ದಕ್ಷಿಣ ಕನ್ನಡ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ರಾಜ್ಯ ನಾಯಕರು, ಜಿಲ್ಲೆಯ ಶಾಸಕರು, ಪ್ರಮುಖರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ತಮ್ಮ ಭಾಷಣದಲ್ಲಿ ರಾಜ್ಯ ಕಾರ್ಯದರ್ಶಿ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೆಸರೆತ್ತಿದ್ದಾಗಲೆಲ್ಲಾ ಕಾರ್ಯಕರ್ತರು ಜೋರಾದ ಕರತಾಡನ ಮತ್ತು ಜೋರಾದ ಧ್ವನಿಯಲ್ಲಿ ಘೋಷಣೆ ಕೂಗುತ್ತಿದ್ದುದು ಗಮನ ಸೆಳೆಯುತ್ತಿತ್ತು.
ಜಿಲ್ಲಾಧ್ಯಕ್ಷ ಜವಾಬ್ದಾರಿ ಸ್ವೀಕರಿಸಿದ ಸತೀಶ್ ಕುಂಪಲ ತಮ್ಮ ಮಾತಿನ ಮಧ್ಯದಲ್ಲಿ ಕ್ಯಾಪ್ಟನ್ ಹೆಸರು ಪ್ರಸ್ತಾಪಿಸಿದಾಗ ಸಭಾಂಗಣದಲ್ಲಿ ನೆರೆದಿದ್ದವರು ಜೋರಾಗಿಯೇ ಜಯಕಾರದ ಘೋಷಣೆ ಕೂಗಿದರು. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ತಮ್ಮ ಭಾಷಣದಲ್ಲಿ ಬ್ರಿಜೇಶ್ ಹೆಸರು ಪ್ರಸ್ತಾಪಿಸಿದಾಗ ಇದು ಪುನಾರಾವರ್ತನೆಯಾಯಿತು.
ರಾಜ್ಯ ನಾಯಕರ ಮುಂದೆ, ಹಾಲಿ ಸಂಸದರು ಮುಂದೆ ನೆರೆದಿದ್ದವರು ಕ್ಯಾಪ್ಟನ್ ಪರವಾಗಿ ಜಯಕಾರ ಹಾಕುವ ಮೂಲಕ ಪರೋಕ್ಷವಾಗಿ ತಮ್ಮ ಮುಂದಿನ ಲೋಕಸಭಾ ಅಭ್ಯರ್ಥಿ ‘ಇವರೇ ಆಗಲಿ’ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಿದ್ದರು.
ಹಾಗೆ ನೋಡಿದರೆ ಪದಗ್ರಹಣ ಸಮಾರಂಭದಲ್ಲಿ ನೆರೆದಿದ್ದವರು ಕ್ಯಾಪ್ಟನ್ ಅಭಿಮಾನಿ ಬಳಗದವರೂ ಅಲ್ಲ, ನಳಿನ್ ವಿರೋಧಿಗಳೂ ಅಲ್ಲ, ಅಲ್ಲಿದ್ದಿದ್ದು ಬಹುತೇಕ ಜಿಲ್ಲಾ, ಮಂಡಲ ಮತ್ತು ತಳಮಟ್ಟದ ಬಿಜೆಪಿ ಪದಾಧಿಕಾರಿಗಳೇ. ಇವರುಗಳೇ ಮುಂದಿನ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯ ಬದಲಾವಣೆಗೆ ಒಲವು ತೋರಿದ್ದಾರೆ ಎನ್ನುವುದು ಸುಸ್ಪಷ್ಟ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ