ಇಂದು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪ ಅವರು ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ನಿರ್ಮಾಣವಾಗುತ್ತಿರುವ ಕೌಶಲ್ಯ ತರಬೇತಿ ಕೇಂದ್ರ ಮತ್ತು ಮಹಿಳಾ ವಸತಿ ನಿಲಯದ ಶಂಕುಸ್ಥಾಪನೆ ಮಾಡಿದರು.
ನಂತರ ಸಭೆಯಲ್ಲಿ ಮಾತನಾಡಿದ ಸಚಿವರು ಮಹಿಳಾ ಸಂಘಟನೆಗಳು ಸದೃಢವಾಗಬೇಕಂದರೆ ಹೀಗೆ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರನೇ ಅನುಕೂಲ ಆಗುತ್ತದೆ. ಇದು ಶಿವಮೊಗ್ಗದಲ್ಲೇ ಪ್ರಪ್ರಥಮಬಾರಿಗೆ ಸ್ಥಾಪನೆ ಆಗುತ್ತಿರುವುದು ನಮ್ಮ ಜಿಲ್ಲೆಯ ಹೆಮ್ಮೆಯ ವಿಷಯವೇ ಸರಿ.
ಇನ್ನೂ ಮಹಿಳಾ ವಸತಿ ನಿಲಯ ಸ್ಥಾಪನೆ ಮಾಡಲು ಹೊರಟಿದ್ದೀರಿ ಇಂದಿನ ಮುಂದುವರೆದ ದಿನಮಾನಗಳಲ್ಲಿ ಮಹಿಳೆಯರು ಸ್ವಾಲಂಬಿಗಳಾಗಲು ಅನುಕೂಲ ಆಗುವ ನಿಟ್ಟಿನಲ್ಲಿ ಈ ರೀತಿ ದಿಟ್ಟ ಹೆಜ್ಜೆಗಳನ್ನು ಇಡುತ್ತಿರುವುದು ಸಂತೋಷದ ವಿಷಯ. ಇದನ್ನು ಮಾಡಲು ಮನಸ್ಸು ಮಾಡಿ ಎಲ್ಲರೂ ಒಕ್ಕಟ್ಟಾಗಿ ಕೆಲಸ ಮಾಡುವುದರಿಂದ ಬೇಗ ನಿಮ್ಮ ಕನಸುಗಳು ನನಸಾಗುವದರಲ್ಲಿ ಸಂಶಯವಿಲ್ಲ.
ಈ ಯೋಜನೆಗಳ ಪ್ಲ್ಯಾನ್, ತಗಲುವ ವೆಚ್ಚ ಮತ್ತು ಇನ್ನಿತರ ಮಾಹಿತಿಗಳನ್ನು ನಮಗೆ ಕೊಡಿ, ಇಲ್ಲಿರುವ ನಾವೆಲ್ಲ ಸೇರಿ ಪಕ್ಷಭೇದ ಮರೆತು ನಿಮ್ಮ ಸಂಸ್ಥೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೆಲಸ ಕಾರ್ಯ ಮಾಡುತ್ತೇವೆ ಎಂದು ತಿಳಿಸಲು ಬಯಸುತ್ತೇವೆ. ನೀವು ಕೈಗೊಂಡಿರುವ ಕೆಲಸ ಆದಷ್ಟು ಬೇಗ ಮುಗಿಬೇಕಂದ್ರೆ ನೀವು ಅದು ಮುಗಿಯುವವೆಗೂ ಸುಮ್ಮನೇ ಕೂತುಕೊಬಾರದು ಎಲ್ಲರ ಬೆನ್ನತ್ತಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಿ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಸದರಾದ ಶ್ರೀ ಬಿ. ವೈ .ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಶ್ರೀ ರುದ್ರೇಗೌಡರು, ವಿಧಾನಪರಿಷತ್ ಸದಸ್ಯರಾದ ಶ್ರೀ ಪ್ರಸನ್ನಕುಮಾರ್ ಅವರು ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ