠಾವೊ ಆಗಲಿಲ್ಲ. 75 ವರ್ಷದವರೆಗೆ ಅವರನ್ನು ಗರೀಬರನ್ನಾಗಿ ಇಟ್ಟ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು.
ದಲಿತರಿಗೆ ಸಮಾಜ, ವ್ಯವಸ್ಥೆ, ತಮ್ಮನ್ನು ತಾವು ತೊಡಗಿಸಿಕೊಳ್ಳುವ ವಿವೇಕ ಮೂಡಿದೆ. ದಲಿತ ಸಮುದಾಯಗಳು ಕಾಂಗ್ರೆಸ್ ಬಿಟ್ಟು ಬಿಜೆಪಿ ಕಡೆ ಬಂದಿವೆ. ರಾಜ್ಯದಲ್ಲೂ ಅದೇ ಪರಿಸ್ಥಿತಿ ಇದೆ ಎಂದು ವಿವರಿಸಿದರು.
ಸಂವಿಧಾನ ರಕ್ಷಣೆ ಮಾಡುವವರ ಆಡಳಿತಾವಧಿಯಲ್ಲಿ 2 ಸಂವಿಧಾನ ಯಾಕೆ ಇತ್ತು? ಎಂದ ಅವರು, ಅಂಬೇಡ್ಕರರ ಆಶಯದಂತೆ 370 ವಿಧಿ ರದ್ದು ಮಾಡಿದ್ದು ಬಿಜೆಪಿ ಎಂದು ವಿವರಿಸಿದರು. ಸಂವಿಧಾನ ಸುಭದ್ರಗೊಳಿಸಿದ್ದು, ಮೀಸಲಾತಿ ಹೆಚ್ಚಿಸಿ ಸಾಮಾಜಿಕ ನ್ಯಾಯ ನೀಡಿದ ಪಕ್ಷ ಬಿಜೆಪಿ ಎಂದ ಅವರು, ಒಳ ಮೀಸಲಾತಿ ರದ್ದು ಮಾಡಿನೋಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಸವಾಲೆಸೆದರು.
ಕಾಂಗ್ರೆಸ್ಸಿಗರು ತಳ ಸಮುದಾಯಕ್ಕೆ ಮೋಸ ಮಾಡಿದೆ. ಕಾಂಗ್ರೆಸ್ ಜೈಲಿನಲ್ಲಿ ತಳ ಸಮುದಾಯದವರನ್ನು ಇಡಲಾಗಿತ್ತು. ಮತಬ್ಯಾಂಕಿಗಾಗಿ ಅವರನ್ನು ಹದ್ದುಬಸ್ತಿನಲ್ಲಿ ಇಟ್ಟಿತ್ತು. ಈ ಸಮುದಾಯದ ನೈಜ ಅಭಿವೃದ್ಧಿ, ಸಬಲೀಕರಣದ ಕಡೆ ಬಿಜೆಪಿ ಕೆಲಸ ಮಾಡಿದೆ ಎಂದು ವಿವರಿಸಿದರು.
ಶಿವಾಜಿನಗರ ಬಿಜೆಪಿ ಅಭ್ಯರ್ಥಿ ಎನ್.ಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ