ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ ಎಸ್ ಈಶ್ವರಪ್ಪ ಅವರು ಶಿವಮೊಗ್ಗ ಗ್ರಾಮಾಂತರ ತಾಲ್ಲೂಕಿನ ಅಬ್ಬಲಗೆರೆ ಗ್ರಾಮಪಂಚಾಯತ್‌ನ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿದದರು.
ನಂತರ ಸಭೆಯಲ್ಲಿ ಮಾತನಾಡಿದ ಸಚಿವರು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ಆದಾಗ ಸ್ವಾಭಾವಿಕವಾಗಿ ಅವರ ಗ್ರಾಮದ ಅಭಿವೃದ್ಧಿಯನ್ನು ಅವರೇ ಮಾಡಬೇಕು ಅನ್ನುವಂತಹ ಉದ್ದೇಶವನ್ನೇ ಆಯಾ ಗ್ರಾಮ ಪಂಚಾಯತ್ಗಳಿಗೆ ಬಂದಿರುವುದು ಸಂತೋಷದ ವಿಚಾರ. ಅಬ್ಬಲಗೆರೆ ಗ್ರಾಮ ಪಂಚಾಯತ್‌ನವರು ಎಲ್ಲ ವಿಚಾರಗಳಲ್ಲಿ ಮೊದಲನೇ ಸ್ಥಾನದಲ್ಲಿ ಇದಾರೆ ಎಂಬುದನ್ನು ಕೇಳಿ ತುಂಬಾ ಸಂತೋಷವಾಯಿತು ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಭಾಗದ ಜನರ ಬದುಕು ಹಸನಾಗುತ್ತೇ ಅಲ್ಲಿತನಕ ನಾನು ವಿಶ್ರಮಿಸುವುದಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸುತ್ತಾ, ಕೋರೊನಾ ಹೆಮ್ಮಾರಿ ಬಂದ ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನ ಉಪವಾಸ ಇರಬಾರದು ಎಂದು ನರೇಗಾ ಮೂಲಕ ಹೆಚ್ಚು ಉದ್ಯೋಗಗಳನ್ನು ನೀಡಿದ್ದಾರೆ. ಅದರ ಪ್ರಯುಕ್ತ ಅನೇಕ ವಿಶೇಷ ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳಿಗೆ ನೀಡಿದ್ದಾರೆ.
ನಮ್ಮ ಇಲಾಖೆಯಲ್ಲಿಯ ಯೋಜನೆಗಳೆಲ್ಲವೂ ಕೂಡ ಜನಸ್ನೇಹಿಯಾಗಿವೆ, ಕುಡಿಯುವ ನೀರಿನ ಯೋಜನೆಯಾದ ಮನೆ ಮನೆಗೆ ಗಂಗೆ ಮತ್ತು ನರೇಗಾ ಯೋಜನೆಯಿಂದ ಗ್ರಾಮೀಣ ಭಾಗದ ಜನರ ಉದ್ಯೋಗಕ್ಕೆ ಅನುಕೂಲ ಮಾಡಿಕೊಟ್ಟಿರುವುದು.
ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರ ನಮಗೆ 13 ಕೋಟಿ ಮಾನವ ದಿನಗಳನ್ನು ಕೊಟ್ಟಿತ್ತು, ಅವುಗಳನ್ನು ಕರ್ನಾಟಕದಲ್ಲಿ ನವೆಂಬರ್ ಅಷ್ಟೊತ್ತಿಗೆ ಮುಗಿಸಿಬಿಟ್ಟಿದ್ದೀವಿ. ಕೇಂದ್ರ ಸರ್ಕಾರದಿಂದ ಅದಕ್ಕೆ ನಮಗೆ ಅಭಿನಂದನೆ ಸಿಕ್ಕಿತು ಮತ್ತು ಇನ್ನು 2 ಕೋಟಿ ಮಾನವ ದಿನಗಳನ್ನು ಹೆಚ್ಚುವರಿಯಾಗಿ ನೀಡಿದರು. ಹಾಗೂ 800 ಕೋಟಿ ರೂಗಳನ್ನು ಹೆಚ್ಚುವರಿಯಾಗಿ ನೀಡಿದರು. ಈ ವರ್ಷವೂ ಕೂಡ ನಮ್ಮ ರಾಜ್ಯ ಎಲ್ಲ ರಾಜ್ಯಗಳಿಗಿಂತ ಮುಂದೆಯೇ ಇದ್ದೀವಿ ಎಂದು ಹೇಳಲು ಸಂತೋಷ ಎನಿಸುತ್ತದೆ.
ಈ ಗ್ರಾಮ ಪಂಚಾಯತ್‌ಗೆ ಈ ಕಟ್ಟಡ ಬಹಳ ಮುಖ್ಯ. ಇಲ್ಲಿನ ಪಂಚಾಯತ್‌ನ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳಿಗೆ ಹಾಗೂ ಈ ಗ್ರಾಮದ ಜನತೆ ಎಲ್ಲ ಸೇರಿ ಅತ್ಯಂತ ಉತ್ತಮವಾದ ಕಟ್ಟಡವನ್ನು ಶಾಸಕರ ಸಹಕಾರದೊಂದಿಗೆ ಕಟ್ಟಿದ್ದೀರಾ, ನಿಮ್ಮ ಗ್ರಾಮ ಪಂಚಾಯತಿಗೆ ಇನ್ನೂ ಏನೇನು ಸೌಲಭ್ಯಗಳು ಬೇಕು ಅನ್ನೋದನ್ನು ನಮಗೆ ಹೇಳಿದರೆ ಧಾರಾಳವಾಗಿ ನಾವು ಅವುಗಳನ್ನು ಸಾಕಾರಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರು, ಜಿ.ಪಂ. ಸಿಇಓ ವೈಶಾಲಿ ಅವರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ