ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆಯನ್ನು ನೀಡಲು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು KSRTC ಮತ್ತು ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸಂಚಾರಿ ಬಸ್ ಸೇವೆಯನ್ನು ಶ್ರೀ ಕ್ಷೇತ್ರ ಪೊಳಲಿಯಿಂದ ಆರಂಭಿಸಿದ್ದಾರೆ.
5 ಬೆಡ್ ನ ಆಕ್ಸಿಜನ್ ಸೌಲಭ್ಯಗಳನ್ನು ಒಳಗೊಂಡ ಈ ಬಸ್ಸಿನಲ್ಲಿ KSRTC ಯ ಒಬ್ಬ ಚಾಲಕ ಹಾಗೂ ಆರೋಗ್ಯ ಇಲಾಖೆಯಿಂದ ಒಬ್ಬ ಡಾಕ್ಟರ್ ಮತ್ತು ಒಬ್ಬ ದಾದಿಯರಿದ್ದಾರೆ.
ವಾರದ 5 ದಿನ (ಸೋಮವಾರದಿಂದ ಶುಕ್ರವಾರ ವಾರದ ವರೆಗೆ ಸರಕಾರಿ ರಜಾ ದಿನ ಹೊರತುಪಡಿಸಿ) ದಿನಕ್ಕೆ ಒಂದು ಪಂಚಾಯತ್ ನಂತೆ ಪ್ರತಿ ಪಂಚಾಯತ್ ಮಟ್ಟಕ್ಕೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರ ದಲ್ಲಿ ಒಟ್ಟು 39 ಗ್ರಾಮ ಪಂಚಾಯತ್ ಗಳಿದ್ದು ಈ ವರೆಗೆ 23 ಗ್ರಾಮ ಪಂಚಾಯತ್ ಗಳಲ್ಲಿ 1500 ಕ್ಕೂ ಮಿಕ್ಕಿ ಜನರಿಗೆ ಈ ಬಸ್ಸಿನ ಸೇವೆಯನ್ನು ನೀಡಲಾಗಿದೆ.
ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪಂಚಾಯತ್ ವ್ಯಾಪ್ತಿಯ ನಿಗದಿ ಪಡಿಸಲಾದ ಒಂದು ಕಡೆಯಲ್ಲಿ ಇದರ ಮೂಲಕ ಸೇವೆ ನೀಡಲಾಗುತ್ತಿದೆ.
ಬೀಪಿ, ಶುಗರ್ ಹಾಗೂ ಸಾಮಾನ್ಯ ವೈದ್ಯಕೀಯ ಪರೀಕ್ಷೆ ನಡೆಸಿ ಮೆಡಿಸಿನ್ ನೀಡುವ ವ್ಯವಸ್ಥೆ ಇದ್ದ ಈ ಬಸ್ಸಿನಲ್ಲಿ ಇದೀಗ ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞರಾದ ಡಾ.ಪದ್ಮನಾಭ ಕಾಮತ್ ರವರ ಸಂಸ್ಥೆಯ ಮೂಲಕ ಇಸಿಜಿ ಯಂತ್ರ ಅಳವಡಿಸಿ ಇಂದಿನಿಂದ ಹೃದ್ರೋಗ ತಪಾಸಣೆಯನ್ನು ನಡೆಸಲಾಗುತ್ತದೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ